Gattimela: ದಾರಿ ಕಾಣದೆ ಕಂಗಾಲಾದ ಮಂಜುನಾಥ್.. ವೇದಾಂತ್‌ಗೆ ಇದು ಅರ್ಥ ಆಗುತ್ತಾ?

By ಪೂರ್ವ

'ಗಟ್ಟಿಮೇಳ' ಧಾರಾವಾಹಿ ನೋಡುಗರಿಗೆ ಮುದ ನೀಡುತ್ತಿದೆ . ಇದೀಗ ಅಂಜಲಿ ವಿಚಾರದಿಂದ ಕಂಗಾಲಾಗಿ ಹೋಗಿರುವ ಮಂಜುನಾಥ್‌ಗೆ ಅದಿತಿ ಹಾಗೂ ಧ್ರುವನ ಮದುವೆ ಹೇಗೆ ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಮನೆಗೆ ಬಂದಾಗಿನಿಂದ ಅಂಜಲಿಗೆ ಏನಾದರೂ ಆಗಿ ಬಿಡುತ್ತೋ.. ಆ ದ್ರೋಹಿ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟರೆ ನನ್ನ ಮಗಳ ಗತಿ ಏನು ಎಂದು ಯೋಚನೆ ಮಾಡುತ್ತಾನೆ.

ಅದಿತಿಯನ್ನೂ ಪಡೆಯಲೇಬೇಕು ಎಂದು ತಪ್ಪು ನಿರ್ಧಾರ ತೆಗೆದುಕೊಂಡ ಇತ ಅಂಜಲಿ ಬಾಳನ್ನೇ ಹಾಳು ಮಾಡಲು ಹೋಗಿದ್ದಾನೆ. ಇನ್ನು ಆ ಬಗ್ಗೆ ಯೋಚನೆ ಮಾಡುತ್ತಾ ಇರುವಾಗ ಅಂಜಲಿ ತಂದೆಯ ಬಳಿ ಬರುತ್ತಾಳೆ. ಆ ವೇಳೆ ಯಶಸ್ ಒಂದು ವಿಡಿಯೋ ಕಳುಹಿಸುತ್ತಾನೆ. ಅದು ಬೇರೆ ಯಾರದ್ದು ಅಲ್ಲ. ತನ್ನ ಮಗಳಿದ್ದೆ. ಅದನ್ನು ನೋಡಿದ ಆತ ಲಘು ಬಗೆಯಿಂದ ಆ ವಿಡಿಯೋ ಡಿಲೀಟ್ ಮಾಡುತ್ತಾನೆ.

Gattimela Kannada Serial written update on April 25th

ತಂದೆಯ ಬಳಿ ಬಂದು ಪ್ರಶ್ನೆ ಮಾಡಿದ ಅಂಜಲಿ

ಅಂಜಲಿ ತಂದೆಯ ಬಳಿ ಪ್ರಶ್ನೆ ಕೇಳುತ್ತಾಳೆ. "ಯಾಕೆ ಅಪ್ಪ ನಿನಗೆ ನನ್ನ ಮೇಲೆ ಅಷ್ಟು ಪ್ರೀತಿ ಬಂದಿದ್ದು. ಮನೆಗೆ ಬಂದ ಕೂಡಲೇ ನನ್ನ ತಬ್ಬಿಕೊಂಡೆಯಲ್ಲಾ" ಎಂದು ಹೇಳಿದಳು. ಇದನ್ನು ಕೇಳಿದ ಆತ ಸುಮ್ಮನೆ ಆಗುತ್ತಾನೆ . "ನನಗೆ ನಿನ್ನನ್ನು ತಬ್ಬಿಕೊಳ್ಳಬೇಕು ಅನ್ನಿಸಿಬಿಟ್ಟಿತು" ಎಂದು ಹೇಳುತ್ತಾರೆ. ಇದನ್ನು ಕೇಳಿದ ಅಂಜಲಿಗೆ ತಂದೆಯ ಉತ್ತರ ಅಷ್ಟಾಗಿ ಸಮಾಧಾನ ನೀಡಲೇ ಇಲ್ಲ. ಇನ್ನೂ ಅದಿತಿ ಕಾಲು ಎಳೆಯುವುದನ್ನು ಅಮ್ಮು ಇನ್ನೂ ಬಿಟ್ಟಿಲ್ಲ.

ಅಮ್ಮು ಮನೆಯಲ್ಲಿ ಹೆಣ್ಣು ನೋಡುವ ಶಾಸ್ತ್ರ

ಅದಿತಿ ಮದುವೆಗೆ ಕೂಡ ಮುನ್ನ ಹುಡುಗಿ ನೋಡುವ ಕಾರ್ಯಕ್ರಮವನ್ನು ಇದೀಗ ಅಮ್ಮು ಹಮ್ಮಿಕೊಂಡು ಇದ್ದಾಳೆ. ಈ ವೇಳೆ ಅದಿತಿ ಸೀರೆ ಉಟ್ಟುಕೊಂಡು ಕೈಯಲ್ಲಿ ಜ್ಯೂಸ್ ಹಿಡಿದುಕೊಂಡು ಗಂಡುಬೀರಿಯ ಹಾಗೆ ಬರುತ್ತಾಳೆ. ಇದನ್ನು ನೋಡಿದ ಅಮ್ಮು ಹೇಳುತ್ತಾಳೆ. "ಸ್ವಲ್ಪ ನಯ ನಾಜೂಕು ಇಟ್ಟುಕೊಂಡು ಬಾ. ಈ ರೀತಿ ಬರಬೇಡ" ಎಂದೆಲ್ಲ ಹೇಳುತ್ತಾಳೆ. ಇದನ್ನು ಕೇಳಿದ ಅದಿತಿ ಕೊಂಚ ನಾಚಿದವರ ಹಾಗೆ ಆಕ್ಟ್ ಮಾಡುತ್ತಾಳೆ. ಆ ಬಳಿಕ ಜ್ಯೂಸ್ ತೆಗೆದುಕೊಂಡು ಮೊದಲು ಹೆಣ್ಣಿನ ಕಡೆಯವರಿಗೆ ಕೊಟ್ಟಾಗ ಅಮ್ಮು ಜೋರಾಗಿ ಹೇಳುತ್ತಾಳೆ. ನಾವು ಗಂಡಿನ ಕಡೆಯವರು ನಮಗೆ ಮೊದಲು ಜ್ಯೂಸ್ ಕೊಡಬೇಕು ಎಂದಾಗ ಕಾಂತ ತೆಗೆದುಕೊಂಡಿದ್ದ ಜ್ಯೂಸ್ ಗ್ಲಾಸ್ ಹಾಗೆ ಇಡುತ್ತಾನೆ.

ಅದಿತಿ ಕಾಲೆಳೆದ ಅಮ್ಮು

ಇನ್ನು ಧ್ರುವ ಬಳಿ ಬಂದ ಅದಿತಿ ಮಾತ್ರ ಮೊದಲಿಗೆ ಅಷ್ಟಾಗಿ ನಾಚಿಕೆ ಪಟ್ಟುಕೊಳ್ಳದವಳು, ತದನಂತರ ಕೊಂಚ ನಾಚುತ್ತಾಳೆ. ಇನ್ನು, ಅದಿತಿ ಮಾತ್ರ ಧ್ರುವ ಬಳಿ ಬಂದು ನಾನು ನಿನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ ಧ್ರುವ. "ಸ್ವಲ್ಪ ದಿನದಲ್ಲಿ ನಾನು ನಿನ್ನ ಮದುವೆ ಆಗುತ್ತೇನೆ. ಆಮೇಲೆ ಮಾತ್ರ ನಾನು ನಿನ್ನವಳು" ಎಂದು ಹೇಳಿದಾಗ ಧ್ರುವ ಮಾತ್ರ ನಗುತ್ತಾ ಇರುತ್ತಾನೆ.

Gattimela Kannada Serial written update on April 25th

ತನ್ನ ಮನದ ನೋವು ಹೇಳಿಕೊಂಡ ವಿಕ್ರಾಂತ್

ಇದನ್ನೆಲ್ಲ ಅದಿತಿ ಧ್ರುವ ಬಳಿ ಹೇಳುವುದನ್ನು ಕೇಳಿಸಿಕೊಂಡ ಮನೆ ಮಂದಿಗೆ ಒಂಥರಾ ಖುಷಿ ಆಗುತ್ತೆ. ಇನ್ನೂ ವಿಕ್ರಾಂತ್ ವೇದಾಂತ ಬಳಿ ಬಂದು ಕೂರುತ್ತಾನೆ.ಇದನ್ನು ಕಂಡ ವೇದಾಂತ್ ಮಾತ್ರ ಮೆತ್ತಗೆ ಆತನನ್ನು ಇಳಿಸಿ, ಏನೋ ನಿನ್ನ ಗೋಳು ಎಂದು ಹೇಳುತ್ತಾನೆ. ಆ ಬಳಿಕ ವಿಕ್ರಾಂತ್, ವೇದಾಂತ ಬಳಿ ಹೇಳುತ್ತಾನೆ. "ನನ್ನ ಮಗುವಿಗೆ ನಾನು ಒಳ್ಳೆಯ ತಂದೆ ಆಗಬೇಕು. ನನಗೆ ತಂದೆ ತಾಯಿ ಕೊರತೆ ಇತ್ತು. ಆದರೆ ನನ್ನ ಮಗುವಿಗೆ ಆ ರೀತಿ ಕೊರತೆ ಆಗದ ಹಾಗೆ ನೋಡಿಕೊಳ್ಳಬೇಕು" ಎಂದು ಹೇಳುತ್ತಾನೆ.

More from Filmibeat

English summary
Zee Kannada serial Gattimela written update on April 25th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X