Gana Bajana Season 2 Love Mocktail: ಭಾನುವಾರ ಸಂಜೆ 6 ಗಂಟೆಯಿಂದ ಎಲ್ಲೂ ಹೋಗ್ಬೇಡಿ.. ಕಾರಣ ಇಲ್ಲಿದೆ ನೋಡಿ!
ಏನ್ ಗುರು ಭಾನುವಾರ ಅಂದರೆ ಮಸ್ತ್ ಮಜಾ ಮಾಡುವ ವಾರ. ನೀವೂ ನೋಡಿದ್ದರೆ ಎಲ್ಲೂ ಹೋಗಬೇಡಿ ಅಂತಿದ್ದೀರಲ್ಲ ಅನ್ನೋ ಅಂದ್ಕೊಂಡ್ರಾ..? ನಾವೂ ಹೇಳಿದ್ದು ಮಸ್ತ್ ಮಜಾ ಮಾಡಲಿ ಅಂತಾನೆ. ಅದಕ್ಕೆ ಕಾರಣ ಕೂಡ ಇದೆ ಗುರೂ. ಸ್ಟಾರ್ ಸುವರ್ಣ ನಿಮಗೋಸ್ಕರ ಅಂತ ಮನರಂಜನೆಯನ್ನು ನೀಡುವುದಕ್ಕೆ ಸಿದ್ಧವಾಗಿದೆ. ಏನು ಅಂತೀರಾ ಮುಂದೆ ಓದಿ ಹಾಗಾದ್ರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು, ರಿಯಾಲಿಟಿ ಶೊಗಳು ಬರುತ್ತಿವೆ. ಧಾರಾವಾಹಿಗಳಂತು ಎಲ್ಲರ ಮನಸ್ಸನ್ನು ತಂಪು ಮಾಡುತ್ತಿವೆ. ಅದೆಲ್ಲೆದರ ಜೊತೆಗೆ ಈ ರಿಯಾಲಿಟಿ ಶೋಗಳು ನಕ್ಕು ನಗಿಸುತ್ತಿವೆ. ಅದರಲ್ಲೂ ಗಾನ ಬಜಾನ ಶೋನಲ್ಲಿ ತರಹೇವಾರಿ ಮನರಂಜನೆ ಈಗಾಗಲೇ ಸಿಕ್ಕಿದೆ. ಇದೀಗ ಗ್ರ್ಯಾಂಡ್ ಫಿನಾಲೆಗೆ ಬಂದು ನಿಂತಿದೆ.
'ಗಾನ ಬಜಾನ' ರಿಯಾಲಿಟಿ ಶೋವನ್ನು ನಿರಂಜನ್ ಅದ್ಭುತವಾಗಿ ನಡೆಸಿಕೊಡುತ್ತಿದ್ದರು. ಸಾಕಷ್ಟು ಸಿನಿಮಾ ತಾರೆಯರನ್ನು ಕರೆಸಿ ಮನರಂಜನೆಯನ್ನೇ ಔತಣವಾಗಿ ಉಣಬಡಿಸುತ್ತಿದ್ದರು. ಹೆಚ್ಚಾಗಿ ಸಿನಿಮಾ ಟೀಂಗಳನ್ನು ಕರೆಸಿ ಸಿನಿಮಾ ಪ್ರಮೋಷನ್ ಜೊತೆ ಜೊತೆಗೆ ನೋಡುಗರಿಗೆ ಹೊಟ್ಟೆ ಉಣ್ಣಾಗಿಸುವಷ್ಟು ನಗೆಯನ್ನು ನೀಡುತ್ತಿದ್ದರು. ಫನ್ನಿ ಫನ್ನಿ ಗೇಮ್ ಗಳನ್ನು ಆಡಿಸುತ್ತಾ ಗಾನ ಬಜಾನ ಶೋ ಶುರುವಾಗಿದ್ದು ಗೊತ್ತೆ ಆಗದಷ್ಟು ನಗಿಸುವ ಕಾರ್ಯಕ್ರಮ ಅದಾಗಿತ್ತು. ಇದೀಗ ಮುಗಿಯುವ ಹಂತಕ್ಕೆ ಬಂದಿದ್ದು, ಗ್ರ್ಯಾಂಡ್ ಫಿನಾಲೆಯನ್ನು ಗ್ರ್ಯಾಂಡ್ ಮಾಡಲು ತಯಾರಿ ನಡೆಸಿದ್ದಾರೆ.

ಗಾನಬಜಾನ ಫಿನಾಲೆಯಲ್ಲಿ ನಕ್ಕು ನಗಿಸಿದ ಇಂಗ್ಲಿಷ್ ಮಂಜ
ಮೊದಲೇ ಹೇಳಿದಂತೆ ಗಾನ ಬಜಾನ ಶೋನಲ್ಲಿ ಸಿನಿಮಾ ತಂಡಗಳಿಂದ ಹೆಚ್ಚೆಚ್ಚು ಮನರಂಜನೆ ಸಿಗುತ್ತಾ ಇತ್ತು. ಫಿನಾಲೆಯಲ್ಲೂ ಅದು ಮುಂದುವರೆದಿದೆ. ಇಂಗ್ಲಿಷ್ ಮಂಜ ಮತ್ತು ಫ್ಯಾಮಿಲಿ ಪ್ಯಾಕ್ ಸಿನಿಮಾ ತಂಡಗಳು ಸಿದ್ಧತೆ ನಡೆಸಿವೆ. ಎರಡು ಸಿನಿಮಾಗಳಿಂದ ನಟ-ನಟಿಯರು ಅಖಾಡಕ್ಕೆ ಧುಮುಕ್ಕಿದ್ದಾರೆ. ಇಂಗ್ಲಿಷ್ ಮಂಜ ಸಿನಿಮಾದಿಂದ ಪ್ರಮೋದ್, ನಾಗೇಂದ್ರ ಅರಸ್, ತೇಜಸ್ವಿನಿ, ನಾಗೇಂದ್ರ ಪ್ರಸಾದ್ ಬಂದಿದ್ದರೆ, ಫ್ಯಾಮಿಲಿ ಪ್ಯಾಕ್ ನಿಂದ ಅಮೃತಾ ಅಯ್ಯಂಗಾರ್, ಲಿಖಿತ್ ಶೆಟ್ಟಿ, ಶರ್ಮಿಳಾ ಶೆಟ್ಟಿ, ವಿರಾಜ್ ಗಾನಬಜಾನದಲ್ಲಿ ಮನರಂಜನೆ ನೀಡಲು ಬಂದಿದ್ದಾರೆ.

ಕಲರ್ ಕಲರ್ ಸೆಟ್ಟಲ್ಲಿ ಮಸ್ತ್ 'ಗಾನ ಬಜಾನ'
ಇಷ್ಟು ದಿನ ಅದ್ಭುತವಾಗಿ ನಡೆಸಿಕೊಟ್ಟ ಕಾರ್ಯಕ್ರಮವದು, ಎಷ್ಟೋ ನೋವು ನಲಿವುಗಳನ್ನು ಕೇಳಿದ-ಹೇಳಿದ ವೇದಿಕೆಯದು, ನಕ್ಕಿದ್ದು ಉಂಟು ಅತ್ತಿದ್ದು ಉಂಟು, ಎಲ್ಲಾ ರೀತಿಯ ಬಾಂಧವ್ಯ ಬೆಸೆದ ಕಾರ್ಯಕ್ರಮ ಎಂಡ್ ಆಗುತ್ತಿದೆ. ಹಾಗಂತ ಇದೇನು ಸಂಪೂರ್ಣವಾಗಿ ಮುಗಿದು ಹೋಗುವ ಬಂಧವೇನು ಅಲ್ಲ. ಭಾನುವಾರಕ್ಕೆ ಮುಗಿಯುತ್ತಿದೆ. ಮತ್ತೊಂದು ಸೀಸನ್ ಶುರುವಾಗಬಹುದು. ಆದರೂ ಎಲ್ಲರೊಳಗೊಂದು ಬೇಸರದ ಜೊತೆಗೆ ಸಂಭ್ರಮವೂ ಮನೆ ಮಾಡಿದೆ. ಕಾರ್ಯಕ್ರಮವನ್ನು ಅದ್ದೂರಿಯಾಗಿ ಎಂಡ್ ಮಾಡುವ ಫ್ಲ್ಯಾನ್ ಮಾಡಿ ಅಖಾಡವನ್ನು ಸಿದ್ದಮಾಡಿದ್ದಾರೆ. ಗಾನಬಜಾನ ವೇದಿಕೆಯನ್ನು ಕಲರ್ ಕಲರ್ ಹೂಗಳಿಂದ ಅಷ್ಟೇ ಗ್ರ್ಯಾಂಡ್ ಆಗಿ ಅಲಂಕಾರ ಮಾಡಿದ್ದಾರೆ. ಬಣ್ಣದ ಲೋಕದ ತಾರೆಯರು ಬಣ್ಣ ಬಣ್ಣದ ಹೂಗಳ ನಡುವೆ ಕಂಗೊಳಿಸಲಿದ್ದಾರೆ.

ಎತ್ತಿನಗಾಡಿಯಲ್ಲಿ ಇಂಗ್ಲಿಷ್ ಮಂಜ ಎಂಟ್ರಿ
'ಗಾನಬಜಾನ' ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಲು ಬರುತ್ತಿರುವ ಇಂಗ್ಲಿಷ್ ಮಂಜ ಮತ್ತು ಫ್ಯಾಮಿಲಿ ಪ್ಯಾಕ್ ಟೀಂ ಎತ್ತಿನ ಗಾಡಿಯಲ್ಲಿ ಬಂದಿದ್ದಾರೆ. ನಟ ಪ್ರಮೋದ್ ಎಲ್ಲರನ್ನೂ ಎತ್ತಿನ ಗಾಡಿಯಲ್ಲಿ ಕೂರಿಸಿಕೊಂಡು 'ಗಾನಬಜಾನ' ಸೆಟ್‌ಗೆ ಕರೆದುಕೊಂಡು ಬಂದಿದ್ದಾರೆ. ಮಹಿಳಾ ಮಣಿಗಳೆಲ್ಲಾ ಸಾಂಪ್ರದಾಯಿಕ ಉಡುಗೆಯಲ್ಲಿ ಅಂದ-ಚೆಂದವಾಗಿ ಕಾಣುತ್ತಿದ್ದರೆ, ನಟರು ಪಂಚೆ ಹಾಕಿ ಮಧುಮಕ್ಕಳಂತೆ ಮಿಂಚುತ್ತಿದ್ದಾರೆ.

ವೀಕೆಂಡ್‌ನಲ್ಲಿ 'ಲವ್ ಮಾಕ್ಟೇಲ್ 2' ಸದ್ದು
ಈಗಾಗಲೇ ಥಿಯೇಟರ್ ನಲ್ಲಿ ಎಲ್ಲರನ್ನು ರಂಜಿಸಿರುವ ಸಿನಿಮಾ 'ಲವ್ ಮಾಕ್ಟೇಲ್ 2'. ಕಿರುತೆರೆಯಲ್ಲಿ ಮೊದಲ ಬಾರಿಗೆ ಟೆಲಿಕಾಸ್ಟ್ ಆಗಲಿದೆ. ಥಿಯೇಟರ್ ಹಾಗೂ ಓಟಿಟಿ ಎರಡರಲ್ಲೂ ಸೂಪರ್ ಹಿಟ್ ಎನಿಸಿಕೊಂಡಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಟನೆಯ ಈ ಸಿನಿಮಾ ಭಾನುವಾರ ನಿಮಗಾಗಿ ಬರುತ್ತಿದೆ. ಕಿರುತೆರೆಯಲ್ಲೇ ಪ್ರಪ್ರಥಮ ಬಾರಿಗೆ ಸ್ಟಾರ್ ಸುವರ್ಣ ಟೆಲಿಕಾಸ್ಟ್ ಮಾಡುತ್ತಿದೆ.

ಗಾನಬಜಾನ ಮತ್ತು ಲವ್ ಮಾಕ್ಟೇಲ್2 ಟೈಮಿಂಗ್ಸ್ ಇಲ್ಲಿದೆ
ಮೊದಲೇ ಹೇಳಿದಂತೆ ಭಾನುವಾರ ಸಂಜೆ 6 ಗಂಟೆಯಿಂದ ರಾತ್ರಿ 11ರವರೆಗೂ ಮನರಂಜೆ ಸಿಗಲಿದೆ. ಸಂಜೆ 6 ಗಂಟೆಗೆ ಲವ್ ಮಾಕ್ಟೇಲ್2 ಶುರುವಾದರೆ 9 ಗಂಟೆಯ ತನಕ ನಕ್ಕು ನಗಿಸುವ ಕೆಲಸ ಮಾಡುತ್ತೆ. ಬಳಿಕ 9 ರಿಂದ 11 ಗಂಟೆಗೆ ಗಾನ ಬಜಾನ ಶೋ ಮನರಂಜೆನಯನ್ನು ನೀಡಲಿದೆ. ಸೋ ಭಾನುವಾರ 6 ಗಂಟೆಗೆ ಫ್ರೀ ಆಗ್ಬಿಡಿ.


Click it and Unblock the Notifications











