Gattimela: ವೇದಾಂತ್ ದಾರಿ ಕಾಯುತ್ತಿರುವ ಸೂರ್ಯನಾರಾಯಣ: ಸುಹಾಸಿನಿ ಎದುರಿಸಲು ಬೇರೆ ತಂತ್ರ

By Shruthi Harish Gowda

ಮಂಜುನಾಥ್‌ರವರು ಈಗ ಹೊಸ ಕ್ಯಾಂಟೀನ್ ಶುರು ಮಾಡಿದ್ದಾರೆ. ಅಂಜು ತನ್ನ ತಂದೆಗೆ ಸಹಾಯಕ್ಕಾಗಿ ನಿಂತುಕೊಂಡಿದ್ದಾಳೆ. ಪರಿಮಳ ಮನೆಯಿಂದಲೇ ಊಟ ತಯಾರಿಸಿ ಮಂಜುನಾಥ್ ಕೈಗೆ ಕೊಡುತ್ತಿದ್ದು, ಮಂಜು ಹೊರಗಡೆ ಮಾರುವ ಕೆಲಸ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅಂಜು ಹಣವನ್ನ ಎಣಿಸುತ್ತಿರುವಾಗ ರೌಡಿಗಳು ಬಂದು ಅಂಜು ಕೈನಲ್ಲಿದ್ದ ಹಣ ಕಿತ್ತುಕೊಂಡಿದ್ದಾರೆ.

ಅಂಜು ಉಪಾಯ ಮಾಡಿ ನಮ್ಮ ಅಕ್ಕ ಈ ಏರಿಯಾ ಇನ್ಸ್‌ಪೆಕ್ಟರ್ ಎಂದು ಹೇಳಿ ಅಮೂಲ್ಯಗೆ ಕರೆ ಮಾಡಿದ್ದಾಳೆ. ಅಮೂಲ್ಯ ಆ ಕಡೆಯಿಂದ ರೌಡಿಗಳಿಗೆ ಅವಾಜ್ ಹಾಕಿದ್ದು ಅಂಜು ಕೈಗೆ ವಾಪಸ್ ಹಣ ಕೊಟ್ಟಿ ರೌಡಿಗಳು ಅಲ್ಲಿಂದ ತೆರಳಿದ್ದಾರೆ. ಇನ್ನು ವೇದಾಂತ್ ಮಗುವನ್ನ ಎತ್ತು ಕೊಂಡಿರುವ ಅಮೂಲ್ಯಾಳನ್ನ ಪೀಡಿಸುತ್ತಾ ಇದ್ದಾನೆ.

gattimela-kannada-serial

ನೀನು ಸುಮ್ಮನೆ ಕುಳಿತುಕೋ. ನಾನು ನಿನ್ನ ಚಿತ್ರ ಬರೆಯುತ್ತೇನೆ ಎಂದಿದ್ದಾನೆ. ಇದಕ್ಕೆ ಅಮೂಲ್ಯ ಒಂದುವರೆ ಗಂಟೆ ಕಾಲ ಮಗು ಎತ್ತುಕೊಂಡು ಸುಮ್ಮನೆ ಕುಳಿತುಕೊಂಡಿದ್ದಾಳೆ. ಆದರೆ ವೇದಾಂತ್ ಇನ್ನೂ ಸಹ ಚಿತ್ರ ಬಿಡಿಸುತ್ತಿದ್ದೇನೆ ಎಂದು ಹೇಳಿ ಅಮೂಲ್ಯಾಳನ್ನ ಹಾಗೆ ಕೂರಿಸಿದ್ದಾನೆ. ಅಲ್ಲಿಗೆ ಬಂದ ಆರತಿ, ವೇದಾಂತ್ ಚಿತ್ರ ಬಿಡಿಸಿರುವುದನ್ನು ನೋಡಿ ಜೋರಾಗಿ ನಕ್ಕಿದ್ದಾಳೆ.

ಅಕ್ಕ ನಗುತ್ತಿರುವುದನ್ನು ನೋಡಿದ ಅಮೂಲ್ಯ ವೇದಾಂತ್ ಚಿತ್ರ ಬಿಡಿಸಿರುವ ಕಡೆ ಓಡಿ ಹೋಗಿ ವೇದಾಂತ ನನ್ನ ತರಾಟೆಗೆ ತೆಗೆದುಕೊಂಡಿದ್ದಾಳೆ. ಎಲ್‌ಕೆಜಿ ಮಕ್ಕಳೇ ಎಷ್ಟೋ ಚೆನ್ನಾಗಿ ಚಿತ್ರ ಬಿಡಿಸುತ್ತಾರೆ, ನೀನು ನೋಡಿದರೆ ಈ ರೀತಿ ಬಿಡಿಸಿದ್ದಿಯಾ? ಎಂದು ವೇದಾಂತ್‌ನನ್ನು ಬೈದಿದ್ದಾಳೆ. ಈ ವೇಳೆ ಆರತಿ ಇಬ್ಬರ ಕೋಳಿ ಜಗಳವನ್ನ ನೋಡಿ ಜೋರಾಗಿ ನಗುತ್ತಾ ಇದ್ದಾಳೆ.

ಹೆದರಿಕೆಯಿಂದ ವೈಜಯಂತಿನಿಗೆ ಜ್ವರ

ವೈಜಯಂತಿ ಅಮ್ಮನಿಗೆ ಜ್ವರ ಬಂದಿದೆ. ಇದಕ್ಕೆ ಕಾರಣ ಸುಹಾಸಿನಿ. ಸುಹಾಸಿನಿ, ವೈಜಯಂತಿ ಅಮ್ಮನನ್ನ ಚೆನ್ನಾಗಿ ಹೆದರಿಸಿ ಕಳುಹಿಸಿದ್ದಾಳೆ. ನೀನೇನಾದರೂ ವೇದಾಂತ್ ಬಳಿ ಸತ್ಯ ಹೇಳಿದರೆ ನಿನ್ನನ್ನು ಸಾಯಿಸಿ ಬಿಡುತ್ತೇನೆ ಎಂದಿದ್ದಾಳೆ. ಇದಕ್ಕೆ ಹೆದರಿದ ವೈಜಯಂತಿ ಅಮ್ಮನಿಗೆ ಜ್ವರ ಬಂದು ಹಾಸಿಗೆ ಹಿಡಿದಿದ್ದಾಳೆ. ರೂಮಿಗೆ ಬಂದ ಅಮೂಲ್ಯ ಅಜ್ಜಿ ಸೇವೆ ಮಾಡುತ್ತಿದ್ದಾಳೆ. ಅಷ್ಟರಲ್ಲಿ ವೈದೇಹಿ ಬಂದಿದ್ದು ಅಮ್ಮ ಬನ್ನಿ ಆಸ್ಪತ್ರೆಗೆ ಹೋಗೋಣ ಎಂದು ಕರೆದಿದ್ದಾಳೆ.

gattimela-kannada-serial

ಗುಟ್ಟು ಹೇಳಿಕೊಟ್ಟ ವೈದೇಹಿ

ವೈದೇಹಿಯ ಬಳಿ ವೈಜಯಂತಿ ಅಮ್ಮ ನನಗೆ ಜ್ವರ ಬರಲು ಆ ಸುಹಾಸಿನಿಯೇ ಕಾರಣ ನಾನೇನಾದರೂ ಸತ್ಯವನ್ನ ಹೇಳಿದರೆ ನನ್ನನ್ನ ಸಾಯಿಸುತ್ತಾಳಂತೆ, ನಾನು ಹೆತ್ತ ಮಗಳೇ ನನ್ನನ್ನು ಸಾಯಿಸುವುದು ಅಂದರೆ ಏನು ಎಂದು ಕಣ್ಣೀರು ಹಾಕಿದ್ದಾಳೆ. ಈ ವೇಳೆ ವೈದೇಹಿ ಅವಳ ಪಾಪದ ಕೊಡ ತುಂಬಿದೆ. ಅದಕ್ಕೆ ಇಷ್ಟೊಂದು ಮೆರೆಯುತ್ತಾ ಇದ್ದಾಳೆ ಎಂದು ಅಮ್ಮನ ಕಿವಿಯಲ್ಲಿ ಒಂದು ಗುಟ್ಟು ಹೇಳಿ ಕೊಟ್ಟಿದ್ದಾಳೆ.

ಸೂರ್ಯನಾರಾಯಣ ವೇದಾಂತ್ ಜಪ

ಇದೀಗ ಸೂರ್ಯನಾರಾಯಣರಿಗೆ ಅಗ್ನಿಯ ಇನ್ನೊಂದು ಮುಖದ ಪರಿಚಯವಾಗಿದೆ. ಇದಕ್ಕಾಗಿ ನಾನು ವೇದಾಂತ್‌ನ ತಪ್ಪು ತಿಳಿದುಕೊಂಡುಬಿಟ್ಟೆ ಎಂದು ವೇದಾಂತ್ ಪರಿಚಯವಾದಾಗಿನಿಂದ ಮನೆಗೆ ಬಂದು ಹೋದದ್ದು, ಅವರಿಬ್ಬರ ನಡುವೆ ನಡೆದ ಸಂಭಾಷಣೆ ಇಲ್ಲ ನೆನಪಿಸಿಕೊಳ್ಳುತ್ತಾ ಇದ್ದಾರೆ. ವೇದಾಂತ್ ಕರೆದಾಗ ನಾನು ಅವನ ಜೊತೆಯಲ್ಲಿ ಹೋಗಿ ಬಿಟ್ಟಿದ್ದರೆ ಚೆನ್ನಾಗಿ ಇರುತ್ತಿತ್ತು. ಆದರೆ ನಾನು ನರಕಕ್ಕೆ ಬಂದು ಸಿಲುಕಿಬಿಟ್ಟಿದ್ದೇನೆ ಎಂದು ಬೇಸರ ಮಾಡಿಕೊಳ್ಳುತ್ತಾ ಇದ್ದಾರೆ.

ವೇದಾಂತ್‌ಗೆ ತಂದೆ ನೆನಪು

ವೇದಾಂತ್ ನನ್ನನ್ನ ಬಂದು ಕರೆದುಕೊಂಡು ಹೋಗು ಎಂದು ಪದೇ ಪದೇ ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಇದ್ದಾರೆ. ಅಲ್ಲಿ ಸೂರ್ಯನಾರಾಯಣ, ವೇದಾಂತ್‌ನ ನೆನಪಿಸಿಕೊಳ್ಳುತ್ತಾ ಇದ್ದರೆ ಈ ಕಡೆ ವೇದಾಂತ್‌ಗೂ ಸಹ ತನ್ನ ತಂದೆಯ ನೆನಪಾಗಿದ್ದು ಅಮೂಲ್ಯ ಬಳಿ ಹೇಳಿಕೊಂಡಿದ್ದಾನೆ. ಇದಕ್ಕೆ ಅಮೂಲ್ಯ ಆದಷ್ಟು ಬೇಗ ಅವರು ನಮ್ಮ ಮನೆಗೆ ಬರುತ್ತಾರೆ. ಎಲ್ಲವೂ ಒಳ್ಳೆಯದೇ ಆಗುತ್ತದೆ ಚಿಂತೆ ಮಾಡಬೇಡ ಎಂದು ಹೇಳಿದ್ದಾಳೆ.

More from Filmibeat

English summary
Gattimela Kannada serial today Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X