For Quick Alerts
  ALLOW NOTIFICATIONS  
  For Daily Alerts

  ಬ್ರಹ್ಮ ಗಂಟು ಗೆದ್ದ ಪುನೀತಾ ಆಚಾರ್ಯ-ಶ್ರೀರಾಮ್‌ ಜೋಡಿ

  By ಪ್ರಿಯಾ ದೊರೆ
  |

  ಇಸ್ಮಾರ್ಟ್‌ ಜೋಡಿ ರಿಯಾಲಿಟಿ ಶೋ ಈಗ ಪ್ರೇಕ್ಷಕರ ಮೆಚ್ಚಿನ ಕಾರ್ಯಕ್ರಮವಾಗಿ ಬಿಟ್ಟಿದೆ. ಈ ವಾರ ಯಾವ ಜೋಡಿಗಳು ಹೇಗೆಲ್ಲಾ ಆಡಬಹುದು.? ಗೋಲ್ಡನ್ ಸ್ಟಾರ್ ಗಣೇಶ್‌ ಯಾವ ಹೊಸ ಹೊಸ ಆಟಗಳನ್ನು ಹೊತ್ತು ತರುತ್ತಾರೆ ಎಂದು ನೋಡಲು ಇಷ್ಟು ದಿನ ಕಾಯುತ್ತಿದ್ದರು. ಆದರೆ ಇನ್ಮುಂದೆ ಇಸ್ಮಾರ್ಟ್‌ ಜೋಡಿ ನೋಡಲು ಆಗೊಲ್ಲ. ಯಾಕೆಂದರೆ, ನಿನ್ನೆಯೇ ಗ್ರ್ಯಾಂಡ್‌ ಫಿನಾಲೆ ನಡೆದಿದ್ದು, ಕಾರ್ಯಕ್ರಮ ಮುಗಿದಿದೆ.

  ಇಲ್ಲಿಯವರೆಗೂ ಕಷ್ಟ-ಸುಖ, ನೋವು-ನಲಿವು, ಸಾಂಸಾರಿಕ ಜೀವನದ ಜಂಜಾಟ ಎಲ್ಲವನ್ನು ತೋರಿಸಿಕೊಟ್ಟ ಇಸ್ಮಾರ್ಟ್ ಜೋಡಿಗಳು ಇದೀಗ ಗ್ರ್ಯಾಂಡ್‌ ಫಿನಾಲೆಯಲ್ಲಿ ಆಡಿ ಮುಂದಕ್ಕೆ ಸಾಗಿದ್ದಾರೆ. ಕಂಪ್ಲೀಟ್ ಮನರಂಜನೆ ನೀಡಿದ ಈ ಶೋ ನಲ್ಲಿ ಈಗ ಮುಕ್ತಾಯಗೊಂಡಿದೆ. ಇಸ್ಮಾರ್ಟ್‌ ಜೋಡಿಗಳಲ್ಲಿ ಒಂದು ಜೋಡಿ ಬ್ರಹ್ಮಗಂಟು ಪಡೆದು ವಿನ್‌ ಆಗಿದೆ.

  ಪಾರುವನ್ನು ಹೇಗೆ ಉಳಿಸಿಕೊಳ್ಳುತ್ತಾಳೆ ಅಖಿಲಾಂಡೇಶ್ವರಿ?ಪಾರುವನ್ನು ಹೇಗೆ ಉಳಿಸಿಕೊಳ್ಳುತ್ತಾಳೆ ಅಖಿಲಾಂಡೇಶ್ವರಿ?

  ಗ್ರ್ಯಾಂಡ್‌ ಫಿನಾಲೆಯಲ್ಲಿ ಕೆಲ ಜೋಡಿಗಳು ಆಡಿ ನಲಿದರೆ, ಕೆಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಖುಷಿಪಟ್ಟಿದ್ದಾರೆ. ಇಷ್ಟು ದಿನ ವೇದಿಕೆ ಮೇಲೆ ಎಲ್ಲರನ್ನು ನಕ್ಕು ನಗಿಸಿದ್ದ ಜೋಡಿಗಳು, ಇದೀಗ ಮತ್ತೆ ಫ್ಯಾಮಿಲಿಯೊಟ್ಟಿಗೆ ಬ್ಯುಸಿಯಾಗಲಿದ್ದಾರೆ. ಹಾಗಾದರೆ ಇಸ್ಮಾರ್ಟ್‌ ಜೋಡಿ ಕಾರ್ಯಕ್ರಮದಲ್ಲಿ ಯಾರು ಗೆದ್ದರು.? ಯಾರು ಸೋತರು ಎಂದು ನೋಡೋಣ ಬನ್ನಿ..

   ಕುಣಿದು ನಲಿದ ಸ್ಪರ್ಧಿಗಳು

  ಕುಣಿದು ನಲಿದ ಸ್ಪರ್ಧಿಗಳು

  ಗ್ರ್ಯಾಂಡ್‌ ಫಿನಾಲೆಗಾಗಿ ಜೋಡಿಗಳೆಲ್ಲರೂ ಕಲರ್‌ ಫುಲ್‌ ಆಗಿ ಬಂದಿದ್ದರು. ಎಲ್ಲಾ ಜೋಡಿಗಳನ್ನೂ ನೋಡಲು ತುಂಬಾನೆ ಮುದ್ದಾಗಿ ಕಾಣುತ್ತಿದ್ದರು. ವೇದಿಕೆಯೂ ಅದ್ಧೂರಿಯಾಗಿ ತಯಾರಾಗಿತ್ತು. ಕೆಲ ಜೋಡಿಗಳು ಡ್ಯಾನ್ಸ್‌ ಮಾಡಿ ರಂಜಿಸಿದರು. ಇಂಪನಾ ನಾಗರಾಜ್‌ ಹಾಡುಗಳನ್ನು ಹಾಡಿದರು. ಪುನೀತಾ ದಂಪತಿ ಹಾಗೂ ಇಂಪನಾ ಜೋಡಿಗಳು ಆಟವಾಡಿ ಹಾಗಲಕಾಯಿಯನ್ನು ಸವಿದರು. ದಿಶಾ ಮದನ್‌, ಪುನೀತಾ ಆಚಾರ್ಯ, ಸ್ವಪ್ನಾ ದೀಕ್ಷಿತ್‌ ಡ್ಯಾನ್ಸ್‌ ಮಾಡಿ ವೇದಿಕೆ ಮೇಲೆ ಕಮಾಲ್‌ ಮಾಡಿದರು.

  ಪ್ರೇಕ್ಷಕರ ಊಹೆ ಸತ್ಯವಾಯ್ತು: ಆರ್ಯವರ್ಧನ್ ಪಾತ್ರದಲ್ಲಿ ಹರೀಶ್ ರಾಜ್!ಪ್ರೇಕ್ಷಕರ ಊಹೆ ಸತ್ಯವಾಯ್ತು: ಆರ್ಯವರ್ಧನ್ ಪಾತ್ರದಲ್ಲಿ ಹರೀಶ್ ರಾಜ್!

  ಮನದ ಮಾತುಗಳನ್ನಾಡಿದ ಜೋಡಿಗಳು

  ಮನದ ಮಾತುಗಳನ್ನಾಡಿದ ಜೋಡಿಗಳು

  ರಿಚರ್ಡ್‌ ಲೂಯಿಸ್‌ ಹಾಗೂ ಹ್ಯಾರಿಯೇಟ್‌ ಜೋಡಿ ವೇದಿಕೆ ಮೇಲೆ ತಮ್ಮ ಮನದಾಳದ ಮಾತುಗಳನ್ನಾಡಿದರು. ರಿಚರ್ಡ್‌ ಅವರು ಗಣೇಶ್‌ ರೀತಿ ಆಂಕರಿಂಗ್‌ ಮಾಡಿದರು. ಇಂಪನಾ ತಮ್ಮ ತಂದೆಯ ಬಗ್ಗೆ ಮಾತನಾಡಿ ಭಾವುಕರಾದರು. ದಿಶಾ ಮದನ್‌ ಹಾಗೂ ಶಶಾಂಕ್‌ ಜೋಡಿ ಮತ್ತೆ ಕಾಮಿಡಿ ಮಾಡಿ ನಲಿದರು. ಸ್ವಪ್ನಾ ದೀಕ್ಷಿತ್‌ ಹಾಗೂ ಅಶ್ವಿನ್‌ ಜೋಡಿ ತಮ್ಮ ಬದುಕಿನ ಬಹುದೊಡ್ಡ ತಿರುವು ಸಿಕ್ಕಿದ್ದು, ಈ ವೇದಿಕೆಯಿಂದ ಎಂದು ಹೇಳಿ ಖುಷಿಪಟ್ಟರು. ಅಶ್ವಿನ್‌ ಅವರಿಗೆ ಜಾಬ್‌ ಆಫರ್‌ ಲೆಟರ್‌ ದೊರೆತಿದ್ದು, ಈ ಬಗ್ಗೆ ಸಂತಸ ಹಂಚಿಕೊಂಡರು.

  ಬ್ರಹ್ಮಗಂಟು ಪಡೆದ ಪುನೀತಾ-ಶ್ರೀರಾಮ್

  ಬ್ರಹ್ಮಗಂಟು ಪಡೆದ ಪುನೀತಾ-ಶ್ರೀರಾಮ್

  ತೀರ್ಪುಗಾರರು ಇಲ್ಲದ ಇಸ್ಮಾರ್ಟ್ ಜೋಡಿ ಕಾರ್ಯಕ್ರಮದ ಸಾರಥ್ಯವನ್ನು ಗಣೇಶ್ ಅವರೇ ವಹಿಸಿಕೊಂಡಿದ್ದರು. ಸ್ಪರ್ಧಿಗಳಿಗೆ ಹಲವು ಟಾಸ್ಕ್‌ಗಳನ್ನು ನೀಡಿ, ಪ್ರತೀ ಆಟದ ಪರ್ಫಾಮೆನ್ಸ್ ಅನ್ನು ನೋಟ್ ಮಾಡಿಕೊಂಡಿದ್ದರು. ಗ್ರ್ಯಾಂಡ್‌ ಫಿನಾಲೆ ರೌಂಡ್‌ನಲ್ಲಿ ಉತ್ತಮವಾಗಿ ಆಟವಾಡಿ ಗೆದ್ದ ಜೋಡಿಗೆ ಬ್ರಹ್ಮಗಂಟನ್ನು ನೀಡಲಾಯ್ತು. ಫಿನಾಲೆ ರೌಂಡ್‌ಗೆ ಐದು ಜೋಡಿಗಳು ಬಂದಿದ್ದರು. ಅವರಲ್ಲಿ ಪುನೀತಾ ಆಚಾರ್ಯ ಹಾಗೂ ಶ್ರೀರಾಮ್‌ ಸುಳ್ಯ ಅವರು ಇಸ್ಮಾರ್ಟ್‌ ಜೋಡಿಯ ವಿನ್ನರ್‌ ಆದರು. ಇವರಿಗೆ 7ಲಕ್ಷ ಬಹುಮಾನವನ್ನು ನೀಡಲಾಯ್ತು. ಇನ್ನು ಸ್ವಪ್ನಾ ದೀಕ್ಷಿತ್‌ ಹಾಗೂ ಅಶ್ವಿನ್‌ ಜೋಡಿ ರನ್ನರ್‌ ಅಪ್‌ ಆಗಿ 3 ಲಕ್ಷ ಬಹುಮಾನವನ್ನು ತಮ್ಮದಾಗಿಸಿಕೊಂಡರು.

  ಎಲ್ಲಿದ್ದಾರೆ.. ಏನ್ ಮಾಡ್ತಿದ್ದಾರೆ 'ಜೊತೆ ಜೊತೆಯಲಿ' ನಟಿ ಆಶಿತಾ ಚಂದ್ರಪ್ಪ..?ಎಲ್ಲಿದ್ದಾರೆ.. ಏನ್ ಮಾಡ್ತಿದ್ದಾರೆ 'ಜೊತೆ ಜೊತೆಯಲಿ' ನಟಿ ಆಶಿತಾ ಚಂದ್ರಪ್ಪ..?

  ಬೇಗ ಮುಕ್ತಾಯಗೊಂಡ ಶೋ

  ಬೇಗ ಮುಕ್ತಾಯಗೊಂಡ ಶೋ

  ಇಸ್ಮಾರ್ಟ್‌ ಜೋಡಿ ರಿಯಾಲಿ ಶೋ ಒಟ್ಟು 26 ಎಪಿಸೋಡ್ ಗಳನ್ನು ಹೊಂದಿರುತ್ತದೆ ಎಂದು ಮೊದಲು ಹೇಳಲಾಗಿತ್ತು. ಆದರೆ ಕಾರಣಾಂತರಗಳಿಂದ ಕೇವಲ 18 ಎಪಿಸೋಡ್‌ಗಳಿಗೆ ಮುಕ್ತಾಯಗೊಳಿಸಲಾಗಿದೆ. ಈ ರಿಯಾಲಿಟಿ ಶೋನಲ್ಲಿ ಹಲವು ರೀತಿಯ ಅನುಭವವಿರುವ ಜೋಡಿಗಳು ಇದ್ದರು. ಇವರೆಲ್ಲಾ ತಮ್ಮ ದಾಂಪತ್ಯ ಜೀವನದಲ್ಲಿ ಆದ ಅನುಭವಗಳನ್ನು ಹೇಳಿಕೊಂಡರು. ಅದರಿಂದ ಅವರು ಕಲಿತ ಪಾಠ, ಮುಂದಿನ ಅವರ ಬದುಕಿನ ದೃಷ್ಟಿ ಕೋನ, ಎಂಥಹಾ ಸಂದರ್ಭಗಳನ್ನು ಹೇಗೆಲ್ಲಾ ಎದುರಿಸಬೇಕಾಯ್ತು. ಹೀಗೆ ಎಲ್ಲಾ ವಿಚಾರಗಳನ್ನೂ ದಂಪತಿಗಳು ತೆರೆಮೇಲೆ ಹಂಚಿಕೊಂಡಿದ್ದರು. ಒಟ್ಟಿಗೆ 18 ಎಪಿಸೋಡ್‌ಗಳಲ್ಲಿ ಆಡಿ ನಲಿದ ದಂಪತಿಗಳು ಒಬ್ಬರಿಗೊಬ್ಬರು ಬೀಳ್ಕೊಡುಗೆ ಕೊಟ್ಟಿದ್ದಾರೆ. ವೀಕ್ಷಕರಿಗೆ ಒಳ್ಳೆ ಮನರಂಜನೆ ಕೊಡುತ್ತಿದ್ದ ಸಮಯದಲ್ಲೇ ಶೋ ಮುಕ್ತಾಯಗೊಂಡಿದೆ. ಇದು ವೀಕ್ಷಕರಿಗೆ ಬೇಸರವಾದರೂ, ಮತ್ತಷ್ಟು ಜೋಡಿಗಳ ಜೊತೆಗೆ ಮತ್ತೊಂದು ಸೀಸನ್‌ ಆರಂಭವಾಗಲಿ ಎಂದು ಬಯಸಿದ್ದಾರೆ.

  English summary
  star suvarna reality show ismart Written Update on September 11th episode. Here is the details about final round.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X