'ಗಟ್ಟಿಮೇಳ' ಧಾರಾವಾಹಿ ರಕ್ಷ ವಿಜಯ್ ಸೂರ್ಯ 'ದೃಷ್ಟಿಬೊಟ್ಟು' ಸೀರಿಯಲ್‌ಗೆ ನಿರ್ಮಾಪಕ: ಹೇಗೆ ಇದೆಲ್ಲ

By ಅನಿತಾ ಬನಾರಿ

ನಟನಾಗಿ ಕಿರುತೆರೆಗೆ ಕಾಲಿಟ್ಟಿದ್ದ ಈ ಹ್ಯಾಂಡ್ ಸಮ್ ಹುಡುಗ ಇದೀಗ ನಿರ್ಮಾಪಕನಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ಅಂದ ಹಾಗೇ ನಾವಿಂದು ಮಾತನಾಡುತ್ತಿರುವುದು ನಟ ರಕ್ಷ್ ಬಗ್ಗೆ. 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕ ವೇದಾಂತ್ ವಸಿಷ್ಠ ಆಗಿ ಅಭಿನಯಿಸಿ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾಗಿರುವ ರಕ್ಷ್ ಅವರು ಇದೀಗ ಹೊಸ ಧಾರಾವಾಹಿಯೊಂದರ ನಿರ್ಮಾಣ ಮಾಡುತ್ತಿದ್ದಾರೆ.

ಕಿರುತೆರೆ ನಟ ರಕ್ಷ್ ಅವರು 'ಶ್ರಿಸಾಯಿ ಆಂಜನೇಯ ಕಂಪನಿ' ಎನ್ನುವ ಪ್ರೊಡಕ್ಷನ್ ಹೌಸ್ ಅನ್ನು ನಡೆಸುತ್ತಿದ್ದು ಆ ಮೂಲಕ ಹೊಸ ಧಾರಾವಾಹಿಯೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ದೃಷ್ಟಿಬೊಟ್ಟು' ವಿನ: ನಿರ್ಮಾಪಕರಾಗಿ ರಕ್ಷ್ ಕಾಣಿಸಿಕೊಂಡಿದ್ದಾರೆ. ವಿಜಯ್ ಸೂರ್ಯ ಅವರು ನಾಯಕರಾಗಿ ನಟಿಸುತ್ತಿರುವ ಈ ಧಾರಾವಾಹಿಯಲ್ಲಿ ಅರ್ಪಿತಾ ಮೋಹಿತೆ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ.

Gattimela fame actor Rakksh is back to television as a producer of the Drishtibottu serial

ಅಂದ ಹಾಗೇ ಶ್ರೀ ಸಾಯಿ ಆಂಜನೇಯ ಕಂಪನಿಯಿಂದ ನಿರ್ಮಾಣ ಆಗುತ್ತಿರುವ ಮೊದಲ ಧಾರಾವಾಹಿಯಲ್ಲ ಇದು. ಬದಲಿಗೆ ಈ ಹಿಂದೆ 'ಗಟ್ಟಿಮೇಳ' ಧಾರಾವಾಹಿಯನ್ನು ಅರ್ಧದಿಂದ ಈ ಧಾರಾವಾಹಿ ನಿರ್ಮಾಣ ಮಾಡಿತ್ತು. ಇದೀಗ ಎರಡನೇ ಧಾರಾವಾಹಿಯನ್ನು ಈ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ.

ಅಂದ ಹಾಗೇ ರಕ್ಷ್ ಅವರಿಗೆ ಮೊದಲಿನಿಂದಲೂ ಇದ್ದಿದು ಒಂದೇ ಕನಸು. ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಕನಸು ಮಾತ್ರವಲ್ಲದೇ ನಟನಾಗಿ ಹಿರಿತೆರೆಯಲ್ಲಿ ಮಿಂಚಬೇಕು ಎಂಬ ಬಯಕೆ ಅವರಿಗಿತ್ತು. ನಟಿಸಿದರೆ ಅದು ಸಿನಿಮಾದಲ್ಲಿಯೇ ಎಂದು ದೃಢ ನಿರ್ಧಾರ ಮಾಡಿದ ರಕ್ಷ್ ಕಿರುತೆರೆಯಿಂದ ಅವಕಾಶ ಬಂದಾಗ ಬೇಡ ಎಂದು ಬಿಟ್ಟಿದ್ದರು. ಆದರೆ ನಂತರ ಅಸ್ತು ಎಂದ ಅವರು ಮಹೇಶನಾಗಿ ಬದಲಾದರು.

ಹೌದು, ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಪುಟ್ಟ ಗೌರಿ ಮದುವೆ'ಯಲ್ಲಿ ನಾಯಕ ಮಹೇಶನಾಗಿ ನಟಿಸಿದ್ದ ರಕ್ಷ್ ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದುಬಿಟ್ಟರು. ಮಹೇಶನಾಗಿ ಕರುನಾಡಿನಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಇವರು 'ನನಗೂ ನಿನಗೂ' ಸಿನಿಮಾದ ಮೂಲಕ ಹಿರಿತೆರೆಗೂ ಹಾರಿದ್ದರು.

Gattimela fame actor Rakksh is back to television as a producer of the Drishtibottu serial

ತದ ನಂತರ 'ಗಟ್ಟಿಮೇಳ' ಧಾರಾವಾಹಿಯ ವೇದಾಂತ್ ಆಗಿ ಕಿರುತೆರೆಗೆ ಕಮ್‌ ಬ್ಯಾಕ್ ಆದ ಕಿರುತೆರೆ ವೀಕ್ಷಕರ ಪಾಲಿಗೆ ಪ್ರೀತಿಯ ಶುಂಠಿ ಶಂಕರ. ಅಲ್ಲೂ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆದ ರಕ್ಷ್ 'ನರಗುಂದ ಬಂಡಾಯ', 'ಬರ್ಮ' ಎನ್ನುವ ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದಾರೆ. ಇದೀಗ ನಿರ್ಮಾಣದತ್ತ ಚಿತ್ತ ಹರಿಸಿರುವ ಇವರು ರಂಗಭೂಮಿಯಲ್ಲಿಯೂ ಗುರುತಿಸಿಕೊಂಡಿರುವ ಪ್ರತಿಭೆ. ಹೌದು, ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ರಕ್ಷ್ ಅವರು ಇದೀಗ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Gattimela fame actor Rakksh is back to television as a producer of the Drishtibottu serial:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X