Gattimela: ಅಗ್ನಿಯನ್ನು ಸಾಯಿಸಿ ಸೂರ್ಯನಾರಾಯಣನ ಕಿಡ್ನ್ಯಾಪ್ ಮಾಡೇ ಬಿಟ್ಲು ಸುಹಾಸಿನಿ..!?

By Shruthi Harish Gowda

'ಗಟ್ಟಿಮೇಳ' ಧಾರಾವಾಹಿ ಈಗ ಮತ್ತೊಂದು ತಿರುವು ಪಡೆದುಕೊಂಡು ಸಾಗುತ್ತಿದೆ. ಇನ್ನೇನು ಅಮೂಲ್ಯ ಕೈಗೆ ಸೂರ್ಯನಾರಾಯಣ್ ಸಿಕ್ಕೆಬಿಟ್ಟ ಎಂದುಕೊಳ್ಳುವ ವೇಳೆಗೆ ಈಗ ಮತ್ತೊಮ್ಮೆ ಸೂರ್ಯನಾರಾಯಣ್, ಕಿಡ್ನ್ಯಾಪ್ ಆಗಿದ್ದಾನೆ. ಅಮೂಲ್ಯ ಹಾಗೂ ಧ್ರುವ ಎಲ್ಲರೂ ಸಹ ಸೂರ್ಯನಾರಾಯಣ್ ಇರುವ ಮನೆಯನ್ನ ಹುಡುಕಿಕೊಂಡು ಹೊರಟಿದ್ದರು. ಅಷ್ಟರಲ್ಲಿ ಸುಹಾಸನಿಗೆ ವಿಷಯ ತಿಳಿದಿದ್ದು ತಾನೇ ಅಗ್ನಿ ಮನೆಗೆ ಮೊದಲು ಹೋಗಿದ್ದಾಳೆ.

ಅಗ್ನಿ ಮನೆಯಲ್ಲಿ ಮಾತುಕತೆ ನಡೆಯುವ ವೇಳೆ ಏನೋ ಗೊಂದಲವಾಗಿದ್ದು ಅಗ್ನಿಯನ್ನು ಸುಹಾಸಿನಿ ಸಾಯಿಸಿಬಿಟ್ಟಿದ್ದಾಳೆ. ಕೂಡಲೇ ಮನೆಯಿಂದ ಸೂರ್ಯನಾರಾಯಣನನ್ನು ಕರೆದುಕೊಂಡು ಎಸ್ಕೇಪ್ ಆಗಿದ್ದಾಳೆ. ಮನೆಯಲ್ಲಿ ಸೂರ್ಯನಾರಾಯಣ್ ಬಂದೆ ಬರುತ್ತಾರೆ ಎಂಬ ಸಂತಸದಲ್ಲಿ ವೈದೇಹಿ ಹಾಗೂ ಅಜ್ಜಿ ಇದ್ದಾರೆ.

Gattimela Kannada serial November 2nd episode update

ನನ್ನ ಸೂರಿ ಬಂದ ಮೇಲೆ ನನ್ನನ್ನ ಕಂಡು ಹಿಡಿಯುತ್ತಾರೆ, ಆಗ ವೇದಾಂತ್ ತಾಯಿ ಎಂದು ಒಪ್ಪಿಕೊಳ್ಳುತ್ತಾನೆ ಎಂದು ವೈದೇಹಿ ಖುಷಿ ವ್ಯಕ್ತಪಡಿಸಿದ್ದಾಳೆ. ಆದರೆ ಅವಳ ಖುಷಿಗೆ ತಣ್ಣೀರು ಎರಚಲು ಸುಹಾಸಿನಿ ಇದ್ದಾಳೆ ಎಂಬುದನ್ನೇ ಮರೆತು ಬಿಟ್ಟಿದ್ದಾಳೆ. ಅಜ್ಜಿಗೂ ಸಹ ಮಗಳ ಖುಷಿ ಕಂಡು ಸಂತೋಷವಾಗಿದೆ. ಇಷ್ಟು ದಿನ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದ ಮಗಳಿಗೆ ಒಳ್ಳೆಯ ದಿನಗಳು ಬಂತು ಎಂದು ಸಂತಸಗೊಂಡಿದ್ದಾಳೆ.

ಸೂರ್ಯನಾರಾಯಣ್ ಇರುವ ಜಾಗ ಅಮೂಲ್ಯಗೆ ಗೊತ್ತಾಗಿದೆ. ಕೂಡಲೇ ಅವಳು ವೇದಾಂತ್‌ಗೆ ವಿಷಯ ತಿಳಿಸಿದ್ದಾಳೆ. ಸಾರ್ಥಕ್, ಧ್ರುವ, ಅಮೂಲ್ಯ ಮೂವರು ಹೊರಟು ನಿಂತಿದ್ದಾರೆ. ಇನ್ನೇನು ಅಗ್ನಿ ಮನೆ ತಲುಪಿದ್ದಾರೆ. ಆದರೆ ಅಮೂಲ್ಯ ನಾವ್ಯಾರು ಮನೆಯ ಒಳಗೆ ಈಗಲೇ ಹೋಗೋದು ಬೇಡ ವೇದ ಬರಲಿ ಎಂದು ಹೇಳಿದ್ದಾಳೆ. ಧ್ರುವನಿಗೆ ಕೋಪ ಜಾಸ್ತಿ ಅಲ್ಲಿ ಹೋಗಿ ಅಗ್ನಿಗೆ ಏನಾದರೂ ಮಾಡಿಬಿಟ್ಟರೆ ಅನ್ನೋದು ಅವಳ ಭಯ. ಕೊನೆಗೆ ಧ್ರುವನಿಂದ ಅಗ್ನಿಗೆ ಏನು ಮಾಡಬಾರದು ಎಂಬ ಮಾತನ್ನು ತೆಗೆದುಕೊಂಡು ಮನೆಯೊಳಗ ಹೋದ ಮೂವರಿಗೂ ಸಹ ಶಾಕ್ ಕಾದಿದೆ.

ಭಾವನನ್ನೇ ಕಿಡ್ನ್ಯಾಪ್ ಮಾಡಿದ ಸುಹಾಸಿನಿ

ತನ್ನ ಮನೆಯವರು ಬಂದು ಸೂರ್ಯನಾರಾಯಣರನ್ನು ಹುಡುಕಿ ಮನೆಗೆ ಕರೆದುಕೊಂಡು ಬರುತ್ತಾರೆ ಎಂದು ಸುಹಾಸಿನಿ ಮೊದ್ಲೆ ಹೋಗಿ ಸೂರ್ಯನಾರಾಯಣರನ್ನು ಕಿಡ್ನ್ಯಾಪ್ ಮಾಡಿಕೊಂಡು ಬಂದಿದ್ದಾಳೆ. ಆದರೆ ಸೂರ್ಯನಾರಾಯಣ್, ಸುಹಾಸಿನಿ ನನ್ನನ್ನ ಮನೆಗೆ ಕರೆದುಕೊಂಡು ಹೋಗುತ್ತಿದ್ದಾಳೆ ಎಂದುಕೊಂಡಿದ್ದಾನೆ. ಇದು ನನ್ನ ಮಗ ಕಟ್ಟಿದ ಮನೆಯೇ ಎಂದು ಆಶ್ಚರ್ಯ ಪಟ್ಟಿದ್ದಾನೆ. ಆದರೆ ಕೊನೆಗೂ ಸುಹಾಸಿನಿ ತನ್ನ ಕೆಟ್ಟ ಬುದ್ಧಿಯನ್ನ ತೋರಿಸಿದ್ದಾಳೆ.

ಮನೆಯ ಬೇಸ್‌ಮೆಂಟ್‌ನಲ್ಲಿ ಇಟ್ಟು ಕಿರುಕುಳ

ರೌಡಿಗಳಿಗೆ ಅವರನ್ನು ಎಳೆದುಕೊಂಡು ಮನೆಯ ಬೇಸ್ಮೆಂಟ್‌ಗೆ ಬನ್ನಿ ಎಂದು ಸುಹಾನಿಸಿ ಹೇಳಿದ್ದಾಳೆ. ಇದನ್ನು ಕೇಳಿದ ಸೂರ್ಯನಾರಾಯಣರಿಗೆ ಶಾಕ್ ಆಗಿದೆ. ನೀನು ನನ್ನನ್ನ ನನ್ನ ಮನೆಯವರ ಬಳಿ ಸೇರಿಸೋದಿಲ್ವ? ಎಂದು ಕೇಳಿದ್ದಾನೆ. ಅಯ್ಯೋ ಭಾವ ನಾನ್ಯಾಕೆ ನಿಮ್ಮನ್ನ ಅಲ್ಲಿಗೆ ಸೇರಿಸಲಿ ಇನ್ನೂ ಏನಿದ್ದರೂ ನಿಮ್ಮ ವಾಸ ಇಲ್ಲಿಯೇ ಎಂದು ಜೋರಾಗಿ ನಕ್ಕಿದ್ದಾಳೆ. ಇದಕ್ಕೆ ಸೂರ್ಯನಾರಾಯಣ್ ನಾನು ನಿನಗೆ ಏನು ಅನ್ಯಾಯ ಮಾಡಿದ್ದೆ? ಎಂದು ಕೇಳಿದ್ದಾರೆ.

ಅಗ್ನಿ ಕೊಲೆ..ಮನೆಯವರಿಗೆ ಶಾಕ್

ಎಲ್ಲರೂ ಸೂರ್ಯನಾರಾಯಣರನ್ನು ಹುಡುಕಿಕೊಂಡು ಅಗ್ನಿಯ ಮನೆಗೆ ಬಂದಿದ್ದಾರೆ. ಈ ವೇಳೆ ಅಮೂಲ್ಯ ಮೇಲೆ ಹೋಗಿದ್ದು ಅಲ್ಲಿ ಅಗ್ನಿ ಕೊಲೆಯಾಗಿರುವುದು ಕಂಡು ಬಂದಿದೆ. ಅಮೂಲ್ಯ ಜೋರಾಗಿ ಕಿರುಚಿಕೊಂಡಿದ್ದಾಳೆ. ಧ್ರುವ ಹಾಗೂ ಸಾರ್ಥಕ್, ಅಮೂಲ್ಯ ಇರುವ ಜಾಗಕ್ಕೆ ಬಂದಿದ್ದು ಅಗ್ನಿ ಕೊಲೆಯಾಗಿರುವುದನ್ನ ನೋಡಿದ್ದಾರೆ. ನಾವು ಬರುವ ಮೊದಲೇ ಯಾರೋ ಇಲ್ಲಿಗೆ ಬಂದು ಅಗ್ನಿಯನ್ನು ಕೊಲೆ ಮಾಡಿದ್ದಾರೆ, ನಂತರ ನನ್ನ ಅಪ್ಪನನ್ನ ಕರೆದುಕೊಂಡು ಹೋಗಿದ್ದಾರೆ ಎಂದು ಧ್ರುವ ಅನುಮಾನ ವ್ಯಕ್ತಪಡಿಸಿದ್ದಾನೆ.

ತಂದೆಯನ್ನು ಹುಡುಕಾಡುತ್ತಿರುವ ಧ್ರುವ

ಅಮೂಲ್ಯ ನಾವು ಇಲ್ಲೇ ನಿಂತುಕೊಂಡು ಯೋಚನೆ ಮಾಡುವುದು ಬೇಡ. ನಾವು ಹೋಗಿ ಕಿಡ್ನ್ಯಾಪ್ ಮಾಡಿದವರನ್ನು ಕಂಡುಹಿಡಿದು ಮಾವನವರನ್ನ ಮನೆಗೆ ಕರೆದುಕೊಂಡು ಬರೋಣ ಎಂದು ಎಲ್ಲರನ್ನೂ ಅಲ್ಲಿಂದ ಕರೆದುಕೊಂಡು ಹೋಗಿದ್ದಾಳೆ. ಮನೆಯಲ್ಲಿ ವೈದೇಹಿ ತನ್ನ ಗಂಡನ ಬರುವಿಕೆಗಾಗಿ ಕಾಯುತ್ತಾ ಕುಳಿತಿದ್ದರೆ ಮನೆಯ ಕೆಳಗಡೆ ಸುಹಾಸಿನಿ, ಸೂರ್ಯನಾರಾಯಣರನ್ನು ಬಚ್ಚಿಟ್ಟಿದ್ದಾಳೆ.

More from Filmibeat

English summary
Gattimela Kannada serial Today Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X