For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಗೂಡಲ್ಲಿ ಕುಚಿಕು ಗೆಳೆಯರು: ಕಚಗುಳಿ ಇಡಲು ಬರ್ತಿದ್ದಾರೆ ಶರಣ್, ತರುಣ್, ನೆನಪಿರಲಿ ಪ್ರೇಮ್

  |

  ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಒಂದು ವಿಭಿನ್ನ ಪ್ರಯತ್ನಕ್ಕೆ ಜೀ ಕನ್ನಡ ವಾಹಿನಿ ಕೈ ಹಾಕಿದೆ. ಕನ್ನಡ ಚಿತ್ರರಂಗದ ಕುಚಿಕು ಗೆಳೆಯರು, ಕಿರುತೆರೆಯ ಸ್ನೇಹಿತರ ಗ್ಯಾಂಗ್, ಅವರ ತುಂಟಾಟ, ಬಾಲ್ಯ, ನೋವು- ನಲಿವುಗಳನ್ನು ಪರಿಚಯಿಸುವ ವಿಭಿನ್ನ ಕಾರ್ಯಕ್ರಮ 'ಗೋಲ್ಡನ್ ಗ್ಯಾಂಗ್' ಅನ್ನು ಆರಂಭಿಸುತ್ತಿದೆ. ಇದೇ ಮೊದಲ ಬಾರಿಗೆ ಸ್ನೇಹಿತರಿಗಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದು, ಪ್ರಸಾರ ಮುಹೂರ್ತವನ್ನೂ ಫಿಕ್ಸ್ ಮಾಡಿದೆ.

  'ವೀಕೆಂಡ್ ವಿತ್ ರಮೇಶ್', 'ಡ್ರಾಮಾ ಜೂನಿಯರ್ಸ್', 'ಸರಿಗಮಪ', 'ಕಾಮಿಡಿ ಕಿಲಾಡಿಗಳು', 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಅಂತಹ ವಿಭಿನ್ನ ಕಾರ್ಯಕ್ರಮಗಳನ್ನು ಕಿರುತೆರೆ ತಂದಿರುವ ಜೀ ಕನ್ನಡ ಕನ್ನಡಿಗರ ಮನೆ-ಮನಗಳನ್ನು ಗೆದ್ದಿದೆ. ಈಗ ವೇದಿಕೆ ಮೇಲೆ ತಾರೆಯರ ಸ್ನೇಹಲೋಕವನ್ನು ಪ್ರಸ್ತುತ ಪಡಿಸುವ 'ಗೋಲ್ಡನ್ ಗ್ಯಾಂಗ್' ಪ್ರಸಾರಕ್ಕೆ ಸಿದ್ಧತೆ ನಡೆಸಿದೆ. ಮತ್ತೆಗೋಲ್ಡನ್ ಸ್ಟಾರ್ ಗಣೇಶ್ ನಿರೂಪಣೆ ಮಾಡುತ್ತಿದ್ದು. ಗೋಲ್ಡನ್ ಗೂಡಿಗೆ ಮೊದಲ ಅತಿಥಿಗಳ ಆಗಮನ ಆಗಿದೆ.

  ಗೋಲ್ಡನ್ ಗೂಡಿನಲ್ಲಿ ಶರಣ್, ತರುಣ್, ಪ್ರೇಮ್

  ಗೋಲ್ಡನ್ ಗೂಡಿನಲ್ಲಿ ಶರಣ್, ತರುಣ್, ಪ್ರೇಮ್

  ಗಣೇಶ್ ನಿರೂಪಣೆ ಮಾಡುತ್ತಿರುವ 'ಗೋಲ್ಡನ್ ಗ್ಯಾಂಗ್‌' ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ. ಯಾಕಂದ್ರೆ, ತಾರೆಯರ ಲೋಕದಲ್ಲಿ ಮೊದಲು ಯಾರ ಸ್ನೇಹಲೋಕ ಅನಾವರಣಗೊಳ್ಳುತ್ತದೆ ಅನ್ನುವ ಕುತೂಹಲ ಕಿರುತೆರೆ ವೀ‍ಕ್ಷಕರಿಗೆ ಇತ್ತು. ಅದಕ್ಕೀಗ ಜೀ ಕನ್ನಡ ವಾಹಿನಿ ತೆರೆ ಎಳೆದಿದೆ. ಮೊದಲ ಸಂಚಿಕೆಯ ಮೊದಲ ಎಪಿಸೋಡ್‌ನಲ್ಲಿ ಸ್ಯಾಂಡಲ್‌ವುಡ್‌ನ ಅಧ್ಯಕ್ಷ ಶರಣ್, ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟ ನೆನಪಿರಲಿ ಪ್ರೇಮ್ ಭಾಗವಹಿಸಿದ್ದಾರೆ. ಈ ಮೂವರ ಸ್ನೇಹಲೋಕ ವೀಕೆಂಡ್‌ನಲ್ಲಿ ಅನಾವರಣಗೊಳ್ಳಲಿದೆ.

  ಕಿರುತೆರೆ ಇತಿಹಾಸದಲ್ಲಿಯೇ ಮೊದಲು

  ಕಿರುತೆರೆ ಇತಿಹಾಸದಲ್ಲಿಯೇ ಮೊದಲು

  'ಗೋಲ್ಡನ್ ಗ್ಯಾಂಗ್' ಕಿರುತೆರೆಯ ಇತಿಹಾಸದಲ್ಲಿ ಸ್ನೇಹಿತರಿಗಾಗಿ ರೂಪಿಸಿದ ಪ್ರಪ್ರಥಮ ಕಾರ್ಯಕ್ರಮ ಎಂಬುವುದನ್ನು ಜೀ ಕನ್ನಡ ವಾಹಿನಿ ಹೇಳಿಕೊಂಡಿದೆ. ಮನೋರಂಜನೆಯ ಜೊತೆಗೆ ಒಂದು ಭಾವನಾತ್ಮಕ ಸಂದೇಶವನ್ನು ನೀಡಲು ಮುಂದಾಗಿದೆ. ಸ್ಯಾಂಡಲ್‌ವುಡ್‌ನ ಬಹುಕಾಲದ ಗೆಳೆಯ ಗೆಳತಿಯರನ್ನು ಒಂದೇ ವೇದಿಕೆ ಮೇಲೆ ಸೇರಿಸಿ, ವೀಕ್ಷಕರಿಗೆ ಮನರಂಜನೆಯನ್ನು ಉಣಬಡಿಸುವ ಕಾರ್ಯಕ್ರಮ ಇದಾಗಿದೆ.

  ಜನವರಿ 8 ರಿಂದ 'ಗೋಲ್ಡನ್ ಗ್ಯಾಂಗ್'

  ಗೋಲ್ಡನ್ ತಾರೆಗಳ ಗೋಲ್ಡನ್ ಕ್ಷಣಗಳನ್ನು ವೀಕ್ಷಕರಿಗೆ ಉಣಬಡಿಸಲು ಜೀ ಕನ್ನಡ ಮುಂದಾಗಿದೆ. ಈ ಸುಂದರ ಕ್ಷಣಗಳಿಗೆ ಮತ್ತಷ್ಟು ಮೆರುಗು ನೀಡುತ್ತಿರುವುದು ಗೋಲ್ಡನ್ ಸ್ಟಾರ್ ಗಣೇಶ್. ಈ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಮನೋರಂಜನೆಯ ಜೊತೆಗೆ ಗಣೇಶ್ ಪಂಚಿಂಗ್ ಡೈಲಾಗ್, ಕಾಮಿಡಿ ಕಿಕ್ ನಗೆಯ ರಸದೌತಣವನ್ನೂ ಉಣಬಡಿಸಲಿದೆ. ಗೋಲ್ಡನ್ ಗ್ಯಾಂಗ್ ಈ ರಿಯಾಲಿಟಿ ಶೋ ಇದೇ ಜನವರಿ 8 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಕ್ಕೆ ಪ್ರಸಾರವಾಗುತ್ತಿದೆ.

  ಮೋಜು ಮಸ್ತಿ ತುಂಟಾಟ ಹೈಲೈಟ್

  ಮೋಜು ಮಸ್ತಿ ತುಂಟಾಟ ಹೈಲೈಟ್

  ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಸ್ಯಾಂಡಲ್‍ವುಡ್‍ನ ತಾರೆಯರ ಜೊತೆ ಜೊತೆಯಲ್ಲಿಯೇ ಕಿರುತೆರೆಯಲ್ಲಿ ಮೋಡಿ ಗೆಳೆಯರ ಬಳಗವನ್ನೂ ವೇದಿಕೆ ಕರೆತರಲಿದೆ. ಧಾರಾವಾಹಿ ಗ್ಯಾಂಗ್, ಹಾಸ್ಯಕ್ಕೆ ಮೆರುಗು ನೀಡಿದ ಹರಟೆ ಗ್ಯಾಂಗ್, ಟ್ರೆಂಡ್ ಸೆಟ್ ಮಾಡಿದ ಸಿನಿಮಾಗಳು, ರಾಜಕೀಯದ ದಿಗ್ಗಜರು, ಕ್ರೀಡಾ ತಾರೆಯರು, ಪತ್ರಿಕೋದ್ಯಮದ ಪ್ರವರ್ತಕರು ಕೂಡ ಭಾಗವಹಿಸುವ ನಿರೀಕ್ಷೆಗಳಿವೆ. ಮಾತುಕಥೆ, ಹರಟೆ ಜೊತೆ ಜೊತೆಗೇ ಒಂದಷ್ಟು ಮೋಜು-ಮಸ್ತಿ, ಆಟ-ತುಂಟಾಟ ಎಲ್ಲವನ್ನೂ ಈ ಕಾರ್ಯಕ್ರಮ ಒಳಗೊಂಡಿದೆ.

  English summary
  Ganesh hosted new show Zee Kannada Golden Gang has first guest Sharan Tarun Nenapirali Prem. This program is all about celebrities friends and friendship.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X