Gattimela: ಧ್ರುವನ ಪ್ರೇಯಸಿ ಸಿಕ್ಕಾಯ್ತು : ಸುಹಾಸಿನಿ ಪ್ಲ್ಯಾನ್ ಉಲ್ಟಾ ಆಯ್ತು
'ಗಟ್ಟಿಮೇಳ' ಧಾರಾವಾಹಿಯಲ್ಲಿ ವಸಿಷ್ಠ ಕುಟುಂಬದ ವೈದೇಹಿ ಅನ್ನು ಹುಡುಕುವುದೇ ಒಂದು ದೊಡ್ಡ ಟಾಸ್ಕ್. ಇದರ ನಡುವೆ ಈಗ ಧ್ರುವನ ಲವರ್ ಯಾರು ಎಂಬುದನ್ನು ಹುಡುಕಲಾಗುತ್ತಿದೆ. ಧಾರಾವಾಹಿ ಕಥೆ ಆಗಾಗ ಎಲ್ಲಿಂದಲೋ ಎಲ್ಲಿಗೋ ಹೋಗುತ್ತಿದೆ. ಪ್ರೇಕ್ಷಕರಿಗೆ ಅಮೂಲ್ಯ ಹಾಗೂ ವೇದಾಂತ್ ಸ್ಟೋರಿ ಸಿಕ್ಕಾಪಟ್ಟೆ ಮನರಂಜನೆಯನ್ನು ಕೊಡುತ್ತಿದೆ.
ಅದಿತಿ ಹಾಗೂ ಧ್ರುವ ಪ್ರೀತಿಸುತ್ತಿರುವುದು ಈಗ ಎಲ್ಲರಿಗೂ ಗೊತ್ತಾಗಿದೆ. ಮನೆಯಲ್ಲಿ ಎಲ್ಲರ ಎದುರಿಗೆ ಅದಿತಿಯನ್ನು ಕರೆತರಲು ವೇದಾಂತ್ ಮುಂದಾಗಿದ್ದಾನೆ. ಅದಿತಿ ಹಾಗೂ ಧ್ರುವ ಪ್ರೀತಿಸುತ್ತಿರುವುದು ಅಮೂಲ್ಯ, ಆರತಿ, ಆದ್ಯ, ಅಂಜಲಿ ಹಾಗೂ ಸುಹಾಸಿನಿಗೆ ತಿಳಿದಿದೆ. ಈಗಾಗಲೇ ಸುಹಾಸಿನಿ ಇವರಿಬ್ಬರನ್ನು ದೂರ ಮಾಡಲು ಸಾಕಷ್ಟು ಪ್ಲ್ಯಾನ್ ಮಾಡಿದ್ದಳು. ಆದರೆ, ಎಲ್ಲಾ ಪ್ಲ್ಯಾನ್‌ಗಳು ಕೂಡ ಉಲ್ಟಾ ಆದವು.

ಈಗ ವೇದಾಂತ್ ಮುಂದೆ ಬೇರೆ ಹುಡುಗಿಯನ್ನು ಕರೆ ತಂದು ಮೋಸ ಮಾಡಬೇಕು ಎಂದು ಅಂದುಕೊಂಡಿದ್ದಳು. ಆದರೆ, ಸುಹಾಸಿನಿ ಪ್ಲ್ಯಾನ್ ತಿಳಿದ ಅಮೂಲ್ಯ ಅವಳಿಗೆ ತಿರುಮಂತ್ರ ಹಾಕಿದ್ದಾಳೆ. ಅದಿತಿಯೇ ಧ್ರುವನ ಪ್ರೇಯಸಿ ಎಂಬುದು ಈಗ ವೇದಾಂತ್‌ಗೂ ಗೊತ್ತಾಗಿದೆ. ಹಾಗಾಗಿ ವೇದಾಂತ್ ಮನೆಗೆ ಅದಿತಿಯನ್ನು ಕರೆದುಕೊಂಡು ಬಂದಿದ್ದಾನೆ. ಎಲ್ಲರ ಮುಂದೆ ನಿಲ್ಲಿಸಿ ಇವಳೇ ಧ್ರುವನ ಲವರ್ ಎಂದು ತೋರಿಸಿದ್ದಾನೆ. ಇದರಿಂದ ಸುಹಾಸಿನಿ ಫುಲ್ ಶಾಕ್ ಆಗಿದ್ದಾಳೆ. ಆದರೆ ಉಳಿದವರೆಲ್ಲಾ ಖುಷಿಯಿಂದ ಅದಿತಿಯನ್ನು ಒಪ್ಪಿಕೊಂಡಿದ್ದಾರೆ.
ಅದಿತಿ ಹಾಗೂ ಧ್ರುವನನ್ನು ಮಾತನಾಡಲು ಕಳಿಸಿದ್ದಾರೆ. ಆದರೆ, ಅಮೂಲ್ಯಳಿಗೆ ಅವರ ತಂದೆಯದ್ದೇ ಯೋಚನೆ. ಮಂಜುನಾಥ್ ಯಾವುದೇ ಕಾರಣಕ್ಕೂ ಅದಿತಿಯನ್ನು ಶ್ರೀಮಂತರ ಮನೆಗೆ ಕೊಡಬಾರದು. ಅಷ್ಟೇ ಅಲ್ಲದೇ, ನಿಮ್ಮ ಮನೆಗೂ ಆಕೆ ಸೊಸೆಯಾಗಿ ಹೋಗಬಾರದು. ಊರಿನವರ ಬಳಿ ಮಾತು ಕೇಳುವುದು ಸರಿಯಲ್ಲ ಎಂದು ಮಂಜುನಾಥ್ ಹೇಳಿರುತ್ತಾನೆ. ಅಮೂಲ್ಯ ಬಳಿ ಮಾತು ತೆಗೆದುಕೊಂಡಿರುತ್ತಾನೆ. ಈ ಮಾತುಗಳು ಅಮೂಲ್ಯಳನ್ನು ಕಾಡುತ್ತಿರುತ್ತದೆ.
ಅಮೂಲ್ಯ, ಅದಿತಿ ಬಗ್ಗೆ ವೇದಾಂತ್ ಬಳಿ ಹೇಳುವುದನ್ನು ಸ್ವಲ್ಪ ತಡೆದಿರುತ್ತಾಳೆ. ಆದರೂ ಕೂಡ ವೇದಾಂತ್‌ಗೆ ಸತ್ಯ ಹೇಳಲೇಬೇಕಾದ ಪರೀಸ್ಥಿತಿ ಬಂದು ಈ ಎಲ್ಲಾ ಸತ್ಯವನ್ನು ಹೇಳಿರುತ್ತಾಳೆ. ಆದರೆ, ಮಂಜುನಾಥ್‌ಗೆ ಮಾತು ಕೊಟ್ಟ ವಿಚಾರ ಇನ್ನೂ ವೇದಾಂತ್‌ಗೆ ಗೊತ್ತಿರುವುದಿಲ್ಲ. ವೇದಾಂತ್‌ಗೆ ಈ ವಿಚಾರವನ್ನು ಹೇಳಬೇಕೋ ಬೇಡವೋ ಎಂಬ ಗೊಂದಲದಲ್ಲಿ ಅಮೂಲ್ಯ ಇದ್ದಾಳೆ. ಹಾಗೊಂದು ವೇಳೆ ವೇದಾಂತ್ ಗೆ ಈ ಸತ್ಯ ಗೊತ್ತಾದರೆ, ಮುಂದೇನಾಗುತ್ತದೋ ಗೊತ್ತಿಲ್ಲ.

ಧಾರಾವಾಹಿಯಲ್ಲಿ ಸದ್ಯ ಧ್ರುವ ಓಡಾಡುವಂತಾಗಿ, ಮಾತನಾಡಲು ಶುರು ಮಾಡಿದರೆ, ಸುಹಾಸಿನಿ ಬಣ್ಣ ಬಯಲಾಗುತ್ತದೆ. ವೈಜಯಂತಿಯೇ ವೈದೇಹಿ ಎಂಬ ಸತ್ಯ ಗೊತ್ತಾಗುತ್ತದೆ. ಸುಹಾಸಿನಿ, ಅಗ್ನಿ ಸೇರಿ ಕಳೆದ 25 ವರ್ಷದಿಂದ ವೇದಾಂತ್, ವಿಕ್ರಮ್, ಧ್ರುವ ಹಾಗೂ ಆದ್ಯಳಿಗೆ ಮೋಸ ಮಾಡಿದ್ದಾರೆ. ನಿಮ್ಮ ತಂದೆ ತಾಯಿ ಬದುಕಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಆದರೆ, ಈಗ ಧಾರಾವಾಹಿಯಲ್ಲಿ ಸುಹಾಸಿನಿ ಬದುಕಿರುವುದು ಗೊತ್ತಾಗಿದ್ದು, ಸೂರ್ಯನಾರಾಯಣ್ ಕೂಡ ಬದುಕಿರಬಹುದು ಎಂಬ ಕ್ಲೂ ಸಿಕ್ಕಿದೆ.
ಅಜ್ಜಿಗೆ ಎಲ್ಲಾ ಸತ್ಯಗಳು ಮುಂಚೆಯೇ ಅರ್ಥವಾದರೂ ಹೇಳದಂತೆ ವೈದೇಹಿ ತಡೆದಿದ್ದಾಳೆ. ಅಜ್ಜಿಗೆ ಈಗಾಗಲೇ ಕಣ್ಣು ಕಾಣಿಸುತ್ತಿದ್ದು, ಇನ್ನು ಕಣ್ಣು ಬಂದಿಲ್ಲ ಎಂಬಂತೆ ನಟನೆ ಮಾಡುತ್ತಿದ್ದಾಳೆ. ಕುಟುಂಬದವರೆಲ್ಲಾ ಒಟ್ಟಿಗೆ ಇದ್ದರೂ ಸತ್ಯ ಅರಿಯದೇ ಎಲ್ಲರೂ ಅಂಗೈನಲ್ಲಿ ಬೆಣ್ಣೆಯನ್ನು ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲಾ ಹುಡುಕಾಡುತ್ತಿದ್ದಾರೆ.


Click it and Unblock the Notifications











