Gattimela" ವೈದೇಹಿಗೆ ಹೆದರಿದ ಸುಹಾಸಿನಿ: ವಿಡಿಯೋದಲ್ಲಿ ಏನಿದೆ ರಹಸ್ಯ..?!

By Shruthi Harish Gowda

ಸುಹಾಸಿನಿಗೆ ಎದುರುತ್ತಿದ್ದ ವೈದೇಹಿ ಈಗ ಸ್ಟ್ರಾಂಗ್ ಆಗಿದ್ದಾರೆ. ನಿನ್ನ ಮನೆಗೆ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದ ಸುಹಾಸಿನಿಗೆ ಈಗ ವೈದೇಹಿ ಉತ್ತರ ಕೊಡುವಷ್ಟರ ಮಟ್ಟಿಗೆ ಬೆಳೆದಿದ್ದಾಳೆ. ವೈದೇಹಿಯ ಬಳಿ ಅಮ್ಮ ಸುಹಾಸಿನಿ ನನಗೆ ಒಂದು ಲೋಟ ನೀರನ್ನು ಸಹ ತಂದು ಕೊಟ್ಟಿಲ್ಲ ಎಂದು ಹೇಳಿದ್ದಾಳೆ.

ಈ ಕಡೆ ಕಾಂತಾಗೆ ರೌಡಿಗಳು ಚೆನ್ನಾಗಿ ಹೊಡೆದಿದ್ದಾರೆ. ನೀನು ಯಾರ ರಾಯಭಾರಿ ಎಂದು ಹೇಳದಿದ್ದರೆ ನಿನ್ನ ಕೊಲೆ ಮಾಡಿ ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಕಾಂತಾ ಮಾತ್ರ ಯಾವುದೇ ಕಾರಣಕ್ಕೂ ಬಾಯಿ ಬಿಡಲಿಲ್ಲ. ನನ್ನನ್ನ ಯಾರು ಕಾಪಾಡುತ್ತಾರೆ ಎಂದು ಯೋಚನೆಯನ್ನ ಮಾಡುತ್ತಾ ಕುಳಿತಿದ್ದಾನೆ. ಅಷ್ಟರಲ್ಲಿ ಅಮೂಲ್ಯ ಕಾಂತನಿಗೆ ಫೋನ್ ಮಾಡಿ ಏನು ಆಯಿತು ಎಂದು ಕೇಳಿದ್ದಾಳೆ. ಅಮೂಲ್ಯ ಬಳಿ ತಾನು ರೌಡಿಗಳಾ ಬಳಿ ಸಿಕ್ಕಿಹಾಕಿಕೊಂಡಿದ್ದೇನೆ. ದಯವಿಟ್ಟು ನನ್ನನ್ನ ಕಾಪಾಡಿ ಎಂದು ಕಾಂತ ಬೇಡಿಕೊಂಡಿದ್ದಾನೆ.

gattimela-kannada-serial

ಅಮೂಲ್ಯ ಲೊಕೇಶನ್ ಕಳಿಸುವಂತೆ ಕಾಂತನಿಗೆ ಹೇಳಿದ್ದಾಳೆ. ಕಾಂತಾ ತಾನು ಯಾರ ಮನೆಯಲ್ಲಿ ಇದ್ದೀನಿ ಎಂಬ ಲೊಕೇಶನ್ ಅನ್ನು ಅಮೂಲ್ಯಾಗೆ ಕಳುಹಿಸಿದ್ದಾನೆ. ವಿಷಯವನ್ನು ಆದ್ಯಾ ಬಳಿಯಲ್ಲಿ ಅಮೂಲ್ಯ ಹೇಳಿದ್ದಾಳೆ. ನಾವಿಬ್ಬರೇ ಹೋಗಿ ಕಾಂತ ನನ್ನ ಕಾಪಾಡೋಣ ಎಂದು ಆದ್ಯ, ಅಮೂಲ್ಯಾಗೆ ಹೇಳಿದ್ದಾಳೆ. ಇದಕ್ಕೆ ಸೂಪರ್ ಅತ್ತಿಗೆ ನಾವಿಬ್ಬರೇ ಹೋಗಿ ಕಾಪಾಡಿಕೊಂಡು ಬರೋಣ ಎಂದು ಇಬ್ಬರೂ ಸಹ ಕಾಂತಾ ಇರುವ ಕಡೆ ಹೋಗಿದ್ದಾರೆ. ಆದರೆ ವೇದಾಂತ್‌ಗೆ ಮಾತ್ರ ತಾವು ಹೋಗಿರುವ ವಿಷಯವನ್ನು ತಿಳಿಸಿಲ್ಲ.

ವೈದೇಹಿಗೆ ಹೆದರುತ್ತಿರುವ ಸುಹಾಸಿನಿ

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬ ಗಾದೆ ಮಾತು ಈಗ ವೈದೇಹಿ ಹಾಗೂ ಸುಹಾಸಿನಿ ವಿಷಯಕ್ಕೆ ಅನ್ವಯಿಸುತ್ತಿದೆ. ಇದಕ್ಕೂ ಮೊದಲು ಸುಹಾಸಿನಿ, ವೈದೇಹಿಯನ್ನು ಕಂಡರೆ ಹೆದರುತ್ತಿರಲಿಲ್ಲ. ಈಗ ಸುಹಾಸಿನಿಯೇ ವೈದೇಹಿಗೆ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವೈದೇಹಿ ಈಗ ಸುಹಾಸನಿಗೆ ಒಂದು ವಿಡಿಯೋ ತೋರಿಸಿದ್ದು, ಸುಹಾಸಿನಿ ಇದ್ದಕ್ಕಿದಂತೆ ವೈದೇಹಿಗೆ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಅಮ್ಮನಿಗೆ ನೀನು ನೀರನ್ನು ತೆಗೆದುಕೊಂಡು ಕೊಡದೇ ಹೋದರೆ ಈ ವಿಡಿಯೋವನ್ನು ವೇದಾಂತ್‌ಗೆ ತೋರಿಸುವುದಾಗಿ ವೈದೇಹಿ ಹೇಳಿದ್ದಾಳೆ.

gattimela-kannada-serial

ವೈದೇಹಿ ತೋರಿದ ವಿಡಿಯೋದಲ್ಲಿ ಏನಿದೆ?

ಸುಹಾಸಿನಿ ಅಮ್ಮನ ರೂಂಗೆ ನೀರನ್ನು ತೆಗೆದುಕೊಂಡು ಹೋಗಿದ್ದಾಳೆ. ಹಿಂದೆ ಬಂದ ವೈದೇಹಿ ಅಮ್ಮನ ಬಳಿ ಕ್ಷಮೆ ಕೇಳುವಂತೆ ಹೇಳಿದ್ದಾಳೆ. ವೈದೇಹಿ ಅಮ್ಮನ ಬಳಿ ನಾನು ಕ್ಷಮೆ ಕೇಳೋದಿಲ್ಲ ಎಂದು ಹೇಳಿದ್ದಾಳೆ. ಇದಕ್ಕೆ ವೈದೇಹಿ ವಿಡಿಯೋ ವಿಷಯವನ್ನು ಹೇಳಿದಾಗ ಭಯಭೀತಳಾಗಿ ಅಮ್ಮನ ಬಳಿ ಕ್ಷಮೆ ಕೇಳಿದ್ದಾಳೆ. ಅಮ್ಮನಿಗಂತೂ ತುಂಬಾನೆ ಖುಷಿ ಆಗುತ್ತಿದೆ. ಸುಹಾಸಿನಿಗೆ ನೀನು ಯಾವ ಮೋಡಿ ಮಾಡಿದೆ ನಿನಗೆ ಹೆದರುತ್ತಿದ್ದಾಳೆ. ನೀನು ಇದೆ ರೀತಿ ಅವಳಿಗೆ ಹೆದರಿಸು ಎಂದು ಹೇಳಿದ್ದಾಳೆ.

ಕಾಂತಾನ ರಕ್ಷಿಸಿದ ಅಮೂಲ್ಯ-ಆದ್ಯಾ

ಕಾಂತಾ ಹೇಳಿದ ಲೊಕೇಶನ್‌ಗೆ ಬಂದಿರುವ ಅಮೂಲ್ಯ ಹಾಗೂ ಆದ್ಯ ಇಬ್ಬರು ಸಹ ಕಾರದ ಪುಡಿ ಎರಚಿ ರೌಡಿಗಳ ಜೊತೆ ಹೊಡೆದಾಟ ನಡೆಸಿದ್ದಾರೆ. ಹೆಜ್ಜೆ ಹೆಜ್ಜೆಗೂ ಸಿಕ್ಕಿರುವ ರೌಡಿಗಳ ತಲೆಗೆ ಹೊಡೆದಿದ್ದಾರೆ. ಮನೆಯ ಒಳಗಡೆ ಹೋಗಿ ದೊಣ್ಣೆಯಿಂದ ರೌಡಿಗಳ ತಲೆಗೆ ಹೊಡೆದು ಕಾಂತಾ ಇರುವ ಕೋಣೆಗೆ ಬಂದು ಕಾಂತನನ್ನು ಬಿಡಿಸುತ್ತಾ ಇದ್ದಾರೆ. ಆದ್ಯಾ ಹಾಗೂ ಅಮೂಲ್ಯ ಇಬ್ಬರು ಅಗ್ನಿ ಕೈಯಲ್ಲಿ ಸಿಕ್ಕಿ ಬೀಳುತ್ತಾರಾ? ನೋಡಬೇಕಿದೆ.

More from Filmibeat

English summary
Gattimela Kannada serial today Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X