ಪ್ರಿಯಾ ಶೂಟಿಂಗ್ ಸೆಟ್‌ಗೆ ಅತ್ತೆ ಊಟದ ಬಾಕ್ಸ್ ಕೊಟ್ಟಿಕೊಡುತ್ತಾರಂತೆ!
'ಗಟ್ಟಿಮೇಳ' ಧಾರಾವಾಹಿಯಲ್ಲಿ ಚಟಪಟ ಅಂತ ಮಾತನಾಡುತಾ ಸದಾ ಸಹೋದರಿಯರ ಜೊತೆಗೆ ಜಗಳ ಮಾಡುತ್ತಿದ್ದ ಅಧಿತಿ ಈಗ ಕೊಂಚ ಸೈಲೆಂಟ್ ಆಗಿದ್ದಾರೆ.
ಅಧಿತಿ ಈಗ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವುದೇ ಅಪರೂಪವಾಗಿದೆ. ಅದಕ್ಕೆ ಪ್ರಮುಖವಾದ ಕಾರಣ ಅಧಿತಿ ಈಗ ಕಾವೇರಿಯಾಗಿ ಬದಲಾಗಿರುವುದು ಎನ್ನಲಾಗುತ್ತಿದೆ.
ಜೀ ಕನ್ನಡ ವಾಹಿನಿಯಲ್ಲಿ ಗಟ್ಟಿಮೇಳ ಧಾರಾವಾಹಿಗೆ ಅಧಿತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಪ್ರಿಯಾ ಜೆ ಆಚಾರ್ ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ರೀಲ್ಸ್ ಮೂಲಕ ನಟನೆಗೆ ಬಂದ ನಟಿ
ಸೋಶಿಯಲ್ ಮೀಡಿಯಾದ ತಮ್ಮ ಪ್ರೊಫೈಲ್‌ನಲ್ಲೇ ಕನ್ನಡತಿ ಎಂದು ಹಾಕಿಕೊಂಡಿರುವ ಅಧಿತಿ ಅಲಿಯಾಸ್ ಪ್ರಿಯಾ ಆಚಾರ್ ಕನ್ನಡದ ಅಪ್ಪಟ ಅಭಿಮಾನಿ. ಡಬ್ ಸ್ಮ್ಯಾಶ್, ಟಿಕ್ ಟಾಕ್, ರೀಲ್ಸ್ ಮಾಡಿಕೊಂಡಿದ್ದ ಪ್ರಿಯಾ ಆಚಾರ್ ಅನ್ನು ನೋಡಿದ ಮಾಸ್ಟರ್ ಆನಂದ್ ನಟಿಸುವಂತೆ ಆಫರ್ ಕೊಟ್ಟರಂತೆ. ಅಧಿತಿ ರಿಯಲ್ ಲೈಫ್‌ನಲ್ಲೂ ಜಗಳಗಂಟಿ ಅಂತೆ. ಹಾಗಂತ ಎಲ್ಲರ ಜೊತೆ ಜಗಳಕ್ಕೆ ಇಳಿಯೊಲ್ಲ. ಬಟ್ ತಮ್ಮ ಸಹೋದರಿ ಜೊತೆ ಇದ್ದಾಗ ಜಗಳ ಮಾಡದೇ ಇರೊಲ್ಲವಂತೆ. ಹೀಗಂತ ಅವರೇ ಹೇಳಿಕೊಂಡಿದ್ದಾರೆ. ಮೂಲತಃ ದಾವಣಗೆರೆಯವರಾಗಿರುವ ಪ್ರಿಯಾ ಆಚಾರ್ ಬಿಸಿಎ ಪದವಿ ಮುಗಿಸಿ ಈಗ ನಟನೆಯನ್ನೇ ವೃತ್ತಿ ಬದುಕನ್ನಾಗಿ ಆರಿಸಿಕೊಂಡಿದ್ದಾರೆ. ನಟನೆ ಬಗ್ಗೆ ಗಂಧಗಾಳಿ ತಿಳಿದಿರದ ಈಕೆ ಗಟ್ಟಿಮೇಳ ಧಾರಾವಾಹಿಗೆ ಬಂದ ಮೇಲೆ ನಟಿಸುವುದನ್ನು ಕಲಿತ್ತದ್ದು ಎಂದು ಹೇಳಿದ್ದಾರೆ.
ಪ್ರಿಯಾ ನಟನೆಯ ಜರ್ನಿ
ಪ್ರಿಯಾ ಆಚಾರ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿ ಬಳಗವಿದೆ. ಆಕೆ ಕೇವಲ ಕಿರುತೆರೆ ನಟಿಯಷ್ಟೇ ಅಲ್ಲ. ಸಿನಿಮಾದಲ್ಲೂ ನಟಿಸಿದ್ದಾರೆ. ಆ ಚಿತ್ರದ ಹೆಸರು 'ಧಮಾಕಾ'. ಪ್ರಿಯಾ ಆಚಾರ್‌ಗೆ ಕುಣಿಯೋದು ಎಂದರೆ ತುಂಬಾ ಇಷ್ಟ. ಆದರೆ ಡ್ಯಾನ್ಸ್ ಕಲಿತಿರಲಿಲ್ಲ. 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ರು. ಡ್ಯಾನ್ಸ್ ಕಲಿತು ಪರ್ಫಾಮ್ ಮಾಡಿದ್ದರು. ಇದು ಆಕೆಗೆ ಖುಷಿ ಕೊಟ್ಟಿದ್ದ ಸಂದರ್ಭ ಎಂದು ಹೇಳುತ್ತಾರೆ. ಇನ್ನು ಧಾರಾವಾಹಿಯಲ್ಲಿ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಪ್ರಿಯಾ, ಮಾರ್ಡನ್ ಬಟ್ಟೆಗಳನ್ನೂ ಧರಿಸುತ್ತಾರೆ. ಗೌನ್, ಫ್ರಾಕ್, ಜೀನ್ಸ್ ಧರಿಸಿ ಫೋಟೋಶೂಟ್ ಮಾಡಿಸಿಕೊಳ್ಳುವ ಪ್ರಿಯಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇವರ ಲುಕ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

'ಗಟ್ಟಿಮೇಳ' ಬಿಡಲ್ಲ ಎಂದ ನಟಿ
ಇದೀಗ ಕಳೆದ ನಾಲ್ಕು ತಿಂಗಳಿಂದ ಪ್ರಿಯಾ ಆಚಾರ್ ತೆಲುಗಿನ ಧಾರಾವಾಹಿಗೂ ಬಣ್ಣ ಹಚ್ಚಿದ್ದಾರೆ. 'ಆನಂದರಾಗಂ' ಧಾರಾವಾಹಿಯಲ್ಲಿ ನಟಿಸಿದ್ದರು. ಇದರ ಜೊತೆಗೆ ಈಗ ಕನ್ನಡದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಪ್ರಿಯಾ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೂ ಕೂಡ ಜೀವನ ಕೊಟ್ಟಂತಹ 'ಗಟ್ಟಿಮೇಳ' ಧಾರಾವಾಹಿಯನ್ನು ಯಾವುದೇ ಕಾರಣಕ್ಕೂ ಕೊನೆಯವರೆಗೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಸೊಸೆಗಾಗಿ ಅತ್ತೆ ಏನು ಮಾಡುತ್ತಾರೆ ಗೊತ್ತಾ..?
ಇನ್ನು ಪ್ರಿಯಾ, ನಟ ಸಿದ್ದು ಮೂಲಿಮನಿ ಪ್ರೀತಿಸಿ, ಸಪ್ತಪದಿ ತುಳಿದಿದ್ದಾರೆ. ಪ್ರಿಯಾ ಮದುವೆಯ ಬಳಿಕವೂ ತಮ್ಮ ನಟನೆ ಮುಂದುವರೆಸಿದ್ದಾರೆ. ಆಕೆಯ ನಟನೆಗೆ ಪತಿ ಹಾಗೂ ಕುಟುಂಬದವರು ಬಹಳ ಸಪೋರ್ಟ್ ಮಾಡುತ್ತಾರಂತೆ. ಅಲ್ಲದೇ, ಪ್ರಿಯಾ ಅವರು ಪ್ರತಿದಿನ ಮನೆಯಿಂದ ಹೊರಡುವಾಗ ಅವರ ಅತ್ತೆಯೇ ಶೂಟಿಂಗ್‌ಗೆ ಊಟದ ಬಾಕ್ಸ್ ಅನ್ನು ಕಟ್ಟಿಕೊಡುತ್ತಾರಂತೆ.


Click it and Unblock the Notifications











