ಗಟ್ಟಿಮೇಳ ಬಳಿಕ ಸಿನಿಮಾದಲ್ಲಿ ಬ್ಯುಸಿ ನಟಿ ನಿಶಾ ರವಿಕೃಷ್ಣನ್; ಪಾತ್ರದ ಬಗ್ಗೆ ಹೇಳಿದ್ದೇನು?

By ಅನಿತಾ ಬನಾರಿ

'ಗಟ್ಟಿಮೇಳ' ಧಾರಾವಾಹಿ ಕನ್ನಡಿಗರ ಅಚ್ಚು ಮೆಚ್ಚಿನ ಧಾರಾವಾಹಿಯಾಗಿತ್ತು. ಈ ಧಾರಾವಾಹಿಯಲ್ಲಿ ಅಮೂಲ್ಯ ಉರ್ಫ್ ರೌಡಿಬೇಬಿ ಪಾತ್ರದಲ್ಲಿ ನಟಿಸಿದ್ದವರು ನಿಶಾ ರವಿಕೃಷ್ಣನ್. ಈ ಧಾರಾವಾಹಿ ಮೂಲಕ ನಿಶಾ ರವಿಕೃಷ್ಣನ್ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದಿದ್ದಾರೆ. ಇತ್ತೀಚೆಗೆ 'ಗಟ್ಟಿಮೇಳ' ಮುಗಿದ ಬಳಿಕ ಸಿನಿಮಾದತ್ತ ಮುಖ ಮಾಡಿದ್ದರು.

ನಿಶಾ ರವಿಕೃಷ್ಣನ್ ಅಭಿನಯದ ಸಿನಿಮಾ ಈಗ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದುವೇ 'ಅಂಶು'. ಈ ಸಿನಿಮಾದ ತುಣುಕುಗಳನ್ನು ಈಗ ಆನಂದ್ ಆಡಿಯೋದಲ್ಲಿ ರಿಲೀಸ್ ಮಾಡಲಾಗಿದೆ. 'ಅಂಶು' ಸಿನಿಮಾದ ಈ ಶೇಡ್ಸ್ ನೋಡಿದವರಿಗೆ ಸಿಕ್ಕಾಪಟ್ಟೆ ಥ್ರಿಲ್ ಸಿಕ್ಕಿದೆ. ಅದರಲ್ಲೂ ನಿಶಾ ರವಿಕೃಷ್ಣನ್ ಅವರನ್ನು ಹೊಸ ಅವತಾರದಲ್ಲಿ ನೋಡಿ ವೀಕ್ಷಕರು ಥ್ರಿಲ್ ಆಗಿದ್ದಾರೆ.

Gattimela actress Nisha Ravikrishnan Anshu movie shades out on Anand Audio

ಅಂದ್ಹಾಗೆ, ಭ್ರೂಣ ಹತ್ಯೆಯ ಸುತ್ತ ಸಾಗುವ ಕಥೆಯನ್ನು ಥ್ರಿಲ್ಲಿಂಗ್ ಟಚ್ ಕೊಟ್ಟು 'ಅಂಶು' ಸಿನಿಮಾ ಮಾಡಲಾಗಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ನಿಶಾ ರವಿಕೃಷ್ಣನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗಂಭೀರ ಸಮಸ್ಯೆಯನ್ನು ಥ್ರಿಲ್ಲರ್ ಶೈಲಿಯಲ್ಲಿ ಪ್ರೇಕ್ಷಕರ ಮುಂದೆ ಇಡುವುದಕ್ಕೆ ಚಿತ್ರತಂಡ ಪ್ರಯತ್ನ ಪಟ್ಟಿರೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

'ಅಂಶು' ಸಿನಿಮಾ ನಿಶಾ ರವಿಕೃಷ್ಣನ್ ನಟಿಸುತ್ತಿರುವ ಮೊದಲ ಸೋಲೊ ಸಿನಿಮಾ. ಈ ಸಿನಿಮಾವನ್ನು ಎಂ ಸಿ ಚೆನ್ನಕೇಶವ ನಿರ್ದೇಶನ ಮಾಡುತ್ತಿದ್ದಾರೆ. ಸುನಿಲ್ ನರಸಿಂಹಮೂರ್ತಿ ಈ ಸಿನಿಮಾದ ಛಾಯಾಗ್ರಾಹಕರಾಗಿದ್ದರೆ, ವಿಘ್ನೇಶ್ ಶಂಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಕೆ.ಸಿ ಬಾಲಸರಂಗನ್ ಸಂಗೀತ ನೀಡಿದ್ದಾರೆ.

'ಗಟ್ಟಿಮೇಳ'ದಲ್ಲಿ ಅಮೂಲ್ಯ ಅಲಿಯಾಸ್ ರೌಡಿ ಬೇಬಿ ಪಾತ್ರದ ಮೂಲಕ ಕಿರುತೆರೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದರು. ಆದ್ರೀಗ ಈ ನಟಿ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಇತ್ತೀಚೆಗೆ ತಮ್ಮ 'ಅಂಶು' ಸಿನಿಮಾದ ಪಾತ್ರದ ಬಗ್ಗೆ ವಾಹಿನಿಯೊಂದರ ಸಂದರ್ಶನದಲ್ಲಿ ಹಂಚಿಕೊಂಡಿದ್ದರು. ಈ ವೇಳೆ ಮಹಿಳಾ ಪ್ರಧಾನ ಸಿನಿಮಾಗಳ ಬಗ್ಗೆ ಮಾತಾಡಿದ್ದರು.

Gattimela actress Nisha Ravikrishnan Anshu movie shades out on Anand Audio

"ಸಿನಿಮಾಗಳಲ್ಲಿ ಸ್ತ್ರೀಯರಿಗೆ ಹೆಚ್ಚಿನ ಆದ್ಯತೆ ಸಿಗುತ್ತಿಲ್ಲ. ಪುರುಷ ಪ್ರಧಾನ ಕಥೆಗಳೇ ಇರುವುದರಿಂದ ಹೆಣ್ಣು ಮಕ್ಕಳಿಗೆ ಸಿಗುವ ಪಾತ್ರ ಕಡಿಮೆ. ಹಾಗೂ ಅದರ ಕ್ವಾಲಿಟಿ ತುಂಬಾ ಕಮ್ಮಿ ಇದೆ. ಇದು ಬದಲಾಗಬೇಕು. ಸ್ತ್ರೀ ಪ್ರಧಾನ ಕಥೆಗಳು ಹೆಚ್ಚೆಚ್ಚು ಬರಬೇಕು. ಈ ರೀತಿಯ ಬದಲಾವಣೆಯನ್ನು ನೋಡಲು ಬಹಳಷ್ಟು ಜನ ಕಾಯುತ್ತಿದ್ದಾರೆ." ಎಂದು ನಟಿ ನಿಶಾ ರವಿಕೃಷ್ಣನ್ ಹೇಳಿಕೊಂಡಿದ್ದರು.

ಹಾಗೇ 'ಅಂಶು' ಸಿನಿಮಾದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. "ಅಂಶು ಸಿನಿಮಾ ಭ್ರೂಣ ಹತ್ಯೆ ಬಗ್ಗೆ ಮಾತನಾಡುತ್ತದೆ. ಭಾರತದಲ್ಲಂತೂ ಭ್ರೂಣ ಹತ್ಯೆ ಬಹಳ ಸಾಮಾನ್ಯವಾಗಿದೆ. ಈ ಬಗ್ಗೆ ಮೆಸೇಜ್ ಕೊಡುವಂತಹ ಸಿನಿಮಾ ಇದಾಗಿದ್ದು, ಬಹಳ ಇಂಟರೆಸ್ಟಿಂಗ್ ಆಗಿ ಮೂಡಿ ಬರಲಿದೆ. ಸಿನಿಮಾದ ಮುಖ್ಯ ಸೀನ್ ಒಂದನ್ನು ಕಾರಿನಲ್ಲಿ ಶೂಟ್ ಮಾಡಬೇಕಿತ್ತು. ಅದು ಬಹಳ ಚಾಲೆಂಜಿಂಗ್ ಆಗಿತ್ತು" ಎಂದು ಹೇಳಿಕೊಂಡಿದ್ದರು.

More from Filmibeat

English summary
Gattimela actress Nisha Ravikrishnan's Anshu movie shades out on Anand Audio
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X