twitter
    For Quick Alerts
    ALLOW NOTIFICATIONS  
    For Daily Alerts

    'ಕನ್ನಡದ ಕೋಟ್ಯಧಿಪತಿ-3'ಯಲ್ಲಿ ಅತಿ ಹೆಚ್ಚು ಹಣ ಗೆದ್ದ 'ಗೋಲ್ಡನ್ ಸ್ಟಾರ್'

    By Bharath Kumar
    |

    Recommended Video

    ಸರಿ ಉತ್ತರ ಕೊಟ್ಟು ಸೋತ ಗೋಲ್ಡನ್ ಸ್ಟಾರ್..!! | Filmibeat Kannada

    'ಕನ್ನಡದ ಕೋಟ್ಯಧಿಪತಿ ಮೂರನೇ ಆವೃತ್ತಿಯಲ್ಲಿ' ಐದು ಪ್ರಶ್ನೆಗಳಿಗೆ ಉತ್ತರ ಕೊಟ್ಟು ಆಟ ಕಾಯ್ದುಕೊಂಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ನಿನ್ನೆ (ಸೋಮವಾರ) ತನ್ನ ಆಟವನ್ನ ಮುಂದುವರಿಸಿದ್ದರು.

    ತಮ್ಮಲ್ಲಿ ಇದ್ದ ಮೂರು ಲೈಫ್ ಬಳಸಿಕೊಂಡ ಗಣೇಶ್ ಮೂರನೇ ಆವೃತ್ತಿಯಲ್ಲಿ ಅತಿ ಹೆಚ್ಚು ಹಣವನ್ನ ಗೆದ್ದು ಸದ್ಯಕ್ಕೆ ದಾಖಲೆ ಮಾಡಿದ್ದಾರೆ.

    ಆದ್ರೆ, ಕನ್ನಡದ ಕೋಟ್ಯಧಿಪತಿಯಲ್ಲಿ ಕೇಳಲಾದ ಒಂದು ಪ್ರಶ್ನೆಗೆ ಉತ್ತರಿಸಲು ಕಷ್ಟವಾದಾಗ, ಆಟವನ್ನ ಅರ್ಧಕ್ಕೆ ಬಿಟ್ಟರು. ನಿಯಮದ ಪ್ರಕಾರ ಗೇಮ್ ಕ್ವಿಟ್ ಮಾಡಿ ಗೆದ್ದ ಹಣವನ್ನ ಪಡೆದುಕೊಂಡರು. ಹಾಗಿದ್ರೆ, ಗಣೇಶ್ ಅವರು ಗೆದ್ದ ಮೊತ್ತವೆಷ್ಟು.? ಯಾವ ಪ್ರಶ್ನೆಗೆ ಆಟವನ್ನ ಕೈಬಿಟ್ಟರು ಎಂದು ತಿಳಿಯಲು ಮುಂದೆ ಓದಿ.....

    20 ಸಾವಿರ ರೂಪಾಯಿಗೆ

    20 ಸಾವಿರ ರೂಪಾಯಿಗೆ

    ಚೋಕ್, ಸೋಕ್, ತೇಹ್ ಮತ್ತು ತೀಪ್ ಯಾವ ಯುದ್ಧ ಕ್ರೀಡೆಯಲ್ಲಿ ಬಳಸುವ ಪದಗಳು.?
    A ಕಿಕ್ ಬಾಕ್ಸಿಂಗ್
    B ಕರಾಟೆ
    C ಮುಯೆ ಥಾಯ್
    D ಜುಡೊ
    ಗಣೇಶ್ ಕೊಟ್ಟ ಸರಿಯಾದ ಉತ್ತರ: C ಮುಯೆ ಥಾಯ್

    40 ಸಾವಿರ ರೂಪಾಯಿಗೆ

    40 ಸಾವಿರ ರೂಪಾಯಿಗೆ

    ಜುಲೈ 2017ರಲ್ಲಿ ಭಾರತದ ಸರ್ಕಾರದಿಂದ ಜಾರಿಗೆ ಬಂದ ನೂತನ ಪರೋಕ್ಷ ತೆರಿಗೆ ಪದ್ದತಿ ಯಾವುದು.?
    A ಸರಕು ಮತ್ತು ಸೇವೆಗಳ ತೆರಿಗೆ
    B ಐಷಾರಾಮಿ ತೆರಿಗೆ
    C ಕೇಂದ್ರ ಎಕ್ಸೈಸ್ ಡ್ಯೂಟಿ
    D ಮನರಂಜನಾ ತೆರಿಗೆ
    ಗಣೇಶ್ ಕೊಟ್ಟ ಸರಿಯಾದ ಉತ್ತರ: A ಸರಕು ಮತ್ತು ಸೇವೆಗಳ ತೆರಿಗೆ

    80 ಸಾವಿರ ರೂಪಾಯಿಗೆ

    80 ಸಾವಿರ ರೂಪಾಯಿಗೆ

    ಒಬ್ಬ ಮನಃಶಾಸ್ತ್ರಜ್ಞ, ಒಬ್ಬ ಮನೊರೋಗಿ ಆತನನ್ನು ಗುಣಪಡಿಸಲು ಬಳಸುವ ಪೂರ್ವಜನ್ಮದ ಚಿಕಿತ್ಸೆ ಮತ್ತು ಆ ಮೂಲಕ ಬದಲಾದ ಅವರಿಬ್ಬರ ಕಥೆಯನ್ನ ಹೇಳುವ ಪುಸ್ತುಕ ಯಾವುದು.?
    A ಸೀಕ್ರೆಟ್ ಆಫ್ ಲೈಫ್
    B ಮೆನಿ ಲೈವ್ಸ್ ಮೆನಿ ಮಾಸ್ಟರ್ಸ್
    C ದ ಪವರ್ ಆಫ್ ನೌ
    D ಡೆಸ್ಟಿನಿ ಆಫ್ ಸೋಲ್ಸ್
    ಗಣೇಶ್ ಕೊಟ್ಟ ಸರಿಯಾದ ಉತ್ತರ: B ಮೆನಿ ಲೈವ್ಸ್ ಮೆನಿ ಮಾಸ್ಟರ್ಸ್

    1.60 ಲಕ್ಷದ ಪ್ರಶ್ನೆ.?

    1.60 ಲಕ್ಷದ ಪ್ರಶ್ನೆ.?

    2018ರಲ್ಲಿ ಯಾವ ದೇಶ ಭಾರತದ ವಿರುದ್ಧ ತನ್ನ ಮೊದಲ ಐಸಿಸಿ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಆಡಿತು.?
    A ಕೀನ್ಯಾ
    B ನಮಿಬಿಯಾ
    C ಅಫ್ಘಾನಿಸ್ತಾನ್
    D ನೇಪಾಳ
    ಲೈಫ್ ಲೈನ್ ಬಳಕೆ: ಆಡಿಯೆನ್ಸ್ ಸಹಾಕರದಿಂದ ಗಣೇಶ್ ಕೊಟ್ಟ ಸರಿಯಾದ ಉತ್ತರ: C ಅಫ್ಘಾನಿಸ್ತಾನ್

    3.20 ಲಕ್ಷದ ಪ್ರಶ್ನೆ

    3.20 ಲಕ್ಷದ ಪ್ರಶ್ನೆ

    2018ನೇ ಸಾಲಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಎರಡಲ್ಲಿಯೂ ಜಯ ಸಾಧಿಸಿದ ಅಭ್ಯರ್ಥಿ ಯಾರು.?
    A ಶ್ರೀರಾಮುಲು
    B ಎಚ್.ಡಿ ಕುಮಾರಸ್ವಾಮಿ
    C ಸಿದ್ದರಾಮಯ್ಯ
    D ಎಚ್.ಡಿ ರೇವಣ್ಣ
    'ಫೋನ್ ಎ ಫ್ರೆಂಡ್' ಲೈಫ್ ಲೈನ್ ಬಳಕೆ: ಶಿಲ್ಪಾ ಗಣೇಶ್ ಸಹಕಾರದಿಂದ ಗಣೇಶ್ ಕೊಟ್ಟ ಉತ್ತರ B ಎಚ್.ಡಿ ಕುಮಾರಸ್ವಾಮಿ

    6.40 ಲಕ್ಷದ ಪ್ರಶ್ನೆ

    6.40 ಲಕ್ಷದ ಪ್ರಶ್ನೆ

    ಗುಬ್ಬಿ ಕಂಪನಿಯ ನಾಟಕ ಸದಾರಮೆ 2017 ರಲ್ಲಿ ಮತ್ತೆ ಪ್ರದರ್ಶನಗೊಂಡಾಗ ಅದರಲ್ಲಿ ಗುಬ್ಬಿ ವೀರಣ್ಣನವರು ಮಾಡಿದ ಕಳ್ಳನ ಪಾತ್ರ ಮಾಡಿದವರು ಯಾರು.?
    A ಗುಲಗಪ್ಪ ಕಟ್ಟೀಮನಿ
    B ನೀನಾಸಂ ಸತೀಶ್
    C ಪೊಲೀಸ್ ಪಟೇಲ್
    D ಬಿ ಜಯಶ್ರೀ
    ಗಣೇಶ್ ಕೊಟ್ಟ ಸರಿಯಾದ ಉತ್ತರ D ಬಿ ಜಯಶ್ರೀ

    12.50 ಲಕ್ಷದ ಪ್ರಶ್ನೆ

    12.50 ಲಕ್ಷದ ಪ್ರಶ್ನೆ

    ಕಬ್ಬಿಣ ಯುಗಕ್ಕೆ ಸೇರಿದ್ದು ಎನ್ನಲಾದ, ಏಳು ಗುಡ್ಡಸಾಲಿನ ಮೋರ್ಯಾರ ಗುಡ್ಡ ಎನ್ನುವ ಬೃಹತ್ ಶಿಲಾ ಸಮಾಧಿ ಎಲ್ಲಿದೆ.?

    A ಹಿರೇಬೆಣಕಲ್
    B ಟಿ ನರಸೀಪುರ
    C ಬ್ರಹ್ಮಗಿರಿ
    D ಮಾಸ್ಕಿ
    ಡಬಲ್ ಡಿಪ್ ಲೈಫ್ ಲೈನ್ ಬಳಕೆಯಿಂದ ಗಣೇಶ್ ಕೊಟ್ಟ ಸರಿಯಾದ ಉತ್ತರ A ಹಿರೇಬೆಣಕಲ್

    25 ಲಕ್ಷದ ಪ್ರಶ್ನೆ.?

    25 ಲಕ್ಷದ ಪ್ರಶ್ನೆ.?

    ಇದರಲ್ಲಿ ಲಂಡನ್ ರಾಯಲ್ ಸೊಸೈಟಿ ಸದಸ್ಯರಾಗಿದ್ದ ಭಾರತೀಯ ಗಣಿತ ಶಾಸ್ತ್ರಜ್ಞ ಯಾರು.?
    A ಸುಬ್ರಹ್ಮಣ್ಯಂ ಚಂದ್ರಶೇಖರ್
    B ಶ್ರೀನಿವಾಸನ್ ರಾಮಾನುಜನ್
    C ಮಂಜುಲ್ ಭಾರ್ಗವ
    D ಶಕುಂತಲಾ ದೇವಿ

    ಗಣೇಶ್ ಆಟವನ್ನ ಕ್ವಿಟ್ ಮಾಡಿದರು.

    ಸರಿಯಾದ ಉತ್ತರ: B ಶ್ರೀನಿವಾಸನ್ ರಾಮಾನುಜನ್

    12.5 ಲಕ್ಷದ ಗೆದ್ದ ಗಣೇಶ್

    12.5 ಲಕ್ಷದ ಗೆದ್ದ ಗಣೇಶ್

    ಹದಿಮೂರನೇ ಪ್ರಶ್ನೆಗೆ ಉತ್ತರ ಕೊಡಲಾಗದ ಗಣೇಶ್ ಅವರು ತಮ್ಮ ಚಾಣಕ್ಷತನದಿಂದ ಆಟವನ್ನ ಕ್ವಿಟ್ ಮಾಡಿದರು. 25 ಲಕ್ಷದ ಪ್ರಶ್ನೆಗೆ ಕ್ವಿಟ್ ಮಾಡಿದ ಗಣೇಶ್ 12.50 ಲಕ್ಷ ತಗೆದುಕೊಂಡು ಹೋದರು.

    English summary
    'Kannadada Kotyadhipathi season 3' first celebrity contestant Golden star ganesh has won 12.5 lakhs rupees and quit the game in 12th quetion.
    Tuesday, July 3, 2018, 15:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X