Gattimela: ಸೂರ್ಯನಾರಾಯಣರಿಗೆ ಹಳೆಯ ನೆನಪು ತರಿಸಲು ಕಾಂತಾ ಸರ್ಕಸ್

By Shruthi Harish Gowda

ಅಗ್ನಿ ಬಳಿ ಬಂದ ರೌಡಿ ಅಣ್ಣ ನೀವು ಯಾವಾಗ ಪೇಪರ್‌ನಲ್ಲಿ ಸೂರ್ಯನಾರಾಯಣ ಕುಟುಂಬದವರ ಬಗ್ಗೆ ಪ್ರಿಂಟ್ ಹಾಕಿಸಿದ್ರಿ ಎಂದು ಕೇಳಿದ್ದಾನೆ. ಅಯ್ಯೋ ದಡ್ಡ ನನಗೆ ಏನು ಹುಚ್ಚ, ಅದು ಡಮ್ಮಿ ಪ್ರಿಂಟ್ ಅವರು ಏನಾದರೂ ಕೇಳುತ್ತಾರೆ ಎಂದು ಮೊದಲೇ ನನಗೆ ಗೊತ್ತಿತ್ತು ಅದಕ್ಕಾಗಿ ನಾನು ಈ ರೀತಿ ಮಾಡಿದೆ ಎಂದು ಅಗ್ನಿ ಹೇಳಿದ್ದಾನೆ.

ಮಾಆತ ಮುಂದುವರೆಸಿದ ಅಗ್ನಿ ನಿನಗೆ ಇದ್ಯಾವುದೂ ಸಹ ಅರ್ಥವಾಗುವುದಿಲ್ಲ ಸುಮ್ಮನೆ ನೀನು ನಿನ್ನ ಕೆಲಸವನ್ನು ಮಾಡಿಕೋ ಎಂದು ಹೇಳಿದ್ದಾನೆ. ಅವರು ಇಲ್ಲಿ ಇದ್ದಷ್ಟು ದಿನ ನನಗೆ ನೆಮ್ಮದಿ ದೊರಕಲಿದೆ ಇಲ್ಲದಿದ್ದರೆ ನನ್ನ ನೆಮ್ಮದಿ ಭಂಗವಾಗಲಿದೆ ನೀನು ಹೆಚ್ಚಿಗೆ ಚಿಂತೆಯನ್ನು ಮಾಡಬೇಡ ಎಂದು ಅಗ್ನಿ ಹೇಳಿದ್ದಾನೆ.

Gattimela Kannada serial september 15th episode update

ಕಾಂತನಿಗೆ ಟೆನ್ಷನ್ ಆಗುತ್ತಿದೆ. ನಾನು ತಿಂಡಿ ಆರ್ಡರ್ ಮಾಡಿದ್ದೀನಿ. ಯಾರಾದರೂ ಬಂದು ಏನು ತಿಂಡಿ ಎಂದು ಕೇಳಿದರೆ ಏನು ಹೇಳೋದು ಎಂದು ಭಯಪಡುತ್ತಾ ಇದ್ದಾನೆ. ಅಷ್ಟರಲ್ಲೇ ಅಡುಗೆ ಮನೆಯೊಳಗೆ ರೌಡಿ ಬಂದಿದ್ದು ತಿಂಡಿ ಏನು ಎಂದು ಕೇಳಿದ್ದಾನೆ. ಇಡ್ಲಿ ಹಾಗೂ ಸಾಂಬಾರ್ ಮಾಡುತ್ತಾ ಇದ್ದೇನೆ ಎಂದಾಗ ಇಡ್ಲಿ ಪಾತ್ರೆ ಮುಟ್ಟಲು ರೌಡಿ ಬಂದಿದ್ದಾನೆ. ಖಾಲಿ ಇಡ್ಲಿ ಪಾತ್ರೆ ನೋಡಿದರೆ ನನ್ನ ಕೊಲೆ ಮಾಡಿಬಿಡುತ್ತಾರೆ ಎಂದುಕೊಂಡ ಕಾಂತ. ಸುಮ್ಮಸುಮ್ಮನೆ ಮುಟ್ಟಿದರೆ ಕೈಗೆ ಲಕ್ವ ಹೊಡೆಯುತ್ತದೆ ಎಂದು ಹೆದರಿಸಿ ಅವನನ್ನು ಅಲ್ಲಿಂದ ಕಳುಹಿಸಿದ್ದಾನೆ.

ಅಮೂಲ್ಯ, ಕಾಂತಾಗೆ ಫೋನ್ ಮಾಡಿದ್ದಾಳೆ ನಾನು ಹೇಳಿದ ಕೆಲಸ ಎಲ್ಲಿಗೆ ಬಂತು ಎಂದು ಕಾಂತ ಬಳಿ ಕೇಳಿದ್ದಾಳೆ. ಅಷ್ಟರಲ್ಲಿ ಕಾಂತಾಗೆ ಭಯವಾಗಿದ್ದು, ಯಾರಾದರೂ ಬಂದರೆ ನನ್ನನ್ನ ಸುಮ್ಮನೆ ಬಿಡೋದಿಲ್ಲ ಎಂದುಕೊಂಡಿದ್ದಾನೆ. ನಾನೇ ಬೆಳಿಗ್ಗೆ ಬಂದು ನಿಮಗೆ ಎಲ್ಲಾ ವಿಷಯವನ್ನು ತಿಳಿಸುತ್ತೇನೆ ದಯವಿಟ್ಟು ಈಗ ಫೋನನ್ನು ಇಡಿ ಎಂದು ಕೇಳಿಕೊಂಡಿದ್ದಾನೆ. ಅಷ್ಟರಲ್ಲಿ ರೌಡಿ ಬಂದು ಏನು ಮಾಡುತ್ತಿದ್ದೀಯಾ ಎಂದು ಕೇಳಿದಾಗ ನಿದ್ರೆಯಲ್ಲಿ ನಡೆಯುವ ಕಾಯಿಲೆ ಇದೆ ಎಂದಿದ್ದಾನೆ.

ವೈದೇಹಿ ಬೇಕೆಂದು ಆದ್ಯಾ ಹಠ

ಎಲ್ಲರೂ ತಿಂಡಿಗೆ ಕುಳಿತ ವೇಳೆ ಆದ್ಯಾ ಬಂದಿದ್ದು ತಿಂಡಿ ಏನು ಎಂದು ಕೇಳಿದ್ದಾಳೆ. ವೈದೇಹಿ ಈ ಅಮ್ಮ ಬೇಗ ತಿಂಡಿ ಬಡಿಸಿ ಎಂದು ಕೂಗಿಕೊಂಡಿದ್ದಾಳೆ.‌ ಇದೆ ವೇಳೆ ಅಮೂಲ್ಯ ತಿಂಡಿ ಪಲಾವ್ ಮಾಡಿದ್ದೇನೆ ಎಂದು ಹೇಳಿದ್ದಾಳೆ. ಆದರೂ ವೈದೇಹಿ ಅಮ್ಮ ಮಾಡುವ ಪಲಾವ್ ತುಂಬಾ ಚೆನ್ನಾಗಿದೆ ಎಂದು ಆದ್ಯಾ ನೆನಪಿಸಿಕೊಂಡಿದ್ದಾಳೆ.

Gattimela Kannada serial september 15th episode update

ಅಣ್ಣನ ಮೇಲೆ ಕೋಪ

ಆದ್ಯಾ ತನ್ನ ಅಣ್ಣನ ಮೇಲೆ ಕೋಪವನ್ನು ಮಾಡಿಕೊಂಡಿದ್ದಾಳೆ. ಅಣ್ಣ ನೀನು ಮಾಡಿದ್ದು ತಪ್ಪು, ಯಾಕೆ ವೈದೇಹಿ ಅಮ್ಮನನ್ನ ಮನೆಯಿಂದ ಹೊರಗಡೆ ಕಳುಹಿಸಿದೆ. ಆದಷ್ಟು ಬೇಗ ನೀನು ವೈದೇಹಿ ಅಮ್ಮನನ್ನು ಈ ಮನೆಗೆ ಬರುವಂತೆ ಮಾಡು ಎಂದು ಕೇಳಿಕೊಂಡಿದ್ದಾಳೆ. ಇದಕ್ಕೆ ಅಜ್ಜಿ ಯಾವ ವೈದೇಹಿಯೂ ಮನೆಗೆ ಬರೋದಿಲ್ಲ ನೀನು ಸುಮ್ಮನೆ ತಿನ್ನಿ ತಿನ್ನು ಎಂದು ಗದರಿದ್ದಾರೆ.

ರಾಯರ ನೆನಪು ಕೆದಕಿದ ಕಾಂತಾ

ಇತ್ತ ಕಾಂತ ಇಡ್ಲಿಯನ್ನ ತೆಗೆದುಕೊಂಡು ಸೂರ್ಯನಾರಾಯಣರು ಇರುವ ರೂಮ್‌ಗೆ ಹೋಗಿದ್ದಾನೆ. ಇದೇ ಸಂದರ್ಭದಲ್ಲಿ ರಾಯರೇ ಇಡ್ಲಿ ತಂದಿದ್ದೇನೆ ತಿನ್ನಿ ಎಂದು ಹೇಳಿದ್ದಾನೆ. ನೀವು ಧ್ಯಾನ ಮಾಡುತ್ತಿದ್ದೀರಾ ಇದು ತುಂಬಾ ಒಳ್ಳೆಯದು ಎಂದು ಕಾಂತ ಸೂರ್ಯನಾರಾಯಣರ ಬಳಿ ಮಾತಿಗೆ ಇಳಿದಿದ್ದಾನೆ. ಇದೇ ವೇಳೆ ಸೂರ್ಯ ನಾರಾಯಣರ ಪಕ್ಕಾ ಕುಳಿತುಕೊಂಡು ಕಾಲು ಒತ್ತುತ್ತಾ ಅವರ ಹಳೆಯ ನೆನಪುಗಳನ್ನೆಲ್ಲ ಕೆದಕಲು ಶುರು ಮಾಡಿದ್ದಾನೆ.

ನಾನು ಸಂಪಿಗೆಪುರದಲ್ಲಿದ್ದೆ

ದೊಡ್ಡವರೇ ನಿಮ್ಮ ಊರು ಯಾವುದು? ನೀವು ಎಲ್ಲಿ ಇದ್ರಿ ಎಂದೆಲ್ಲಾ ಕೇಳಿದ್ದಾನೆ. ಇದಕ್ಕೆ ಸೂರ್ಯನಾರಾಯಣರು ನಾನು ಸಂಪಿಗೆಪುರದಲ್ಲಿ ಇದ್ದೆ ಎಂದು ಹೇಳಿದ್ದಾರೆ. ಅದಕ್ಕೂ ಮೊದಲು ಎಲ್ಲಿ ಇದ್ರಿ ಕೇಳಿದ್ದಾನೆ. ಕಾಶಿಯಲ್ಲಿ ಇದ್ದೆ ಎಂದಿದ್ದಾರೆ. ಕಾಶಿಗೂ ಮೊದಲು ಎಂದು ಕೇಳಿದಾಗ ಅವರಿಗೆ ಅವರ ಹಿಂದಿನ ಯಾವುದೇ ನೆನಪುಗಳು ಸಹ ನೆನೆಪಿಗೆ ಬಾರದೇ ಕಾಂತನ ಮುಖವನ್ನೇ ನೋಡುತ್ತಾ ಕುಳಿತಿದ್ದಾರೆ‌.

More from Filmibeat

English summary
Gattimela Kannada serial Today Episode:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X