ಈ ನಟಿ ರಿಯಲ್‌ ಲೈಫ್‌ನಲ್ಲಿ ಡಾಕ್ಟರ್.. ನಟನೆ ಮೇಲಿನ ಕ್ರೇಜ್‌ನಿಂದ ಈಗ ಆ್ಯಕ್ಟರ್

By ಅನಿತಾ ಬನಾರಿ

ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲೊಂದಾದ 'ಗಟ್ಟಿಮೇಳ'ವು ವಿಭಿನ್ನ ಕಥಾಹಂದರದ ಜೊತೆಗೆ ಕಲಾವಿದರುಗಳ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯ ಅಕ್ಕ ಆರತಿ ಆಗಿ ನಟಿಸುತ್ತಿರುವ ಆರತಿ ಪಡುಬಿದ್ರಿ ಫಿಜಿಯೋಥೆರಪಿಸ್ಟ್ ಎಂಬ ವಿಷಯ ಹಲವರಿಗೆ ತಿಳಿದಿರಲಿಕ್ಕಿಲ್ಲ.

ಹೌದು! ವೃತ್ತಿಯಿಂದ ಫಿಜಿಯೋಥೆರಪಿಸ್ಟ್ ಅಂದರೆ ಡಾಕ್ಟರ್ ಆಗಿದ್ದ ಆರತಿ ಪಡುಬಿದ್ರಿಗೆ ಮಾಡಲಿಂಗ್ ಹಾಗೂ ನಟನೆಯಲ್ಲಿ ಬಹಳಷ್ಟು ಆಸಕ್ತಿ ಇತ್ತಂತೆ. ಕೆಲಸದ ಜೊತೆಗೆ ಬಿಡುವು ದೊರೆತಾಗಲೆಲ್ಲಾ ಮಾಡೆಲಿಂಗ್ ಕೂಡ ಮಾಡುತ್ತಿದ್ದ ಇವರು ಹೇಗಾದರೂ ನಟಿಯಾಗಬೇಕೆಂದು ಬಹಳಷ್ಟು ಕನಸು ಕಂಡಿದ್ದರು. ಅವಕಾಶಗಳು ದೊರಕಿದಾಗ ಕೆಲಸ ಹಾಗೂ ನಟನೆಯನ್ನು ಬ್ಯಾಲೆನ್ಸ್ ಮಾಡಲು ಬಹಳಷ್ಟು ಕಷ್ಟಪಟ್ಟ ಈಕೆ ತಮ್ಮ ನಟನೆಯ ಕನಸನ್ನು ಬಿಟ್ಟುಕೊಡಲಿಲ್ಲ.

Gattimela fame Arathi Padubidri who was a doctor is now an actor

ಮೊದಲ ಧಾರಾವಾಹಿಯಲ್ಲೇ ಫೇಮಸ್ಸು

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹೂ ಮಳೆ' ಎಂಬ ಧಾರಾವಾಹಿಯಲ್ಲಿ ನಾಯಕಿ ಅಕ್ಕನ ಪಾತ್ರ ದೊರೆತಾಗ ಖುಷಿಯಿಂದ ಒಪ್ಪಿಕೊಂಡು ಅದ್ಭುತವಾಗಿ ನಟಿಸಿದರು. ಸಿಕ್ಕ ಮೊದಲ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಇವರು ಅಂಬಿಕಾ ಪಾತ್ರದಿಂದ ಕಿರುತೆರೆಯಲ್ಲಿ ಬಹುಬೇಗನೇ ಫೇಮಸ್ ಆದರು. ಇದೀಗ 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ರಿಯಾಲಿಟಿ ಶೋವಿನಲ್ಲೂ ಭಾಗಿ

ಇದಕ್ಕೂ ಮೊದಲು ಡ್ಯಾನ್ಸಿಂಗ್ ಶೋನಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದ ಆರತಿ ಪಡುಬಿದ್ರಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡರು. ಮಾಡೆಲಿಂಗ್ ಚೆನ್ನಾಗಿ ಗೊತ್ತಿದ್ದ ಈಕೆ ನಟನೆ ಸುಲಭ ಎಂದುಕೊಂಡಿದ್ದರಂತೆ. ಆದರೆ ನಟನೆಯ ಕಷ್ಟಗಳು ನಟಿಯಾದ ಮೇಲೆ ತಿಳಿಯಿತಂತೆ. ಆದರೂ, ಸಹ ಛಲ ಬಿಡದೆ ನಟನೆ ಕಲಿತು ತಮ್ಮ ಅದ್ಭುತ ಅಭಿನಯದಿಂದ ಈಗ ಮನೆ ಮಾತಾಗಿದ್ದಾರೆ.

ನಟನೆ ಹೊರತಾಗಿ ಟ್ರಾವೆಲ್ ಬಲು ಇಷ್ಟ

ನಟನೆಯೊಂದಿಗೆ ಟ್ರಾವೆಲಿಂಗ್‌ನಲ್ಲಿಯೂ ಬಹಳಷ್ಟು ಆಸಕ್ತಿ ಇರುವ ಇವರು ಬಿಡುವು ಸಿಕ್ಕಾಗಲೆಲ್ಲ ಸುತ್ತಾಡುತ್ತಿರುತ್ತಾರೆ. ಜೊತೆಗೆ ಆಗಾಗ ಟ್ರೆಡಿಷನಲ್ ಹಾಗು ವೆಸ್ಟರ್ನ್ ಫೋಟೋ ಶೂಟ್‌ಗಳನ್ನು ಮಾಡಿಸುತ್ತಲೇ ಇರುವ ಇವರು ತಮ್ಮ ಸೋಶಿಯಲ್ ಮೀಡಿಯಾದಲ್ಲೂ ಬಹಳಷ್ಟು ಆಕ್ಟಿವ್ ಆಗಿದ್ದಾರೆ.

Gattimela fame Arathi Padubidri who was a doctor is now an actor

ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್

'ಗಟ್ಟಿಮೇಳ' ಧಾರಾವಾಹಿಯ ಸಹನಟರು ಜೊತೆಗೆ ಗಂಡನ ಪಾತ್ರದಲ್ಲಿ ನಟಿಸುತ್ತಿರುವ ನಟ ವಿಕ್ರಾಂತ್ ಅವರೊಂದಿಗೆ ರೀಲ್ಸ್ ಗಳನ್ನು ಮಾಡಿ ಆಗಾಗ ಪೋಸ್ಟ್ ಮಾಡುತ್ತಿದ್ದಾರೆ. ಈ ಮೂಲಕ ನಟಿ ಆರತಿ ಪಡುಬಿದ್ರಿ ಅವರು ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರ ಆಗುತ್ತಿದ್ದಾರೆ.

More from Filmibeat

English summary
Arathi Padubidri, who was a physiotherapist, is now a television actor. Arathi is happy that her dream has come true, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X