ಬಿಗ್ ಬಾಸ್‌ನಲ್ಲಿ ಭಾರೀ ಬದಲಾವಣೆ, ಈ ಬಾರಿ ಸ್ಫರ್ಧಿಗಳನ್ನು ಆಯ್ಕೆ ಮಾಡಲಿದ್ದಾರೆ ಈ ಸೂಪರ್ ಸ್ಟಾರ್..!
ಬಣ್ಣದ ಸೆಳೆತಕ್ಕೆ ಸಿಲುಕಿದವರಲ್ಲಿಯೇ ಹಲವಾರು ಜನ ಬಿಗ್ ಬಾಸ್‌ನಲ್ಲಿ ಭಾಗವಹಿಸಬೇಕೆಂದು ಕನಸು ಕಾಣುತ್ತಾರೆ. ಆದರೆ .. ಈ ಸುವರ್ಣ ಅವಕಾಶ ಎಲ್ಲರಿಗೆ ಸಿಗುವುದಿಲ್ಲ. ಯಾಕೆಂದರೆ ಬಿಗ್ ಬಾಸ್‌ನ ನಿಯಮಾವಳಿಯೇ ಹಾಗೇ ಇದೆ. ಮಾನದಂಡಕ್ಕೆ ಕೇವಲ ಹೆಸರು ಮಾತ್ರ ಮುಖ್ಯವಲ್ಲ ಬದಲಿಗೆ ಆ ಹೆಸರಿಗೊಂದು ಸಮ್ಮೋಹಕವಾದ ಶಕ್ತಿ ಇರಬೇಕು.. ಆ ಹೆಸರು ಕೇಳಿದರೆ ಸಾಕು ಜನಸಾಮಾನ್ಯರು..
ಕಾರ್ಯಕ್ರಮ ನೋಡಲು ಬಂದು ಕೂರಬೇಕು.. ಇಲ್ಲದಿದ್ದರೆ ಯಾವುದಾದರೂ ವಿವಾದ ಮಾಡಿಕೊಂಡಿರಬೇಕು. ಸದಾ ಕಾಲ ಕಾಲು ಕೆರೆದು ಜಗಳಕ್ಕೆ ನಿಲ್ಲುವ ವಿವಾದಿತ ವ್ಯಕ್ತಿಯಾಗಿರಬೇಕು.ಹೀಗಿದ್ದಾಗಲೇ ಬಿಗ್ ಬಾಸ್ ಮನೆಗೆ ಹೋಗಲು ಸಾಧ್ಯವಾಗುವುದು ಎನ್ನುವ ಮಾತು ಕಿರುತೆರೆಯಲ್ಲಿ ಕೇಳಿ ಬರುತ್ತೆ.

ಹಾಗೇ ನೋಡಿದರೆ ಈ ಮಾತು ನಿಜಾ ಕೂಡ ಹೌದು. ಇದಕ್ಕೆ ಕೈಗನ್ನಡಿ ಎಂಬಂತೆ ಈ ಹಿಂದೆ ಆ ಭಾಷೆ ಈ ಭಾಷೆ ಎನ್ನದೇ ಎಲ್ಲ ಭಾಷೆಯ ಸ್ಫರ್ಧಿಗಳ ಲಿಸ್ಟ್ ಮೇಲೆ ಕಣ್ಣಾಡಿಸಿದರೆ ಅಲ್ಲಿ ಕಾಂಟ್ರವರ್ಸಿಯಲ್ ವ್ಯಕ್ತಿತ್ವಗಳೇ ಹೆಚ್ಚು ಕಣ್ಣಿಗೆ ಕಾಣಿಸುತ್ತಾವೆ.
ಇನ್ನು ಬಿಗ್ ಬಾಸ್ ಮನೆಗೆ ಹೋಗಲೇಂದೇ.. ಬಿಗ್ ಬಾಸ್‌ನ ಗಮನ ಸೆಳೆಯಲೆಂದೇ.. ನಾನಾ ಸರ್ಕಸ್‌ಗಳನ್ನು ಮಾಡುವವರು ಕೂಡ ಇದ್ದಾರೆ. ಬಿಗ್ ಬಾಸ್ ಮನೆಗೆ ಹೋಗಿ ಬಂದರೆ ತಮ್ಮ ಜನ್ಮ ಸಾರ್ಥಕವೆಂದುಕೊಂಡವರು ಕೂಡ ಇದ್ದಾರೆ.
ಆದರೆ ಈ ಬಾರಿ ಇಂತಹ ಆಲೋಚನೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಪಕ್ಕದ ಆಂಧ್ರದಲ್ಲಿನ ಬಿಗ್ ಬಾಸ್‌ನಲ್ಲಿ ಪ್ರವೇಶ ಸಿಗುವುದು ಅನುಮಾನ. ಯಾಕೆಂದರೆ ಖುದ್ದು ನಾಗಾರ್ಜುನ ಈ ಬಾರಿ ಸ್ಫರ್ಧಿಗಳನ್ನು ಆಯ್ಕೆ ಮಾಡಲಿದ್ದಾರೆ. ಹೀಗೊಂದು ಸುದ್ದಿಯನ್ನು ''OTTPlay'' ವರದಿಯನ್ನು ಮಾಡಿದೆ.
ಹೌದು, ಅಸಲಿಗೆ ಕಳೆದ ವರ್ಷ ತೆಲುಗಿನಲ್ಲಿ ಬಿಗ್ ಬಾಸ್ ಸದ್ದು ಅಷ್ಟಿರಲಿಲ್ಲ. ಪ್ರೇಕ್ಷಕರಿಗೆ ಬಿಗ್ ಬಾಸ್ ಇಷ್ಟವೂ ಆಗಿರಲಿಲ್ಲ. ಯಾಕೆಂದರೆ ಕಾರ್ಯಕ್ರಮದಲ್ಲಿ ಹೇಳಿಕೊಳ್ಳುವಂತಹ ಸ್ಟಾರ್‌ಗಳು ಇರಲಿಲ್ಲ. ಚಿರಪರಿಚಿತ ಮುಖಗಳಿರಲಿಲ್ಲ. ಇದರಿಂದ ಕಳೆದ ವರ್ಷ ತೆಲುಗು ಬಿಗ್ ಬಾಸ್‌ನ ಟ್ರೋಲ್ ಕೂಡ ಮಾಡಲಾಗಿತ್ತು. ಟಿಆರ್‌ಪಿ ನೆಲಕಚ್ಚಿದ್ದಕ್ಕೆ ನಾಗಾರ್ಜುನ ಅವರನ್ನೇ ಹೊಣೆ ಮಾಡಲಾಗಿತ್ತು.

ಹೀಗಾಗಿಯೇ ಈ ಬಾರಿ ಸ್ಫರ್ಧಿಗಳ ವಿಚಾರದಲ್ಲಿ ನಾಗಾರ್ಜುನ ವಿಶೇಷ ಆಸಕ್ತಿಯನ್ನು ತೋರಿಸಿದ್ದಾರೆ ಎನ್ನುವ ವರದಿಯನ್ನು ''OTTPlay''ಮಾಡಿದೆ. ಅದರನ್ವಯ ಈ ಬಾರಿ ನಾಗಾರ್ಜುನ ಕಾರ್ಯಕ್ರಮದ ಆಯೋಜಕರಿಗೆ ಎಚ್ಚರಿಕೆಯನ್ನು ನೀಡಿದ್ದು ಕಾರ್ಯಕ್ರಮಕ್ಕೆ ಹೇಗಾದರೂ ಮಾಡಿ ಬರಲೇಬೇಕೆಂದು ಹತಾಶರಾಗಿರುವ ವ್ಯಕ್ತಿಗಳನ್ನು ಯಾವುದೇ ಕಾರಣಕ್ಕೂ ಮನೆಯೊಳಗೆ ಸೇರಿಸಬೇಡಿ ಎಂದು ಹೇಳಿದ್ದಾರೆ. ಚಿಕ್ಕ-ಪುಟ್ಟ ಕಲಾವಿದರನ್ನು .. ಯೂಟ್ಯೂಬರ್‌ಗಳನ್ನು ಕರೆದು ಮಣೆ ಹಾಕಬೇಡಿ ಎಂದು ಕೂಡ ಹೇಳಿದ್ಧಾರೆ. ಚಿರಪರಿಚಿತವಾದ ವ್ಯಕ್ತಿಗಳ ಹುಡುಕಾಟವನ್ನು ನಡೆಸಿ ಎಂಬ ಸಲಹೆಯನ್ನು ಕೂಡ
ನಾಗಾರ್ಜುನ ಕಾರ್ಯಕ್ರಮದ ಆಯೋಜಕರಿಗೆ ನೀಡಿದ್ದಾರೆ.
ನಾಗಾರ್ಜುನ ಅವರ ಮಾತುಗಳನ್ನು ಕಾರ್ಯಕ್ರಮದ ಆಯೋಜಕರು ಗಂಭೀರವಾಗಿ ತೆಗೆದುಕೊಂಡಿದ್ದು, ಕಾರ್ಯಕ್ರಮದ ಬಜೆಟ್ ಹೆಚ್ಚಿಸಿದ್ದಾರೆ ಎಂದು ಕೂಡ ''OTTPlay'' ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಿಗ್ ಬಾಸ್ ಮನೆಗೆ ಬರುವ ಸ್ಫರ್ಧಿಗಳ ಅಂತಿಮ ಪಟ್ಟಿಯನ್ನು ಖುದ್ದು ನಾಗಾರ್ಜುನ ಅವರೇ ನೋಡಲಿದ್ದಾರೆ, ಮನೆಯೊಳಗೆ ಬರಲಿರುವ ಸ್ಫರ್ಧಿಗಳನ್ನು ಆಯ್ಕೆ ಮಾಡಲಿದ್ದಾರೆ ಎಂದು ಕೂಡ ಈ ವರದಿಯಲ್ಲಿ ಹೇಳಲಾಗಿದೆ.
ಇನ್ನುಳಿದಂತೆ ಅಲೇಖ್ಯ ಚಿಟ್ಟಿ ಪಿಕಲ್ಸ್ ಖ್ಯಾತಿಯ ರಮ್ಯಾ ಈ ಬಾರಿ ತೆಲುಗು ಬಿಗ್ ಬಾಸ್‌ನಲ್ಲಿ ಭಾಗವಹಿಸುವ ಎಲ್ಲ ಸಾಧ್ಯತೆಗಳಿವೆ. ಇವರ ಹೆಸರು ಮುಂಚೂಣಿಯಲ್ಲಿ ಕೂಡ ಇದೆ. ಇವರನ್ನು ಹೊರತು ಪಡಿಸಿದರೆ ಇನ್ನು ಕೆಲ ಹೆಸರುಗಳು ಚಾಲ್ತಿಯಲ್ಲಿವೆ.
ಒಟ್ನಲ್ಲಿ ಈ ಬಾರಿ ಬಿಗ್ ಬಾಸ್‌ನ ಸ್ಫರ್ಧಿಗಳನ್ನು ನಾಗಾರ್ಜುನ ಆಯ್ಕೆ ಮಾಡಲಿದ್ದಾರೆ ಎನ್ನುವ ಸುದ್ದಿಯನ್ನು 'OTTPlay' ಪ್ರಕಟಿಸಿದೆ.ಯಾರೆಲ್ಲ ಈ ಬಾರಿ ಮನೆಗೆ ಬರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಸ್ಟಾರ್ ಮಾ ಮತ್ತು ಡಿಸ್ನಿ + ಹಾಟ್ ಸ್ಟಾರ್‌ನಲ್ಲಿ ಈ ವರ್ಷ ಕೂಡ ತೆಲುಗು ಬಿಗ್ ಬಾಸ್ ಪ್ರಸಾರವಾಗಲಿದೆ.ಪ್ರಸಾರದ ದಿನಾಂಕ ಶೀಘ್ರದಲ್ಲಿಯೇ ಹೊರ ಬೀಳಲಿದೆ.


Click it and Unblock the Notifications











