Ganavi Laxman: ಕನ್ನಡದ 'ಮಗಳು ಜಾನಕಿ' ತೆಲುಗು 'ರುದ್ರಂಗಿ'ಯಲ್ಲಿ ಮಿಂಚಿಂಗ್
'ಮಗಳು ಜಾನಕಿ' ಧಾರಾವಾಹಿ ಮೂಲಕ ಮನೆಮಾತಾಗಿದ್ದ ನಟಿ ಗಾನವಿ ಲಕ್ಷ್ಮಣ್ ಈಗ ಸಿನಿಮಾ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಧಾರಾವಾಹಿ ಅರ್ಧಕ್ಕೆ ನಿಂತರೂ ಸೀರಿಯಲ್ ಜೊತೆಗೆ ಜಾನಕಿಯೂ ಫೇಮಸ್ ಆಗಿಬಿಟ್ಟರು. ಒಂದೇ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಹಿಟ್ ಆದ ನಟಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಸೈಲೆಂಟ್ ಆಗಿ ಫೇಮಸ್ ಆಗುತ್ತಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲದೇ, ಈಗ ಪರಭಾಷೆಯಲ್ಲೂ ಮಿಂಚುತ್ತಿರುವ ಗಾನವಿ ಅವರ ಇನ್ ಸ್ಟಾಗ್ರಾಂನಲ್ಲಿ ಏನೂ ಹೇಳದೇ, ವೀಡಿಯೋವನ್ನು ಅಪ್ ಲೋಡ್ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರಿನ ಈ ಚಿಕ್ಕ ಮಲ್ಲಿಗೆ ಕಡಿಮೆ ಅವಧಿಯಲ್ಲಿಯೇ ದೊಡ್ಡ ವೀಕ್ಷಕ ಬಳಗವನ್ನು ಹೊಂದಿದ್ದಾರೆ. ಆಡಿಷನ್‌ನಲ್ಲಿ ಭಾಗವಹಿಸಿ 'ಮಗಳು ಜಾನಕಿ' ಧಾರಾವಾಹಿಗೆ ಎಂಟ್ರಿ ಕೊಟ್ಟರು.

ಮೊದಲ ಪ್ರಯತ್ನದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡ ಆಕೆಯ ಜಾನಕಿ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಬಳಿಕ ಸೀದಾ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಗಾನವಿ ಈಗ 'ರುದ್ರಂಗಿ' ಸಿನಿಮಾ ಮೂಲಕ ತೆರೆಮೇಲೆ ಸದ್ದು ಮಾಡಿದ್ದಾರೆ. ಜುಲೈ 7ರಂದು 'ರುದ್ರಂಗಿ' ಸಿನಿಮಾ ರಿಲೀಸ್ ಆಗಿದ್ದು, ಎಲ್ಲರೂ ಕೂಡ ಗಾನವಿ ಅವರ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ.
ಟ್ರಾವೆಲ್ ಮಾಡುವುದು ಎಂದರೆ ಇಷ್ಟ
ಇನ್ನು ಗಾನವಿ ಅವರು ಕ್ರಿಯೇಟಿವ್ ಡ್ಯಾನ್ಸ್ ಮೂಮೆಂಟ್ ಅಂತ ಒಂದು ಡ್ಯಾನ್ಸ್ ಫಾರ್ಮ್ ಅನ್ನು ಕೂಡ ಪ್ರಾಕ್ಟಿಸ್ ಮಾಡಿದ್ದಾರೆ. ಗಾನವಿ ಹಾಗೂ ಅವರ ಅಪ್ಪ-ಅಮ್ಮ ಮೂವರೂ ಫ್ರೆಂಡ್ಸ್ ತರಹ ಇರುತ್ತಾರೆ. ಅವರೇ ನನಗೆ ಪ್ರೋತ್ಸಾಹ ನೀಡುತ್ತಾರೆ. ಏನು ಇಷ್ಟನೋ ಅದು ಮಾಡು ಎಂಬ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಟ್ರಾವೆಲಿಂಗ್ ಅಂದ್ರೆ ಗಾನವಿ ಅವರಿಗೆ ಇಷ್ಟವಂತೆ. ಕೇರಳ, ಚೆನ್ನೈ, ಪಾಂಡಿಚೆರಿ ಹೀಗೆ ಕೆಲವು ಕಡೆ ಹೋಗಿದ್ದಾರೆ. ಯಕ್ಷಗಾನ ಸೇರಿದಂತೆ ಬೇರೆ ಬೇರೆ ರೀತಿಯ ಕಲೆ ಇರುವ ಕರ್ನಾಟಕದ ಅನೇಕ ಕಡೆ ಸುತ್ತಿದ್ದಾರೆ.

ಕಲಾವಿದೆಯಾಗಿರುವುದೇ ಕನಸು
ಚಾಲೆಂಜಿಂಗ್ ಪಾತ್ರಗಳು ಬಂದರೆ ಖಂಡಿತ ಸಿನಿಮಾ ಮಾಡಲು ಇಚ್ಛಿಸುತ್ತಾರೆ. ಕಲಾವಿದೆ ಆಗಿಯೇ ಇರಬೇಕು. ಕಲಾವಿದೆ ಅಂತಲೇ ಗುರುತಿಸಿಕೊಳ್ಳಬೇಕು. ಕಲೆಯ ಜೊತೆಗೆ ಬದುಕಬೇಕು. ಎಲ್ಲ ರೀತಿಯ ಕಲೆಯನ್ನು ನೋಡಬೇಕು ಅದನ್ನು ಕಲಿಯಬೇಕು ಎಂಬುದೇ ಗಾನವ ಅವರ ದೊಡ್ಡ ಕನಸಾಗಿದೆ. ಆಗಾಗ ಗಾನವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಆಗ ಫೋಟೋಶೂಟ್ ಗಳನ್ನು ಮಾಡಿಸುತ್ತಿರುತ್ತಾರೆ.
ಮುಂದಿನ ಚಿತ್ರಗಳ ಬಗ್ಗೆ ಇಲ್ಲ ಕ್ಲೂ
ಅದೇ ಶಿವಣ್ಣ ಅವರ 125ನೇ ಸಿನಿಮಾ 'ವೇದ' ಚಿತ್ರದಲ್ಲಿ ನಟಿಸಿದ ಗಾನವಿ ಅವರ ಆಕ್ಟಿಂಗ್‌ಗೆ ಫಿದಾ ಆಗದವರಿಲ್ಲ. ಈ ಸಿನಿಮಾ ಕನ್ನಡ, ತೆಲುಗು, ತಮಿಳಿನಲ್ಲಿ ರಿಲೀಸ್ ಆಗಿತ್ತು. ಇದೀಗ 'ರುದ್ರಂಗಿ' ತೆಲುಗು ಸಿನಿಮಾದಲ್ಲಿ ಜಗಪತಿ ಬಾಬು ಅವರ ಜೊತೆಗೆ ಅದ್ಬುತವಾಗಿ ನಟಿಸಿದ್ದಾರೆ.
ಹಲವು ಸಿನಿಮಾಗಳಲ್ಲಿ ಗಾನವಿ
ಗಾನವಿ ಅವರು ರಿಷಬ್ ಶೆಟ್ಟಿ ನಟನೆಯ 'ಹೀರೋ' ಮತ್ತು 'ಭಾವಚಿತ್ರ' ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನು 'ಗುಟ್ರುಗೂ 'ಎಂಬ ಕಿರು ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಸದ್ಯ ಇದರ ವೀಡಿಯೋವನ್ನು ಶೇರ್ ಮಾಡಿದ್ದಾರೆ. ಗಾನವಿ ಕೈಯಲ್ಲಿ ಇನ್ನೂ ಸಾಕಷ್ಟು ಚಿತ್ರಗಳು ಇದ್ದು, ಇದರ ಬಗ್ಗೆ ಯಾವುದೇ ಅಪ್‌ಡೇಟ್ ನೀಡಿಲ್ಲ. ಕನ್ನಡದ ನಟಿ ಪರಭಾಷೆಯಲ್ಲಿ ಹೆಸರು ಮಾಡುತ್ತಿರುವುದು ಎಲ್ಲರಿಗೂ ಖುಷಿಯಾಗಿದೆ.


Click it and Unblock the Notifications











