GGVV: ಯುಗಾದಿ ಹಬ್ಬಕ್ಕೆ ಗರುಡ ಗಮನ ವೃಷಭ ವಾಹನ ಸರ್ಪ್ರೈಸ್ ಎಂಟ್ರಿ!

By ಪ್ರಿಯಾ ದೊರೆ

ಕನ್ನಡದಲ್ಲಿ ಬಂದು ಸಾಕಷ್ಟು ಮೆಚ್ಚುಗೆಯನ್ನು ಪಡೆದ ಚಿತ್ರ 'ಗರುಡ ಗಮನ ವೃಷಭ ವಾಹನ'. ಇದೀಗ ಮೊದಲ ಬಾರಿಗೆ ಕಿರುತೆಯಲ್ಲಿ ಪ್ರಸಾರ ಆಗುತ್ತಿದೆ. ಹಿರಿತೆರೆ ಮತ್ತು ಓಟಿಟಿಯಲ್ಲಿ ದಾಖಲೆ ಮಾಡಿದ ಈ ಚಿತ್ರ ಕಿರುತೆಯಲ್ಲಿ ದಾಖಲೆ ಬರೆಯುದಕ್ಕೆ ಬರುತ್ತಾ ಇದೆ. ಇದೇ ಶನಿವಾರ ಮಧ್ಯಾಹ್ನ ಏಪ್ರಿಲ್ 2ರಂದು 3:30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. ಯುಗಾದಿ ಹಬ್ಬದ ಪ್ರಯುಕ್ತ ಚಿತ್ರ ರಿಲೀಸ್ ಆಗುತ್ತಾ ಇದೆ.

ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ 'ಗರುಡ ಗಮನ ವೃಷಭ ವಾಹನ' ಚಿತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಕನ್ನಡದ ಅತ್ಯುತ್ತಮ ಸಿನಿಮಾ 'ಗರುಡ ಗಮನ ವೃಷಭ ವಾಹನ' ಎಂದು ಖ್ಯಾತಿ ಪಡೆದಿದೆ. ಕೆಲವರು ಟೀಕಿಸಿದ್ದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

'ಗರುಡ ಗಮನ ವೃಷಭ ವಾಹನ' ಚಿತ್ರವನ್ನು ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿದ್ದು, ಸಿನಿಮಾವನ್ನು ರಕ್ಷಿತ್ ಶೆಟ್ಟಿ ಪ್ರೆಸೆಂಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಹರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ ಶಿವನಾಗಿ ಬಣ್ಣ ಹಚ್ಚಿದ್ದಾರೆ. ಮಂಗಳೂರಿನ ಮಂಗಳಾದೇವಿ ಎಂಬಲ್ಲಿ ನಡೆದ ರೌಡಿಸಂ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.

Garuda Gamana Vrishabha Vahana Kannada Movie Will Be Telecast In Zee Kannada

ರೌಡಿ ಲುಕ್ ನಲ್ಲಿ ಕಾಮಿಡಿ ನಟ

ಒಂದು ಮೊಟ್ಟೆಯ ಕಥೆ ಎಂಬ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ, ಒಂದು ಸಿಂಪಲ್ ಕಥೆಗೆ ತಾವೇ ಹೀರೋ ಆಗಿ ಎಲ್ಲರ ಮನಮುಟ್ಟುವಂತೆ ನಟಿಸಿದ್ದರು. ಈ ಚಿತ್ರದ ಮೂಲಕ ದೊಡ್ಡ ಹಿಟ್ ಸಿಕ್ಕಿತ್ತು. ಇದಾದ ನಂತರ ಕೆಲ ಕಾಮಿಡಿ ಚಿತ್ರಗಳಲ್ಲೇ ರಾಜ್ ಬಿ ಶೆಟ್ಟಿ ನಟಿಸಿದ್ದರು. ಆದರೆ, 'ಗರುಡ ಗಮನ ವೃಷಭ ವಾಹನ' ಚಿತ್ರದ ಮೂಲಕ ರೌಡಿ ಲುಕ್‌ನಲ್ಲಿ ಎಂಟ್ರಿ ಕೊಟ್ಟು ಪ್ರೇಕ್ಷಕರಿಗೆ ಶಾಕ್ ಕೊಟ್ಟರು. ಪ್ರೇಕ್ಷಕರನ್ನು ನಗಿಸುತ್ತಿದ್ದ ರಾಜ್ ಬಿ ಶೆಟ್ಟಿ ಶಿವನ ಅವತಾರ ತಾಳಿ ಕ್ರೌರ್ಯ ಮೆರೆದಿದ್ದರು. ರಾಜ್ ಬಿ ಶೆಟ್ಟಿಯ ಅವತಾರ ನೋಡಿದ ಅಭಿಮಾನಿಗಳು ಫುಲ್ ಖುಷ್ ಆದರು. ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ನಟನೆ ಸಖತ್ ಕಿಕ್ ಕೊಟ್ಟಿತ್ತು.

Garuda Gamana Vrishabha Vahana Kannada Movie Will Be Telecast In Zee Kannada

ಒಟಿಟಿಯಲ್ಲೂ ಹಿಟ್ ಆದ ಸಿನಿಮಾ!

'ಗರುಡ ಗಮನ ವೃಷಭ ವಾಹನ' ಚಿತ್ರದಲ್ಲಿ ರಿಷಬ್ ಹಾಗೂ ರಾಜ್ ಕಾಂಬಿನೇಷನ್ ಮತ್ತೊಂದು ಹೈಲೈಟ್. ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ಹಿಟ್ ಆಗಿದ್ದ 'ಗರುಡ ಗಮನ ವೃಷಭ' ವಾಹನ ಜನವರಿ 13 ರಂದು ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಜೀ5 ಕನ್ನಡದ ಒಟಿಟಿಯಲ್ಲಿ ರಿಲೀಸ್ ಆದ ಕೆಲವೇ ದಿನಗಳಲ್ಲಿ 13.33 ಲಕ್ಷ ಗಂಟೆಗೂ ಹೆಚ್ಚು ಕಾಲ ಸ್ಟ್ರೀಮಿಂಗ್ ಆಗಿತ್ತು. ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಸಿನಿಮಾ ಹಿಟ್ ಆಗಿ, ಕನ್ನಡ ಚಿತ್ರರಂಗಲ್ಲೇ ಬೇರೆಯದ್ದೇ ಫೀಲ್ ಕೊಟ್ಟಿತ್ತು. ಚಿತ್ರಕ್ಕೆ ಒಳ್ಳೆ ಛಾಯಾಗ್ರಹಣ, ಅದ್ಭುತ ಹಿನ್ನೆಲೆ ಸಂಗೀತ, ಕಲಾವಿದರ ಅಭಿನಯ ಎಲ್ಲವೂ ಪ್ರೇಕ್ಷಕರಿಗೆ ಖುಷಿ ಕೊಟ್ಟಿತ್ತು.

'ಗರುಡ ಗಮನ ವೃಷಭ ವಾಹನ' ಚಿತ್ರ ಸಂಪೂರ್ಣವಾಗಿ ಮಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಮಂಗಳೂರಿನ ಮಂಗಳಾದೇವಿ ಎಂಬ ಏರಿಯಾದಲ್ಲಿ ಹರಿ ಹಾಗೂ ಶಿವ ಎಂಬ ಇಬ್ಬರು ಬಾಲಕರ ಸುತ್ತ ಬೆಳೆಯುವ ಕಥೆ. ಇವರಿಬ್ಬರೂ ಹೇಗೆ ಅಲ್ಲಿನ ಗ್ಯಾಂಗ್‌ಸ್ಟಾರ್‌ಗಳಾಗಿ ಬದಲಾಗುತ್ತಾರೆ ಎಂದು ಸಿನಿಮಾದಲ್ಲಿ ತೋರಿಸಲಾಗಿದೆ. ಇದರಲ್ಲಿ ರಾಜ್ ಬಿ ಶೆಟ್ಟಿ ಅದ್ಭುತವಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಮಾಡಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ.

More from Filmibeat

English summary
Garuda Gamana Vrishabha Vahana Kannada Movie Telecast Soon In Zee Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X