Gattimela: ಗಟ್ಟಿಮೇಳ ಧಾರಾವಾಹಿಯಲ್ಲಿ ಗಣೇಶೋತ್ಸವ ಸಂಭ್ರಮ: ಗಂಡನ ಮನೆಯಲ್ಲಿ ಆರತಿ
ಕಿರುತೆರೆ ಕಾರ್ಯಕ್ರಮಗಳಲ್ಲಿ ಗಣೇಶೋತ್ಸವ ಸಂಭ್ರಮ ಮನೆ ಮಾಡಿದೆ. ಗಟ್ಟಿಮೇಳ ಧಾರಾವಾಹಿಯಲ್ಲೂ ಗೌರಿ ಗಣೇಶ ಹಬ್ಬ ಕಳೆಕಟ್ಟಿದೆ. ಆರತಿ ತನ್ನ ಗಂಡನ ಮನೆಗೆ ಮಗುವಿನ ಜೊತೆ ಹೊರಟಿದ್ದಾಳೆ. ಆದ್ಯ ಹಾಗೂ ಸಾರ್ಥಕ್ ಇಬ್ಬರೂ ಸಹ ಆರತಿಯನ್ನ ತಮ್ಮ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಪರಿಮಳ ಹಾಗೂ ಮಂಜುನಾಥ್ ಇಬ್ಬರು ಪ್ರೀತಿಯಿಂದ ಸ್ವಾಗತ ಮಾಡಿದ್ದಾರೆ.
ಅಂಜೂಗೆ ಮಗು ಬಿಟ್ಟು ಇರಲು ಆಗುತ್ತಿಲ್ಲ. ನೀನು ಇಲ್ಲೇ ಹಬ್ಬ ಮಾಡಿದ್ದರೆ ಆಗುತ್ತಿತ್ತು ಎಂದು ಆರತಿಯ ಬಳಿ ಬೇಸರ ವ್ಯಕ್ತಪಡಿಸಿದ್ದಾಳೆ. ಇದು ನನ್ನ ಮಗನಿಗೆ ಮೊದಲ ಗೌರಿ ಗಣೇಶ ಹಬ್ಬ, ಅದಕ್ಕಾಗಿ ನಾನು ಗಂಡನ ಮನೆಯಲ್ಲೇ ಹಬ್ಬ ಆಚರಣೆ ಮಾಡುವುದಾಗಿ ಹೇಳಿದ್ದಾಳೆ.

ಆದ್ಯಾಗೆ ಜೂನಿಯರ್ ವಿಕ್ರಾಂತ್‌ನ ನೋಡಿ ತುಂಬಾನೇ ಖುಷಿಯಾಗಿದೆ. ಸಾರ್ಥಕ್ ತನ್ನ ಹೆಂಡತಿ ಸಂಭ್ರಮ ನೋಡಿ ಖುಷಿಪಟ್ಟಿದ್ದಾನೆ. ಇನ್ನು ಮನೆಯಲ್ಲಿ ಯಾರಿಗೂ ಸಹ ಮಗುವನ್ನ ಎತ್ತಿಕೊಳ್ಳಲು ಆದ್ಯಾ ಬಿಡುವುದಿಲ್ಲ. ತನ್ನ ಅಣ್ಣನ ಜೊತೆಗೆ ಆಟ ಮಾಡಿಕೊಂಡು ಇರುತ್ತಾಳೆ ಎಂದು ಹೇಳಿದ್ದಾನೆ. ಪರಿಮಳ ಬಂದಂತಹ ಆದ್ಯಗೆ ಕುಂಕುಮವನ್ನು ನೀಡಿ ಸತ್ಕರಿಸಿದ್ದಾರೆ. ಇದೆ ವೇಳೆ ಆರತಿಗೂ ಕುಂಕುಮವನ್ನು ಇಡಲು ಹೋದಾಗ ಬೇಸರ ಮಾಡಿಕೊಂಡಿದ್ದಾರೆ. ಮಂಜುನಾಥ್ ಪರಿಮಳಗೆ ಸಮಾಧಾನ ಮಾಡಿ ಹೆಣ್ಣುಮಕ್ಕಳು ನಿತ್ಯ ಸುಮಂಗಲೆಯರು ಅವಳಿಗೂ ಸಹ ಕುಂಕುಮ ಹೂವು ಬಳೆ ನೀಡು ಎಂದಿದ್ದಾನೆ.
ಮನೆಯಲ್ಲಿ ಸಂಭ್ರಮ ತುಂಬಿದೆ. ಆದ್ಯ ಹಾಗೂ ಅಮೂಲ್ಯ ಬಹಳ ಸಂಭ್ರಮದಲ್ಲಿ ಇದ್ದಾರೆ. ಸುಹಾಸಿನಿಗೆ ಯಾವುದನ್ನು ಸಹಿಸಲು ಆಗುತ್ತಿಲ್ಲ. ಯಾಕೆಂದರೆ ಈಗ ವೈದೇಹಿ ತುಂಬಾ ಸ್ಟ್ರಾಂಗ್ ಆಗಿದ್ದು ಅದೇ ಚಿಂತೆ ಸುಹಾಸಿನಿಯನ್ನು ಕಾಡುತ್ತಿದೆ. ಅಗ್ನಿ ಬಳಿ ಸುಹಾಸಿನಿ ಮಾತನಾಡುವ ವೇಳೆ ಅಲ್ಲಿಗೆ ಬಂದಂತಹ ವೈದೇಹಿ, ಸುಹಾಸಿನಿಗೆ ಟಾಂಗ್ ನೀಡಿದ್ದಾಳೆ. ನೀನು ನಮಗೆ ಒಳ್ಳೆಯದು ಮಾಡಲಿಲ್ಲ ಅಂದರೂ ಪರವಾಗಿಲ್ಲ ನನ್ನ ಮಕ್ಕಳಿಗೆ ಕೆಟ್ಟದ್ದನ್ನಂತು ಬಯಸಬೇಡ, ನಿನಗೆ ದೇವರು ಸ್ವಲ್ಪ ಒಳ್ಳೆಯ ಬುದ್ಧಿ ಕೊಡಲಿ ಎಂದಿದ್ದಾಳೆ.
ವೈದೇಹಿಗೆ ಭಯಪಡುತ್ತಿರುವ ಸುಹಾಸಿನಿ
ಈಗ ವೈದೇಹಿ ಹೂವಿನಿಂದ ರಂಗೋಲಿ ಹಾಕುತ್ತಿರುವುದನ್ನು ನೋಡಿದ ಸುಹಾಸಿನಿಗೆ ಕೋಪ ಬಂದಿದೆ. ಈ ವೇಳೆ ಕಾಂತನ ಕೈಯಲ್ಲಿದ್ದ ಹೂವನ್ನು ಕೆಳಗಡೆ ಬಿಸಾಡಿದ್ದಾಳೆ. ಇವರಿಗೆ ದೆವ್ವ ಮೆಟ್ಟುಕೊಂಡಿರಬೇಕು, ಅದಕ್ಕೆ ಈ ರೀತಿ ಆಡುತ್ತಿದ್ದಾರೆ ಎಂದು ಒಳಗೆ ಬೈದುಕೊಂಡಿದ್ದಾನೆ. ಇನ್ನು ವೈದೇಹಿ ನೋಡಿ ಯಾರು ಹೀಗೆ ಮಾಡಿದ್ದು ಎಂದು ಕೇಳಿದ್ದಾಳೆ. ಆದರೆ ಕಾಂತಾ ಹೇಳಲಿಲ್ಲ, ನಂತರ ವೈದೇಹಿಗೆ ಇದು ಸುಹಾಸಿನಿ ಕೆಲಸ ಅನ್ನೋದು ಗೊತ್ತಾಗಿದೆ.

ಸುಹಾನಿಸಿಗೆ ಗದರಿದ ವೈದೇಹಿ
ಜೋರಾಗಿ ಸುವಾಸಿನಿ ಅವರೇ ಎಂದು ಕೂಗಿದಾಗ ಸುಹಾಸಿನಿ ಅಲ್ಲಿಗೆ ಬಂದಿದ್ದು ಈ ಕೆಲ ಮಾಡಿದ್ದು ನೀವಾ? ಎಂದು ಕೇಳಿದ್ದಾಳೆ. ನಾನೇ ಮಾಡಿದೆ ಎಂದಾಗ ತಾನು ವಿಡಿಯೋ ತೋರಿಸಿದ್ದನ್ನು ನೆನಪಿಸಿ ಮೊದಲು ಅದನ್ನ ಎತ್ತಿ ಕಾಂತ ಕೈಗೆ ಕೊಡಿ ಇಲ್ಲದಿದ್ದರೆ ಆಗುವುದೇ ಬೇರೆ ಎಂದು ಗದರಿದ್ದಾಳೆ. ಅಷ್ಟರಲ್ಲಿ ಅಮೂಲ್ಯ ಅಲ್ಲಿಗೆ ಬಂದು ನನ್ನ ಅತ್ತೆ ಕೆಲಸ ಮಾಡುತ್ತಾ ಇದ್ದಾರೆ ಎಂದು ಆಶ್ಚರ್ಯಪಟ್ಟಿದ್ದಾಳೆ. ನಂತರ ವೈದೇಹಿ ಬಳಿ ಅಮ್ಮ ನಾವು ಗಣೇಶ ತರಲು ಹೋಗುತ್ತೇವೆ ಎಂದು ಹೇಳಿ ಹೋಗಿದ್ದಾಳೆ.
ರಾಯರ ಮಾತಿಗೆ ಓಕೆ ಎಂದ ಅಗ್ನಿ
ಗೌರಿ ಗಣೇಶ ಹಬ್ಬವನ್ನು ನಾನು ಆಚರಣೆ ಮಾಡಲೇಬೇಕು ಎಂದು ರೌಡಿಗಳ ಬಳಿ ಸೂರ್ಯನಾರಾಯಣರು ಹೇಳಿದ್ದಾನೆ. ಇದಕ್ಕೆ ರೌಡಿಗಳು ಒಪ್ಪಲಿಲ್ಲ ರಾಯರೇ ನೀವು ಮನೆಯಿಂದ ಆಚೆ ಹೋದರೆ ನಮಗೆ ಬಾಸ್ ಬೈರ್ತಾರೆ ಎಂದಿದ್ದಾರೆ.ಯಾಕೆ ನಾನು ಮನೆಯಿಂದ ಹೊರಗಡೆ ಹೋದರೆ ಅಗ್ನಿಗೆ ಏನು ತೊಂದರೆ ಎಂದು ಸೂರ್ಯನಾರಾಯಣ ಪ್ರಶ್ನೆ ಮಾಡಿದ್ದಾನೆ. ಅಷ್ಟರಲ್ಲಿ ಅಗ್ನಿ ಬಂದು ಹಬ್ಬಕ್ಕೆ ಬೇಕಾದ ವ್ಯವಸ್ಥೆಮಾಡುತ್ತಾರೆ. ನೀವು ನಿಮ್ಮ ಇಷ್ಟ ಬಂದ ರೀತಿ ಮಾಡಿ ಎಂದು ಸೂರ್ಯನಾರಾಯಣ ಬಳಿ ಹೇಳಿದ್ದಾನೆ.


Click it and Unblock the Notifications











