ಹೊಸ ಬ್ಯುಸಿನೆಸ್‌ಗೆ ಕೈ ಹಾಕಿದ 'ಗಟ್ಟಿಮೇಳ' ಖ್ಯಾತಿಯ 'ವೇದಾಂತ್'

By ಪೂರ್ವ

'ಗಟ್ಟಿಮೇಳ' ಧಾರವಾಹಿ ಎಂದಾಗ ನೆನಪಿಗೆ ಬರುವುದೇ ವೇದಾಂತ್ ಹಾಗೆಯೇ ರೌಡಿ ಬೇಬಿ ಅಮೂಲ್ಯ, ವೇದಾಂತ್ ಪಾತ್ರ ನಿರ್ವಹವಿಸುತ್ತಿರುವ ರಕ್ಷ್ ಬಣ್ಣದ ಲೋಕದಲ್ಲಿ ಅದೆಷ್ಟೂ ಸಕ್ರಿಯರಾಗಿದ್ದಾರೆ ಎಂದರೆ ಇದೀಗ ಹೊಸ ಸ್ಟೂಡಿಯೊವನ್ನು ತೆರೆದಿದ್ದಾರೆ. ರಕ್ಷ್ ರ ಹೊಸ ಸಾಹಸಕ್ಕೆ ಪತ್ನಿ ಅನುಷಾ ಸಾಥ್ ನೀಡುತ್ತಿದ್ದಾರೆ.

ಪುಟ್ಟಗೌರಿ ಮದುವೆ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ ರಕ್ಷ್ ಬಳಿಕ ಹಿಂದೆ ತಿರುಗಿ ನೋಡಿಲ್ಲ. ಒಂದರ ಹಿಂದೆ ಒಂದರಂತೆ ಧಾರಾವಾಹಿ, ಸಿನಿಮಾಗಳ ಮೂಲಕ ಗುರುತಿಸಿಕೊಂಡು ಬಂದಿದ್ದಾರೆ. ಇದಿಗ 'ಗಟ್ಟಿಮೇಳ' ಧಾರವಾಹಿಯಲ್ಲಿ ಮಿಂಚುತ್ತಿದ್ದು ಜನರಿಗೆ ಬಹಳ ಹತ್ತಿರವಾಗುತ್ತಿದ್ದಾರೆ.

ಸ್ಟುಡಿಯೋ ತೆರೆಯಬೇಕೆಂಬ ರಕ್ಷ್ ಅವರ ಆಸೆ ಇದೀಗ ನೆರವೇರಿದೆ. ನಟ ರಕ್ಷ್ ಸ್ಟೂಡಿಯೋವನ್ನು ತೆರೆದಿದ್ದಾರೆ. ಈ ಸ್ಟೂಡಿಯೋಗೆ ಶ್ರಿ ಸಾಯಿ ಆಂಜನೇಯ ಎಂದು ಹೆಸರಿಡಲಾಗಿದೆ. ಈ ಸ್ಟೂಡಿಯೋವನ್ನು ರಕ್ಷ್ ದಂಪತಿ ಅನಾವರಣ ಮಾಡಿದ್ದಾರೆ. ಕನಸಿನ ಸ್ಟೂಡಿಯೋ ಮೂಲಕ ಉತ್ತಮ ಧಾರವಾಹಿಯನ್ನು ನಿರ್ಮಿಸಬೇಕು ಎಂಬುದು ಇವರ ಹಂಬಲ. ಇನ್ನು ಸ್ಟೂಡಿಯೋ ಓಪನಿಂಗ್ ಕಾರ್ಯಕ್ರಮಕ್ಕೆ ಬಂದ ಅಥಿತಿಗಳೊಂದಿಗೆ ದಂಪತಿಗಳಿಬ್ಬರು ಫೋಟೋಗೆ ಪೋಸ್ ನೀಡಿದ್ದಾರೆ.

ಹಲವು ಅತಿಥಿಗಳು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು

ಹಲವು ಅತಿಥಿಗಳು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು

ರಕ್ಷ್‌ರ ಸ್ಟುಡಿಯೊ ನೋಡಲು ಬಹಳ ಸುಂದರವಾಗಿದೆ. ಗೋಲ್ಡನ್ ಮರೂನ್ ಕಲರ್‌ನಲ್ಲಿ ಇಡೀ ಸ್ಟೂಡಿಯೋ ನಿರ್ಮಾಣವಾಗಿದೆ. ಗಟ್ಟಿಮೇಳ ಧಾರವಾಹಿಯಲ್ಲಿ ಹೀರೊ ಪಾತ್ರದಲ್ಲಿ ಮಿಂಚುತ್ತಿರುವ ರಕ್ಷ್, ಇದೀಗ ನಿರ್ಮಾಣದ ಕೆಲಸವನ್ನು ಜೊತೆ ಜೊತೆಗೆ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಇದು ರಕ್ಷ್ ಅವರಿಗೆ ಕೊಂಚ ಸವಾಲಿನ ಕೆಲಸವು ಹೌದು. ಸ್ಟೂಡಿಯೋದ ಉದ್ಘಾಟನಾ ಸಮಾರಂಭಕ್ಕೆ ಅನೇಕ ಅಥಿತಿಗಳು, ಕಲಾವಿದರು ಆಗಮಿಸಿದ್ದಾರೆ. ಇನ್ನೂ ಹೋಮ, ಹವನವನ್ನು ರಕ್ಷ್ ದಂಪತಿ ಇಬ್ಬರು ಒಟ್ಟಾಗಿ ನೆರವೇರಿಸಿದರು. ಸದ್ಯ ಮತ್ತೊಂದು ಪ್ರಯತ್ನಕ್ಕೆ ಮುನ್ನುಡಿ ಹಾಡುತ್ತಿರುವ ರಕ್ಷ್ ಅವರ ಪ್ರಯತ್ನಕ್ಕೆ ಶುಭವಾಗಲಿ ಎಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳು ಹಾರೈಸಿದ್ದಾರೆ.

ರಕ್ಷ್ ಬಣ್ಣದ ಲೋಕದ ಪಯಣದ ಝಲಕ್

ರಕ್ಷ್ ಬಣ್ಣದ ಲೋಕದ ಪಯಣದ ಝಲಕ್

ರಕ್ಷ್ ಅವರು ಮದುವೆಯಾಗಿ ಎರಡು ವರುಷಗಳು ಆಗುತ್ತಾ ಬಂತು. ರಕ್ಷ್ ಅವರ ಕೆಲಸಕ್ಕೆ ಹೆಂಡತಿಯ ಸಂಪೂರ್ಣ ಬೆಂಬಲ ಸಿಗುತ್ತಿದೆ. ಇನ್ನೂ ಧಾರವಾಹಿಗಳಲ್ಲಿ ಮಾತ್ರ ಅಲ್ಲ ಸಿನಿಮಾದಲ್ಲೂ ಮಿಂಚಲು ರಕ್ಷ್ ರೆಡಿಯಾಗುದ್ದಾರೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಸಹ. ಕೊರೊನಾ ಆರಂಭದ ಸಮಯದಲ್ಲಿ ರಕ್ಷ್ ನಟನೆಯ 'ನರಗುಂಡ ಬಂಡಾಯ' ಸಿನಿಮಾ ಬಿಡುಗಡೆ ಆಗಿತ್ತು, ಆದರೆ ಕೊರೊನಾ ಕಾರಣದಿಂದ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣಲಿಲ್ಲ. ಉತ್ತಮ ಕಥೆ ಇದ್ದರೆ ಸಿನಿಮಾಗದಲ್ಲೂ ನಟಿಸಲು ಸೈ ಎನ್ನುತ್ತಿದ್ದಾರೆ ರಕ್ಷ್.

ಸಿನಿಮಾದತ್ತ ಒಲವು ತೋರಿಸುತ್ತಿರುವ ನಟ

ಸಿನಿಮಾದತ್ತ ಒಲವು ತೋರಿಸುತ್ತಿರುವ ನಟ

ಕಿರುತೆರೆ ಮೂಲಕ ಫೇಮಸ್ಸಾದ ರಕ್ಷ್ ಅವರಿಗೆ ಈಗಾಗಲೇ ಬೆಳ್ಳಿತೆರೆಯಲ್ಲಿ ಕೂಡ ಅವಕಾಶಗಳು ಬಂದಿದ್ದು ಈಗಾಗಲೇ ಎರಡು ಮೂರು ಸಿನಿಮಾಗಳಿಗೆ ಸಹಿ ಕೂಡ ಹಾಕಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಗಟ್ಟಿಮೇಳ ಧಾರವಾಹಿಯ ಮೂಲಕ ಫೇಮಸ್ ಆಗಿರುವಂತಹ ನಟ ರಕ್ಷ್, ಪುಟ್ಟಗೌರಿ ಧಾರಾವಾಹಿಯ ಮೂಲಕ ರಕ್ಷ್ ಅವರು ಕಿರುತೆರೆಯ ಲೋಕಕ್ಕೆ ಕಾಲಿಟ್ಟು ಹಲವು ವರ್ಷಗಳ ಕಾಲ ಅದರಲ್ಲಿ ನಟನೆ ಮಾಡಿದ್ದಾರೆ. ಬಳಿಕ ಅಭಿನಯಿಸಿದ ಧಾರಾವಾಹಿ ಎಂದರೆ ಅದುವೇ ಗಟ್ಟಿಮೇಳ. ಈ ಧಾರವಾಹಿ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ದುಬಾರಿ ಸಂಭಾವನೆ ಪಡೆವ ಧಾರಾವಾಹಿ ನಟರಲ್ಲಿ ಒಬ್ಬರು ರಕ್ಷ್.

ದುಬಾರಿ ಕಾರು ಖರೀದಿಸಿದ ರಕ್ಷ್

ದುಬಾರಿ ಕಾರು ಖರೀದಿಸಿದ ರಕ್ಷ್

ಕಷ್ಟಪಟ್ಟು ಮೇಲೆ ಬಂದಿರುವ ರಕ್ಷ್ 2020ರ ಅಂತ್ಯದಲ್ಲಿ ದುಬಾರಿ ಆಡಿ ಕಾರು ಖರೀದಿಸಿದ್ದರು. ಬಿಎಂಟಿಸಿ ಕಾರಿನಲ್ಲಿ ಓಡಾಡುತ್ತಿದ್ದ ರಕ್ಷ್ ತಾವು ಕಾರು ಖರೀದಿಸಿದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕಿರುತೆರೆಯ ಮೂಲಕವೇ ಪ್ರಸಿದ್ಧಿ ಪಡೆದ ರಕ್ಷ್ ಸಿನಿಮಾಗಳಲ್ಲಿಯೂ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಕೆಲವು ಸಿನಿಮಾಗಳಲ್ಲಿ ರಕ್ಷ್ ಈಗಾಗಲೇ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ಕಿರುತೆರೆಯಂತೆ, ಹಿರಿತೆರೆ ರಕ್ಷ್‌ರ ಕೈ ಹಿಡಿದಿಲ್ಲ.

More from Filmibeat

English summary
Gattimela hero Raksh studio opening ceremony. And he is famous actor Kannada Tv industry. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X