Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಮನಾಗಿ ಕಿರುತೆರೆಗೆ ಮರಳಲಿದ್ದಾರೆ ಇನ್ಸ್ಪೆಕ್ಟರ್ ರಾಜೀವ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಮಂಗಳ ಗೌರಿ ಮದುವೆ'ಯಲ್ಲಿ ನಾಯಕ ಇನ್ಸ್ಪೆಕ್ಟರ್ ರಾಜೀವ ನಿಮಗೆ ನೆನಪಿರಬಹುದು. ಈ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಗಗನ್ ಚಿನ್ನಪ್ಪ ಮೊದಲ ಪ್ರಯತ್ನದಲ್ಲೇ ನಾಯಕನಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡ ಹ್ಯಾಂಡ್ ಸಮ್ ಹುಡುಗ ಈತ.
ರಾಜೀವನಾಗಿ ನಟಿಸಿ ವೀಕ್ಷಕರ ಮನ ಸೆಳೆದಿರುವ ಗಗನ್ ಚಿನ್ನಪ್ಪ ತದ ನಂತರ ಕಾರಣಾಂತರಗಳಿಂದ ಪಾತ್ರದಿಂದ ಹೊರಬಂದಿದ್ದರು. 'ಮಂಗಳ ಗೌರಿ ಮದುವೆ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಗಗನ್ ಚಿನ್ನಪ್ಪ ಈಗ ರಾಮನಾಗಿ ಕನ್ನಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಹೌದು, ಜೀ ಕನ್ನಡ ವಾಹಿನಿಯ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಸೀತಾರಾಮ'ದಲ್ಲಿ ನಾಯಕ ರಾಮನಾಗಿ ನಟಿಸುವ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ತಯಾರಾಗಿದ್ದಾರೆ ಗಗನ್ ಚಿನ್ನಪ್ಪ.
ವೇದಿಕೆ
ಮೇಲೆ
ಬಂದ
ಆರ್ಯ:
ಎಲ್ಲಾ
ಗೊಂದಲಗಳನ್ನು
ಶಾರದಾ
ಬಗೆಹರಿಸುತ್ತಾಳಾ..?
'ಸೀತಾರಾಮ' ಧಾರಾವಾಹಿಗಿ ವೀಕ್ಷಕರು ಕಾಯುತ್ತಿದ್ದಾರೆ. ಸದ್ಯ ಪ್ರೋಮೊಗಳು ರಿಲೀಸ್ ಆಗಿ ಭಾರೀ ಸದ್ದು ಮಾಡ್ತಿದೆ. ಬೇಗ ಧಾರವಾಹಿ ಪ್ರಸಾರ ಮಾಡಿ, ಪ್ರೈ ಟೈಂನಲ್ಲಿ ಪ್ರಸಾರ ಮಾಡಿ ಎನ್ನುತ್ತಿದ್ದಾರೆ.

ತೆಲುಗು ಕಿರುತೆರೆಯಲ್ಲಿ ಬ್ಯುಸಿ
ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಕೃಷ್ಣ ಮುಕುಂದ ಮುರಾರಿ'ಯಲ್ಲಿ ನಟಿಸಿ ಗಗನ್ ಗಮನ ಸೆಳೆದಿದ್ದಾರೆ. ಪರಭಾಷೆಯ ಕಿರುತೆರೆಗೂ ಕಾಲಿಟ್ಟಿರುವ ಗಗನ್ ಚಿನ್ನಪ್ಪ ಮನೋಜ್ಞ ನಟನೆಯ ಮೂಲಕ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷವೆಂದರೆ ತೆಲುಗಿನ ಧಾರಾವಾಹಿಯಲ್ಲಿಯೂ ಗಗನ್ ಅವರು ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಅಭಿನಯಿಸುತ್ತಿರುವುದು ವಿಶೇಷ.

ಐಟಿ ಉದ್ಯೋಗಿಯಾಗಿದ್ದ ಗಗನ್
ಗಗನ್ ಚಿನ್ನಪ್ಪ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಮಾರ್ಕೆಟಿಂಗ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೂರು ವರ್ಷ ಜರ್ಮನಿ ಮತ್ತು ಓಮನ್‌ನಲ್ಲಿ ಕೆಲಸ ಮಾಡಿದ್ದರು. ಮುಂದೆ ಭಾರತಕ್ಕೆ ಮರಳಿದ ಅವರು ಐಟಿ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡರು.

ರಾಜೀವ ಪಾತ್ರ ಸಿಕ್ಕಿದ್ದೇಗೆ?
ಬಾಲ್ಯದಿಂದಲೂ ನಟನಾಗಬೇಕು, ಬಣ್ಣದ ಲೋಕದಲ್ಲಿ ಮಿಂಚಬೇಕು ಎಂಬ ಕನಸು ಗಗನ್ ಚಿನ್ನಪ್ಪ ಅವರಿಗಿತ್ತು. ತಮ್ಮ ಅಫೀಸ್ ಕೆಲಸದ ನಡುವೆ ಬಿಡುವು ಸಿಕ್ಕಾಗ ಆಡಿಶಶ್‌ಗಳಿಗೆ ಹೋಗುತ್ತಿದ್ದರು. 'ಮಂಗಳ ಗೌರಿ ಮದುವೆ' ಧಾರಾವಾಹಿಯ ಆಡಿಶನ್‌ಗೆ ಹೋದ ಗಗನ್ ಚಿನ್ನಪ್ಪ ರಾಜೀವನ ಪಾತ್ರಕ್ಕೆ ಆಯ್ಕೆಯೂ ಆದರು. ವೀಕ್ಷಕರ ಗಮನ ಸೆಳೆದರು. ನಿಧಾನವಾಗಿ ಅಭಿಮಾನಿ ಬಳಗ ಸೃಷ್ಟಿಸಿಕೊಂಡರು. ಅಲ್ಲಿಂದ ಮುಂದೆ ಮತ್ತೆ ಹಿಂತಿರುಗಿ ನೋಡಲಿಲ್ಲ.

ಅಪ್ಪನ ಕನಸು ನನಸಾಯಿತು
ಡಿಟೆಕ್ಟಿವ್ ಆಗಿದ್ದ ನನ್ನ ತಂದೆಗೆ ನಾನು ಕೂಡಾ ಪೊಲೀಸ್ ಅಧಿಕಾರಿಯಾಗಬೇಕು ಎನ್ನುವ ಆಸೆ ಇತ್ತು. ಆದರೆ ನನಗೆ ನಟನಾಗಬೇಕು ಎಂಬ ಬಯಕೆಯಿತ್ತು. ರಿಯಲ್ ಆಗಿ ಅಲ್ಲದಿದ್ದರೂ ರೀಲ್‌ನಲ್ಲಿ ಆದರೂ ಅಪ್ಪನ ಕನಸು ನನಸು ಮಾಡಿದೆ ಎಂಬ ಖುಷಿಯಿದೆ" ಎಂದು ಹೇಳುತ್ತಾರೆ ಗಗನ್ ಚಿನ್ನಪ್ಪ. ಸದ್ಯ ಕನ್ನಡ ಹಾಗೂ ತೆಲುಗು ಕಿರಿತೆರೆಯಲ್ಲಿ ಬಹುಬೇಡಿಕೆಯ ನಟನಾಗಿ ಅವರು ಗುರ್ತಿಸಿಕೊಂಡಿದ್ದಾರೆ.