»   » ವಿಡಿಯೋ : ಅಕುಲ್ ಬಾಲಾಜಿಗೆ ಸರಿಯಾಗಿ 'ಚಮಕ್' ಕೊಟ್ಟ ಗಣೇಶ್

ವಿಡಿಯೋ : ಅಕುಲ್ ಬಾಲಾಜಿಗೆ ಸರಿಯಾಗಿ 'ಚಮಕ್' ಕೊಟ್ಟ ಗಣೇಶ್

Posted By:
Subscribe to Filmibeat Kannada

ನಟ ಗಣೇಶ್ ಮತ್ತು ಅವರ ಪತ್ನಿ ಶಿಲ್ಪಾ ಗಣೇಶ್ ಈ ವಾರ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮದ ಅತಿಥಿಗಳಾಗಿದ್ದಾರೆ. ಇದೀಗ ಗಣೇಶ್ ಸಂಚಿಕೆಯ ಪ್ರೋಮೋ ಕೂಡ ಹೊರಬಂದಿದ್ದು, ಕಾರ್ಯಕ್ರಮ ಈ ವಾರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಲಿದೆ.

'ಸೂಪರ್ ಟಾಕ್ ಟೈಂ' ಕಾರ್ಯಕ್ರಮ ಈಗ 'ಗೋಲ್ಡನ್ ಟಾಕ್ ಟೈಂ' ಆಯ್ತು

ಅಕುಲ್ ಸಾಮಾನ್ಯವಾಗಿ ಕಾರ್ಯಕ್ರಮಕ್ಕೆ ಬಂದ ಎಲ್ಲರ ಕಾಲು ಎಳೆಯುತ್ತಾರೆ ಆದರೆ ಇಲ್ಲಿ ಗಣೇಶ್ ಅಕುಲ್ ಗೆ ಕಾಲು ಎಳೆದಿದ್ದಾರೆ. ಅಕುಲ್ ಕೇಳಿದ ಫನ್ನಿ ಪ್ರಶ್ನೆಗೆ ಗಣೀ ಸರಿಯಾಗಿ 'ಚಮಕ್' ಕೊಟ್ಟಿದ್ದಾರೆ. ಗಣೇಶ್ ದಂಪತಿ ಕಾಣಿಸಿಕೊಂಡಿರುವ ಈ ಸಂಚಿಕೆ ತುಂಬ ವಿಶೇಷವಾಗಿದೆ. ಯಾಕಂದ್ರೆ, 'ಸೂಪರ್ ಟಾಕ್ ಟೈಂ' ಕಾರ್ಯಕ್ರಮದ ಕೊನೆಯ ಸಂಚಿಕೆ ಇದಾಗಿದೆ.

Ganesh and his wife Shilpa in 'Super talk time

ಇದರೊಂದಿಗೆ ಗಣೇಶ್ ತಮ್ಮ ಪತ್ನಿ ಶಿಲ್ಪಾ ಗಣೇಶ್ ರೊಂದಿಗೆ ಈ ಕಾರ್ಯಕ್ರಮಕ್ಕೆ ಬಂದಿರುವುದು ಮತ್ತೊಂದು ವಿಶೇಷ. ಶಿಲ್ಪಾ ಗಣೇಶ್ ಹೆಚ್ಚಾಗಿ ಯಾವುದೇ ಟಿವಿ ಕಾರ್ಯಕ್ರಮಕ್ಕೂ ಬರುವುದಿಲ್ಲ. ಜೊತೆಗೆ ಗಣೇಶ್ ಅವರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೂ ಶಿಲ್ಪಾ ಮಿಸ್ ಆಗಿದ್ದರು. ಸೋ... ಈ ವಾರದ ಕಾರ್ಯಕ್ರಮ 'ಗೋಲ್ಡನ್ ಟಾಕ್ ಟೈಂ' ಆಗಲಿದೆ.

English summary
Watch Video : Golden Star Ganesh and his wife Shilpa Ganesh in Colors Super Channel's popular show 'Super talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada