Ganavi Lakshman: ಸಿಂಪಲ್ ಉಡುಗೆಯಲ್ಲಿ ಮಗಳು ಜಾನಕಿ ಸ್ಪೆಷಲ್ ಫೋಟೋಶೂಟ್
ಕಿರುತೆರೆ ಮೂಲಕ ಸಿನಿ ರಂಗಕ್ಕೆ ಎಂಟ್ರಿಕೊಟ್ಟು ಸೈಲೆಂಟ್ ಆಗಿಯೇ ಎಲ್ಲೆಡೆ ಮಿಂಚುತ್ತಿರುವ ನಟಿ ಗಾನವಿ ಲಕ್ಷ್ಮಣ್, ಸೋಶಿಯಲ್ ಮೀಡಿಯಾದಲ್ಲೂ ಮಿನುಗುತ್ತಿದ್ದಾರೆ.
ಮೊದಲಿಗಿಂತಲೂ ಈಗ ಹೆಚ್ಚೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಗಾನವಿ, ಆಗಾಗ ಫೋಟೋಶೂಟ್ ಮಾಡಿ ಅಪ್ ಲೋಡ್ ಮಾಡುತ್ತಿರುತ್ತಾರೆ. ದಿನ ಕಳೆದಂತೆ ಗಾನವಿ ಸುಂದರವಾಗಿಯೂ ಕಾಣುತ್ತಿದ್ದಾರೆ. ಕನ್ನಡದ ಮಾತ್ರವಲ್ಲದೇ ಈಗ ತೆಲುಗು ಸಿನಿಮಾಗಳಲ್ಲೂ ಈಗ ಗಾನವಿ ಕಾಣಿಸಿಕೊಳ್ಳುತ್ತಿದ್ದಾರೆ.

'ಮಗಳು ಜಾನಕಿ' ಧಾರಾವಾಹಿ ಮೂಲಕ ಹೆಸರುವಾಸಿಯಾದ ನಟಿ ಗಾನವಿ ಈಗ ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆದರೂ ಕೂಡ ಗಾನವಿಯನ್ನು ಈಗಲೂ ಜನ ಜಾನಕಿ ಹೆಸರಿನಲ್ಲೇ ಗುರುತಿಸುತ್ತಾರೆ.
ಬ್ರೇಕ್ ತಂದುಕೊಟ್ಟ ಧಾರಾವಾಹಿ
ಮಗಳು ಜಾನಕಿ ಧಾರಾವಾಹಿ ಮೂಲಕ ಜನರಿಗೆ ಚಿರಪರಿಚಿತಳಾದ ಗಾನವಿ, ಧಾರಾವಾಹಿ ಅರ್ಧಕ್ಕೆ ನಿಂತರೂ ಕೂಡ ಜಾನಕಿ ಪಾತ್ರವನ್ನೂ ಯಾರೂ ಮರೆತಿಲ್ಲ. ಈಗಲೂ ಗಾನವಿ ಲಕ್ಷ್ಮಣ್ ಎಲ್ಲೇ ಹೋದರೂ ಅಥವಾ ಯಾವ ಸಿನಿಮಾದಲ್ಲೇ ಕಾಣಿಸಿಕೊಂಡರೂ, ಜನ ಮೊದಲು ಜಾನಕಿ ಎಂದೇ ಗುರುತು ಹಿಡಿಯುತ್ತಾರೆ. ಒಂದೇ ಧಾರಾವಾಹಿ ಮೂಲಕ ಕಿರುತೆರೆಯಲ್ಲ ಹಿಟ್ ಆದ ನಟಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಸೈಲೆಂಟ್ ಆಗಿ ಫೇಮಸ್ ಆಗುತ್ತಿದ್ದಾರೆ.
ನೃತ್ಯಗಾರ್ತಿ ರಂಗಭೂಮಿಗೆ ಬಂದದ್ದು
ಚಿಕ್ಕಮಗಳೂರಿನ ಚಿಕ್ಕ ಮಲ್ಲಿಗೆ ಗಾನವಿ ಲಕ್ಷ್ಮಣ್, ಕಡಿಮೆ ಅವಧಿಯಲ್ಲಿಯೇ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಗಾನವಿಗೆ ನಟನೆಗಿಂತ ನೃತ್ಯದಲ್ಲಿ ಸಾಕಷ್ಟು ಆಸಕ್ತಿಯಿತ್ತು. ಸೈಕಾಲಜಿ ಮತ್ತು ಕ್ರಿಮಿನಾಲಜಿಯಲ್ಲಿ ಪದವಿ ಪಡೆದಿದ್ದ ಗಾನವಿಗೆ ಮೊದಮೊದಲು ನಟನೆ ಬಗ್ಗೆ ಸ್ವಲ್ಪ ಭಯವಿತ್ತು. ಕೊನೆಗೆ ರಂಗಭೂಮಿ ಸೇರಿದ ಇವರು ಬಿ.ಜಯಶ್ರೀ ಮುಂತಾದ ಹಿರಿಯ ಕಲಾವಿದರ ಜೊತೆ ಕೆಲಸ ಮಾಡಿದ್ದಾರೆ. ಕಿರುತೆರೆಯಲ್ಲಿ ಹಲವು ಅವಕಾಶಗಳು ಬಂದರೂ ಸೂಕ್ತ ಪಾತ್ರಕ್ಕಾಗಿ ಕಾಯುತ್ತಿದ್ದ ಗಾನವಿ, ಮಗಳು ಜಾನಕಿ ಮೂಲಕ ಕರ್ನಾಟಕ ತುಂಬ ಪ್ರಸಿದ್ಧರಾದರು.
ಸಿನಿ ರಂಗದಲ್ಲೂ ಮಿಂಚುತ್ತಿರುವ ಜಾನಕಿ
ಮಗಳು ಜಾನಕಿ ಅರ್ಧಕ್ಕೆ ನಿಂತ ಮೇಲೆ, ಕೆಲ ಕಾಲ ಕಾಣೆಯಾಗಿದ್ದ ಗಾನವಿ, ಸಿನಿಮಾ ಕ್ಷೇತ್ರದ ಮೂಲಕ ದೊಡ್ಡ ಬ್ರೇಕ್ ಪಡೆದರು. ಧಾರಾವಾಹಿಗೂ ಮುಂಚೆ ಕೆಲ ಕಿರುಚಿತ್ರಗಳಲ್ಲಿ ನಟಿಸಿದ್ದರು. ಕ್ರಿಯೇಟಿವ್ ಡ್ಯಾನ್ಸ್ ಮೂವಮೆಂಟ್ ಎಂಬ ಡ್ಯಾನ್ಸ್ ಫಾರ್ಮ್‌ನ್ನು ಪ್ರಾಕ್ಟೀಸ್ ಮಾಡುವ ಇವರು ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಡುತ್ತಾರೆ. ರಿಷಬ್ ಶೆಟ್ಟಿ ಅಭಿನಯದ ಹೀರೋ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಗಾನವಿ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ 125ನೇ ಸಿನಿಮಾ 'ವೇದ'ದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ತೆಲುಗಿನ 'ರುದ್ರಂಗಿ' ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರ ಕಳೆದ ತಿಂಗಳು ರಿಲೀಸ್ ಆಗಿ ಸಾಕಷ್ಟು ಸದ್ದು ಮಾಡಿತ್ತು.
ಸಿಂಪಲ್ ಉಡುಗೆಯಲ್ಲಿ ಫೋಟೋಶೂಟ್
ಇನ್ನು ನಟಿ ಗಾನವಿ ಯಾವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಮುಂದಿನ ಪ್ರಾಜೆಕ್ಟ್ ಏನು ಎಂಬುದನ್ನು ಸದಾ ಸೀಕ್ರೆಟ್ ಆಗಿಯೇ ಇಟ್ಟಿರುತ್ತಾರೆ. ಚಿತ್ರ ರಿಲೀಸ್ ಆದಾಗ ಅಭಿಮಾನಿಗಳಿಗೆ ಶಾಕ್ ಜೊತೆಗೆ ಖುಷಿಯೂ ಆಗುತ್ತದೆ. ಸದ್ಯ ಗಾನವಿಯ ಮುಂದಿನ ಪ್ರಾಜೆಕ್ಟ್ ಯಾರಿಗೂ ಗೊತ್ತಿಲ್ಲ. ಆದರೆ, ಗಾನವಿ ಈಗ ಫೋಟೋಶೂಟ್ ಮಾಡಿಸಿದ್ದು, ಬಹಳ ಡಿಫರೆಂಟ್ ಆಗಿ ಕಾಣುತ್ತಿದ್ದಾರೆ. ಸಿಂಪಲ್ ಉಡುಗೆಯಲ್ಲಿದ್ದರೂ ಫೋಟೋದಲ್ಲಿನ ಗಾನವಿ ಪೋಸ್ ಅಭಿಮಾನಿಗಳು ಐ ಲವ್ ಯೂ ಎಂದು ಕಮೆಂಟ್ ಮಾಡುವಂತೆ ಮಾಡಿದೆ. ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದರೂ, ಗಾನವಿ ಮುದ್ದು ಜಾನಕಿಯಂತೆಯೇ ಕಂಗೊಳಿಸುತ್ತಾರೆ ಎಂಬುದು ಅಭಿಮಾನಿಗಳ ಅಭಿಪ್ರಾಯ.


Click it and Unblock the Notifications











