Gattimela: ಕುಟುಂಬದ ಹಿತಕ್ಕಾಗಿ ಪ್ರಾಣ ಕೊಡಲು ಸಿದ್ಧನಾದ ಸೂರ್ಯನಾರಾಯಣ ಮಾಡಿದ್ದೇನು..?!
ಮನೆಯಲ್ಲಿ ನವರಾತ್ರಿ ಮಾಡಲು ಯಾರು ಉತ್ಸಾಹವನ್ನು ತೋರುತ್ತಿಲ್ಲ. ವಿಕ್ರಾಂತ್ ಸತ್ತು ಹೋಗಿದ್ದಾನೆ, ಯಾವುದೇ ಸಂಭ್ರಮ ಬೇಡ ಎಂದು ಸುಮ್ಮನೆ ಇದ್ದಾರೆ. ಅಲ್ಲಿಗೆ ಬಂದ ವೈದೇಹಿ ಯಾಕೆ ಮನೆಯಲ್ಲಿ ಈ ರೀತಿ ಇದ್ದೀರಾ? ನವರಾತ್ರಿ ಶುರುವಾಗಿದೆ ಬನ್ನಿ ಬೊಂಬೆಗಳನ್ನ ಕೂರಿಸೋಣ ಎಂದು ಹೇಳಿದ್ದಾಳೆ.
ಆರತಿಗೆ ಹಬ್ಬ ಮಾಡುವುದು ಇಷ್ಟವಿಲ್ಲ. ವಿಕ್ರಂ ಸತ್ತು ಹೋಗಿದ್ದಾರೆ ಯಾವ ಸಂಭ್ರಮವು ಬೇಡ ಎಂದು ಬೇಸರ ಮಾಡಿಕೊಂಡಿದ್ದಾಳೆ. ಇದೇ ವೇಳೆ ವೈದೇಹಿ ಎಲ್ಲರ ಮನಸ್ಸನ್ನು ತಿಳಿಗೊಳಿಸಿದ್ದಾಳೆ. ವಿಕ್ಕಿ ಸತ್ತಿಲ್ಲ ಯಾವುದೋ ಒಂದು ಮೂಲೆಯಲ್ಲಿ ಬದುಕಿರುವ ಭರವಸೆ ನನಗಿದೆ. ನೀವು ಸಹ ನಿಮ್ಮ ಮನಸ್ಸನ್ನು ಕೇಳಿಕೊಳ್ಳಿ ಎಂದು ಹೇಳಿದ್ದಾಳೆ. ವೇದಾಂತ್ ಅಪ್ಪ ಸೂರ್ಯನಾರಾಯಣ್ ಸತ್ತು ಹೋಗಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದೆವು. ಆದರೆ ಅವರು ಬದುಕಿ ಬಂದಿಲ್ವಾ? ಅದೇ ರೀತಿ ವಿಕ್ಕಿ ಸಹ ಬದುಕಿ ನಮ್ಮ ಮುಂದೆ ಬರುತ್ತಾರೆ ಎಂದು ಭರವಸೆ ಮಾತುಗಳನ್ನ ವೈದೇಹಿ ಆಡಿದ್ದಾಳೆ.

ಎಲ್ಲರೂ ಸಹ ವೈದೇಹಿ ಮಾತಿಗೆ ಸಮ್ಮತಿ ಸೂಚಿಸಿದ್ದಾರೆ. ಹಬ್ಬ ಮಾಡಲು ಮುಂದಾಗಿದ್ದಾರೆ. ಇನ್ನು ವಿಕ್ಕಿ ಬದುಕಿ ಬಂದರೆ ಸಾಕು ಎಂದು ಅಮ್ಮು, ಆದಿತಿ ಎಲ್ಲರೂ ಸಹ ಅಂದುಕೊಂಡಿದ್ದಾರೆ. ಮನೆಯಲ್ಲಿ ನವರಾತ್ರಿ ಹಬ್ಬದ ಸಂಭ್ರಮವನ್ನು ವೈದೇಹಿ ಮಾತುಗಳು ದುಪ್ಪಟ್ಟು ಮಾಡಿವೆ. ಮನೆಯಲ್ಲಿ ಅಮೂಲ್ಯ ಹಾಗೂ ಆದಿತಿ ರಂಗೋಲಿ ಹಾಕಿ ಬಾಗಿಲಿಗೆ ತೋರಣ ಕಟ್ಟಿದ್ದಾರೆ. ಒಳಗೆ ವೈದೇಹಿ ಹಾಗೂ ಆರತಿ ಬೊಂಬೆಗಳನ್ನು ಕೂರಿಸುವುದರಲ್ಲಿ ನಿರತರಾಗಿದ್ದಾರೆ. ಸುಹಾಸಿನಿಗೆ ಮನೆಯಲ್ಲಿರುವ ಸಂಭ್ರಮ ಸಹಿಸಲು ಆಗುತ್ತಿಲ್ಲ. ಇದಕ್ಕಾಗಿ ವಿಕ್ರಾಂತ್ ಸಾವನ್ನು ಬಳಸಿಕೊಳ್ಳಲು ನೋಡಿದ್ದಾಳೆ. ಈ ವೇಳೆ ಅಮೂಲ್ಯ ಅತ್ತೆಗೆ ಟಕ್ಕರ್‌ನ್ನು ಕೊಟ್ಟಿದ್ದಾಳೆ. ಅತ್ತೆ ವಿಕ್ಕಿ ಬಾವ ಸತ್ತಿಲ್ಲ ಬದುಕಿದ್ದಾರೆ ಎಂದು ಹೇಳಿ ಸುಹಾಸಿನಿಗೆ ಶಾಕ್ ಕೊಟ್ಟಿದ್ದಾಳೆ.
ಸುಹಾಸಿನಿಗೆ ಟಕ್ಕರ್ ಕೊಟ್ಟ ಧ್ರುವ
ಧ್ರುವ ಹಾಗೂ ವೈದೇಹಿ ಇಬ್ಬರೂ ಸಹ ಸುಹಾಸಿನಿಯ ಮೋಸದ ಬಗ್ಗೆ ಮಾತನಾಡುತ್ತಿದ್ದಾರೆ. ನನಗೆ ಬರುತ್ತಿರುವ ಕೋಪದಲ್ಲಿ ಈಗಲೇ ಸುಹಾಸಿನಿಗೆ ಒಂದು ಗತಿ ಕಾಣಿಸಬೇಕು ಎಂದು ಅನಿಸುತ್ತಿದೆ ಎಂದು ಧ್ರುವ ಹೇಳಿದ್ದಾನೆ. ಅವಳು ನಮಗೆ ಮಾಡಿದ ಮೋಸ ಒಂದ ಎರಡಾ? ನಾವು ಸಣ್ಣ ವಯಸ್ಸಿನಲ್ಲಿದ್ದಾಗ ನಿನಗೆ ತೊಂದರೆ ಕೊಟ್ಟಳು. ನಾವು ದೊಡ್ಡವರಾದ ಮೇಲೆ ನಮಗೆಲ್ಲಾ ಯಾವ ರೀತಿ ತೊಂದರೆ ಕೊಟ್ಟಿದ್ದಾಳೆ ಎನ್ನುವುದನ್ನು ನೀನೇ ನೋಡುತ್ತಿದ್ದೀಯ ಎಂದು ವೈದೇಹಿ ಬಳಿ ಧ್ರುವ ಹೇಳಿದ್ದಾನೆ.

ಕೋಪದಿಂದ ಕುದಿಯುತ್ತಿರುವ ಸುಹಾಸಿನಿ
ರೂಮಿಗೆ ಬಂದ ಸುಹಾಸಿನಿ ನೀವು ಯಾರ ಬಗ್ಗೆ ಮಾತನಾಡುತ್ತಿದ್ದೀರಾ? ಎಂದು ಕೇಳಿದ್ದಾಳೆ. ಇದಕ್ಕೆ ಧ್ರುವ, ಸುಹಾಸಿನಿ ಬಗ್ಗೆ ಎಂದು ಹೇಳಿದ್ದಾನೆ.ಇದೇ ವೇಳೆ ಜೋರು ದನಿಯಲ್ಲಿ ನನ್ನ ಹೆಸರನ್ನೇ ಹಿಡಿದು ಕೂಗುತ್ತೀಯಾ? ಎಂದು ಹೇಳಿದಾಗ ಮದರ್ ಇಂಡಿಯಾ ಎಂದು ಹೇಳಿ ಸಮಾಧಾನ ಮಾಡಿದ್ದಾನೆ. ವೈದೇಹಿ ಅಮ್ಮನ ತಂಗಿಯ ಹೆಸರು ಸಹ ಸುಹಾಸಿನಿಯಂತೆ, ಅವಳು ತುಂಬಾ ಕೆಟ್ಟ ಹೆಂಗಸಂತೆ ಎಂದು ಹೇಳಿ ಟಕ್ಕರ್‌ನ್ನು ಕೊಟ್ಟಿದ್ದಾನೆ. ಇದೇ ವೇಳೆ ಸುಹಾಸಿನಿ ಕೋಪದಿಂದ ಜಾಗ ಖಾಲಿ ಮಾಡಿದ್ದಾಳೆ.
ಬಾಟಲ್‌ನಿಂದ ಹೊಡೆದುಕೊಂಡ ಸೂರ್ಯನಾರಾಯಣ
ಅಗ್ನಿಯ ಬಲೆಗೆ ಬಿದ್ದಿರುವ ಸೂರ್ಯನಾರಾಯಣ ತನ್ನ ಕುಟುಂಬವನ್ನ ಉಳಿಸಿಕೊಳ್ಳಬೇಕು ಎಂದು ಯೋಚನೆ ಮಾಡುತ್ತಿದ್ದಾನೆ. ಇದಕ್ಕಾಗಿ ತಮಗೆ ತಾವೇ ಶಿಕ್ಷೆ ಕೊಟ್ಟುಕೊಳ್ಳಲು ನಿರ್ಧರಿಸಿದ್ದು ಬಾಟಲ್ ತೆಗೆದುಕೊಂಡು ತಲೆಗೆ ಹೊಡೆದುಕೊಂಡಿದ್ದಾನೆ. ಜೋರಾಗಿ ರೂಮ್‌ನಲ್ಲಿ ಸೌಂಡ್ ಬಂದ ಹಿನ್ನೆಲೆಯಲ್ಲಿ ರೌಡಿಗಳು ಬಂದು ಏನಾಯಿತು ಎಂದು ನೋಡಿದ್ದಾರೆ. ಸೂರ್ಯನಾರಾಯಣರ ತಲೆಯಲ್ಲಿ ರಕ್ತ ಬರುತ್ತಿದ್ದು ರೌಡಿಗಳು ಶಾಕ್ ಆಗಿದ್ದಾರೆ. ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಅವಸರದಲ್ಲಿ ಹೋಗುತ್ತಿದ್ದಾರೆ.


Click it and Unblock the Notifications











