Gattimela: ಅದಿತಿ- ಧ್ರುವನ ಪ್ರೀತಿಗೆ ಅಡ್ಡ ಬಂದ ಮಂಜುನಾಥ್

By ಪ್ರಿಯಾ ದೊರೆ

'ಗಟ್ಟಿಮೇಳ' ಧಾರಾವಾಹಿಯಲ್ಲಿ ಧ್ರುವ ಪ್ರೀತಿಸುತ್ತಿರುವ ಹುಡುಗಿಯನ್ನು ಹುಡುಕುವುದೇ ದೊಡ್ಡ ತಲೆ ನೋವಾಗಿದೆ. ವೇದಾಂತ್‌ನನ್ನು ಯಾಮಾರಿಸಿ ಅದಿತಿ ಮುತ್ತು ಕೊಡುತ್ತಿರುವುದರಿಂದ ಮನೆಯವರೆಲ್ಲಾ ತಲೆ ಕೆಡಿಸಿಕೊಂಡಿದ್ದಾರೆ.

ಅದಿತಿ ಮತ್ತು ಧ್ರುವನ ಪ್ರೀತಿಗೆ ಆದ್ಯ ಸಪೋರ್ಟ್ ಮಾಡುತ್ತಿದ್ದಾಳೆ. ಹೀಗಾಗಿ ಮನೆಯವರಿಗೆ ಸತ್ಯ ತಿಳಿಯದಂತೆ ನೋಡಿಕೊಳ್ಳುತ್ತಿದ್ದಾಳೆ. ಆದರೆ ವೇದಾಂತ್ ಆ ಹುಡುಗಿಯನ್ನು ಹುಡುಕಲೇಬೇಕು ಎಂದು ಪ್ರಯತ್ನಿಸುತ್ತಿದ್ದಾನೆ.

ಅದಿತಿ, ಅಮೂಲ್ಯ ಮನೆಗೆ ಬಂದಾಗಲೂ ಧ್ರುವನಿಗೆ ಮುತ್ತು ಕೊಡುತ್ತಾಳೆ. ಆದರೆ, ಅದು ನಾನು ಕೊಟ್ಟಿದ್ದು ಎಂದು ಆದ್ಯ ಸುಳ್ಳು ಹೇಳಿ ವೇದಾಂತ್‌ನನ್ನು ಯಾಮಾರಿಸುತ್ತಾಳೆ.

ಅದಿತಿ ಪ್ರೀತಿ ವಿಷಯ ತಿಳಿದ ಅಮೂಲ್ಯ

ಅದಿತಿ ಪ್ರೀತಿ ವಿಷಯ ತಿಳಿದ ಅಮೂಲ್ಯ

ಅಮೂಲ್ಯಗೆ ಅದಿತಿ ತಾನು ಧ್ರುವನನ್ನು ಪ್ರೀತಿಸುತ್ತಿರುವ ವಿಚಾರವನ್ನು ಹೇಳುತ್ತಾಳೆ. ಇದರಿಂದ ಅಮೂಲ್ಯ ತನಗೆ ಬೈಯುತ್ತಾಳೆ ಎಂದು ಅಂದುಕೊಂಡಿರುತ್ತಾಳೆ. ಆದರೆ ಅದಿತಿ ಪ್ರೀತಿಯನ್ನು ಅಮೂಲ್ಯ ಒಪ್ಪಿಕೊಂಡು, ತಾನೇ ಮುಂದೆ ನಿಂತು ಮದುವೆ ಮಾಡಿಸುವುದಾಗಿ ಹೇಳುತ್ತಾಳೆ. ಇತ್ತ ಮಂಜು ಬಳಿ ಅದಿತಿ ಬಗ್ಗೆ ಚಾಡಿ ಹೇಳುತ್ತಾರೆ. ಧೃವನ ಜೊತೆಗೆ ಅದಿತಿ ಓಡಾಡುತ್ತಿದ್ದಾಳೆ ಎಂಬ ವಿಚಾರವನ್ನು ತಿಳಿದ ಮಂಜು, ಆಕೆಯ ಮದುವೆ ಮಾಡಲು ಮುಂದಾಗುತ್ತಾನೆ. ಹಾಗಾಗಿ ಯಾರಿಗೂ ಹೇಳದೆ ಅದಿತಿಯನ್ನು ತನ್ನ ತಂಗಿಯ ಮನೆಗೆ ಕಳಿಸಿದ್ದಾನೆ. ಇದರಿಂದ ಪರಿಮಳ ಗೊಂದಲದಲ್ಲಿ ಸಿಲುಕಿದ್ದಾಳೆ.

ವೈದೇಹಿಗೆ ಕಷ್ಟ ಕೊಡುತ್ತಿರುವ ಸುಹಾಸಿನಿ

ವೈದೇಹಿಗೆ ಕಷ್ಟ ಕೊಡುತ್ತಿರುವ ಸುಹಾಸಿನಿ

ಇತ್ತ ಅಗ್ನಿ, ಸುಹಾಸಿನಿ ಬಳಿ ವೈದೇಹಿಗೆ ಕಷ್ಟ ಕೊಡುವಂತೆ ಹೇಳಿದ್ದಾನೆ. ಹಾಗಾಗಿ ಸುಹಾಸಿನಿ ಬೇಕಂತಲೇ ತೊಳೆದಿರುವ ಪಾತ್ರೆಗಳನ್ನು ಮತ್ತೆ ತೊಳೆಯಲು ಹೇಳುತ್ತಾಳೆ. ಸುಹಾಸಿನಿ, ವೈದೇಹಿಗೆ ಕೊಡುತ್ತಿರುವ ಕಷ್ಟವನ್ನು ನೋಡಿದ ಅಜ್ಜಿ ಬೇಸರ ಮಾಡಿಕೊಳ್ಳುತ್ತಾಳೆ. ಸುಹಾಸಿನಿಗೆ ಬೈಯುತ್ತಾಳೆ. ಆದರೆ ಸುಹಾಸಿನಿ ನಿನಗೆ ಕಣ್ಣು ಕಾಣೋದಿಲ್ಲ. ಅಷ್ಟಕ್ಕೂ ಅವಳು ಈ ಮನೆ ಕೆಲಸದವಳು ಎಂದು ದಬಾಯಿಸುತ್ತಾಳೆ. ಇದರಿಂದ ಅಜ್ಜಿ ಏನೂ ಮಾಡಲಾಗದೇ ಸುಮ್ಮನಾಗುತ್ತಾರೆ.

ಮನೆ ಬಿಟ್ಟು ಹೋಗುವೆ ಎಂದ ವೈದೇಹಿ

ಮನೆ ಬಿಟ್ಟು ಹೋಗುವೆ ಎಂದ ವೈದೇಹಿ

ಇನ್ನು ಅಮೂಲ್ಯಳನ್ನು ಕರೆಸಿದ ಮಂಜು, ಅದಿತಿಗೆ ಶ್ರೀಮಂತ ಹುಡುಗ ಬೇಡ. ನಮ್ಮ ಸ್ಟೇಟಸ್‌ಗೆ ಸೂಟ್ ಆಗುವಂತಹ ಹುಡುಗನನ್ನು ನೋಡಿ ಮದುವೆ ಮಾಡಬೇಕು. ಹಾಗಂತ ಭಾಷೆ ಮಾಡು ಎನ್ನುತ್ತಾನೆ. ಅಮೂಲ್ಯ ವಿಧಿ ಇಲ್ಲದೇ, ಸತ್ಯ ಗೊತ್ತಿದ್ದರೂ ಅಪ್ಪನಿಗೆ ಮಾತು ಕೊಡುತ್ತಾಳೆ. ಇತ್ತ ಅಜ್ಜಿ ವೈದೇಹಿಗೆಬೈಯುತ್ತಾಳೆ. ಮಕ್ಕಳ ಬಳಿ ನೀನೇ ವೈದೇಹಿ ಅಂತ ಹೇಳುತ್ತೀನಿ ಎನ್ನುತ್ತಾಳೆ. ಆದರೆ, ವೈದೇಹಿ ಹಾಗೇನಾದರೂ ಮಾಡಿದರೆ, ನಾನು ಮನೆಯನ್ನು ಬಿಟ್ಟು ಹೋಗುತ್ತೇನೆ. ನಾನು ಯಾರು ಎಂಬುದನ್ನು ಯಾರಿಗೂ ಹೇಳಬಾರದು ಎಂದು ಷರತ್ತು ಹಾಕುತ್ತಾಳೆ.

ಅದಿತಿ ಪರ ವೇದಾಂತ್ ನಿಲ್ಲುತ್ತಾನಾ..?

ಅದಿತಿ ಪರ ವೇದಾಂತ್ ನಿಲ್ಲುತ್ತಾನಾ..?

ಅಮೂಲ್ಯ ಮನೆಗೆ ಬಂದು ವೇದಾಂತ್ ಬಳಿ ಧ್ರುವನ ಹುಡುಗಿಯನ್ನು ಹುಡುಕಬೇಡಿ. ಅದರಿಂದ ಸಮಯ ಹಾಳು ಎಂದು ಹೇಳಿರುತ್ತಾಳೆ. ಇದರಿಂದ ವೇದಾಂತ್ ಬೇಸರ ಮಾಡಿಕೊಳ್ಳುತ್ತಾನೆ. ಬಳಿಕ ಅಮೂಲ್ಯ ಬಳಿ ಬಂದು ಹಾಗೆನ್ನಲು ಕಾರಣವೇನು ಎಂದು ಕೇಳುತ್ತಾನೆ. ಆಗ ಅಮೂಲ್ಯ ನಾನು ಆ ಹುಡುಗಿಯನ್ನು ಭೇಟಿ ಮಾಡಿದೆ. ಅವರ ಮನೆಯಲ್ಲಿ ಈ ಮದುವೆಗೆ ಒಪ್ಪುವುದಿಲ್ಲ. ಹಾಗಾಗಿ ಆ ಆಲೋಚನೆಯನ್ನು ಬಿಟ್ಟು ಬಿಡಿ ಎಂದೆ ಎನ್ನುತ್ತಾಳೆ. ಆದರೆ, ಆ ಹುಡುಗಿ ಅದಿನೇ ಎಂದು ವೇದಾಂತ್‌ ಹೇಳುತ್ತಾಳಾ..? ಹಾಗೇನಾದರೂ ಹೇಳಿದರೆ ಮಂಜುನನ್ನು ವೇದಾಂತ್ ಒಪ್ಪಿಸುತ್ತಾನಾ ಕಾದು ನೋಡಬೇಕಿದೆ.

More from Filmibeat

English summary
Gattimela serial 09th March Episode Written Update. Even manjunath doesn’t know about adithi and dhruva love still he is separating them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X