For Quick Alerts
  ALLOW NOTIFICATIONS  
  For Daily Alerts

  ಉಂಗುರ ಬದಲಾಯಿಸಿಕೊಂಡು ಪ್ರೀತಿ ನಿವೇದನೆ ಮಾಡಿಕೊಂಡ ಪ್ರಿಯಾ-ಸಿದ್ದು

  By ಪ್ರಿಯಾ ದೊರೆ
  |

  ಇತ್ತೀಚೆಗೆ ಬಣ್ಣದ ಲೋಕದಲ್ಲಿ ಸ್ಟಾರ್ ಜೋಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಒಂದು ವರ್ಷದಿಂದ ಕಿರುತೆರೆಯಲ್ಲಿ ನಟ-ನಟಿಯರು ಪ್ರೀತಿಸಿ ಮದುವೆಯಾಗುವವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಈ ಲಿಸ್ಟ್‌ಗೆ ಮತ್ತೆರಡು ಜೋಡಿಗಳು ಸೇರ್ಪಡೆಯಾಗಿವೆ.

  'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಚಂದನ್-ಕವಿತಾ ಪ್ರೀತಿಸಿ ಮದುವೆಯಾದರು. ಇವರಂತೆಯೇ ಅಮೃತಾ ಮತ್ತು ಚಂದು ಗೌಡ, ಗ್ಯಾಬ್ರಿಯಾಲಾ ಸ್ಮಿತ್ ಹಾಗೂ ಸೇರಿದಂತೆ ಹಲವು ಕಿರುತೆರೆ ನಟರು ಪ್ರೀತಿ ಮದುವೆಯಾಗಿದ್ದಾರೆ.

  ದಾರಿ ತಪ್ಪಿದ 'ಜೊತೆ ಜೊತೆಯಲಿ': ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತಿರುವ ಪ್ರಿಯದರ್ಶಿನಿ!ದಾರಿ ತಪ್ಪಿದ 'ಜೊತೆ ಜೊತೆಯಲಿ': ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತಿರುವ ಪ್ರಿಯದರ್ಶಿನಿ!

  ಒಂದೇ ವಾರದಲ್ಲಿ ಎರಡು ಜೋಡಿಗಳು ಉಂಗುರ ಬದಲಾಯಿಸಿಕೊಂಡಿವೆ. ಅದೂ ಕೂಡ ಒಂದೇ ವಾಹಿನಿಯಲ್ಲಿದ್ದ ಈ ನಟ-ನಟಿಯರು ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದಾರೆ. ಎಂಗೇಜ್‌ಮೆಂಟ್ ಮಾಡಿಕೊಂಡು ನಂತರ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ.

   ಫ್ಯಾನ್ಸ್‌ಗೆ ಶಾಕ್ ಕೊಟ್ಟ ಕಿರುತೆರೆ ಸ್ಟಾರ್ಸ್

  ಫ್ಯಾನ್ಸ್‌ಗೆ ಶಾಕ್ ಕೊಟ್ಟ ಕಿರುತೆರೆ ಸ್ಟಾರ್ಸ್

  ಕಳೆದ ವಾರವಷ್ಟೇ 'ಸತ್ಯ' ಧಾರಾವಾಹಿಯ ನಾಯಕ ನಟ ಸಾಗರ್ ಬಿಳಿ ಗೌಡ ತಮ್ಮ ಪ್ರೀತಿಯ ಹುಡುಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸಾಗರ್ ಬಿಳಿ ಗೌಡ ಫೋಟೋ ಹಂಚಿಕೊಂಡಿದ್ದರು. ಸಾಗರ್ ಬಿಳಿ ಗೌಡ ಅವರು ಕೂಡ ಕಿರುತೆರೆ ನಟಿ ಸಿರಿ ರಾಜು ಅವರನ್ನು ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ಹೇಳಿದ್ದರು. ಪ್ರೀತಿಯ ವಿಚಾರವನ್ನು ಗುಟ್ಟಾಗಿಟ್ಟು ಎಂಗೇಜ್‌ಮೆಂಟ್ ಸಂದರ್ಭದಲ್ಲಿ ಬಹಿರಂಗ ಪಡಿಸಿ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಇದೇ ರೀತಿ ಕೆಲವೇ ದಿನದ ಅಂತರದಲ್ಲಿ ಈಗ ಮತ್ತೊಂದು ಜೋಡಿ ಉಂಗುರ ಬದಲಾಯಿಸಿಕೊಂಡು ಸಂತಸವನ್ನು ಹಂಚಿಕೊಂಡಿದೆ.

   ಸದ್ದಿಲ್ಲದೆ ಒಂದಾದ ಲವ್ ಬರ್ಡ್ಸ್

  ಸದ್ದಿಲ್ಲದೆ ಒಂದಾದ ಲವ್ ಬರ್ಡ್ಸ್

  ಪ್ರಿಯಾ ಆಚಾರ್ ಮತ್ತು ಸಿದ್ದು ಮೂಲಿಮನಿ ಸದ್ದಿಲ್ಲದೇ ಒಂದಾಗಿದ್ದಾರೆ. ಇಬ್ಬರು ನಿನ್ನೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದು. ಇದರ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಇವರಿಬ್ಬರು ಮೊದಲು ಫೊಟೋವೊಂದನ್ನು ಶೇರ್ ಮಾಡಿ, ಅದಕ್ಕೆ "ತುಂಬಾ ಯಂಗ್ ಏಜ್ ನಲ್ಲಿ ಎಂಗೇಜ್ ಆದ್ವಿ" ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ನೋಡಿದವರೆಲ್ಲಾ ಶಾಕ್ ಆದರು. ನಂತರ ನಿಶ್ಚಿತಾರ್ಥದ ವೀಡಿಯೋ ನೋಡಿ ಖುಷಿ ಪಟ್ಟಿದ್ದಾರೆ. ದಾವಣಗೆರೆಯಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

   'ಗಟ್ಟಿಮೇಳ' ಮೂಲಕ ಪ್ರಿಯಾ ನಟನೆ

  'ಗಟ್ಟಿಮೇಳ' ಮೂಲಕ ಪ್ರಿಯಾ ನಟನೆ

  ಸೋಶಿಯಲ್ ಮೀಡಿಯಾದ ತಮ್ಮ ಪ್ರೊಫೈಲ್ ನಲ್ಲೇ ಕನ್ನಡತಿ ಎಂದು ಹಾಕಿಕೊಂಡಿರುವ ಅಧಿತಿ ಅಲಿಯಾಸ್ ಪ್ರಿಯಾ ಆಚಾರ್ ಕನ್ನಡದ ಅಪ್ಪಟ ಅಭಿಮಾನಿ. ಡಬ್ ಸ್ಮ್ಯಾಶ್, ಟಿಕ್ ಟಾಕ್, ರೀಲ್ಸ್ ಮಾಡಿಕೊಂಡಿದ್ದ ಪ್ರಿಯಾ ಆಚಾರ್ ಅವರಿಗೆ ನಟನೆ ಬಗ್ಗೆ ಗಂಧಗಾಳಿ ತಿಳಿದಿರದ ಇವರು ಗಟ್ಟಿಮೇಳ ಧಾರಾವಾಹಿಗೆ ಬಂದ ಮೇಲೆ ನಟಿಸುವುದನ್ನು ಕಲಿತಿದ್ದು. ಇನ್ನು 'ಪಾರು' ಧಾರಾವಾಹಿಯಲ್ಲಿ ಪ್ರೀತು ಎಂದೇ ಚಿರಪರಿಚಿತರಾಗಿರುವ ನಟ ಸಿದ್ದು ಮೂಲಿಮನಿ ಕಿರುತೆರೆ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಸಿದ್ದು ಮೂಲಿಮನಿ ಕನ್ನಡ ಚಿತ್ರರಂಗದ ಯುವನಟ.

   'ಧಮಾಕ' ಚಿತ್ರದಲ್ಲಿ ನಟಿಸಿದ ಜೋಡಿ

  'ಧಮಾಕ' ಚಿತ್ರದಲ್ಲಿ ನಟಿಸಿದ ಜೋಡಿ

  ಪ್ರಿಯಾ ಜೆ ಆಚಾರ್ ಮತ್ತು ಸಿದ್ದುಮೂಲಿಮನಿ ಜೀ ಕನ್ನಡ ವಾಹಿನಿಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಪ್ರಿಯಾ ಅಧಿತಿ ಪಾತ್ರದಲ್ಲಿ 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಟಿಸುತ್ತಿದ್ದರೆ, 'ಪಾರು' ಧಾರಾವಾಹಿಯಲ್ಲಿ ಸಿದ್ದು ಮೂಲಿಮನಿ ಪ್ರೀತಂ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ಇವರಿಬ್ಬರು ಡ್ಯಾನ್ಸ್ ಶೋ ಒಂದರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಇಲ್ಲಿಂದ ಇಬ್ಬರಿಗೂ ಪರಿಚಯವಾಗಿತ್ತು. ಪರಿಚಯದ ಬಳಿಕ ಪ್ರೀತಿಸಲು ಶುರು ಮಾಡಿದ ಈ ಜೋಡಿ, 'ಧಮಾಕ' ಎಂಬ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. 'ಧಮಾಕ' ಚಿತ್ರದ ಬಳಿಕ ಇವರಿಬ್ಬರು ಆಗಾಗ ಒಟ್ಟೊಟ್ಟಿಗೆ ರೀಲ್ಸ್ ಗಳನ್ನು ಮಾಡುತ್ತಿದ್ದರು. ಆದರೆ, ಇಬ್ಬರೂ ಪ್ರೀತಿಸುತ್ತಿರುವ ವಿಚಾರವನ್ನು ರಹಸ್ಯವಾಗಿಯೇ ಇಡಲಾಗಿತ್ತು.

  English summary
  Gattimela Fame Priya j Achar engaged To Actor Siddu moolimani. They Both Acting In zee Kannada Serials.
  Monday, November 21, 2022, 20:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X