Actress Sharanya Shetty: "ಫೇಮ್ ಅನ್ನುವುದು ಸುಲಭದ ಮಾತಲ್ಲ" ಎಂದ 'ಗಟ್ಟಿಮೇಳ' ನಟಿ ಶರಣ್ಯ ಶೆಟ್ಟಿ

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಸಾಹಿತ್ಯ ಆಗಿ ಅಭಿನಯಿಸಿದ್ದ ಕಿರುತೆರೆ ನಟಿ ಇದೀಗ ಹಿರಿತೆರೆಯಲ್ಲಿ ಬ್ಯುಸಿ. ಕಿರುತೆರೆ ಜೊತೆಗೆ ಹಿರಿತೆರೆಯನ್ನು ಸರಿದೂಗಿಸಿಕೊಂಡು ಸಾಗುತ್ತಿರುವ ಶರಣ್ಯ ಶೆಟ್ಟಿ ನಟನೆಯ ಹೊರತಾಗಿ ಮಾಡೆಲಿಂಗ್ ಲೋಕದಲ್ಲಿ ಗುರುತಿಸಿಕೊಂಡಿರುವ ಬೆಡಗಿ.

ಮಾಡಲ್ ಆಗಿ ಮಾಡೆಲಿಂಗ್ ಜಗತ್ತಿನಲ್ಲಿ ಮಿಂಚಿರುವ ನಟಿ ಶರಣ್ಯ ಶೆಟ್ಟಿಯವರು ಮಾಡೆಲಿಂಗ್ ಲೋಕದ ಅನುಭವವನ್ನು ಹಂಚಿಕೊಂಡಿದ್ದಾರೆ. ಮೊದಮೊದಲು ಮಾಡೆಲಿಂಗ್ ಜಗತ್ತಿನಲ್ಲಿ ಪಾಪ್ಯುಲರ್ ಆಗುವುದು ಬಹಳ ಕಷ್ಟವಂತೆ. ನಮ್ಮ ಹಾವ-ಭಾವ ಎಷ್ಟೇ ಚೆನ್ನಾಗಿದ್ದರೂ, ಆ ಕ್ಷೇತ್ರದಲ್ಲಿ ಒಂದು ಸ್ಥಾನ ಪಡೆಯಬೇಕೆಂದರೆ ತುಂಬಾ ಟೈಮ್ ಹಿಡಿದುಕೊಳ್ಳುತ್ತದೆಯಂತೆ.

Gattimela actress Sharanya Shetty is busy doing serials and movies says fame is not an easy word

ಮೊದಮೊದಲಿಗೆ ಅಂದರೆ ಮಾಡೆಲಿಂಗ್‌ಗೆ ಕಾಲಿಟ್ಟ ಶುರುವಿನಲ್ಲಿ ಯಾರು ಕೂಡಾ ನಿಮ್ಮನ್ನು ಬಂದು ಮಾತನಾಡಿಸುವುದಿಲ್ಲವಂತೆ. ಒಂದು ಇಡೀ ದಿನ ಶೂಟ್‌ಗಾಗಿ ಕಾದರೂ ಕೊನೆಗೆ ಏನು ಶೂಟಿಂಗ್ ನಡೆಯದೇ ವಾಪಸ್ ಹೋದ ಸಂದರ್ಭಗಳು ಇವೆಯಂತೆ. ಹಾಗೆಲ್ಲ ಆದಾಗ ಶರಣ್ಯ ಅವರಿಗೆ ಬಹಳ ನೆಗ್ಲೆಕ್ಟೆಡ್ ಫೀಲ್ ಆಗುತ್ತಿತ್ತಂತೆ.

ಜೀವನದಲ್ಲಿ ಶರಣ್ಯ ಶೆಟ್ಟಿಗೆ ಎಂದೂ ಕೂಡಾ ಆ ರೀತಿಯ ಅನುಭವ ಆಗದಿರುವುದರಿಂದ ತುಂಬಾ ಕಷ್ಟವಾಗುತ್ತಿತ್ತಂತೆ. ಆದರೆ, ಈಗ ಆಕೆಯೊಬ್ಬ ಜನಪ್ರಿಯ ಮಾಡೆಲ್. ಈ ಸ್ಥಾನಕ್ಕೆ ಬರಲು ಆಕೆ ತುಂಬಾ ಶ್ರಮ ತಾಳ್ಮೆ ಹಾಗೂ ಸಮಯ ತೆಗೆದುಕೊಂಡಿದ್ದಾರೆ. ಅಷ್ಟಾದರೂ ಆಕೆಯನ್ನು ಜನರು ಗುರುತಿಸುತ್ತಿರಲಿಲ್ಲವಂತೆ. ಅದೇ ಸಮಯಕ್ಕೆ ಆಕೆಗೆ 'ಗಟ್ಟಿಮೇಳ' ಧಾರಾವಾಹಿ ಆಫರ್ ಬಂದಿದೆ. ಈ ಮೂಲಕ ಕಿರುತೆರೆಗೆ ಕಾಲಿಟ್ಟರಂತೆ ಶರಣ್ಯ.

Gattimela actress Sharanya Shetty is busy doing serials and movies says fame is not an easy word

ಕಿರುತೆರೆಗೆ ಕಾಲಿಟ್ಟ ಮೇಲೆ ಈ ರೀತಿಯಲ್ಲಾದರೂ ಜನರು ಆಕೆಯನ್ನು ಗುರುತಿಸಬಹುದು ಎಂಬ ಆಸೆ ಇತ್ತು. ಆದರೆ, ಅದು ಕೂಡ ಅಷ್ಟು ಸುಲಭದ ಮಾತಾಗಿರಲಿಲ್ಲ. ಸಾಹಿತ್ಯ ಎಂಬ ಪಾತ್ರವನ್ನು ಜನರು ಮೆಚ್ಚಿಕೊಂಡು ಶರಣ್ಯ ಅವರನ್ನು ಗುರುತಿಸಲು ತುಂಬಾ ಸಮಯ ಹಿಡಿಯಿತು. ಹಾಗಾಗಿ ಈ ನೇಮ್ ಅನ್ನುವುದು ಆಕೆಗೆ ಸುಲಭವಾಗಿ ದಕ್ಕಿಲ್ಲ. ಆದರೆ, ಇಂದು ಆಕೆ 'ಗಟ್ಟಿಮೇಳ'ದಲ್ಲಿ ಮಾಡಿರುವ ಪಾತ್ರಕ್ಕಾಗಿ ಆಕೆಯನ್ನು ಬಹಳಷ್ಟು ಜನ ಗುರುತಿಸುತ್ತಾರೆಂತೆ. ಆ ಬಗ್ಗೆ ಆಕೆಗಂತೂ ಬಹಳ ಖುಷಿ ಇದೆ.

ಶರಣ್ಯ ಅವರು ಕಾಲೇಜಿಗೆ ಹೋಗುವ ಸಮಯದಲ್ಲಿ ಬಿಎಂಟಿಸಿ ಬಸ್‌ನಲ್ಲಿ ಓಡಾಡುತ್ತಿದ್ದಿದ್ದಾಗಿ ಹೇಳಿಕೊಂಡಿದ್ದಾರೆ. ಒಂದೊಮ್ಮೆ ಹೀಗೆ ಹೋಗುತ್ತಿರುವಾಗ ಒಬ್ಬ ಹೆಂಗಸು ತಮ್ಮ ಮೊಬೈಲ್ ಫೋನಿನಲ್ಲಿ 'ಗಟ್ಟಿಮೇಳ' ಧಾರಾವಾಹಿಯನ್ನು ನೋಡುತ್ತಿದ್ದರು. ಅವರು ನೋಡುತ್ತಿದ್ದ ಎಪಿಸೋಡ್‌ನಲ್ಲಿ ಶರಣ್ಯ ಅವರು ಸಾಹಿತ್ಯ ಪಾತ್ರವನ್ನು ನಿರ್ವಹಿಸುತ್ತಿದ್ದರು. ಅದನ್ನು ನೋಡಿದಾಗ ಆಕೆಗೆ ಬಹಳ ಖುಷಿಯಾಗಿತ್ತಂತೆ.

ಜೊತೆಗೆ ಬಸ್ಸಿನಲ್ಲಿರುವ ಸುತ್ತಮುತ್ತ ಎಲ್ಲರೂ ಆಕೆಯನ್ನು ನೋಡಿ ಗುರುತಿಸುತ್ತಾರೆ ಎಂಬ ಅಪೇಕ್ಷೆ ಇತ್ತಂತೆ. ಆದರೆ, ಅಂದು ಅಂಥದೇನು ನಡೆಯಲಿಲ್ಲ. ಈಗ ಹಾಗಲ್ಲ ಜನರು ಶರಣ್ಯ ಅವರನ್ನು, ಆಕೆಯ ಪಾತ್ರವನ್ನು ಪ್ರೀತಿ ಅಭಿಮಾನದಿಂದ ಗುರುತಿಸುತ್ತಾರೆ. ಜೊತೆಗೆ ಚೆನ್ನಾಗಿ ಮಾತನಾಡಿಸುತ್ತಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

More from Filmibeat

English summary
Actress Sharanya Shetty is busy doing films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X