Gattimela-Ranjan: 'ಗಟ್ಟಿಮೇಳ' ಧಾರಾವಾಹಿಯ ನಟ ರಂಜನ್ ಬಾಲ್ಯ ಕನಸು ನನಸಾಗಿದ್ದು ಹೇಗೆ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಗಟ್ಟಿಮೇಳ'ವು ಕಥೆಯ ಜೊತೆಗೆ ಪಾತ್ರವರ್ಗದ ಮೂಲಕವೂ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕ ವೇದಾಂತ್ ವಸಿಷ್ಠ ತಮ್ಮ ಧ್ರುವ ಆಗಿ ನಟಿಸುತ್ತಿರುವ ಹ್ಯಾಂಡ್‌ಸಮ್ ಹುಡುಗನ ಹೆಸರು ರಂಜನ್ ಸನತ್. ಮನೋಜ್ಞ ನಟನೆಯ ಮೂಲಕ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾಗಿರುವ ರಂಜನ್ ಅವರಿಗೂ ನಟನಾಗುವ ಬಯಕೆ ಇತ್ತು.

ಬಾಲ್ಯದಿಂದಲೂ ಇತ್ತು ನಟನಾಗುವ ಬಯಕೆ
ಸಕ್ಕರೆ ನಾಡು ಎಂದೇ ಜನಪ್ರಿಯತೆ ಪಡೆದಿರುವ ಮಂಡ್ಯದ ಹುಡುಗ ರಂಜನ್‌ಗೆ ಸಣ್ಣ ವಯಸ್ಸಿನಿಂದಲೂ ನಟನಾಗಬೇಕು. ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಬಯಕೆಯಿತ್ತು. ತನ್ನ ಬಯಕೆಯನ್ಬು ಈಡೇರಿಸುವ ಸಲುವಾಗಿ ವಿದ್ಯಾಭ್ಯಾಸದ ನಂತರ ಮಹಾನಗರಿಗೆ ಕಾಲಿಟ್ಟ ರಂಜನ್ ನಟನೆಯ ಬಗ್ಗೆ ತರಬೇತಿ ಪಡೆಯುವ ನಿರ್ಧಾರ ಮಾಡಿದರು.
ನಾಗಾಭರಣ ಗರಡಿಯಲ್ಲಿ ಪಳಗಿದ ಪ್ರತಿಭೆ
ನಟನೆಯ ಬಗ್ಗೆ ಯಾವುದೇ ಅರಿವಿಲ್ಲದ ರಂಜನ್ ಅವರು ಬೆಂಗಳೂರಿಗೆ ಕಾಲಿಟ್ಟಿದ್ದೇ ಟಿ.ಎಸ್. ನಾಗಾಭರಣ ಅವರ ಅಭಿನಯ ತರಗತಿ ಶಾಲೆಗೆ ಸೇರಿ ನಟನೆಯ ಆಳ ಅಗಲವನ್ನು ಹಂತಹಂತವಾಗಿ ತಿಳಿದುಕೊಂಡರು. ತರಬೇತಿ ಪಡೆದ ಬಳಿಕ ಕೆಲವೊಂದು ಪಾತ್ರಗಳಲ್ಲಿ ಕಾಣಿಸಿಕೊಂಡ ರಂಜನ್ ಸಿನಿಮಾಗಳಲ್ಲಿಯೂ ಸಹಕಲಾವಿದನಾಗಿ ಮೋಡಿ ಮಾಡಿದ್ದಾರೆ.

ವಿಲನ್ ಆಗಿ ಕಿರುತೆರೆಗೆ ಎಂಟ್ರಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಇಷ್ಟದೇವತೆ' ಧಾರಾವಾಹಿಯಲ್ಲಿ ಖಳನಾಯಕನಾಗಿ ವಸಿಷ್ಠನಾಗಿ ನಟಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿ ವೀಕ್ಷಕರ ಮನ ಸೆಳೆದ ರಂಜನ್ ನಂತರ ಬದಲಾದುದು ಧ್ರುವನಾಗಿ. 'ಗಟ್ಟಿಮೇಳ' ಧಾರಾವಾಹಿಯ ಧ್ರುವನಾಗಿ ನಟಿಸಿ ವೀಕ್ಷಕರ ಮನ ಸೆಳೆದಿರುವ ರಂಜನ್ ಕಿರುತೆರೆ ವೀಕ್ಷಕರ ಜೊತೆಗೆ ಹೆಣ್ಣು ಮಕ್ಕಳ ದಿಲ್ ಕದ್ದಿದ್ದಾರೆ. ಮಾತ್ರವಲ್ಲದೇ ಇಂದು ರಂಜನ್ ಅವರು ಎತ್ತ ಹೋದರೂ ಜನ ಅವರನ್ನು ಧ್ರುವ ಎಂದೇ ಗುರುತಿಸುವಾಗ ಸಂತಸವಾಗುತ್ತದೆ ಎಂದಿದ್ದಾರೆ.


Click it and Unblock the Notifications











