Gattimela: ಕಳೆದು ಹೋದ ಒಡವೆಗಳೆಲ್ಲಾ ಮತ್ತೆ ಸಿಕ್ಕಿದ್ದು ಹೇಗೆ..?
'ಗಟ್ಟಿಮೇಳ' ಧಾರಾವಾಹಿಯಲ್ಲಿ ಸೂರ್ಯ ಪ್ರಕಾಶ್ ಮೇಲಿನ ದ್ವೇಷ ಅವರ ಮಕ್ಕಳ ಮೇಲೆ ತಿರುಗಿದೆ. ಅಗ್ನಿ ಹಾಗೂ ತೇಜಸ್‌ಗೆ ಸೂರ್ಯ ಪ್ರಕಾಶ್‌ನಿಂದ ಸಮಸ್ಯೆ ಆಗಿದೆ. ಅವರ ತಂದೆ ತಾಯಿ ಜೈಲು ಸೇರುವಂತೆ ಆಗಿದೆ. ಹೀಗಾಗಿ ಅಗ್ನಿ ಮತ್ತು ತೇಜಸ್ ಸೂರ್ಯ ಪ್ರಕಾಶ್ ಮಕ್ಕಳ ಬದುಕನ್ನು ಹಾಳು ಮಾಡಬೇಕು ಎಂದು ಸಾಕಷ್ಟು ಪ್ರಯತ್ನ ಪಡುತ್ತಿರುತ್ತಾರೆ.
ಆದರೆ ಇವರಿಬ್ಬರಿಗೆ ಸುಹಾಸಿನಿ ಸಹಾಯ ಮಾಡುತ್ತಿದ್ದಾಳೆ. ವೇದಾಂತ್ ಚಿಕ್ಕಮ್ಮ ಆಗಿ ಸುಹಾಸಿನಿ, ಅಗ್ನಿಗೆ ಸಪೋರ್ಟ್ ಮಾಡುತ್ತಿರುವುದರ ಹಿಂದಿನ ರಹಸ್ಯ ಇನ್ನೂ ಯಾರಿಗೂ ತಿಳಿಯಲಿಲ್ಲ. ಧ್ರುವ ಈಗ ಸ್ವಲ್ಪ ಚೇತರಿಸಿಕೊಂಡಿದ್ದು, ಓಡಾಡುತ್ತಿದ್ದಾನೆ. ಅದಿತಿ ಹಾಗೂ ಧ್ರುವನ ಪ್ರೀತಿ ವಿಚಾರ ತಿಳಿದ ವೇದಾಂತ್ ಎಂಗೇಜ್‌ಮೆಂಟ್ ಕೂಡ ಮಾಡಿಸಿದ್ದಾನೆ. ಇವರಿಬ್ಬರ ಎಂಗೇಜ್‌ಮೆಂಟ್ ನಡೆದಿರುವುದಕ್ಕೆ ತೇಜಸ್ ಗರಂ ಆಗಿದ್ದಾನೆ.

ಅದಿತಿಯನ್ನು ತೇಜಸ್ ತಾನು ಮದುವೆಯಾಗಬೇಕೆಂದು ಬಯಸಿದ್ದು, ಈಗಾಗಲೇ ಒಂದೆರಡು ಸಲ ಗಲಾಟೆ ಮಾಡಿದ್ದ. ಅದಿತಿ ನನ್ನವಳು. ನನಗೆ ಕೊಟ್ಟು ಮದುವೆ ಮಾಡಬೇಕು ಎಂದು ಖಡಕ್ ಆಗಿ ಹೇಳಿದ್ದ. ಹಾಗಿದ್ದರೂ ಅದಿತಿ ನಿಶ್ಚಿತಾರ್ಥ ಈಗ ಧ್ರುವನ ಜೊತೆಗೆ ನಡೆದಿದೆ. ಇದರಿಂದ ತೇಜಸ್‌ಗೆ ಕೋಪ ಬಂದಿದೆ. ವೇದಾಂತ್ ಮನೆಯಲ್ಲಿ ಅದಿತಿ ಹಾಗೂ ಧ್ರುವನ ಮದುವೆ ಕೆಲಸಗಳು ನಡೆಯುತ್ತಿವೆ. ಇಂದು ಪೂಜೆ ಇಟ್ಟುಕೊಂಡಿದ್ದು, ಮನೆಯಲ್ಲಿ ತಯಾರಿ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಅನಾಹುತವೊಂದು ನಡೆದಿದೆ.
ಇತ್ತ ತೇಜಸ್, ಮಂಜುನಾಥ್‌ಗೆ ಕಾಟ ಕೊಡುತ್ತಿದ್ದಾನೆ. ಅದಿತಿ ನನ್ನವಳು. ಅವಳನ್ನು ನಾನು ಮಾತ್ರವೇ ಮದುವೆಯಾಗಬೇಕು. ಧ್ರುವನಿಗೆ ಕೊಟ್ಟು ಅವಳನ್ನು ಮದುವೆ ಮಾಡಿದರೆ, ನಿಮ್ಮನ್ನೆಲ್ಲಾ ಸುಮ್ಮನೆ ಬಿಡಲ್ಲ ಎಂದು ಹೇಳಿದ್ದಲ್ಲದೇ, ಅಂಜಲಿಯ ವೈಯಕ್ತಿಕ ವೀಡಿಯೋವನ್ನು ಮಂಜುನಾಥ್‌ಗೆ ಕಳಿಸಿದ್ದಾನೆ. ಅದಿತಿ ನನಗೆ ಸಿಗದೇ ಹೋದರೆ, ನಿನ್ನ ಕೊನೆಯ ಮಗಳು ಅಂಜಲಿಯ ವಿಡಿಯೋ ಲೀಕ್ ಮಾಡುವುದಾಗಿ ಹೆದರಿಸುತ್ತಾನೆ. ಮಂಜುನಾಥ್‌ಗೆ ಏನು ಮಾಡಬೇಕು ಎಂಬುದೇ ಗೊತ್ತಾಗುವುದಿಲ್ಲ. ಮಂಜುನಾಥ್ ಪರಿಸ್ಥಿತಿಯನ್ನು ನಿಭಾಯಿಸಲು ತಿಳಿಯದೇ ಒದ್ದಾಡುತ್ತಿರುತ್ತಾನೆ.

ವೇದಾಂತ್ ಮನೆಯಲ್ಲಿ ಪೂಜೆ ನಡೆಯುವ ಸಂದರ್ಭದಲ್ಲೇ ಸುಹಾಸಿನಿ ಹಾಗೂ ತೇಜಸ್ ಪ್ಲಾನ್ ಮಾಡಿದ್ದಾರೆ. ಅಮೂಲ್ಯಳ ಒಡವೆಗಳನ್ನು ಕದ್ದು ತನಗೆ ನೀಡುವಂತೆ ತೇಜಸ್, ಮಂಜುನಾಥ್‌ಗೆ ಹೇಳಿದ್ದಾನೆ. ಒಡವೆಗಳನ್ನು ತಂದುಕೊಟ್ಟರೆ, ಅಂಜಲಿ ವೀಡಿಯೋವನ್ನು ಡಿಲೀಟ್ ಮಾಡುವುದಾಗಿ ಹೇಳುತ್ತಾನೆ. ಮಂಜುನಾಥ್ ಬೇರೆ ದಾರಿ ಇಲ್ಲದೆ ಒಡವೆಗಳನ್ನು ಕದ್ದು, ತೇಜಸ್‌ಗೆ ಕೊಡುತ್ತಾನೆ. ಈಗ ಅದು ಸುಹಾಸಿನಿ ಕೈ ಸೇರಿದ್ದು, ಅಮೂಲ್ಯ ಹಾಗೂ ಮಂಜುನಾಥ್ ಮರಿಯಾದೆ ತೆಗೆಯಬೇಕು ಎಂದಿದ್ದಾಳೆ. ಅಮೂಲ್ಯಾಳಿಗೆ ಒಡವೆಗಳನ್ನು ಹಾಕಿಕೊ ಎಂದು ಎಲ್ಲರ ಮುಂದೆ ಬಲವಂತ ಮಾಡುತ್ತಾಳೆ.
ಅಮೂಲ್ಯ ರೂಮಿಗೆ ಹೋಗಿ ನೋಡಿದಾಗ ಒಂದೂ ಒಡವೆಗಳು ಇರುವುದಿಲ್ಲ. ಏನಾಗಿದೆ ಎಂಬುದು ತಿಳಿಯದ ಅಮೂಲ್ಯ ಸಬೂಬು ಹೇಳುತ್ತಾಳೆ. ಆದರೆ ಮಂಜುನಾಥ್ ಮರ್ಯಾದೆ ತೆಗೆಯಲೇಬೇಕು ಎಂದು ನಿರ್ಧರಿಸಿರುವ ಸುಹಾಸಿನಿ ತಾನೇ ಒಡವೆಗಳನ್ನು ಸೆಲೆಕ್ಟ್ ಮಾಡಲು ಅಮೂಲ್ಯ ಜೊತೆಗೆ ಪುನಃ ರೂಮಿಗೆ ಹೋಗುತ್ತಾಳೆ. ಆಗ ಅಲ್ಲಿ ಎಲ್ಲಾ ಒಡವೆಗಳು ಇರುತ್ತವೆ. ಇದರಿಂದ ಸುಹಾಸಿನಿ ಹಾಗೂ ಅಮೂಲ್ಯ ಇಬ್ಬರಿಗೂ ಶಾಕ್ ಆಗುತ್ತದೆ.

ಈ ಮಧ್ಯೆ ಸುಹಾಸಿನಿ ನಡೆಯನ್ನು ತಿಳಿದ ವೈದೇಹಿ, ಸುಹಾಸಿನಿ ರೂಮಿನಲ್ಲಿದ್ದ ಒಡವೆಗಳನ್ನು ತೆಗೆದುಕೊಂಡು ಹೋಗಿ ಅಮೂಲ್ಯ ರೂಮಿನಲ್ಲಿ ಇಟ್ಟಿರುತ್ತಾಳೆ. ಇದು ಯಾರಿಗೂ ತಿಳಿದಿರುವುದಿಲ್ಲ. ಒಟ್ನಲ್ಲಿ ಸುಹಾಸಿನಿ ಮಾಡಿದ ಪ್ಲಾನ್ ತಲೆ ಕೆಳಗಾಗಿದೆ.


Click it and Unblock the Notifications










