ರಮ್ಯಾ ಕೃಷ್ಣ ಜೊತೆ ತೆಲುಗಿನಲ್ಲಿ ಮಿಂಚುತ್ತಿರುವ ಕನ್ನಡ ಕಿರುತೆರೆ ನಟಿ ಅಶ್ವಿನಿ!

By ಪೂರ್ವ

ಅಶ್ವಿನಿ ಅಂದ್ರೆ ಯಾರಿಗೂ ಅಷ್ಟಾಗಿ ತಿಳಿಯುವುದಿಲ್ಲ, ಅದುವೇ 'ಗಟ್ಟಿ ಮೇಳ' ಸೀರಿಯಲ್‌ನ ಆರತಿ ಎಂದರೆ ಥಟ್ಟನೆ ನೆನಪಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬೇರೆ ಭಾಷೆಗಳಲ್ಲಿ ಅಭಿನಯಿಸುತ್ತಿರುವ ಅಶ್ವಿನಿ ಕಿರುತೆರೆಗಳಲ್ಲಿ ಬ್ಯುಸಿಯಾಗಿರುವ ನಟಿಮಣಿಯರಲ್ಲಿ ಒಬ್ಬರು. ಅಶ್ವಿನಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಗಿ ಆಕ್ಟೀವ್ ಆಗಿದ್ದಾರೆ. ವೀಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಶ್ವಿನಿಗೆ ಅವರದ್ದೇ ಆದ ಅಭಿಮಾನಿ ವರ್ಗವೂ ಇದೆ.

'ಗಟ್ಟಿಮೇಳ' ಧಾರವಾಹಿಯಲ್ಲಿ ನಟಿಸಿರುವ ಅಶ್ವಿನಿ ತಮ್ಮ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಬಳಿಕ ಗಟ್ಟಿಮೇಳ ಧಾರವಾಹಿಯಿಂದ ದೂರ ಸರಿದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಇದೀಗ ಹಿರಿಯ ತಾರೆ ರಮ್ಯಾ ಕೃಷ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ 'ನಾಗ ಬೈರವಿ' ಹೆಸರಿನ ತೆಲುಗು ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಕಿರುತೆರೆಯಲ್ಲಿ ಮಾತ್ರ ಅಲ್ಲ ಹಿರಿತೆರೆಯಲ್ಲು ಮಿಂಚಲು ಅಶ್ವಿನಿ ತಯಾರಾಗಿದ್ದಾರೆ.

ನಟಿ ಅಶ್ವಿನಿ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಹೊಸ-ಹೊಸ ರೀಲ್ಸ್‌ಗಳನ್ನು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿರುತ್ತಾರೆ. ಇವರ ರೀಲ್ಸ್‌ಗೆ ಅಭಿಮಾನಿಗಳೂ ಇದ್ದಾರೆ.

Gattimela Actress Ashwini Very Active On Social Media

ನಿರೂಪಣೆಯ ಮೂಲಕ ಮಿಂಚಿದ್ದ ಅಶ್ವಿನಿ ಮೂಲತಃ ದಾವಣೆಗೆರೆಯವರು. ಉತ್ತಮ ಕಲಾವಿದೆಯಾಗಬೇಕೆಂಬುವುದು ಅಶ್ವಿನಿ ಆಸೆಯಾಗಿತ್ತು. ಅವಕಾಶಕ್ಕಾಗಿ ಆಡಿಷನ್‌ಗಳಲ್ಲಿ ಭಾಗವಹಿಸುತ್ತಿದ್ದರು.

ಹಲವು ಆಡಿಷನ್‌ಗಳಲ್ಲಿ ನಿರಾಸೆ ಅನುಭವಿಸಿದರೂ ಛಲ ಬಿಡದ ಅಶ್ವಿನಿ ಆಡಿಷನ್‌ಗಳಿಗೆ ತೆರಳುತ್ತಿದ್ದರು, ಕೊನೆಗೂ ಅವರ ಅದೃಷ್ಟ ಬಾಗಿಲು ತೆರೆದಿದ್ದು 'ಗಟ್ಟಿಮೇಳ' ಧಾರಾವಾಹಿ ಮೂಲಕ. ಗಟ್ಟಿಮೇಳ ಧಾರವಾಹಿಯಲ್ಲಿ ಪೋಷಕ ಪಾತ್ರದಲ್ಲಿ ಅಶ್ವಿನಿ ಮಿಂಚಲು ಅವಕಾಶ ದೊರಕಿತು.

Gattimela Actress Ashwini Very Active On Social Media

'ಗಟ್ಟಿಮೇಳ' ಧಾರವಾಹಿಯಲ್ಲಿ ಕೆಲ ಕಾಲ ನಟಿಸಿದ ಬಳಿಕ ತೆಲುಗು ಕಿರುತೆರೆಯತ್ತ ಮುಖ ಮಾಡಿದರು. ಅವಕಾಶ ಸಿಕ್ಕರೆ ಉತ್ತಮ ಅಭಿನಯ ಮಾಡುವ ಒಳ್ಳೆಯ ಪಾತ್ರ ಸಿಕ್ಕರೆ ಖಂಡಿತ ಮತ್ತೊಮ್ಮೆ ಕನ್ನಡ ಕಿರುತೆರೆಗೆ ಎಂಟ್ರಿ ನೀಡುತ್ತೇನೆ ಎಂದು ಅಭಿಮಾನಿಗಳಿಗೆ ಸಮಾಧಾನದ ಉತ್ತರ ನೀಡಿದ್ದಾರೆ. ನಮ್ಮ ಭಾಷೆಯಲ್ಲಿ ಅಭಿನಯ ಮಾಡಿದ ಸಂತೋಷ ಬೇರೆ ಭಾಷೆಗಳಲ್ಲಿ ದೊರೆಯುವುದಿಲ್ಲ. ನಮ್ಮ ಬಾಷೆಯಲ್ಲಿ ಅವಕಾಶವಿಲ್ಲದಿದ್ದಾಗ ಬೇರೆ ಬಾಷೆಗಳಲ್ಲಿ ನಟಿಸಬೇಕಾಗುವ ಸಂದರ್ಭ ಎದುರಾಗುತ್ತದೆ. ನಾಗ ಬೈರವಿ ಧಾರವಾಹಿಯಲ್ಲಿ ನಾನು ಅಭಿನಯಿಸುತ್ತಿದ್ದೇನೆ ನನ್ನ ಅಭಿನಯ ಇಲ್ಲಿನ ಜನರಿಗೆ ಇಷ್ಟವಾಗಿದೆ. ಈ ಧಾರವಾಹಿ ನನ್ನ ಮುಂದಿನ ಕಲಾ ಬದುಕಿಗೆ ದಾರಿಯಾಗಲಿದೆ. ನಾನು ನ್ನ ಭಾಷೆ ಬಿಡುವುದಿಲ್ಲ ಎಂದಿದ್ದರು ಅಶ್ವಿನಿ.

More from Filmibeat

English summary
Gattimela Actress Ashwini Very Active on social media. She is one of the famous actress on Kannada movie and Tv industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X