Gattimela: ಅಗ್ನಿ ಮನೆಯಿಂದ ತಪ್ಪಿಸಿಕೊಂಡ ಸೂರ್ಯನಾರಾಯಣ್: ವೇದಾಂತ್, ಅಗ್ನಿ, ಸುಹಾಸಿನಿಗೆ ಟೆನ್ಷನ್
ಮಂಜುನಾಥ್ ಕೈಗೆ ಸೂರ್ಯನಾರಾಯಣ ಸಿಕ್ಕಿದ್ದಾನೆ. ಇದೇ ವೇಳೆ ಸೂರ್ಯನಾರಾಯಣ್ ನಾನು ಅಗ್ನಿಯ ಮುಲಾಜಿಗೆ ಒಳಗಾಗಿ ನಿಮ್ಮ ಮನೆಗೆ ಬಂದು ನಿಮ್ಮ ಬಳಿ ಕೆಟ್ಟದಾಗಿ ನಡೆದುಕೊಂಡೆ ಎಂದು ಹೇಳಿದ್ದಾನೆ. ನಾನು ನಮ್ಮ ಊರಿಗೆ ವಾಪಸ್ ಹೋಗಬೇಕು ದಯವಿಟ್ಟು ನನ್ನನ್ನ ಕಳುಹಿಸಿಕೊಡಿ ಎಂದು ಮಂಜುನಾಥ್ ಬಳಿ ಕೇಳಿಕೊಂಡಿದ್ದಾರೆ.
ಮಂಜುನಾಥ್ ನಮ್ಮ ಮನೆಗೆ ಬನ್ನಿ. ನಾಳೆ ಊರಿಗೆ ಹೋಗಬಹುದು ಎಂದು ಮನೆಗೆ ಕರೆದುಕೊಂಡು ಬಂದಿದ್ದಾನೆ. ಇದೇ ವೇಳೆ ಪರಿಮಳ ಇವರು ಅಗ್ನಿಯ ಜೊತೆ ಮನೆಗೆ ಬಂದಿದ್ದರಲ್ವಾ? ಎಂದು ಮಂಜುನಾಥ್ ಬಳಿ ಹೇಳಿದ್ದಾಳೆ. ಅಗ್ನಿಯ ಮುಲಾಜಿಗೆ ಒಳಗಾಗಿ ಅವನ ಜೊತೆಯಲ್ಲಿದ್ದರು. ಈಗ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ. ನಾವು ತಿನ್ನುವುದರಲ್ಲಿ ಇವರಿಗೂ ಒಂದು ತುತ್ತನ್ನು ನೀಡೋಣ ಎಂದು ಹೆಂಡತಿಯ ಮನವನ್ನು ಒಲಿಸಿದ್ದಾನೆ.

ಕೊನೆಗೆ ಸೂರ್ಯನಾರಾಯಣ ನನ್ನನ್ನು ಊರಿಗೆ ಕಳುಹಿಸಿಬಿಡಿ ನಿಮಗೆ ಯಾಕೆ ತೊಂದರೆ ಎಂದು ಹೇಳಿದ್ದಾನೆ. ಆದರೆ ಪರಿಮಳ ನೀವು ನಮ್ಮ ಜೊತೆ ಇರಿ ಎಂದು ಹೇಳಿದ ಮೇಲೆ ಸೂರ್ಯನಾರಾಯಣ್ ಒಪ್ಪಿಕೊಂಡಿದ್ದಾನೆ. ಅಗ್ನಿ ಜೊತೆ ಯಾಕೆ ಬಂದಿದ್ದು ಎಂದು ಸೂರ್ಯನಾರಾಯಣ ಬಳಿ ಮಂಜುನಾಥ್ ಕೇಳಿದ್ದಾನೆ.
ಸೂರ್ಯನಾರಾಯಣ್, ನನ್ನೂರು ಸಂಪಿಗೆಪುರ. ಅಲ್ಲಿ ನಾನು ಒಂದು ಆಶ್ರಮದಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದೆ. ಅಲ್ಲಿಗೆ ಬಂದಂತಹ ಅಗ್ನಿ, ನೀವು ನನ್ನ ಜೊತೆಗೆ ಇರಬೇಕು ಎಂದು ನನ್ನನ್ನು ಕರೆದುಕೊಂಡು ಬಂದ. ನಾನು ಕುಟುಂಬದ ಮೇಲಿನ ಮೋಹದಿಂದ ಅವನ ಜೊತೆಗೆ ಬಂದೆ. ಈಗ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾನೆ. ನಾನು ಸಾಯುವಷ್ಟರಲ್ಲಿ ನನ್ನ ಕುಟುಂಬದವರನ್ನ ಒಮ್ಮೆ ನೋಡಬೇಕು ಎಂದು ಮಂಜುನಾಥ್ ಬಳಿ ತಮ್ಮ ಮನದ ಆಸೆ ಹೊರಗಡೆ ಹಾಕಿದ್ದಾನೆ.
ತಂದೆ ನೆನೆದು ವೇದಾಂತ್ ಕಣ್ಣೀರು
ತನ್ನ ತಂದೆಯ ನೆನಪಾಗುತ್ತಾ ಇದ್ದುದ್ದರಿಂದ ಅಗ್ನಿ ಮನೆಗೆ ವೇದಾಂತ್ ಹೋಗಿದ್ದಾನೆ. ಈ ವೇಳೆ ಸೂರ್ಯನಾರಾಯಣ್ ಇಲ್ಲ ಅನ್ನೋದು ಗೊತ್ತಾಗಿದೆ. ಮನೆಗೆ ಬಂದ ವೇದಾಂತ್ ಕೋಪದಲ್ಲಿ ಇದ್ದಾನೆ. ಕೋಪದ ಜೊತೆಗೆ ನೋವು ಸಹ ತುಂಬಿಕೊಂಡಿದೆ. ಇದೇ ವೇಳೆ ಅಮೂಲ್ಯ, ವೇದಾಂತ್ ನನ್ನ ಸಮಾಧಾನ ಮಾಡಿ ಏನಾಯಿತು ಎಂದು ವಿಷಯ ತಿಳಿದುಕೊಂಡಿದ್ದಾಳೆ.

ಗಂಡನಿಗೆ ಸಮಾಧಾನ ಮಾಡಿದ ಅಮೂಲ್ಯ
ಅಮೂಲ್ಯ ಅವರು ಏನಾದರೂ ಸಂಪಿಗೆ ಪುರಕ್ಕೆ ಹೋಗಿದ್ದಾರಾ? ವಿಚಾರ ಮಾಡು ಎಂದು ಹೇಳಿದ್ದಾಳೆ. ವೇದಾಂತ್ ಅಲ್ಲೂ ಸಹ ಇಲ್ಲ ನಾನು ಎಲ್ಲರಿಗೂ ಕೇಳಿದೆ ಎಂದಿದ್ದಾನೆ. ಇನ್ನು ಅಮೂಲ್ಯಗೆ ಅವರು ದಾರಿ ಮಧ್ಯೆ ಹೋಗುವಾಗ ಏನಾದರೂ ತೊಂದರೆ ಆಗಿದ್ಯಾ? ಎಂದು ಇಬ್ಬರು ಗಾಬರಿಯಾಗಿದ್ದಾರೆ.
ಪ್ಲ್ಯಾನ್ ಮಾಡುತ್ತಿದ್ದ ಸುಹಾಸಿನಿಗೆ ಶಾಕ್
ವೈದೇಹಿ, ಸುಹಾಸಿನಿಗೆ ತೊಂದರೆ ಕೊಡುತ್ತಿರುವುದರಿಂದ ಸುಹಾಸಿನಿ ಸಹ ವೈದೇಹಿಗೆ ಏನಾದರೂ ಮಾಡಬೇಕು ಎಂದು ಅಂದುಕೊಂಡಿದ್ದಾಳೆ. ಇದಕ್ಕಾಗಿ ಸೂರ್ಯನಾರಾಯಣರನ್ನ ಮುಂದಿಟ್ಟುಕೊಂಡು ವೈದೇಹಿಗೆ ತೊಂದರೆ ಕೊಡಬೇಕು ಎಂದು ಯೋಚನೆ ಮಾಡುತ್ತಿರುವಾಗ ಅಗ್ನಿಗೆ ಫೋನ್ ಮಾಡಿದ್ದಾಳೆ. ನಾನು ಈಗ ಮಾತನಾಡಲು ಆಗುವುದಿಲ್ಲ ಎಂದಾಗ ನಾನು ಹೆಚ್ಚಿಗೆ ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾಳೆ.
ಅತ್ತೆಗೆ ಬುದ್ದಿ ಹೇಳಿದ ಅಮೂಲ್ಯ
ಆ ವೈದೇಹಿ ನನಗೆ ತೊಂದರೆ ನೀಡುತ್ತಿದ್ದಾಳೆ. ಸೂರ್ಯನಾರಾಯಣ್ ವಿಚಾರ ಮುಂದಿಟ್ಟುಕೊಂಡು ನಾನು ಅವಳಿಗೆ ತೊಂದರೆ ಕೊಡಬೇಕು ಎಂದು ಕೊಂಡಿದ್ದೇನೆ ಎಂದು ಸುಹಾಸಿನಿ ಹೇಳಿದ್ದಾಳೆ. ಅಗ್ನಿ ಸೂರ್ಯನಾರಾಯಣ್ ಮನೆಯಿಂದ ತಪ್ಪಿಸಿಕೊಂಡು ಹೋಗಿರುವುದನ್ನ ತಿಳಿಸಿದ್ದಾನೆ. ನಾನು 25 ವರ್ಷ ಕೂಡಿ ಹಾಕಿದ್ದೆ ನೀನು ಒಬ್ಬ ವ್ಯಕ್ತಿಯನ್ನ ಸರಿಯಾಗಿ ನೋಡಿಕೊಳ್ಳಲು ಆಗಲಿಲ್ಲ ಎಂದು ಹೇಳುವಾಗ ಅಲ್ಲಿಗೆ ಅಮೂಲ್ಯ ಬಂದಿದ್ದು ಚೆನ್ನಾಗಿ ಬೈದಿದ್ದಾಳೆ.


Click it and Unblock the Notifications











