Gattimela: ಕೊನೆಗೂ ಅಮೂಲ್ಯಗೆ ಸಿಕ್ಕಿಬಿಡ್ತು ಸೂರ್ಯನಾರಾಯಣರ ಸುಳಿವು: ಸುಹಾಸಿನಿಗೆ ಶುರುವಾಯ್ತು ಸಂಕಷ್ಟ
ವೇದಾಂತ್ ಹುಡುಕುತ್ತಿದ್ದ ಅವರ ತಂದೆಯ ಸುಳಿವು ಅಮೂಲ್ಯಗೆ ಸಿಕ್ಕೇ ಬಿಟ್ಟಿದೆ. ಅಮೂಲ್ಯ ತನ್ನ ತಂದೆ ಹೇಳಿದ ಸಿಹಿ ಸುದ್ದಿ ಕೇಳಿ ಸಂಭ್ರಮ ಪಟ್ಟಿದ್ದಾಳೆ. ಇದರ ಜೊತೆಗೆ ಆರತಿ ಸಹ ತಮ್ಮ ಕಷ್ಟ ಕೊನೆಯಾಗುತ್ತಿದೆ ಎಂದು ಖುಷಿ ಪಟ್ಟಿದ್ದಾಳೆ. ಆದರೆ ವೇದಾಂತ್ ಮಾತ್ರ ಮನೆಯಿಂದ ಹೊರಗೆ ಉಳಿದಿದ್ದಾನೆ.
ವೈದೇಹಿ, ಸುಹಾಸಿನಿ ಬಳಿ ಮಾತನಾಡುತ್ತಾ ಇದ್ದಾಳೆ. ಈಗಾಗಲೇ ವೈದೇಹಿ, ಸುಹಾಸಿನಿಯ ಲಗೇಜ್ ಅನ್ನು ಪ್ಯಾಕ್ ಮಾಡಿದ್ದು ನೀನು ಈ ಮನೆಯಿಂದ ಹೊರಗೆ ಹೋಗಬೇಕು ಎಂದು ಹೇಳಿದ್ದಾಳೆ. ಆದ್ಯಾ ತನ್ನ ತಂದೆ ಯಾವಾಗ ಮನೆಗೆ ಬರುತ್ತಾರೆ? ಎಂದು ಕಾಯುತ್ತಿದ್ದಾಳೆ. ವೇದಾಂತ್ ತನ್ನ ತಂದೆಯ ಹುಡುಕಾಟದಲ್ಲಿ ಇದ್ದು ಮನೆಯಿಂದ ಹೊರಗಡೆ ಇದ್ದಾನೆ. ಮನೆಯ ಜವಾಬ್ದಾರಿ ಅಮೂಲ್ಯ ತೆಗೆದುಕೊಂಡಿದ್ದು ಆರತಿ ಹಾಗೂ ಆಕೆಯ ಮಗುವನ್ನು ನೋಡಿಕೊಳ್ಳುತ್ತಾ ಇದ್ದಾಳೆ.

ಇದೆಲ್ಲದರ ನಡುವೆ ಸುಹಾಸನಿಗೆ ಸೂರ್ಯನಾರಾಯಣರದ್ದೇ ಚಿಂತೆಯಾಗಿದೆ. ಸೂರ್ಯನಾರಾಯಣ ಏನಾದರೂ ಮನೆಗೆ ಬಂದರೆ ನನಗೆ ಉಳಿಗಾಲವಿಲ್ಲ ಎಂಬುವುದು ಅವಳಿಗೆ ಮನವರಿಕೆಯಾಗಿದೆ. ಏನಾದರೂ ಮಾಡಬೇಕು ಎಂದು ಪ್ಲಾನ್ ಮಾಡುತ್ತಾ ಇದ್ದಾಳೆ. ಅಗ್ನಿಯು ಸಹ ಸೂರ್ಯನಾರಾಯಣರ ಹುಡುಕಾಟದಲ್ಲಿ ಇದ್ದಾನೆ. ವೇದಾಂತ್ ಹೇಗಾದರೂ ಮಾಡಿ ಬುದ್ಧಿಯನ್ನ ಕಲಿಸಬೇಕು ಅವರನ್ನೆಲ್ಲ ನಿರ್ನಾಮ ಮಾಡಬೇಕು ಎಂದು ಅಗ್ನಿ ಹೊಂಚು ಹಾಕುತ್ತಿದ್ದಾನೆ.
ಕೊನೆಗೂ ತಿಳಿಯಿತು ಸೂರ್ಯನಾರಾಯಣರ ಸುಳಿವು
ಅಮೂಲ್ಯ ಗೆ ಕರೆ ಮಾಡಿ ತಿಳಿಸಿದ ಮಂಜುನಾಥ್
ಎಂದಿನಂತೆ ಪೇಪರ್ ಓದುತ್ತಾ ಕುಳಿತಿದ್ದ ಮಂಜುನಾಥ್‌ಗೆಶಾಕ್ ಕಾದಿದೆ. ಸೂರ್ಯನಾರಾಯಣರೇ ವೇದಾಂತ್ ತಂದೆ ಎಂಬುದು ಗೊತ್ತಾಗಿದೆ. ಪರಿಮಳ ಬಳಿ ಹೋದವರೇ ಇವರೇ ನೋಡು ವೇದಾಂತ್ ತಂದೆ ನಮ್ಮ ಮನೆಯಲ್ಲಿ ಇದ್ದಾರೆ ಎಂದು ಹೇಳಿದ್ದಾನೆ. ಇದೇ ವಿಚಾರವನ್ನ ಮಗಳಿಗೆ ಹೇಳಬೇಕು ಎಂದುಕೊಂಡು ಅಮೂಲ್ಯಗೆ ಕರೆ ಮಾಡಿದ್ದಾನೆ. ಅಮೂಲ್ಯಗೆ ಕರೆ ಮಾಡಿದವರೇ ವೇದಾಂತ್ ಎಲ್ಲಿ ಎಂದು ಕೇಳಿದ್ದಾನೆ.
ಅಮೂಲ್ಯ ಯಾಕೆ ಅಪ್ಪ ಏನಾದರೂ ತೊಂದರೆ ಆಗಿದ್ಯಾ? ಎಂದು ಕೇಳಿದ್ದಕ್ಕೆ ನಮ್ಮ ಮನೆಯಲ್ಲಿ ವೇದಾಂತ್ ಹುಡುಕುತ್ತಿರುವ ಅವರ ತಂದೆ ಸೂರ್ಯನಾರಾಯಣ್ ಇದ್ದಾರೆ ಎಂದು ತಿಳಿಸಿದ್ದಾನೆ. ತಂದೆ ಹೇಳಿದ ಮಾತು ಕೇಳಿ ಅಮೂಲ್ಯಗೆ ಖುಷಿಯಾಗಿದೆ. ಹೇಗೋ ನಮಗೆ ಬಂದಿದ್ದ ದೊಡ್ಡ ಗಂಡಾಂತರ ಪಾರಾಗಿದೆ ಎಂದು ಅಮೂಲ್ಯ ಅಂದುಕೊಂಡಿದ್ದಾಳೆ. ಇನ್ನೂ ಆರತಿ ಸಹ ಜೊತೆಯಲ್ಲಿ ಇದ್ದು ತುಂಬಾ ಖುಷಿಪಟ್ಟಿದ್ದಾಳೆ.

ಸುಹಾಸಿನಿ ಲಗೇಜ್ ಪ್ಯಾಕ್ ಮಾಡಿದ ವೈದೇಹಿ
ಎಷ್ಟು ದಿನ ಸುಹಾಸಿನಿ, ವೇದಾಂತ್‌ಗೆ ಮೋಸ ಮಾಡಿಕೊಂಡು ಬಂದಿದ್ದಳು. ಆದರೆ ಅದು ವೇದಾಂತ್‌ಗೆ ಗೊತ್ತಿಲ್ಲ. ಈಗ ವೈದೇಹಿ ತುಂಬಾ ಸ್ಟ್ರಾಂಗ್ ಆಗಿದ್ದು ಸುಹಾಸಿನಿಗೆ ಬುದ್ಧಿ ಕಲಿಸಲು ನೋಡುತ್ತಾ ಇದ್ದಾಳೆ. ಸುಹಾಸಿನಿಯ ಲಗೇಜ್ ಪ್ಯಾಕ್ ಮಾಡಿದ್ದು ಕೆಲವೇ ದಿನಗಳಲ್ಲಿ ಸತ್ಯದರ್ಶನವಾಗುತ್ತದೆ. ಆಗ ನಿನ್ನನ್ನು ವೇದಾಂತ್ ಸುಮ್ಮನೆ ಬಿಡೋದಿಲ್ಲ ಮನೆಯಿಂದ ಹೊರಗೆ ಕಳುಹಿಸುತ್ತಾನೆ ಎಂದು ಹೇಳಿದ್ದಾಳೆ. ಇದೇ ವೇಳೆ ವೈದೇಹಿಯ ಮೇಲೆ ಸುಹಾಸಿನಿ ಕೈಮಾಡಲು ಹೋಗಿದ್ದಾಳೆ. ಇನ್ನು ವೈದೇಹಿ, ಸುಹಾಸಿನಿಗೆ ಸ್ಟ್ರಾಂಗ್ ಆಗಿ ಎಚ್ಚರಿಕೆ ನೀಡಿದ್ದಾಳೆ. ನಿನ್ನ ಆಟ ನನ್ನ ಮುಂದೆ ಇನ್ನೂ ನಡೆಯುವುದಿಲ್ಲ ಎಂದು ಹೇಳಿದ್ದಾಳೆ.
ನನ್ನ ಗಂಡ ಸೂರ್ಯನಾರಾಯಣ ಬದುಕಿದ್ದಾರೆ ಇನ್ನು ಕೆಲವೇ ದಿನಗಳಲ್ಲಿ ಅವರು ಮನೆಗೆ ಬರುತ್ತಾರೆ ನನ್ನನ್ನು ಸಹ ಗುರುತು ಹಿಡಿಯುತ್ತಾರೆ. ಆಗ ಅಲ್ಲಿಗೆ ನಿನ್ನ ಆಟವಿಲ್ಲ ಅಂತ್ಯವಾಗುತ್ತದೆ. ಸತ್ಯ ವೇದಾಂತ್ ಮುಂದೆ ತಿಳಿಯಲಿದ್ದು 25 ವರ್ಷ ಮಾಡಿರುವ ಮೋಸಕ್ಕೆ ಸರಿಯಾದ ಪಾಠ ವೇದಾಂತ್ ಕಲಿಸುತ್ತಾನೆ. ನೀನು ಈ ಮನೆ ಬಿಟ್ಟು ಹೋಗಬೇಕಾಗುತ್ತದೆ ಅದಕ್ಕಾಗಿ ನಾನೇ ಲಗೇಜ್ ಪ್ಯಾಕ್ ಮಾಡಿದ್ದೇನೆ ಎಂದು ಹೇಳಿದ್ದಾಳೆ. ಸುಹಾಸಿನಿಗೆ ವೈದೇಹಿಯ ಧೈರ್ಯ ನೋಡಿ ಭಯವಾಗುತ್ತಿದೆ.


Click it and Unblock the Notifications











