ಗಂಡ ಹೆಂಡ್ತಿ ಧಾರಾವಾಹಿಯಲ್ಲಿ ಸ್ವಾತಿ ಆಗಿ ನಟಿಸುತ್ತಿರುವ ನಿರುಷಾ ಬಗ್ಗೆ ನಿಮಗೆಷ್ಟು ಗೊತ್ತು..?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಎರಡು ತಿಂಗಳಿನಿಂದ ಮಧ್ಯಾಹ್ನ ಗಂಡ ಹೆಂಡತಿ ಧಾರಾವಾಹಿ ಪ್ರಸಾರವಾಗುತ್ತಿದೆ. ಮೊದ ಮೊದಲು ಧಾರಾವಾಹಿಗೆ ಬಹಳ ನೀರಸವಾದ ಪ್ರತಿಕ್ರಿಯೆ ಸಿಗುತ್ತಿತ್ತು. ಆದರೆ, ಈಗ ಎಲ್ಲರೂ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಸ್ನೇಹಿತರ ನಡೆಯನ್ನು ಇಷ್ಟಪಟ್ಟಿದ್ದಾರೆ. ಒಬ್ಬರನ್ನೊಬ್ಬರು ರಕ್ಷಿಸುತ್ತಿರುವ ರೀತಿ ಎಲ್ಲರಿಗೂ ಖುಷಿ ಕೊಟ್ಟಿದೆ.
ಧಾರಾವಾಹಿಯಲ್ಲಿ ಸ್ವಾತಿ ಮತ್ತು ಮುರಳಿ ಇಬ್ಬರೂ ಬಾಲ ಸ್ನೇಹಿತರು. ಬಾಲ್ಯದಿಂದಲೂ ಒಟ್ಟಿಗೆ ಬೆಳೆದಿದ್ದರೂ ಕೂಡ ಒಂದು ದಿನವೂ ಮದುವೆಯಾಗಬೇಕು ಎಂದುಕೊಂಡಿರಲಿಲ್ಲ. ಆದರೆ, ಸ್ವಾತಿಗೆ ಅನ್ಯಾಯವಾಗಬಾರದು, ಆಕೆ ಒಂಟಿ ಆಗಬಾರದು ಎಂಬ ಕಾರಣಕ್ಕೆ ಮುರಳಿ ಸ್ವಾತಿ ಜೊತೆಗೆ ಜೀವನ ನಡೆಸುತ್ತಿದ್ದಾನೆ. ಸ್ವಾತಿ, ರಾಹುಲ್ ಎಂಬ ಹುಡುಗನನ್ನು ಪ್ರೀತಿಸಿ ಮೋಸ ಹೋಗಿದ್ದಾಳೆ. ರಾಹುಲ್ ಬೇಕಂತಲೇ ಸ್ವಾತಿಗೆ ಕೈ ಕೊಟ್ಟು ಪರಾರಿಯಾಗಿದ್ದಾನೆ.

ಸ್ವಾತಿ ಕೈ ಹಿಡಿದ ಮುರಳಿ
ಹೊಟ್ಟೆಯಲ್ಲಿ ಮಗು ಹೊತ್ತುಕೊಂಡು ಬೀದಿ ಪಾಲಾಗುತ್ತಿದ್ದ ಸ್ವಾತಿಯ ರಕ್ಷಣೆಗೆ ಮುರಳಿ ನಿಂತಿದ್ದಾನೆ. ತನ್ನ ನಿಶ್ಚಿತಾರ್ಥವನ್ನು ನಿಲ್ಲಿಸಿ, ಸ್ವಾತಿಯನ್ನು ಮದುವೆಯಾಗಿದ್ದಾನೆ. ಇವರಿಬ್ಬರೂ ಕೂಡ ಸ್ನೇಹಿತರಾಗಿಯೇ ಒಬ್ಬರನ್ನೊಬ್ಬರು ನಡೆಸಿಕೊಳ್ಳುತ್ತಿರುವ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸ್ನೇಹಿತರೆಂದರೆ ಹೀಗಿರಬೇಕಪ್ಪ ಎಂದು ಹೇಳುತ್ತಿದ್ದಾರೆ. ಏನೇ ಆದರೂ ಸ್ನೇಹಿತರು ಹೇಗಿರಬೇಕು ಎಂದು ತೋರಿಸಿಕೊಟ್ಟಿದ್ದಾರೆ.
'ಅಮ್ಮನ ಮದುವೆ' ಮೊದಲ ಧಾರಾವಾಹಿ
ಈ ಧಾರಾವಾಹಿಯಲ್ಲಿ ನಾಯಕಿ ಸ್ವಾತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಹೆಸರು ನಿರುಷಾ ಗೌಡ. ನಾಯಕ ಮುರಳಿ ಪಾತ್ರಕ್ಕೆ ಬಣ್ಣ ಹಚ್ಚಿರುವುದು ನಟ ಯಶ್ವಂತ್ ಕುಮಾರ್. ನಟಿ ಸ್ವಾತಿ ಅವರಿಗೆ 'ಗಂಡ ಹೆಂಡತಿ' ಧಾರಾವಾಹಿ ಮೊದಲ ಧಾರಾವಾಹಿ ಏನಲ್ಲ. ಈ ಹಿಂದೆಯೂ ಕಿರುತೆರೆಯಲ್ಲಿ ನಿರುಷಾ ಅವರು ಕಾಣಿಸಿಕೊಂಡಿದ್ದಾರೆ. ಸಿರಿ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ 'ಅಮ್ಮನ ಮದುವೆ' ಧಾರಾವಾಹಿಯಲ್ಲಿ ನಿರುಷಾ ಅವರು ನಾಯಕಿಯ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಮ್ಮನ ಮದುವೆ ಧಾರಾವಾಹಿಯಲ್ಲಿ ಭವ್ಯಶ್ರೀ ಅವರು ನಾಯಕಿ ಆಗಿ ನಟಿಸಿದ್ದಾರೆ. ಇವರ ಮಗಳ ಪಾತ್ರದಲ್ಲಿ ನಿರುಷಾ ಅವರು ಕಾಣಿಸಿಕೊಂಡಿದ್ದರು.

ನಿರುಷಾ ಸೀರಿಯಲ್ ಜರ್ನಿ
ಇನ್ನು ಕಲರ್ಸ್ ಕನ್ನಡ ವಾಹಿನಿಗೆ ಗಂಡ-ಹೆಂಡತಿ ಧಾರಾವಾಹಿ ಮೂಲಕ ನಿರುಷಾ ಅವರು ಎಂಟ್ರಿ ಕೊಟ್ಟಿದ್ದಾರೆ. ಬಹಳ ಸಿಂಪಲ್ ಪಾತ್ರವಾದರೂ ಜನರ ಮನ ಮುಟ್ಟುವಂತೆ ನಿರುಷಾ ಅವರು ನಟಿಸಿದ್ದಾರೆ. ಮನೆಯ ಮುದ್ದಿನ ಮಗಳಾಗಿ ಎಂದೂ ತಪ್ಪು ಮಾಡದವಳು ಪ್ರೀತಿ ಎಂಬ ಬಲೆಗೆ ಸಿಲುಕಿ ಜೀವನದಲ್ಲಿ ಏನೆಲ್ಲಾ ಕಷ್ಟವನ್ನು ಅನುಭವಿಸಬಹುದು ಎಂಬುದನ್ನು ಈ ಧಾರಾವಾಹಿಯಲ್ಲಿ ತೋರಿಸಿಕೊಡಲಾಗಿದೆ. ಧಾರಾವಾಹಿಯ ಹೆಸರು ಗಂಡ ಹೆಂಡತಿಯಾದರೂ ಇದರಲ್ಲಿ ಸ್ನೇಹಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಸ್ನೇಹಿತರಿಬ್ಬರು ಅನಿವಾರ್ಯ ಕಾರಣಗಳಿಂದಾಗಿ ಮದುವೆ ಎಂಬ ಬಂಧಣದಲ್ಲಿ ಸಿಲುಕಿದ್ದಾರೆ. ಇಬ್ಬರೂ ನಿಜವಾಗಿಯೂ ಮದುವೆಯಾಗದಿದ್ದರೂ, ಮನೆಯವರ ಎದುರು ನಟಿಸುತ್ತಿದ್ದಾರೆ.
ಮಾಡೆಲ್ ಕಮ್ ಆಕ್ಟರ್ ನಿರುಷಾ
ಇದೆಲ್ಲಾ ಬಿಡಿ ನಿರುಷಾ ಅವರು ಕಿರುತೆರೆಗೆ ಪಾದಾರ್ಪಣೆ ಮಾಡುವ ಮುನ್ನ ಮಾಡೆಲ್ ಆಗಿದ್ದರು. ಧಾರಾವಾಹಿಯಲ್ಲಿ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ನಿರುಷಾ ಅವರು ಮಾಡ್ರನ್ ಉಡುಗೆಯಲ್ಲೂ ಮುದ್ದಾಗಿ ಕಾಣಿಸುತ್ತಾರೆ. ಮಾಡೆಲ್ ಆಗಿರುವ ನಿರುಷಾ ಅವರು ಸಾಕಷ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದರ ಜೊತೆಗೆ ಕೆಲ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಆಕ್ಟೀವ್ ಆಗಿ ಇರದಿದ್ದರೂ, ಆಗಾಗ ರೀಲ್ಸ್ ಮಾಡುತ್ತಿರುತ್ತಾರೆ. ಇನ್ನು ಈ ಹಿಂದೆ ನಿರುಷಾ ಅವರು ತಮ್ಮ ಬೆನ್ನಿನ ಮೇಲೆ ಮಿನಿನ ಟ್ಯಾಟೂ ಹಾಕಿಸಿಕೊಂಡಿದ್ದರು. ಶ್ವಾನವನ್ನು ಸಾಕಿರುವ ನಿರುಷಾ ಅವರು ಮೂರು ದಿನಗಳ ಕೆಳಗೆ ಶ್ವಾನದ ಜೊತೆಗೆ ಫೋಟೋ ತೆಗಿಸಿಕೊಂಡಿರುವುದನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











