Rashmitha Changappa:ಕಥೆಯೊಂದು ಶುರುವಾಗಿದೆ ಎಂದ ರಶ್ಮಿತಾ ಚೆಂಗಪ್ಪ..ಯಾವ ಕಥೆ ಗೊತ್ತಾ?

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಕಥೆಯೊಂದು ಶುರುವಾಗಿದೆ' ಧಾರಾವಾಹಿ ಮೂಲಕ ನಟನೆಗೆ ವಾಪಸ್ ಆಗುತ್ತಿರುವ ನಟಿ ರಶ್ಮಿತಾ ಚಂಗಪ್ಪ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ಬಹಾದ್ದೂರು ವಂಶದ ಹಿರಿಸೊಸೆ ಶಾಂತಲಾ ದೇವಿ ಗೆಳತಿ ಕನ್ನಿಕ ಮಗಳು ಚರಿತಾ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ ರಶ್ಮಿತಾ ಚೆಂಗಪ್ಪ.

'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ನಾಯಕ ಸಾಮ್ರಾಟ್ ಹಾಗೂ ನಾಯಕಿ ವರ್ಣಿಕ ಅವರು ಪರಸ್ಪರ ಪ್ರೀತಿ ಮಾಡುತ್ತಿದ್ದು, ಇದೀಗ ಕನ್ನಿಕಾ ಅವರ ಮಾತಿಗೆ ಸಾಮ್ರಾಟ್ ಮನೆಯವರೆಲ್ಲರೂ ಒಪ್ಪಿ ಚರಿತಾಳನ್ನು ನಾಯಕ ಸಾಮ್ರಾಟ್‌ಗೆ ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದಾರೆ. ಇತ್ತ ವರ್ಣಿಕಾ ಸಾಮ್ರಾಟ್‌ಗೆ ತಮ್ಮ ಪ್ರೀತಿಯ ಬಗ್ಗೆ ಮನೆಯವರೆಲ್ಲರಿಗೂ ಹೇಳುವುದಾಗಿ ಹೆದರಿಸುತ್ತಿದ್ದು, ಸಾಮ್ರಾಟ್‌ಗೆ ಸದ್ಯಕ್ಕೆ ಅಡಕತ್ತರಿಯಲ್ಲಿ ಸಿಕ್ಕಿಕೊಂಡಂತಾಗಿದೆ.

Gattimela Actress Rashmitha Changappa returned tv with Katheyondu Shuruvagide

ಚರಿತಾ ಆಗಿ ಎಂಟ್ರಿ

ಈಗಾಗಲೇ ಯಶಸ್ವಿ ನೂರು ಎಪಿಸೋಡ್‌ಗಳನ್ನು ಮುಗಿಸಿರುವ ಮುಂದೆ ನಡೆಯುತ್ತಿರುವ 'ಕಥೆಯೊಂದು ಶುರುವಾಗಿದೆ' ಧಾರಾವಾಹಿ ಬಹಳಷ್ಟು ಜನಪ್ರಿಯತೆ ಪಡೆಯುತ್ತಿದೆ. ಇದೀಗ ಈ ಧಾರಾವಾಹಿಗೆ ಚರಿತಾ ಪಾತ್ರದ ಮೂಲಕ ಕಾಲಿಡುತ್ತಿರುವ ನಟಿ ರಶ್ಮಿತಾ ಚಂಗಪ್ಪ ಅವರು ಇಡೀ ಕಥೆಗೆ ದೊಡ್ಡ ಟ್ವಿಸ್ಟ್ ಅನ್ನು ತರಲಿದ್ದಾರೆ.

ಒಬ್ಬ ಸ್ವಾಭಿಮಾನಿ ಹೆಣ್ಣು ಮಗಳು ಹಾಗೂ ಹಾರ್ಡ್ ವರ್ಕಿಂಗ್ ಶ್ರೀಮಂತ ಹುಡುಗನ ನಡುವೆ ನಡೆಯುವ ಪ್ರೇಮ ಕಥೆ ಇದಾಗಿದ್ದು ಈ ಮಧ್ಯೆ ಒಂದಷ್ಟು ಫ್ಯಾಮಿಲಿ ಡ್ರಾಮಾ ಕೂಡ ಇರಲಿದೆ. ಕುತೂಹಲಕಾರಿಯಾಗಿ ಅದ್ಭುತವಾಗಿ ಮುನ್ನಡೆಯುತ್ತಿರುವ ಈ ಧಾರಾವಾಹಿಯಲ್ಲಿ ಇದೀಗ ಚರಿತಾ ಪಾತ್ರ ವಿಲನ್ ರೀತಿ ಬರುತ್ತಾ, ಏನು? ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ.

'ಗಟ್ಟಿಮೇಳ'ದ ಸಾರಿಕಾ ಆಗಿ ಫೇಮಸ್ಸು!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಸಾರಿಕಾ ಪಾತ್ರಕ್ಕೆ ಜೀವ ತುಂಬಿದ್ದ ರಶ್ಮಿತಾ ಚೆಂಗಪ್ಪ ವಿಲನ್ ಆಗಿ ತೆರೆ ಮೇಲೆ ಅಬ್ಬರಿಸಿದ್ದರು. ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮೂರುಗಂಟು' ಧಾರಾವಾಹಿಯಲ್ಲಿ ನಟಿಸಿದ್ದ ರಶ್ಮಿತಾ ಅಲ್ಲಿಯೂ ಕಾಣಿಸಿಕೊಂಡಿದ್ದು ಖಳನಾಯಕಿಯಾಗಿಯೇ.

Gattimela Actress Rashmitha Changappa returned tv with Katheyondu Shuruvagide

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾರಾಣಿ' ಧಾರಾವಾಹಿಯಲ್ಲಿ ಇಶಾ ಆಗಿ ನಟಿಸುವ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ರಶ್ಮಿತಾ ನಂತರ ನಟಿಸಿದ್ದು ಖಳನಾಯಕಿಯಾಗಿ. ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿರುವ ರಶ್ಮಿತಾ ಇದೀಗ 'ಕಥೆಯೊಂದು ಶುರುವಾಗಿದೆ' ಮೂಲಕ ಕಿರುತೆರೆಗೆ ಮರಳಿದ್ದು ವೀಕ್ಷಕರ ಮನ ಸೆಳೆಯುತ್ತಾರಾ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

More from Filmibeat

English summary
Rashmitha Changappa who played the role of Sarika in the Gattimela serial returned to television through Katheyondu Shuruvagide serial,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X