Gattimela: ಲಾಯರ್ ಆಗಿ ಬಂದ ವೇದಾಂತ್: ಮಾವನನ್ನು ಬಚಾವ್ ಮಾಡುತ್ತಾನಾ..?
'ಗಟ್ಟಿಮೇಳ' ಧಾರಾವಾಹಿಯಲ್ಲಿ ಅಗ್ನಿ ಬೇಕಂತಲೇ ಮಂಜುನಾಥ್‌ನನ್ನು ಗಂಧದ ಮರ ಸಾಗಾಣಿಕೆಯ ಕೇಸ್‌ನಲ್ಲಿ ಜೈಲಿಗೆ ಕಳುಹಿಸಿದ್ದಾನೆ.
ಇತ್ತ ಮಾವನನ್ನು ಬಿಡಿಸಬೇಕು ಎಂದು ವೇದಾಂತ್ ಪಣತೊಟ್ಟಿದ್ದಾನೆ. ಆದರೆ, ಮಂಜುನಾಥ್ ಪರ ವಾದ ಮಾಡಲು ಯಾರೂ ಒಪ್ಪಿಕೊಳ್ಳುತ್ತಿಲ್ಲ. ಹಾಗಿದ್ದರೂ ವೇದಾಂತ್, ಪ್ರಜ್ವಲ್, ವಿಕ್ಕಿ ಹಾಗೂ ಸಾರ್ಥಕ್ ಕೇಸ್ ಸ್ಟಡಿ ಮಾಡಿದ್ದಾರೆ.
ಅಗ್ನಿ, ಅಮೂಲ್ಯಗೆ ಕಳಿಸಿರುವ ವೀಡಿಯೋ ಫೇಕ್ ಎಂಬುದು ಗೊತ್ತಾಗಿದೆ. ಆದರೆ, ಯಾರು ವೀಡಿಯೋ ಕಳಿಸಿದ್ದು, ಯಾಕೆ ಮಂಜುನಾಥ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಸಾಕ್ಷಿ ಹುಡುಕಲು ಹೋದ ವೇದಾಂತ್
ವೇದಾಂತ್ ಲಾಯರ್ ಆಗಲು ಸಿದ್ಧನಾಗಿದ್ದಾನೆ. ಮಾವನ ಪರ ವಾದ ಮಾಡಲು ಮುಂದಾಗಿದ್ದಾನೆ. ವೇದಾಂತ್ ಲಾಯರ್ ಕೋರ್ಟ್ ಧರಿಸಿದ್ದನ್ನು ನೋಡಿದ ವೈದೇಹಿ ಅವರ ಪತಿ ಸೂರ್ಯ ನಾರಾಯಣ್‌ನನ್ನೇ ನೆನಪು ಮಾಡಿಕೊಳ್ಳುತ್ತಾಳೆ. ವೇದಾಂತ್ ಕೋರ್ಟ್‌ಗೆ ಹೋಗುವಾಗ, ವೀಡಿಯೋದಲ್ಲಿ ಮಾತಾಡಿದ ಮತ್ತೊಬ್ಬ ವ್ಯಕ್ತಿ ಇರುವ ಸುಳಿವು ಸಿಕ್ಕಿದೆ. ಆತನೇ ಪ್ರಕರಣದ ಬಹು ಮುಖ್ಯ ಸಾಕ್ಷಿ ಎಂದು ಆತನನ್ನು ಹಿಡಿಯಲು ವೇದಾಂತ್ ಹೋಗಿದ್ದಾನೆ. ಆದರೆ, ಆ ವ್ಯಕ್ತಿ ವೇದಾಂತ್‌ನನ್ನು ನೋಡುತ್ತಿದ್ದಂತೆ ಓಡಿ ಹೋಗುತ್ತಾನೆ.

ಕೋರ್ಟ್‌ನಲ್ಲಿ ಅಗ್ನಿ ಹಾಜರ್
ಇತ್ತ ಕೋರ್ಟ್‌ನಲ್ಲಿ ಮಂಜುನಾಥ್ ವಿರುದ್ಧವಾಗಿ ವಾದ ಶುರುವಾಗುತ್ತೆ. ಪಬ್ಲಿಕ್ ಪ್ರಾಸಿಕ್ಯೂಟರ್ ಮಂಜುನಾಥ್ ವಿರುದ್ಧದ ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಒಪ್ಪಿಸುತ್ತಾನೆ. ಮಂಜುನಾಥ್ ಹಾಗೂ ಅಮೂಲ್ಯ ಅದೆಲ್ಲಾ ಸುಳ್ಳು ಎಂದು ಹೇಳುತ್ತಾರೆ. ಆದರೆ ನ್ಯಾಯಾಧೀಶರು, ಏನೇ ಹೇಳುವುದಿದ್ದರೂ ಕಟಕಟೆಗೆ ಬಂದು ಹೇಳಿ ಎನ್ನುತ್ತಾರೆ. ಇನ್ನು ಕೋರ್ಟ್‌ಗೆ ಅಗ್ನಿ ಕೂಡ ಬಂದಿರುತ್ತಾನೆ. ಆದರೆ, ಇದ್ಯಾವುದೂ ಅಮೂಲ್ಯಗೆ ಗೊತ್ತಿರುವುದಿಲ್ಲ.

ಕೋರ್ಟ್‌ಗೆ ತಡವಾಗಿ ಬಂದ ವೇದಾಂತ್
ಇನ್ನು ಮಂಜುನಾಥ್ ಹೆಸರಲ್ಲಿ ಸೈಟ್ ಇದೆ. ಬೆಂಗಳೂರಿನಲ್ಲಿ ಕಷ್ಟಪಟ್ಟು ಜೀವನ ಮಾಡುವ ಮಂಜುನಾಥ್‌ಗೆ ಸೈಟ್ ತೆಗೆದುಕೊಳ್ಳಲು ಹೇಗೆ ಸಾಧ್ಯವಾಯ್ತು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಶ್ನೆ ಮಾಡುತ್ತಾರೆ. ಆದರೆ, ಇದು ಅಮೂಲ್ಯ ತೆಗೆದುಕೊಟ್ಟ ಸೈಟ್ ಆಗಿರುತ್ತದೆ. ಇನ್ನು ಮ್ಯಾನೇಜರ್ ಕೂಡ ಬಂದು ಮಂಜುನಾಥ್ ವಿರುದ್ಧ ಸಾಕ್ಷಿ ಹೇಳುತ್ತಾನೆ. ಅಷ್ಟರಲ್ಲಿ ವೇದಾಂತ್ ಕೋರ್ಟ್‌ಗೆ ಬರುತ್ತಾನೆ. ತಡವಾಗಿ ಕೋರ್ಟ್‌ಗೆ ಬಂದು ವೇದಾಂತ್ ಕ್ಷಮೆ ಕೇಳುತ್ತಾನೆ. ಬಳಿಕ ತನ್ನ ವಾದವನ್ನು ಮುಂದುವರಿಸುತ್ತಾನೆ.

ವೇದಾಂತ್ ಮಾವ ಆರೋಪ ಮುಕ್ತನಾಗುತ್ತಾನಾ
ವೇದಾಂತ್ ಕೆಲ ಸಾಕ್ಷಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸುತ್ತಾನೆ. ಅಷ್ಟೇ ಅಲ್ಲದೇ, ಕೆಲವರನ್ನು ಕರೆಸಿ ಸಾಕ್ಷಿ ಹೇಳಿಸುತ್ತಾನೆ. ಮ್ಯಾನೇಜರ್ ಅನ್ನು ಪುನಃ ಕರೆಸಿದಾಗ ಆತ ಸುಳ್ಳು ಹೇಳುತ್ತಾನೆ. ಆಗ ವೇದಾಂತ್ ಮ್ಯಾನೇಜರ್ ಅಕೌಂಟ್‌ಗೆ ಜಮೆ ಆಗಿರುವ ಮೂರು ಲಕ್ಷದ ಬಗ್ಗೆ ಸಾಕ್ಷಿ ತೋರಿಸಿ ಪ್ರಶ್ನೆಯನ್ನು, ಯಾರಿಗೂ ಹೆದರಬೇಡಿ ಸತ್ಯ ಹೇಳಿ ಎಂದು ಹೇಳುತ್ತಾನೆ. ಆಗ ಮ್ಯಾನೇಜರ್ ತಮಗೆ ಬೆದರಿಕೆ ಕರೆ ಬಂತು. ಹಾಗಾಗಿ ಹೀಗೆ ಮಾಡಿದೆ. ಇಲ್ಲದಿದ್ದರೆ, ನನ್ನ ಹೆಂಡತಿ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಸಿದ್ದರು ಎನ್ನುತ್ತಾನೆ. ವೇದಾಂತ್ ವಾದ ಮಾಡಿ ಸಾಕ್ಷ್ಯಾಧಾರಗಳನ್ನು ಒದಗಿಸಿ ಮಾವನನ್ನು ಬಿಡುಗಡೆಗೊಳಿಸುತ್ತಾನಾ..? ಬಳಿಕ ಅವರ ವೈರಿಯಾದ ಅಗ್ನಿಯನ್ನು ಗುರುತಿಸುತ್ತಾನಾ..?


Click it and Unblock the Notifications











