Gattimela Serial: ಪ್ರೆಸ್ ಮೀಟ್ ಮಾಡುತ್ತಿರುವ ವೇದಾಂತ್‌ನ ಗುಟ್ಟೇನು? ವೈದೇಹಿ ನಡೆಯೇನು?

By ಶೃತಿ ಹರೀಶ್ ಗೌಡ

'ಗಟ್ಟಿಮೇಳ' ಧಾರಾವಾಹಿ ದಿನಕ್ಕೊಂದು ಹೊಸ ತಿರುವು ಪಡೆದುಕೊಂಡು ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುತ್ತಾ ಬಂದಿದೆ. ವೈದೇಹಿಗೆ ತನ್ನ ಗಂಡ ಸೂರ್ಯನಾರಾಯಣ, ಪರಿಮಳ, ಮಂಜುನಾಥ ಮನೆಯಲ್ಲಿ ಇದ್ದಾರೆ ಎಂಬುವುದು ತಿಳಿದಿದೆ. ಇದನ್ನು ಹೇಗಾದರೂ ಮಾಡಿ ಕಂಡು ಹಿಡಿಯಲೇಬೇಕು ಎಂದು ವೈದೇಹಿ ನಿರ್ಧಾರವನ್ನು ಮಾಡಿದ್ದಾಳೆ. ಸುಹಾಸಿನಿ ರೂಮಿನಲ್ಲಿ ಇದ್ದ ಸೂರ್ಯನಾರಾಯಣರ ಫೋಟೋವನ್ನು ಅಮೂಲ್ಯ ಹೊರಗಡೆ ತಂದಿದ್ದಾಳೆ. ಈ ವೇಳೆ ಕಾಂತ ಅಲ್ಲಿಗೆ ಬಂದಿದ್ದು ಫೋಟೋವನ್ನು ನೋಡಿ ಶಾಕ್ ಆಗಿದ್ದಾನೆ.

ನಾನು ಅಗ್ನಿ ಮನೆಗೆ ಅಡುಗೆ ಮಾಡಲು ಹೋದಾಗ ಈ ದೊಡ್ಡವರು ಇದ್ದರು ಎಂದು ಅಂದುಕೊಂಡಿದ್ದಾನೆ. ಅಂದರೆ, ಇವರು ವೇದಾಂತ್ ಬಾಸ್‌ನ ತಂದೆ ಇರಬೇಕು. ಅದಕ್ಕಾಗಿ "ನನ್ನ ಆ ರೌಡಿ ಅಗ್ನಿಯ ಮನೆಗೆ ಕಳುಹಿಸಿದ್ದಾರೆ. ಮೊದಲು ಈ ವಿಷಯವನ್ನು ಆಧ್ಯಾ ಮೇಡಂಗೆ ಹೇಳಬೇಕು ಎಂದುಕೊಂಡು ಅಲ್ಲಿಂದ ಹೊರಡುವಷ್ಟರಲ್ಲಿ ಅಲ್ಲಿಗೆ ಅಮೂಲ್ಯ ಬಂದಿದ್ದು ಕಾಂತನಿಗೆ ಚೆನ್ನಾಗಿ ಬೈದು ಕಳುಹಿಸಿದ್ದಾಳೆ. ವೇದಾಂತ್ ಎಲ್ಲವನ್ನು ನೋಡಿಕೊಳ್ಳುತ್ತಾನೆ ನೀನೇನು ಜಾಸ್ತಿ ತಲೆ ಕೆಡಿಸಿಕೊಳ್ಳಬೇಡ. ಮನೆಯವರಿಗೆ ಆನಂತರ ವಿಷಯವನ್ನು ತಿಳಿಸಿದರೆ ಆಯ್ತು" ಎಂದು ಕಾಂತಾಗೆ ಅಮೂಲ್ಯ ಹೇಳಿದ್ದಾಳೆ.

gattimela-kannada-serial

ಸೂರ್ಯನಾರಾಯಣರಿಗೆ ಕಾಫಿ ಕುಡಿಯಬೇಕು ಎಂದೆನಿಸಿದೆ ಅದನ್ನು ಕೇಳಲು ಸಂಕೋಚವಾಗಿ ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ವಾಕಿಂಗ್ ಮಾಡಿದ್ದಾರೆ‌. ಅಷ್ಟರಲ್ಲಿ ಪರಿಮಳ ನೋಡಿದ್ದು ಅಣ್ಣ ಏನಾದರೂ ಬೇಕಾ ಎಂದು ಕೇಳಿದ್ದಾರೆ. ಅಣ್ಣ ನಿಮಗೆ ಇವತ್ತು ಕಾಫಿ ಕೊಡುವುದನ್ನು ಮರೆತು ಬಿಟ್ಟೆ ದಯವಿಟ್ಟು ಇಲ್ಲಿ ಕಾಫಿ ಇದೆ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಈ ವೇಳೆ ಸೂರ್ಯ ನಾರಾಯಣರ ಬಳಿ ನಿಮ್ಮ ಹೆಂಡತಿ ಹಾಗೂ ಮಕ್ಕಳ ಬಗ್ಗೆ ನಿಮಗೆ ನೆನಪಿದೆಯಾ? ನೀವು ನಿಮ್ಮ ಹೆಂಡತಿ ಬಂದರೆ ಗುರುತು ಹಿಡಿಯುತ್ತೀರಾ ಎಂದು ಪರಿಮಳ ಪ್ರಶ್ನೆ ಮಾಡಿದ್ದಾರೆ. ಹೆಂಡತಿಯ ಮುಖ ನನಗೆ ಈಗಲೂ ಅಸ್ಪಷ್ಟ ಮಕ್ಕಳು ಬಂದರೆ ನಾನು ಪತ್ತೆ ಹಚ್ಚುತ್ತೇನೆ ಎಂದು ಸೂರ್ಯನಾರಾಯಣ್ ಹೇಳಿದ್ದಾರೆ.

ಇದ್ದಕ್ಕಿದ್ದಂತೆ ಪ್ರೆಸ್ ಮೀಟ್ ಕರೆದ ವೇದಾಂತ್

ಎಲ್ಲರೂ ಊಟಕ್ಕೆ ಕುಳಿತಿರುವ ವೇಳೆ ವೇದಾಂತ್‌ಗೆ ಒಂದು ಫೋನ್ ಬಂದಿದೆ. ಇದೇ ವೇಳೆ ವೇದಾಂತ್ ನಾಳೆ ಪ್ರೆಸ್ ಮೀಟ್ ಅರೇಂಜ್ ಮಾಡಿ ಅಲ್ಲಿ ಒಂದು ಹೊಸ ವಿಷಯವನ್ನು ರೀವಿಲ್ ಮಾಡೋದು ಇದೆ. ಯಾರಿಗೂ ಸಹ ಏನು ಎಂಬುದನ್ನು ಹೇಳಬೇಡಿ ಎಲ್ಲವೂ ಗ್ರಾಂಡ್ ಆಗಿ ಅರೇಂಜ್ ಆಗಬೇಕು ಎಂದು ಹೇಳಿದ್ದಾನೆ. ಆಧ್ಯಾ ಅಮೂಲ್ಯ ಬಳಿ ತಿರುಗಿ ಅಣ್ಣ ಏನು ಮಾತನಾಡುತ್ತಿದ್ದಾನೆ. ನಿನಗೆ ಏನಾದರೂ ಗೊತ್ತಾ? ಹೀಗೆ ಯಾಕೆ ಪ್ರೆಸ್ ಮೀಟ್ ಎಂದು ಕೇಳಿದ್ದಾಳೆ. ಇದಕ್ಕೆ ಅಮೂಲ್ಯ ನನಗೇನು ಗೊತ್ತಿಲ್ಲ. ಫೋನ್ ಕಟ್ ಆದ ಮೇಲೆ ಅವನೇ ಎಲ್ಲವನ್ನು ತಿಳಿಸುತ್ತಾನೆ ಎಂದು ಹೇಳಿದ್ದಾಳೆ.

gattimela-kannada-serial

ಫೋನ್ ಕಟ್ ಆದ ಮೇಲೆ ಎಲ್ಲರೂ ವೇದಾಂತ್ ಬಳಿ ಪ್ರೆಸ್ ಮೀಟ್ ಯಾಕೆ ಎಂದು ಕೇಳಿದ್ದಾರೆ. ಆದರೆ ವೇದಾಂತ್ ಒಗಟಾಗಿ ಮಾತನಾಡಿ ನಾಳೆ ಒಂದು ಸತ್ಯ ರೀವಿಲ್ ಆಗುತ್ತದೆ. ಆ ಸತ್ಯ ಹೊರಗಡೆ ಬಂದ ಮೇಲೆ ನಮ್ಮೆಲ್ಲರ ಬದುಕು ಸಹ ಬದಲಾಗುತ್ತದೆ ಎಂದು ಹೇಳಿದ್ದಾನೆ. ಸುಹಾಸಿನಿಗೆ ವೇದಾಂತ್ ಮಾತುಗಳನ್ನು ಕೇಳಿ ಶಾಕ್ ಆಗಿದೆ. ಈ ವೇಳೆ ವೈಜಯಂತಿ ಅಮ್ಮ ಸುಹಾಸಿನಿ ನೀನ್ಯಾಕೆ ಹೆದರುತ್ತಾ ಇದ್ದೀಯಾ. ನಾಳೆ ಎಲ್ಲ ವಿಷಯ ಗೊತ್ತಾಗುತ್ತದೆ ತಾನೇ ಎಂದಿದ್ದಾರೆ. ಸುಹಾಸಿನಿ ಯೋಚನೆ ಮಾಡುತ್ತಾ ನನಗೆ ತಿಳಿಯದಂತೆ ಈ ವೇದಾಂತ್ ಏನು ಮಾಡಲು ಹೊರಟಿದ್ದಾನೆ ಎಂದುಕೊಂಡಿದ್ದಾರೆ.

ಗಂಡನ ನೋಡುವ ಕಾತುರದಲ್ಲಿ ವೈದೇಹಿ

ವೈದೇಹಿಗೆ ಸೂರ್ಯನಾರಾಯಣರನ್ನು ನೋಡುವ ಕಾತುರ ಹೆಚ್ಚಾಗಿದೆ. ಅದು ಸೂರ್ಯನಾರಾಯಣರದ್ದೇ ವಾಯ್ಸ್ ನಾನು ಈಗ ಪರಿಮಳ ಅವರ ಮನೆಗೆ ಯಾವ ರೀತಿ ಹೋಗಲಿ. ಕೃತಜ್ಞತೆ ಸಲ್ಲಿಸುವ ರೀತಿ ಹೋಗಿ ಅವರ ಮನೆಯಲ್ಲಿ ಮೊದಲು ಸೂರ್ಯ ಎಂಬುದನ್ನು ಕನ್ಫರ್ಮ್ ಮಾಡಿಕೊಳ್ಳುತ್ತೇನೆ ಎಂದುಕೊಂಡಿದ್ದಾರೆ. ಮನೆಗೆ ಹೋಗುವ ವೇಳೆ ಕಜ್ಜಾಯವನ್ನ ಮಾಡಿಕೊಂಡು ಹೋದರೆ ಚೆನ್ನಾಗಿ ಇರುತ್ತದೆ. ಸೂರಿಗೆ ಕಜ್ಜಾಯ ಎಂದರೆ ಇಷ್ಟ ಅಂದುಕೊಂಡಿದ್ದಾರೆ. ಈಗ ಎಲ್ಲರ ಚಿತ್ತ ವೇದಾಂತ್ ಮಾಡಲು ಹೊರಟಿರುವ ಪ್ರೆಸ್ ಮೀಟ್‌ನತ್ತ ನೆಟ್ಟಿದೆ.

More from Filmibeat

English summary
Zee Kannada Gattimela serial october 5th episode. Here is the details about Vedanth arranged preesmeet revealing a secret
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X