Gattimela: ಸುಹಾಸಿನಿಗೆ ಗೊತ್ತಾಗಿ ಹೋಗುತ್ತಾ ಅಮೂಲ್ಯ ಮಾಡಿರುವ ಪ್ಲ್ಯಾನ್?
'ಗಟ್ಟಿಮೇಳ' ಧಾರಾವಾಹಿ ಈಗ ಹೊಸದೊಂದು ತಿರುವು ಪಡೆದುಕೊಂಡು ಸಾಗುತ್ತಿದೆ. ಸೂರ್ಯನಾರಾಯಣ್, ವೇದಾಂತ್ ಬಳಿ ಹೇಗಾದರೂ ತಾನು ಅಗ್ನಿಯ ಮನೆಯಲ್ಲಿ ಇರುವುದನ್ನ ತಿಳಿಸಬೇಕು ಎಂದು ತವಕಿಸುತ್ತಾ ಇದ್ದಾನೆ. ಇದಕ್ಕಾಗಿ ಒಂದು ಲೆಟರ್ ಬರೆಯಬೇಕು ಅಂದುಕೊಂಡಿದ್ದಾನೆ. ರೌಡಿಯ ಕೈಯಿಂದ ಪೆನ್ನು ಹಾಗು ಪೇಪರ್ ತೆಗೆದುಕೊಂಡು ಲೆಟರ್ ಬರೆಯಲು ಸಿದ್ದರಾಗಿದ್ದಾನೆ.
ಈ ಕಡೆ ಅಮೂಲ್ಯ ತನ್ನ ಅಕ್ಕನನ್ನು ಸುಹಾಸಿನಿಯ ರೂಮ್‌ಗೆ ಕಳುಹಿಸಿದ್ದಾಳೆ. ತಾನು ತಂದಿರುವ ಡಿವೈಸನ್ನು ಸುಹಾಸಿನಿ ರೂಮ್‌ನಲ್ಲಿ ಇಟ್ಟು ಬರುವಂತೆ ಆರತಿಯ ಬಳಿ ಹೇಳಿದ್ದು ಆರತಿ ಭಯದಿಂದಲೇ ಸುಹಾಸಿನಿಯ ರೂಮ್‌ಗೆ ಬಂದಿದ್ದಾಳೆ. ಇನ್ನೇನು ರೂಮ್‌ನಲ್ಲಿ ಆರತಿ ಡಿವೈಸ್ ಇಡಬೇಕು ಎಂದುಕೊಂಡಿದ್ದಳು. ಅಷ್ಟರಲ್ಲಿ ಸುಹಾಸಿನಿ ರೂಮ್‌ಗೆ ಬಂದಿದ್ದು ಆರತಿಯನ್ನು ಯಾಕೆ ರೂಮ್‌ಗೆ ಬಂದಿರುವುದು ಎಂದು ಹೇಳಿದ್ದಾಳೆ. ಇದಕ್ಕೆ ಆರತಿ ಅತ್ತೆ ತಲೆನೋವಿನ ಮಾತ್ರೆಯನ್ನು ಹುಡುಕಲು ಬಂದೆ ಎಂದು ಸುಳ್ಳು ಹೇಳಿದ್ದಾಳೆ.

ಆರತಿ ಡಿವೈಸ್ ಅನ್ನು ಕನ್ನಡಿಯ ಮುಂಭಾಗ ಇಟ್ಟು ರೂಮ್‌ನಿಂದ ಹೊರಗೆ ಬಂದಿದ್ದಾಳೆ. ಇನ್ನೂ ಅಮೂಲ್ಯ ಬಳಿ ಬಂದು ತಾನು ಹೋಗಿದ್ದ ಕೆಲಸ ಸಕ್ಸಸ್ ಆಯಿತು. ಇದೇ ವೇಳೆ ಸುಹಾಸಿನಿ ಅತ್ತೆ ಬಂದುಬಿಟ್ಟರು, ಆದರೂ ಸಹ ಸುಳ್ಳು ಹೇಳಿ ಆ ಡಿವೈಸ್ ಇಟ್ಟು ಬಂದಿದ್ದೇನೆ ಎಂದು ಹೇಳಿದ್ದಾಳೆ.
ಧ್ರುವನನ್ನು ಹುಡುಕುತ್ತಾ ವೈದೇಹಿ ಮಹಡಿ ಮೇಲೆ ಬಂದಿದ್ದಾಳೆ. ಧ್ರುವ, ಸುಹಾಸಿನಿಯ ಫೋಟೋವನ್ನು ಕಟ್ಟಿಕೊಂಡು ಬಾಕ್ಸಿಂಗ್ ಆಡುತ್ತಾ ಇದ್ದಾನೆ. ಮಗ ಕೋಪ ಮಾಡಿಕೊಂಡಿದ್ದನ್ನು ನೋಡಿದ ವೈದೇಹಿ ಆತನಿಗೆ ಬುದ್ಧಿ ಹೇಳುವ ಕೆಲಸವನ್ನು ಮಾಡಿದ್ದಾಳೆ. ಆದರೂ ಸಹ ಧ್ರುವ ಕೋಪ ಕಡಿಮೆ ಮಾಡಿಕೊಳ್ಳುವಂತೆ ಕಾಣುತ್ತಿಲ್ಲ. ಈಗ ನೀನು ಕೋಪ ಮಾಡಿಕೊಂಡರೆ ಏನು ಪ್ರಯೋಜನವಿಲ್ಲ ನಮಗೆ ಕಾಲ ಬರುವತನಕವೂ ಸಹ ಕಾಯಬೇಕು ಎಂದು ವೈದೇಹಿ ಹೇಳಿ ಸಮಾಧಾನ ಮಾಡುತ್ತಿದ್ದಾಳೆ.
ಸುಹಾಸಿನಿಗೆ ಗೊತ್ತಾಯ್ತು ಅಮೂಲ್ಯ ಪ್ಲಾನ್
ಮಾತ್ರೆ ಕೊಡುವ ನೆಪದಲ್ಲಿ ಸುಹಾಸಿನಿ, ಆರತಿ ಡಿವೈಸ್ ಇಟ್ಟು ಹೋಗಿದ್ದನ್ನು ನೋಡಿಕೊಂಡಿದ್ದಾಳೆ. ಇದಕ್ಕಾಗಿ ಅಮೂಲ್ಯಗೆ ಟಕ್ಕರ್ ಕೊಡಲೇಬೇಕು ಎಂದು ನಿರ್ಧಾರ ಮಾಡಿ ತನ್ನ ಸ್ನೇಹಿತೆ ಜೊತೆ ಮಾತನಾಡುವ ರೀತಿ ಪ್ಲಾನ್ ಮಾಡಿಕೊಂಡಿದ್ದಾಳೆ. ತನ್ನ ಸ್ನೇಹಿತೆಗೆ ಫೋನ್ ಮಾಡಿ ನನ್ನ ಮಗ ವೇದಾಂತ್, ತಂದೆ ಸೂರ್ಯನಾರಾಯಣ ನನ್ನ ಹುಡುಕಿಕೊಂಡು ಬೀದಿ ಬೀದಿ ಅಲೆಯುತ್ತಾ ಇದ್ದಾನೆ. ಇದರಿಂದಾಗಿ ನನಗೆ ನೆಮ್ಮದಿ ಇಲ್ಲ ಎಂದು ಹೇಳಿದ್ದಾಳೆ.

ಪ್ಲೇಟ್ ಚೇಂಜ್ ಮಾಡಿದ ಸುಹಾಸಿನಿ
ಸುಹಾಸಿನಿ ಮಾತಿಗೆ ಆರತಿ ಅಯ್ಯೋ ಅತ್ತೆ ಮೋಸ ಮಾಡುತ್ತಿಲ್ಲ ಎಂದು ಅಮೂಲ್ಯಾಗೆ ಹೇಳಿದ್ದಾಳೆ. ಆದರೆ ಅಮೂಲ್ಯ ನೀನು ಸುಹಾಸಿನಿ ಅತ್ತೆಯ ಮಾತಿಗೆ ಮರುಳಾಗಬೇಡ ಎಂದು ಸಮಾಧಾನ ಮಾಡಿದ್ದಾರೆ. ಇದೇ ವೇಳೆ ಅಮೂಲ್ಯ ಸುಹಾಸಿನಿಗೆ ನಾವು ಡಿವೈಸ್ ಇಟ್ಟಿರುವ ವಿಷಯ ಗೊತ್ತಾಗಿದೆ. ಅದಕ್ಕಾಗಿ ಈ ರೀತಿ ಮಾತನಾಡುತ್ತಾ ಇದ್ದಾರೆ. ನಾವು ಬೇರೆಯದ್ದೇ ಪ್ಲಾನ್ ಮಾಡಬೇಕು ಅವಳು ಅಹಂಕಾರದಲ್ಲಿ ಮೆರೆಯಲಿ ಎಂದು ಹೇಳಿದ್ದಾಳೆ.
ಮಗನಿಗೆ ಪತ್ರ ಬರೆದ ಸೂರ್ಯನಾರಾಯಣ್
ಇತ್ತ ಸೂರ್ಯನಾರಾಯಣ್, ಅಗ್ನಿ ಕೈಯಿಂದ ತಪ್ಪಿಸಿಕೊಂಡು ಮನೆಗೆ ಹೋಗಬೇಕು ತನ್ನ ಕುಟುಂಬವನ್ನು ನೋಡಬೇಕು ಎಂದು ಆಸೆ ಪಡುತ್ತಿದ್ದಾನೆ. ಇದಕ್ಕಾಗಿ ಪತ್ರ ಬರೆದು ಹೊರಗಡೆ ಎಸೆದಿದ್ದಾನೆ. ಆ ಪತ್ರವನ್ನು ನೋಡಿದ ದಾರಿಹೋಕ ಉಂಗುರವನ್ನು ಮೊದಲು ತೆಗೆದುಕೊಂಡಿದ್ದಾನೆ. ನಂತರ ಸುಮ್ಮನೆ ಯಾರು ಉಂಗುರ ಎಸೆಯುವುದಿಲ್ಲ ಎಂದುಕೊಂಡು ಆ ಪತ್ರದಲ್ಲಿ ಏನಿದೆ ಎಂದು ಓದಿದ್ದಾನೆ. ಅದರಲ್ಲಿ ಸೂರ್ಯನಾರಾಯಣ್ ತಾವು ಅಗ್ನಿ ಕೈಯಿಂದ ಕಿಡ್ನ್ಯಾಪ್ ಆಗಿದ್ದು ಈ ಪತ್ರವನ್ನು ವೇದಾಂತ್‌ಗೆ ತಲುಪಿಸುವಂತೆ ಬರೆದಿದ್ದಾನೆ.


Click it and Unblock the Notifications











