Gattimela: ಸಂಕಷ್ಟದಿಂದ ಪಾರಾದ ಕಾಂತ: ವೇದಾಂತ್ ಮೇಲೆ ಅಗ್ನಿಗೆ ಕೋಪ
ಅಮೂಲ್ಯ ಹಾಗೂ ಆದ್ಯ ಇಬ್ಬರು ಸಹ ಅಗ್ನಿ ಮನೆಯ ಒಳಗೆ ಹೋಗಿದ್ದಾರೆ. ಕಾಂತನನ್ನ ಬಿಡಿಸಿದ್ದಾರೆ. ಇನ್ನೇನು ಹೊರಗಡೆ ಕರೆದುಕೊಂಡು ಬರಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ರೌಡಿಗಳು ಬಂದಿದ್ದಾರೆ. ಇನ್ನು ರೌಡಿಗಳು ಕಾಂತನಿಗೆ ರೇಗಿಸುತ್ತಾ ಇದ್ದಾರೆ. ನಿನ್ನನ್ನ ಬಿಡಿಸಿಕೊಂಡು ಹೋಗಲು ಯಾರೋ ರೌಡಿಗಳು ಬರುತ್ತಾರೆ ಎಂದುಕೊಂಡೆ ಆದರೆ ಇಲ್ಲಿ ಇಬ್ಬರು ಹೆಂಗಸರು ಬಂದಿದ್ದಾರೆ ಎಂದು ಕಿಚಾಯಿಸಿದ್ದಾರೆ.
ಅಮೂಲ್ಯ ಇದಕ್ಕೆ ಕೋಪ ಮಾಡಿಕೊಂಡು ನಮ್ಮನ್ನೇ ಕಿಂಡಲ್ ಮಾಡುತ್ತೀರಾ ಎಂದು ಕೈಲಿದ್ದ ಪೆಪ್ಪರ್ ಸ್ಪ್ರೇ ರೌಡಿಗಳ ಕಣ್ಣಿಗೆ ಹೊಡೆದು. ಚೆನ್ನಾಗಿ ದೊಣ್ಣೆಯಿಂದ ಹೊಡೆದು ಕಾಂತನನ್ನು ಕರೆದುಕೊಂಡು ಬಂದಿದ್ದಾರೆ. ಮನೆಗೆ ಸಾರ್ಥಕ್ ಹಾಗೂ ವೇದಾಂತ್ ಬಂದಿದ್ದು ಇಬ್ಬರು ಎಲ್ಲಿ ಹೋಗಿದ್ದಾರೆ ಎಂದು ಯೋಚನೆ ಮಾಡುತ್ತಿದ್ದಾರೆ. ವೇದಾಂತ್ ಫೋನ್ ಮಾಡಿದ್ದು ಅಮೂಲ್ಯ ಮಾತ್ರ ಫೋನ್ ರಿಸೀವ್ ಮಾಡಿಲ್ಲ. ಕಾಂತನನ್ನು ರೌಡಿ ಮನೆಯಿಂದ ಕರೆದುಕೊಂಡು ನೇರವಾಗಿ ತಮ್ಮ ಮನೆಗೆ ಬಂದಿದ್ದಾರೆ.

ವೇದಾಂತ್ ಮನೆಯಲ್ಲಿ ಗಣೇಶ ಹಬ್ಬ ಮಾಡಲು ತಯಾರಿ ನಡೆಸುತ್ತಿದ್ದಾರೆ. ಕಾಂತಾ ಬಳಿ ಬಂದು ನಾನು ಸಾರ್ಥಕ್ ಸರ್ ಇಬ್ಬರು ಹೋಗಿ ಗಣೇಶನನ್ನು ತರುತ್ತೇವೆ ಎಂದು ಹೇಳಿದ್ದಾನೆ. ಇದಕ್ಕೆ ಆಧ್ಯಾ ಮಾತ್ರ ಒಪ್ಪಿಕೊಳ್ಳಲಿಲ್ಲ. ಕಾಂತಾ ನಿಮ್ಮದು ಏನಿದ್ದರೂ ಡೆಕೋರೇಷನ್ ಮಾಡುವುದು ಅಷ್ಟೇ, ನಾಳೆ ಬೆಳಿಗ್ಗೆ ಬಂದು ಚೆನ್ನಾಗಿ ಡೆಕೋರೇಷನ್ ಮಾಡಬೇಕು ಎಂದು ಎಂದಿದ್ದಾರೆ. ಕಾಂತಾ ಕೊನೆಗೆ ನಾನು ಮನೆಗೆ ಹೋಗಿ ರೆಸ್ಟ್ ಮಾಡಿ ನಾಳೆ ಬೆಳಿಗ್ಗೆ ಬರುತ್ತೇನೆ ಎಂದು ಅಮೂಲ್ಯ ಹಾಗೂ ಆದ್ಯಾಗೆ ಥ್ಯಾಂಕ್ಸ್ ಹೇಳಿ ಹೊರಟಿದ್ದಾನೆ.
ಗಣೇಶ ಹಬ್ಬದ ಸಂಭ್ರಮಕ್ಕೆ ರೆಡಿ
ಗಟ್ಟಿಮೇಳ ಧಾರಾವಾಹಿಯಲ್ಲಿ ಗಣೇಶನ ಹಬ್ಬ ಸಂಭ್ರಮದಿಂದ ಆಚರಿಸಲು ಸಿದ್ಧತೆಯನ್ನ ನಡೆಸಲಾಗುತ್ತಿದೆ. ಆರತಿ ಸಹ ತನ್ನ ಮಗುವಿನೊಂದಿಗೆ ಹಬ್ಬ ಆಚರಣೆ ಮಾಡಲು ವೇದಾಂತ್ ಮನೆಗೆ ಬರಲು ಸಿದ್ಧರಾಗಿದ್ದಾಳೆ. ತನ್ನ ಗಂಡನ ಮನೆಯಲ್ಲಿ ಮಗುವಿನೊಂದಿಗೆ ಮೊದಲನೇ ಗೌರಿ ಗಣೇಶ ಹಬ್ಬವನ್ನು ಆಚರಣೆ ಮಾಡಲು ಉತ್ಸಾಹಕಳಾಗಿದ್ದಾಳೆ. ಈಗಾಗಲೇ ಬಟ್ಟೆ ಪ್ಯಾಕ್ ಮಾಡಿದ್ದು ಪರಿಮಳ ಮಗಳಿಗೋಸ್ಕರ ಚಕ್ಕುಲಿ ರವೆ ಉಂಡೆ ಎಲ್ಲ ಮಾಡಿದ್ದಾಳೆ.

ನೀವು ಭಾವುಕರಾಗುತ್ತೀರಾ
ಅಂಜುಗೆ ತನ್ನ ಅಕ್ಕ ವಾಪಸ್ ಗಂಡನ ಮನೆಗೆ ಹೋಗುತ್ತಿದ್ದಾಳೆ ಎಂಬ ಬೇಸರ ಕಾಡುತ್ತಿದ್ದು, ಅಲ್ಲಿ ವಿಕ್ಕಿ ಭಾವ ಇಲ್ಲ ನೀನು ಯಾಕೆ ಅಲ್ಲಿಗೆ ಹೋಗುತ್ತೀಯಾ? ಎಂದು ಬೇಸರ ವ್ಯಕ್ತಪಡಿಸಿದ್ದಾಳೆ. ಅಂಜುಗೆ ಆರತಿ ಗಂಡನ ಮನೆ ಹಾಗೂ ತವರು ಮನೆಯ ಮಹತ್ವ ತಿಳಿಸಿದ್ದಾಳೆ. ಅಮೂಲ್ಯ, ಆದ್ಯಾ ಬಳಿ ಬಂದು ನಾನು ಮಗು ಹಾಗೂ ಆರತಿ ಅಕ್ಕನನ್ನು ಕರೆದುಕೊಂಡು ಬರುತ್ತೇನೆ ಎಂದಿದ್ದಾಳೆ. ಅದಕ್ಕೆ ಆದ್ಯಾ ನಾನು ಹಾಗೂ ಸಾರ್ಥಕ್ ಇಬ್ಬರು ಹೋಗಿ ಮಗು ಹಾಗೂ ಆರತಿಯನ್ನು ಕರೆದುಕೊಂಡು ಬರುತ್ತೇವೆ. ನೀವು ಹೋದರೆ ಸುಮ್ಮನೆ ಭಾವುಕರಾಗುತ್ತೀರಾ ಎಂದಿದ್ದಾಳೆ.
ವೇದಾಂತ್ ಮೇಲೆ ಅಗ್ನಿಗೆ ಕೋಪ
ಕಾಂತಾ ಮನೆಯಿಂದ ಹೋಗಿದ್ದು ತನ್ನ ಸಹಚರರಿಗೆ ಅಗ್ನಿ ಚೆನ್ನಾಗಿ ಬಾರಿಸುತ್ತಿದ್ದಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಸೂರ್ಯನಾರಾಯಣರು ದಯವಿಟ್ಟು ನೀನು ಇವರಿಗೆ ಹೊಡೆಯುವುದನ್ನ ನಿಲ್ಲಿಸು, ಕಾಂತಾ ಎಲ್ಲಿಗೆ ಹೋದ ಎಂದೆಲ್ಲ ಕೇಳುತ್ತಿದ್ದಾನೆ. ಸತ್ಯ ಗೊತ್ತಾದರೆ ನನ್ನ ಕೆಲಸ ಕೆಡುತ್ತದೆ ಎಂದು ಸುಳ್ಳು ಹೇಳಿದ್ದಾನೆ. ಅವನು ಇಲ್ಲಿಗೆ ಪತ್ತೆದಾರಿಕೆ ಮಾಡಲು ಬಂದಿದ್ದನ್ನು ಆ ವಿಷಯ ನಮಗೆ ಗೊತ್ತಾಗಿದ್ದರಿಂದ ಅವನು ಇಲ್ಲಿಂದ ಓಡಿ ಹೋಗಿದ್ದಾನೆ ಎಂದು ಹೇಳಿ ಅವರನ್ನ ಅಲ್ಲಿಂದ ಸಾಗ ಹಾಕಿದ್ದಾನೆ.
ಸುಹಾಸಿನಿಗೆ ಕಾಲ್ ಮಾಡಿದ ಅಗ್ನಿ
ಸುಹಾಸಿನಿಗೆ ಕಾಲ್ ಮಾಡಿದ ಅಗ್ನಿ ಆ ಕಾಂತನನ್ನು ಪತ್ತೆದಾರಿಕೆ ಮಾಡಲು ವೇದಾಂತ್ ಇಲ್ಲಿಗೆ ಕಳುಹಿಸಿದ್ದನು ಎಂದು ಹೇಳಿದ್ದಾನೆ. ನೀನು ಅಲ್ಲಿ ಏನು ಮಾಡುತ್ತಿದ್ದೀಯಾ? ನನಗೆ ವಿಷಯವನ್ನು ತಿಳಿಸಬೇಕು ಎಂದು ನಿಮಗೆ ಗೊತ್ತಿಲ್ವಾ ಎಂದು ಬೈದಿದ್ದಾನೆ. ಇದಕ್ಕೆ ಸುಹಾಸಿನಿ ನನಗೆ ಈ ವಿಷಯ ಯಾವುದು ಸಹ ಗೊತ್ತಿಲ್ಲ ಎಂದು ಹೇಳಿದ್ದಾಳೆ. ಇನ್ನು ಸುಹಾಸಿನಿ ಮಾತನಾಡುತ್ತಿರುವುದನ್ನು ವೈದೇಹಿ ಕೇಳಿಸಿಕೊಂಡು ಬೆನ್ನ ಹಿಂದೆ ನಿಂತಿದ್ದಾಳೆ. ವೈದೇಹಿ ಅಲ್ಲಿ ಇರುವುದನ್ನು ನೋಡಿದ ಸುಹಾಸಿನಿ ಶಾಕ್ ಆಗಿ ನಿಂತುಕೊಂಡಿದ್ದಾಳೆ.


Click it and Unblock the Notifications











