Gattimela: ಡುಪ್ಲಿಕೇಟ್ ವೈದೇಹಿ ಹೆಸರಿಗೆ ವೇದಾಂತ್ ಆಸ್ತಿ ವರ್ಗಾವಣೆ..?

By ಪ್ರಿಯಾ ದೊರೆ

'ಗಟ್ಟಿಮೇಳ' ಧಾರಾವಾಹಿಯಲ್ಲಿ ವೇದಾಂತ್‌ಗೆ ವೈದೇಹಿ ಎಂದು ಹೇಳಿಕೊಂಡು ಬಂದಿರುವ ಚಂದ್ರ ತನ್ನ ತಾಯಿ ಅಲ್ಲ ಎಂಬುದು ಗೊತ್ತಾಗಿದೆ. ಇದಕ್ಕಾಗಿ ಪ್ರಜ್ವಲ್‌ಗೆ ಹೇಳಿ ಆಕೆ ಯಾರು ಎಂಬ ಬಗ್ಗೆ ಮಾಹಿತಿಯನ್ನೂ ಕಲೆಕ್ಟ್ ಮಾಡಿದ್ದಾನೆ.

ಚಂದ್ರ, ವೇದಾಂತ್‌ಗೆ ಸಿಗುವ ಒಂದು ದಿನದ ಮೊದಲು ಆಶ್ರಮಕ್ಕೆ ಬಂದು ಸೇರಿದ್ದು, ಬೇಕಂತಲೇ ಈ ಮನೆಗೆ ಬಂದಿರುವುದು ಗೊತ್ತಾಗುತ್ತದೆ. ಆದರೆ ಚಂದ್ರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗುವುದಿಲ್ಲ.

ಇತ್ತ ಚಂದ್ರ ಬೇಕಂತ ಆಶ್ರಮದವರನ್ನ ಕರೆದುಕೊಂಡು ಬಂದು ವೇದಾಂತ್ ಎದುರಿಗೆ ಹಣ ಸಹಾಯ ಬೇಡುವಂತೆ ಮಾಡುತ್ತಾಳೆ. ಆಗ ತನ್ನ ಬಳಿ ಏನೂ ಇಲ್ಲ. ಎಲ್ಲಾ ವೇದಾಂತ್ ಬಳಿಯೇ ಪಡೆಯಬೇಕು ಎಂದು ನಾಟಕ ಮಾಡುತ್ತಾಳೆ.

ವೇದಾಂತ್ ನಿರ್ಧಾರಕ್ಕೆ ಆದ್ಯ ಬೇಸರ

ವೇದಾಂತ್ ನಿರ್ಧಾರಕ್ಕೆ ಆದ್ಯ ಬೇಸರ

ಇದು ನಾಟಕ ಎಂದು ಗೊತ್ತಿದ್ದರೂ ವೇದಾಂತ್ ಬೇಕಂತಲೇ, ಅಮ್ಮ ನಿಮ್ಮ ಹೆಸರಿಗೆ ಎಲ್ಲಾ ಆಸ್ತಿಯನ್ನು ವರ್ಗಾಯಿಸುತ್ತೇನೆ. ಬೇಸರ ಮಾಡಿಕೊಳ್ಳಬೇಡಿ. ನಾಳೆಯೇ ಲಾಯರ್ ಅನ್ನು ಕರೆಸುತ್ತೇನೆ ಎಂದು ಹೇಳುತ್ತಾನೆ. ಇದರಿಂದ ಚಂದ್ರ ಖುಷಿಯಾಗುತ್ತಾಳೆ. ಆದರೆ, ಆದ್ಯಗೆ ಬೇಸರವಾಗುತ್ತದೆ. ಈ ಬಗ್ಗೆ ಆದ್ಯ ಅಮೂಲ್ಯ ಬಳಿ ಬಂದು ಪ್ರಶ್ನೆ ಮಾಡುತ್ತಾಳೆ. ಆಗ ಅಮೂಲ್ಯ ನಿಮ್ಮ ಮಾಡುವುದೆಲ್ಲಾ ಮನೆಯವರ ಒಳ್ಳೆಯದಕ್ಕೆ. ನೀನ್ಯಾಕೆ ಯೋಚಿಸುತ್ತೀಯ ಎಂದು ಹೇಳುತ್ತಾಳೆ. ಇದೇ ವಿಚಾರವಾಗಿ ಆದ್ಯ, ಸಾರ್ಥಕ್ ಬಳಿಯೂ ಮಾತನಾಡುತ್ತಾಳೆ. ಅಲ್ಲೂ ಆದ್ಯ ಪರ ಮಾತನಾಡುವುದಿಲ್ಲ. ಇದು ನಿಮ್ಮಣ್ಣನ ಆಸ್ತಿ ಅವರಿಷ್ಟ ಎಂದು ಹೇಳುತ್ತಾನೆ.

ಸುಹಾಸಿನಿಗೆ ಚಂದ್ರ ಬ್ಲ್ಯಾಕ್ ಮೇಲ್

ಸುಹಾಸಿನಿಗೆ ಚಂದ್ರ ಬ್ಲ್ಯಾಕ್ ಮೇಲ್

ಚಂದ್ರ ಖುಷಿಯಲ್ಲಿ ಸುಹಾಸಿನಿ ಬಳಿ ವೇದಾಂತ್ ಆಸ್ತಿಯನ್ನು ತನ್ನ ಹೆಸರಿಗೆ ಬರೆಯುತ್ತಿರುವುದನ್ನು ಹೇಳುತ್ತಾಳೆ. ಈ ಮಾತನ್ನು ಕೇಳಿ ಶಾಕ್ ಆಗುವ ಸುಹಾಸಿನಿ, ವೇದಾಂತ್ ಅವನ ಆಸ್ತಿಯಲ್ಲಿ ನನಗೇ ಏನೂ ಕೊಟ್ಟಿಲ್ಲ. ಇನ್ನು ನಿನ್ನೆ ಮೊನ್ನೆ ಬಂದವಳು ನಿನಗೆ ಕೊಡಲು ಸಾಧ್ಯವಿಲ್ಲ. ವೇದಾಂತ್‌ಗೆ ಸತ್ಯ ಹೇಳುತ್ತೀನಿ ಎನ್ನುತ್ತಾಳೆ. ಆಗ ಚಂದ್ರ, ನೀನು ಸ್ವಂತ ಚಿಕ್ಕಮ್ಮ ಆಗಿ ವೇದಾಂತ್, ಧೃವ, ವಿಕ್ಕಿ ಜೀವಕ್ಕೆ ಅಪಾಯ ತಂದೆ. ಇದು ವೇದಾಂತ್‌ಗೆ ಗೊತ್ತಾದರೆ ನಿನ್ನ ಗತಿ ಏನಾಗುತ್ತೆ ಅಂತ ಯೋಚಿಸು. ನಾನಾದರೂ ಸಂಬಂಧವಿಲ್ಲದವಳು ಎಂದು ಬ್ಲ್ಯಾಕ್ ಮೇಲ್ ಮಾಡುತ್ತಾಳೆ.

ಖುಷಿಯಲ್ಲಿ ತೇಲುತ್ತಿರುವ ಚಂದ್ರ

ಖುಷಿಯಲ್ಲಿ ತೇಲುತ್ತಿರುವ ಚಂದ್ರ

ವೇದಾಂತ್ ಮನೆಗೆ ಲಾಯರ್ ಅನ್ನು ಕರೆಸುತ್ತಾನೆ. ಚಂದ್ರ ಫುಲ್ ಖುಷಿಯಾಗುತ್ತಾಳೆ. ಆದರೆ, ವೇದಾಂತ್ ಪ್ಲ್ಯಾನ್ ಮಾಡಿಯೇ ಈ ನಿರ್ಧಾರವನ್ನು ಮಾಡಿರುತ್ತಾನೆ. ತನ್ನ ಪೂರ್ತಿ ಆಸ್ತಿಯ ಮೇಲೆ ಅಮ್ಮನಿಗೆ ಪವರ್ ಆಫ್ ಅಟಾರ್ನಿಯನ್ನು ಮಾಡುವಂತೆ ಹೇಳುತ್ತಾನೆ. ಆಗ ಚಂದ್ರ ಬೇಕಂತಲೇ ವೇದಾಂತ್‌ನನ್ನು ಹಾಡಿ ಹೊಗಳುತ್ತಾಳೆ. ಆದರೆ, ವೇದಾಂತ್, ವೈದೇಹಿ, ಸೂರ್ಯಕಾಂತ್ ಎಂದು ಅವರ ತಾಯಿಯ ಹೆಸರನ್ನು ಬರೆಸಿರುತ್ತಾನೆ. ಇದು ಚಂದ್ರ ತಲೆಗೆ ಹೊಳೆಯುವುದಿಲ್ಲ. ಮನದೊಳಗೆ ಖುಷಿ ಪಡುತ್ತಿರುತ್ತಾಳೆ.

ಚಂದ್ರ ಬಣ್ಣ ಬಯಲಾಗುತ್ತಾ..?

ಚಂದ್ರ ಬಣ್ಣ ಬಯಲಾಗುತ್ತಾ..?

ಈಗ ವೇದಾಂತ್ ಬೇಕಂತಲೇ ತನ್ನ ಆಸ್ತಿಯ ಮೇಲಿನ ಪವರ್ ಆಫ್ ಅಟಾರ್ನಿಯನ್ನು ವೈದೇಹಿ ಹೆಸರಲ್ಲಿ ಮಾಡಿದ್ದಾನೆ. ಚಂದ್ರ ಈಗ ಹಳ್ಳಕ್ಕೆ ಬಿದ್ದ ಕುರಿಯಾಗಿದ್ದಾಳೆ. ಆದರೆ, ತಾನು ಬಕ್ರಾ ಆಗುತ್ತಿರುವುದು ಗೊತ್ತಾಗುತ್ತಿಲ್ಲ. ಇಷ್ಟರಲ್ಲೇ ವೇದಾಂತ್ ತಾಯಿ ಯಾರು ಎಂದು ಗೊತ್ತಾಗುತ್ತಾ..? ಇಲ್ಲ ಕೇವಲ ಚಂದ್ರಳ ಬಣ್ಣ ಬಯಲಾಗುತ್ತಾ ಎಂದು ಕಾದು ನೋಡಬೇಕಿದೆ.

More from Filmibeat

English summary
Gattimela Serial 12th January Episode Written Update. vedanth pre plans and makes power of atorny for his property to duplicate vaidehi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X