ನಟಿ ಶರಣ್ಯ ಶೆಟ್ಟಿ ಹೊಸ ರೀಲ್ಸ್ ಮಾಡಲು ಎಲ್ಲಿಗೆ ಹೋಗಿದ್ದಾರೆ ನೋಡಿ..

By ಪ್ರಿಯಾ ದೊರೆ

ಕಿರುತೆರೆ ಲೋಕದಲ್ಲಿ ಸಾಕಷ್ಟು ನಟ-ನಟಿಯರು ಇದ್ದಾರೆ. ಕೆಲವರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದರೆ ಮತ್ತೆ ಕೆಲವರು ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿದಿದ್ದಾರೆ.

ಇನ್ನೂ ಕೆಲವರು ಪ್ಯಾಷನ್‌ಗಾಗಿ ಕಿರುತೆರೆಯಲ್ಲಿ ಕೆಲವೇ ಕೆಲವು ಧಾರಾವಾಹಿಗಳಲ್ಲಿ ನಟಿಸಿ ಹೋಗುತ್ತಾರೆ. ಆದರೆ ಮತ್ತೆ ಕೆಲವರಿಗೆ ಹೆಚ್ಚಿನ ಅವಕಾಶವಿಲ್ಲದೇ ಕಾಯುತ್ತಿರುತ್ತಾರೆ.

ಹೀಗೆ ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದ ನಟಿಯರಲ್ಲಿ ಶರಣ್ಯ ಶೆಟ್ಟಿ ಕೂಡ ಒಬ್ಬರು. ಈಗ ಹೊಸ ಫೋಟೋಶೂಟ್‌ನಲ್ಲಿ ಮಿಂಚುತ್ತಿದ್ದಾರೆ. ಅವರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ನೋಡೋಣ ಬನ್ನಿ.

ಆಕ್ಟಿಂಗ್ ಎಂದರೆ ಇಷ್ಟ

ಆಕ್ಟಿಂಗ್ ಎಂದರೆ ಇಷ್ಟ

ಇಂಜಿನಿಯರಿಂಗ್ ಓದಿರುವ ಶರಣ್ಯ ಶೆಟ್ಟಿ ಚೆಲುವೆಯ ನಗು ತುಂಬಾ ಕ್ಯೂಟ್. ಕಾಲೇಜಿನಲ್ಲಿ ಫ್ಯಾಷನ್ ಟೀಂ ಸೇರಿಕೊಂಡ ಶರಣ್ಯ ಶೆಟ್ಟಿ ಅವರು ಹಲವು ರ್ಯಾಂಪ್ ವಾಕ್ ಮಾಡಿದ್ದಾರೆ. ಮಾಡೆಲ್ ಆಗಿರುವ ಶರಣ್ಯ ಶೆಟ್ಟಿ ಅವರು ನಟಿ ಕೂಡ ಹೌದು. ಸಿನಿಮಾ ವಿತರಕರಾಗಿರುವ ಶರಣ್ಯ ಶೆಟ್ಟಿ ಅವರ ತಂದೆಗೆ ಮಗಳು ನಟಿಸುವುದು ಇಷ್ಟವಿರಲಿಲ್ಲವಂತೆ. ಆದರೆ ಶರಣ್ಯ ಶೆಟ್ಟಿ ಅವರಿಗೆ ಮೊದಲಿನಿಂದಲೂ ತಾವೊಬ್ಬರು ನಟಿ ಆಗಬೇಕು ಎಂದು ಆಸೆ ಇತ್ತಂತೆ. ಮಾಡೆಲಿಂಗ್‌ಗೆ ಎಂಟ್ರಿ ಕೊಟ್ಟ ಶರಣ್ಯ ಈಗ ನಟಿ ಕೂಡ ಆಗಿರುವುದಕ್ಕೆ ಖುಷಿಯಾಗಿದ್ದಾರೆ.

ಮಿಸ್ ಸೌತ್ ಕರೀಟ ಪಡೆದ ಕುವರಿ

ಮಿಸ್ ಸೌತ್ ಕರೀಟ ಪಡೆದ ಕುವರಿ

ಶರಣ್ಯ ಶೆಟ್ಟಿ ಮೂಲತಃ ಶಿವಮೊಗ್ಗದವರು. ಆದರೆ ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿ. ಅವರು ಓದಿನಲ್ಲಿ ಮುಂದಿದ್ದ ಕಾರಣ ಅವರು ಡಾಕ್ಟರ್ ಇಲ್ಲವೇ ಇಂಜಿನಿಯರ್ ಆಗಲಿ ಎಂದು ಪೋಷಕರು ಬಯಸಿದ್ದರು. ಅದರಂತೆ ಇಂಜಿನಿಯರ್‌ನಲ್ಲಿ ಶೇ.98 ರಷ್ಟು ಅಂಕ ಪಡೆದ ಶರಣ್ಯ ಸದ್ಯ ಆ್ಯಕ್ಟರ್ ಆಗಿದ್ದಾರೆ. ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಶರಣ್ಯ ಶೆಟ್ಟಿ ಅವರು ಮಿಸ್ ಬೆಂಗಳೂರು ಸ್ಪರ್ಧೆಗೆ ಆಯ್ಕೆಯಾಗಿದ್ದರು. ನಂತರ ಮಿಸ್ ಇಂಡಿಯಾ 2018ರ ಫೈನಲ್‌ವರೆಗೂ ಶರಣ್ಯ ಅವರು ಸ್ಫರ್ಧೆ ಮಾಡಿದ್ದರು. ಬಳಿಕ 2019ರ ಮಿಸ್‌ ಸೌತ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡರು. ಜೊತೆಗೆ ಮಿಸ್ ಕ್ವೀನ್ ಆಫ್ ಇಂಡಿಯಾ ಫೈನಲಿಸ್ಟ್ ಕೂಡ ಆಗಿದ್ದರು.

ಸಿನಿಮಾಗಳಲ್ಲೂ ಶರಣ್ಯ ಮಿಂಚು

ಸಿನಿಮಾಗಳಲ್ಲೂ ಶರಣ್ಯ ಮಿಂಚು

ಶರಣ್ಯ ಶೆಟ್ಟಿ ಅವರು ಸಿನಿಮಾಗಳಲ್ಲಿ ನಟಿಸಿದ್ದರೂ ಅವರಿಗೆ ಹೆಸರು ತಂದು ಕೊಟ್ಟಿದ್ದು ಮಾತ್ರ ಕಿರುತೆರೆ. 'ಗಟ್ಟಿಮೇಳ' ಧಾರಾವಾಹಿಯಲ್ಲಿ ಸಾಹಿತ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಶರಣ್ಯರನ್ನು ಇಂದಿಗೂ ಸಾಹಿತ್ಯ ಹೆಸರಿನಲ್ಲೇ ಗುರುತಿಸುತ್ತಾರೆ. ಇನ್ನು ಶರಣ್ಯ ಅವರು 'ಗಟ್ಟಿಮೇಳ' ಧಾರಾವಾಹಿ ಹೊರತು ಪಡಿಸಿ, 'ಮುದ್ದು ಲಕ್ಷ್ಮೀ', 'ಆಕಾಶ ದೀಪ' ಸೇರಿದಂತೆ ಕೆಲ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ಹೆಚ್ಚು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಆಲ್ಬಂ ಸಾಂಗ್‌ಗಳಲ್ಲೂ ಬಣ್ಣ ಹಚ್ಚಿದ್ದಾರೆ. 'ಫ್ರೆಂಡ್ ಝೋನ್ಡ್' ಎಂಬ ಆಲ್ಬಂ ಸಾಂಗ್‌ನಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ಶರಣ್ಯ ಅವರು 'ಸ್ಫೂಕಿ ಕಾಲೇಜ್', 'ರವಿ ಬೋಪಣ್ಣ', 'ಪೆಂಟಗಾನ್' ಮತ್ತು 'ನಗುವಿನ ಹೂಗಳ ಮೇಲೆ' ಚಿತ್ರಗಳಲ್ಲಿ ನಟಿಸಿದ್ದಾರೆ.

ಗೌರಿಯಾದ ಶರಣ್ಯ

ಗೌರಿಯಾದ ಶರಣ್ಯ

ಇನ್ನು ಶರಣ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಸದಾ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಫೋಟೋಗಳನ್ನು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಇದೀಗ ಹಾಫ್ ವೈಟ್ ಬಟ್ಟೆಯನ್ನು ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಧಿರಿಸಿನಲ್ಲಿ ಸುಂದರವಾಗಿ ಕಾಣುತ್ತಿರುವ ಶರಣ್ಯ ಅವರು ಕದ್ದು ಕದ್ದು ನೋಡಬೇಡ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಅದೂ ಕೂಡ ಚಿಕ್ಕಬಳ್ಳಾಪುರದ ಇಶಾ ಫೌಂಡೇಷನ್‌ನಲ್ಲಿರುವ ಶಿವನ ಪ್ರತಿಮೆ ಮುಂದೆ. ಶರಣ್ಯ ಅವರು ಧರಿಸಿರುವ ಬಟ್ಟೆಗೂ ಹಾಡಿಗೂ ಸೂಪರ್ ಆಗಿ ಮ್ಯಾಚ್ ಆಗುತ್ತಿದ್ದು ಗೌರಿಯಂತೆಯೇ ಕಾಣುತ್ತಿದ್ದಾರೆ.

More from Filmibeat

English summary
Gattimela Fame Actress Sharanya Shetty Latest photoshoot Goes Viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X