ಈ ಫೋಟೊಗಳನ್ನು ನೋಡಿ ಜ್ಯೂನಿಯರ್ ಮಂಜುಳಾ ಎಂದ ನೆಟ್ಟಿಗರು; ಯಾರೀ ಪ್ರಿಯಾ ಆಚಾರ್?
'ಗಟ್ಟಿಮೇಳ' ಧಾರಾವಾಹಿಯ ಮೂಲಕ ಎಲ್ಲರ ಮನೆ ಮಾತಾಗಿರೋ ನಟಿ ಪ್ರಿಯಾ ಜೆ ಆಚಾರ್. ಮುದ್ದು ಮುದ್ದು ಮಾತುಗಳನ್ನು ಆಡುತ್ತಾ ಎಲ್ಲರ ಮನ ಗೆದ್ದಿದ್ದ ನಟಿ ಕಿರುತೆರೆಯಲ್ಲಿ ತಮ್ಮದೇ ಆದ ಅಭಿಮಾನಿಗಳ ಸಂಪಾಧಿಸಿದ್ದಾರೆ ಎಂದರೆ ತಪ್ಪಾಗಲಾರದು .ಅದ್ಭುತವಾದ ನಟನೆಯ ಮೂಲಕ ಎಲ್ಲರ ಮನೆ ಮಾತಾಗಿರುವ ಪ್ರಿಯಾ ಇದೀಗ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ.
ಕಾವೇರಿ ಅಭಿನಯ ನೋಡಿದ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ಹಾಗೆಯೇ ನಟಿಯ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ನಟಿ. ಹೀಗಾಗಿ ಆಗಾಗ ಫೋಟೋ ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಮೆಚ್ಚುಗೆ ಗಳಿಸುತ್ತಲೇ ಇರುತ್ತಾರೆ. 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯ ಕನ್ನಡ ಮೀಡಿಯಂನಲ್ಲಿ ಕಲಿತ ಮಲೆನಾಡಿನ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರಿಯಾ ಜೆ ಆಚಾರ್ ಅವರ ಟ್ರೆಡಿಷನಲ್ ಲುಕ್ ಕಿರುತೆರೆ ವೀಕ್ಷಕರನ್ನು ಸೆಳೆದಿದೆ.

ಪ್ರಿಯಾ ನಟನೆಗೆ ಅಭಿಮಾನಿಗಳು ಮಾತ್ರ ಕ್ಲೀನ್ ಬೋಲ್ಡ್ ಆಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾ ಆಚಾರ್ ಅವರ ಫೋಟೋವೊಂದು ಹರಿದಾಡುತ್ತಿದ್ದು, ಅಭಿಮಾನಿಗಳು ಅದನ್ನು ನೋಡಿ ಬಹಳ ಖುಷಿ ಪಟ್ಟಿದ್ದಾರೆ. ಹಾಗೆಯೇ ಆ ಫೋಟೋಗೆ ಸಾಕಷ್ಟು ಲೈಕ್ ಕಾಮೆಂಟ್‌ಗಳು ಹರಿದು ಬರುತ್ತಿದ್ದು, ನೋಡುಗರಿಗೆ ಹಿರಿಯ ನಟಿ ಮಂಜುಳಾ ಅವರನ್ನೇ ನೋಡಿದ ಹಾಗೆ ಭಾಸವಾಗುತ್ತದೆ. ಅಷ್ಟಕ್ಕೂ ಪ್ರಿಯಾ ಅವರ ಫೋಟೋ ಅಷ್ಟು ಫೇಮಸ್ ಆಗಿದ್ದು ಯಾಕೆ ಗೊತ್ತಾ?
'ಗಟ್ಟಿಮೇಳ' ಧಾರಾವಾಹಿಯ ನಟಿ
ಪ್ರಿಯಾ ಇತ್ತೀಚೆಗಿನ ದಿನಗಳಲ್ಲಿ ಇಳಕ್ಕಲ್ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳಿಗೆ ಇಷ್ಟ ಆಗಿದೆ. ಕಂದು ಬಣ್ಣದ ಸೀರೆಯುಟ್ಟು, ಕೈಗಳಿಗೆ ಕಪ್ಪು ಗಾಜಿನ ಬಳೆ ಹಾಕಿ, ಕುತ್ತಿಗೆಯಲ್ಲಿ ಕಪ್ಪು ದಾರೆ ತೊಟ್ಟು, ಉದ್ದನೆಯ ಜಡೆ ಹಾಗೂ ಕಪ್ಪು ಬೊಟ್ಟನ್ನೂ ಹಾಕಿದ್ದಾರೆ. ಟ್ರೆಡಿಷನಲ್ ಲುಕ್‌ನಲ್ಲಿ ತೆಗಿಸಿಕೊಂಡಿರುವ ಈ ಫೋಟೊ ದಿವಂಗತ ನಟಿ ಮಂಜುಳಾರನ್ನು ನೆನಪಿಸಿದೆ.

ಫೋಟೋಗೆ ಅಭಿಮಾನಿಗಳ ಕಮೆಂಟ್
ಹಾಗೆಯೇ ಪ್ರಿಯಾ ಜೆ ಆಚಾರ್ ಫೋಟೊಗಳನ್ನು ನೋಡಿ ಅವರನ್ನು ಜ್ಯೂನಿಯರ್ ಮಂಜುಳಾ ಎಂದೇ ಕರೆಯುತ್ತಿದ್ದಾರೆ. ಸೀರೆಯುಟ್ಟು ಕ್ಯಾಮರಾಗೆ ಪೋಸ್ ಕೊಟ್ಟ ಫೋಟೋಗಳು ಅಷ್ಟು ಅದ್ಭುತವಾಗಿ ಮೂಡಿ ಬಂದಿದೆ. ಬ್ಯೂಟಿ ಬೆಂಕಿ ಐತಿ ಹಾಡಿಗೆ ಕ್ಯೂಟ್ ಆಗಿ ಅಭಿನಯಿಸಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಪ್ರಿಯಾ ಧಾರಾವಾಹಿಯಲ್ಲಿ ಮಾತ್ರವಲ್ಲದೆ ಸಿನಿಮಾದಲ್ಲಿ ಕೂಡ ನಟನೆಯನ್ನು ಮಾಡಿ ಅಭಿಮಾನಿಗಳ ಮನಸ್ಸಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ. ಪತಿ ಸಿದ್ಧು ಮೂಲಿಮನಿ ಜೊತೆಗೆ 'ಧಮಾಕ' ಸಿನಿಮಾದಲ್ಲಿ ನಟಿಸಿದ್ದಾರೆ.
ಪ್ರಿಯಾಗೆ ಸಾಥ್ ಪತಿ ಸಿದ್ದು ಮೂಲಿಮನಿ ಸಾಥ್
ಇದಕ್ಕೂ ಮುನ್ನ ಇಬ್ಬರು ಜೊತೆಯಾಗಿ ಡ್ಯಾನ್ಸ್ ರಿಯಾಲಿಟಿ ಶೋದಲ್ಲೂ ಭಾಗವಾಹಿಸಿ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರ ಆಗಿದ್ದರು. ಹಾಗೆಯೇ ಇತ್ತೀಚೆಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಕೂಡ ಆಗಿದ್ದಾರೆ.


Click it and Unblock the Notifications











