ಮಹಾನಟಿ 'ಗಗನಾ'ನ ಇನ್‌ಸ್ಟಾಗ್ರಾಮ್‌ನಲ್ಲಿ ಮೊದಲಿಂದ ಫಾಲೋ ಮಾಡ್ತಿದ್ದ ಕನ್ನಡದ ಸೂಪರ್ ಸ್ಟಾರ್ ಯಾರು ?
ಕಿರುತೆರೆಯಲ್ಲಿ ಫೇಮಸ್ಸು ಆಗಿರುವವರ ಪೈಕಿ ಗಗನಾ ಕೂಡಾ ಒಬ್ಬರು. "ಮಹಾನಟಿ" ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾಗಿದ್ದಲ್ಲದೇ, ಮನೆಮಗಳಂತೆ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ ನಟಿ ಗಗನ ಭಾರಿ. ತಮ್ಮ ಇನ್ಸ್ಟೆಂಟ್ ಡೈಲಾಗ್ ಗಳ ಮೂಲಕವೇ ಪ್ರೇಕ್ಷಕರ ಮನಕದ್ದ ಈಕೆ ಮಹಾನಟಿ ರಿಯಾಲಿಟಿ ಶೋ ಆಡಿಷನ್ ನಲ್ಲಿ ಜಡ್ಜಸ್ ನ ಮನ ಗೆದ್ದಿದ್ದರು.
ನಿರ್ದೇಶಕ ತರುಣ್, ಕಲಾವಿದರಾದ ರಮೇಶ್ ಅರವಿಂದ್, ಪ್ರೇಮ ಹಾಗೂ ನಿಶ್ವಿಕ ನಾಯ್ಡು, ಜೊತೆಗೆ ಆ್ಯಂಕರ್ ಆಗಿ ಅನುಶ್ರೀ ನಡೆಸಿಕೊಟ್ಟ ಈ ರಿಯಾಲಿಟಿ ಶೋನಲ್ಲಿ ಆಡಿಷನ್ ದಿನವೇ ಭಾರೀ ಭಾರೀ ಡೈಲಾಗ್ ಹೊಡೆದು ತರುಣ್ ಅವರಿಂದ ಅವರ ಮೂವೀಸ್ ಗೆ ಡೈಲಾಗ್ ರೈಟರ್ ಆಗಿ ಬರಲು ಆಫರ್ ಪಡೆದಿದ್ದರು.

ಹೀಗೆ ತಮ್ಮ ಚಾಕಚಕ್ಯತೆ ಹಾಗೂ ಡೈಲಾಗ್ ಡೆಲಿವರಿಗೆ ಫೇಮಸ್ ಆಗಿದ್ದ ಗಗನ ಭಾರಿ, ಮಹಾನಟಿ ರಿಯಾಲಿಟಿ ಶೋನ ಉದ್ದಕ್ಕೂ ಬಹಳಷ್ಟು ಪಾಪ್ಯುಲಾರಿಟಿ ಗಳಿಸಿದ್ದರು. "ಮಹಾನಟಿ" ರಿಯಾಲಿಟಿ ಶೋ ಅಷ್ಟೇ ಅಲ್ಲದೆ "ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್" ರಿಯಾಲಿಟಿ ಶೋನಲ್ಲಿಯೂ ಈಕೆ ಕಾಣಿಸಿಕೊಂಡಿದ್ದಾರೆ. ಇದೀಗ "ಭರ್ಜರಿ ಬ್ಯಾಚುಲರ್" ಸೀಸನ್ 2 ನಲ್ಲಿಯೂ ಭಾಗವಹಿಸಿದ್ದಾರೆ. ತಮ್ಮ ಐಟಿ ಕೆಲಸ ಬಿಟ್ಟು ಇದೀಗ ರಿಯಾಲಿಟಿ ಶೋ ಗಳಲ್ಲಿಯೇ ಸಕ್ರಿಯರಾಗಿದ್ದಾರೆ.
ಸದ್ಯಕ್ಕೆ ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿರುವ ಈ ನಟಿ "ಮಹಾನಟಿ" ರಿಯಾಲಿಟಿ ಶೋ ಗೆ ಬರುವ ಮೊದಲೇ ಇವರನ್ನು ಒಬ್ಬ ಸ್ಟಾರ್ ನಟ ಫಾಲೋ ಮಾಡುತ್ತಿದ್ದರು ಎಂಬ ಹೊಸ ವಿಚಾರವೊಂದನ್ನು ಹೊರಹಾಕಿದ್ದಾರೆ.
ಹೌದು, ಸಾಮಾನ್ಯವಾಗಿ ಯಾರಾದರೂ ರಿಯಾಲಿಟಿ ಶೋ ಧಾರಾವಾಹಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವ ಮೂಲಕ ಕ್ರಮೇಣ ಫೇಮ್ ಪಡೆದು ದೊಡ್ಡ ದೊಡ್ಡ ಸೆಲೆಬ್ರಿಟಿಸ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುವಂತೆ ಆಗುತ್ತದೆ.
ಆದರೆ ನಟಿ ಗಗನ ಭಾರಿ ರಿಯಾಲಿಟಿ ಶೋ ಗೆ ಬರುವ ಮೊದಲೇ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುತ್ತಿದ್ದ ಆ ನಟ ಇನ್ಯಾರು ಅಲ್ಲ ಕ್ರೇಜಿ ಸ್ಟಾರ್ ರವಿಚಂದ್ರನ್ ಅಂದರೆ ನೀವು ನಂಬ್ಲೇಬೇಕು.
ಹೌದು, ಈ ವಿಚಾರವನ್ನು ಸ್ವತಃ ಗಗನ ಭಾರಿ ಅವರೇ ಹಂಚಿಕೊಂಡಿದ್ದು ''ನಾನು ರಿಯಾಲಿಟಿ ಶೋಗಳಿಗೆ ಬಂದು ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾಗಿ ಇಷ್ಟೆಲ್ಲ ಯಶಸ್ಸು ಕಾಣುವ ಮೊದಲೇ ನನ್ನನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಸರ್ ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುತ್ತಿದ್ದರು. ನಾನು ಮೊದಲಿನಿಂದಲೂ ಇನ್ಸ್ಟಾಗ್ರಾಮ್ ನಲ್ಲಿ ರೀಲ್ ಮಾಡುತ್ತಿದ್ದೆ. ನನ್ನ ಒಂದು ರೀಲನ್ನು ಲೈಕ್ ಮಾಡಿ ಫಾಲೋ ಮಾಡ್ತಿದ್ದರು ರವಿಚಂದ್ರನ್ ಸರ್. ಅದನ್ನು ನೋಡಿ ನನಗಂತೂ ಬಹಳ ಖುಷಿಯಾಗಿತ್ತು. ನಾನು ಅವರಿಗೆ ಮೆಸೇಜ್ ಕೂಡ ಮಾಡಿದ್ದೆ, ಸರ್ ನೀವು ನನ್ನನ್ನು ಫಾಲೋ ಮಾಡುತ್ತಿರುವುದು ನನ್ನ ಅದೃಷ್ಟ ಇದು ನನಗೆ ಸ್ಟ್ರೆಂತ್ ನೀಡಿದೆ ಎಂದು ಹೇಳಿದ್ದೆ. ಬಹಳಷ್ಟು ಜನ ಕ್ರೇಜಿ ಸ್ಟಾರ್ ರವಿಚಂದ್ರನ್ ಸರ್ ಅವರದ್ದು ಲಕ್ಕಿ ಹ್ಯಾಂಡ್ ಎಂದು ಹೇಳುವುದನ್ನು ಕೇಳಿದ್ದೆ, ಅದು ನನ್ನ ವಿಷಯದಲ್ಲಿ ಸತ್ಯವೇ ಆಯಿತು. ಅವರು ನನ್ನನ್ನು ಫಾಲೋ ಮಾಡಲು ಆರಂಭಿಸಿ ಕೆಲವೇ ದಿನಗಳಿಗೆ ಮಹಾ ನಟಿ ಎಂಬ ದೊಡ್ಡ ರಿಯಾಲಿಟಿ ಶೋ ಗೆ ನಾನು ಆಯ್ಕೆಯಾಗಿ ಇಂದು ಬಹಳಷ್ಟು ಪಾಪ್ಯುಲಾರಿಟಿಯನ್ನು ಪಡೆದಿದ್ದೇನೆ" ಎಂದಿದ್ದಾರೆ ನಟಿ ಗಗನ ಭಾರಿ.
ಅಂದ ಹಾಗೇ ಐಟಿ ಕೆಲಸ ಮಾಡುತ್ತಿದ್ದಾಗ ಸಿಗುತ್ತಿದ್ದ ಸಂಬಳಕ್ಕಿಂತಲೂ ಹೆಚ್ಚಿನ ಸಂಭಾವನೆ ಇದೆ ಅಂತೆ ಈ ರಿಯಾಲಿಟಿ ಶೋಗಳಲ್ಲಿ. ಏನೇ ಆದರೂ ತಮಗೆ ಸಿಕ್ಕಿರುವ ಸಡನ್ ಫೇಮ್ ಹಾಗೂ ಯಶಸ್ಸಿನಿಂದ ಜಂಭ ಮಾಡಿಕೊಳ್ಳದೆ, ಇವತ್ತಿಗೂ ಸಿಂಪಲ್ ಆಗಿರುವ ಈ ನಟಿ ಕಿರುತೆರೆ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದ್ದಾರೆ.


Click it and Unblock the Notifications











