ಕಲರ್ಸ್ ಕನ್ನಡದಲ್ಲಿ ಶುರುವಾಗಲಿದೆ ಮತ್ತೆರಡು ಹೊಸ ಧಾರಾವಾಹಿಗಳು

By ಪ್ರಿಯಾ ದೊರೆ

ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳಿಗೇನು ಬರವಿಲ್ಲ. ಒಂದು ಧಾರಾವಾಹಿ ಕಥೆ ಮುಗಿಸೋಕು ಮುನ್ನ ಮತ್ತೊಂದು ಧಾರಾವಾಹಿ ಕಥೆ ಸಿದ್ಧವಾಗಿರುತ್ತದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಹೊಸ ಧಾರಾವಾಹಿಗಳು ಪ್ರಾರಂಭವಾಗುತ್ತಿದೆ. ಇತರೆ ವಾಹಿನಿಗಳಲ್ಲಿ ಈಗ ಡಬ್ಬಿಂಗ್ ಹಾಗೂ ರೀಮೇಕ್ ಧಾರಾವಾಹಿಗಳೇ ಹೆಚ್ಚಾಗಿವೆ. ಆದರೆ ಕಲರ್ಸ್ ಕನ್ನಡ ಹೊಸತನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ಸು ಕಾಣುತ್ತಿದೆ. ಸ್ವಮೇಕ್ ಧಾರಾವಾಹಿಗಳಿಗೆ ಒತ್ತು ಕೊಡುತ್ತಿದೆ.

ಸದಾ ಹೊಸತನಕ್ಕೆ ತುಡಿಯುವ ವಾಹಿನಿ ಈಗ ವೀಕ್ಷಕರನ್ನು ರಂಜಿಸಲು ಸಿದ್ದವಾಗಿದೆ. ಇತ್ತೀಚೆಗಷ್ಟೇ ಹೊಸ ಧಾರಾವಾಹಿಗಳನ್ನು ಒಂದಾದ ಮೇಲೆ ಒಂದರಂತೆ ಪ್ರಸಾರ ಮಾಡುತ್ತಿರುವ ಕಲರ್ಸ್ ಕನ್ನಡ ವಾಹಿನಿ ಈಗ ಮತ್ತೆ ಎರಡು ಹೊಸ ಧಾರಾವಾಹಿಗಳನ್ನು ಶುರು ಮಾಡಲಿದೆ. ಹೌದು ಕಳೆದ ಮೂರು-ನಾಲ್ಕು ದಿನದಿಂದ ಕಲರ್ಸ್ ಕನ್ನಡ ತನ್ನ ವಾಹಿನಿಯಲ್ಲಿ ಹೊಸ ಪ್ರೋಮೋವನ್ನು ರಿಲೀಸ್ ಮಾಡಿದೆ.

Ganda Gendthi and Gruhapravesha serials to premiere soon in colors kannada

ಒಂದು ಪ್ರೋಮೋದಲ್ಲಿ ಯುವತಿಯೊಬ್ಬಳು ಮದುವೆಯಾಗುವ ಆಸೆಯಿಂದ ಕೈಯಲ್ಲಿ ಹಾರ ಹಿಡಿದು, ಜೊತೆಗೆ ದಾಖಲೆಗಳೊಂದಿಗೆ ನೋಂದಣಿ ಕಚೇರಿ ಎದು ಬಂದು ನಿಂತಿರುತ್ತಾಳೆ. ಕಚೇರಿಗೆ ಬಂದ ಜೋಡಿಗಳು ಮದುವೆಯಾಗಿ ಹೋಗುತ್ತಲೇ ಇರುತ್ತಾರೆ. ಸಂಜೆ ಕಚೇರಿಯ ಬಾಗಿಲು ಹಾಕಿದರೂ, ಯುವತಿಯ ಸಂಗಾತಿ ಬರುವುದಿಲ್ಲ. ಇದರಿಂದ ಕಣ್ಣೀರಾಕುವ ಹುಡುಗಿಯ ಹೊಟ್ಟೆಯಲ್ಲಿ ಮಗು ಇರುವುದನ್ನು ತೋರಿಸುತ್ತಾರೆ. ಇದೇ ವೇಳೆಗೆ ಮಳೆ ಕೂಡ ಬರುತ್ತದೆ.

Ganda Gendthi and Gruhapravesha serials to premiere soon in colors kannada

ಒಡಲಲ್ಲಿ ಕಂದ, ಕಣ್ಣಲ್ಲಿ ನಿರೀಕ್ಷೆ; ಮದುವೆಯ ಸರದಿಗಾಗಿ ಕಾದು ನಿಂತಿದ್ದಾಳೆ ಅಪ್ಪಟ ಅಪರಂಜಿ. ಬರ್ತಿದೆ ಹೊಸ ಕತೆ, ಗಂಡ ಹೆಂಡ್ತಿ ಎಂದು ಪ್ರೋಮೋವನ್ನು ರಿಲೀಸ್ ಮಾಡಿದ್ದಾರೆ. ಇದರಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ನಟಿಯ ಹೆಸರು ನಿರುಶಾ. ಈಗಾಗಲೇ ಸಿರಿ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಅಮ್ಮನ ಮದುವೆ' ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದಾರೆ. ಮದುವೆ, ಸಮಾಜ, ಸ್ನೇಹಗಳ ಸುತ್ತ ಸುತ್ತುವ ಹೊಸ ಕತೆ 'ಗಂಡ ಹೆಂಡ್ತಿ' ಎಂದು ಹೇಳಲಾಗಿದೆ.

Ganda Gendthi and Gruhapravesha serials to premiere soon in colors kannada

ಮತ್ತೊಂದು ಧಾರಾವಾಹಿಯ ಪ್ರೋಮೋ ಕೂ ಬಂದಿದೆ. ಇದು ಕೂಡ ಸ್ವಮೇಕ್ ಧಾರಾವಾಹಿಯಾಗಿದೆ. ಅಪ್ಪ ಬದುಕಿಲ್ಲವೆಂದೇ ನಂಬಿ ಬೆಳೆದ ಹುಡುಗಿಗೆ ಅವರು ಬದುಕಿರುವ ಸತ್ಯ ಗೊತ್ತಾಗಿದೆ. ಎಂದೂ ಕಾಣದ ಅಪ್ಪನನ್ನು ಮನೆಗೆ ಕರೆತರುವ ಹುಡುಗಿಯ ಕಥೆ 'ಗೃಹಪ್ರವೇಶ'. ಇದರಲ್ಲಿ ನಾಯಕಿ ತನ್ನ ತಂದೆ ಇಲ್ಲ ಎಂದುಕೊಂಡಿರುತ್ತಾಳೆ. ಆದರೆ, ಅವರ ತಂದೆ ಓಡಿ ಹೋಗಿದ್ದಾರೆ ಎಂಬುದನ್ನು ತಿಳಿದಿದ್ದು, ಇದೀಗ ಅವರ ತಂದೆಯನ್ನು ಹುಡುಕಿಕೊಂಡು ಸಿಟಿಗೆ ಹೊರಟಿದ್ದಾಳೆ. ಇಲ್ಲಿಂದ ಕತೆ ಆರಂಭವಾಗಿ ನಾಯಕಿ ತನ್ನ ತಂದೆಯನ್ನು ಹುಡುಕುವ ಹಾದಿ ಹೇಗಿದೆ ಎಂಬುದೇ ಧಾರಾವಾಹಿಯ ಪ್ರಮುಖ ಕಥೆಯಾಗಿದೆ.

ಸದ್ಯ ಈ ಎರಡೂ ಧಾರಾವಾಹಿಗಳು ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಿದ್ದು, ಆದರೆ ಯಾವ ಸಮಯಕ್ಕೆ ಪ್ರಸಾರ ಆಗುತ್ತೆ ಎನ್ನುವುದನ್ನು ತಿಳಸಿಲ್ಲ. ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮಧ್ಯಾಹ್ನದ ಊಟ ರೆಡಿ ಆಗುತ್ತಿದೆ ಎಂದು ಪ್ರೋಮೋ ಒಂದನ್ನು ರಿಲೀಸ್ ಮಾಡಿದ್ದರು. ಮಧ್ಯಾಹ್ನ ವೇಳೆಯ ಎಲ್ಲಾ ಸ್ಲಾಟ್ ಗಳೂ ಫುಲ್ ಆಗಿದ್ದು, ಮಧ್ಯಾಹ್ನ ಧಾರಾವಾಹಿಗಳನ್ನು ಮರುಪ್ರಸಾರ ಮಾಡುವ ಬದಲಿಗೆ ಹೊಸದನ್ನು ಶುರು ಮಾಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಆದರೆ ಈ ಹೊಸ ಎರಡು ಧಾರಾವಾಹಿಗಳನ್ನು ವಾಹಿನಿ ಯಾವಾಗಿನಿಂದ, ಯಾವ ಸಮಯಕ್ಕೆ ಪ್ರಸಾರ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Ganda Gendthi and Gruhapravesha serials to premiere soon in colors kannada. Here is detials about 2 new serials. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X