Gattimela: ಮಗವಿನ ಜವಾಬ್ದಾರಿ ತೆಗೆದುಕೊಂಡ ವೇದಾಂತ್: ಮನೆಯಲ್ಲಿ ಸಂತಸ

By Shruthi Harish Gowda

ವೈದೇಹಿ ಆರತಿಗೆ ಏನು ಆಗಬಾರದು ಎಂದು ದೇವರ ಮುಂದೆ ಕುಳಿತು ಬೇಡಿಕೊಳ್ಳುತ್ತಾ ಇದ್ದಳು. ಇದೇ ಸಮಯಕ್ಕೆ ಅಮೂಲ್ಯ ಆದ್ಯಗೆ ಫೋನ್ ಮಾಡಿ ಆರತಿಗೆ ಗಂಡು ಮಗು ಆಯಿತು ಎಂದು ತಿಳಿಸಿದ್ದಾಳೆ ಆಧ್ಯ ಮನೆಯಲ್ಲಿರುವ ಅಜ್ಜಿ ಹಾಗೂ ಆಕೆಯ ಗಂಡನಿಗೆ ಆರತಿಗೆ ಗಂಡು ಮಗು ಆಗಿದೆ ಎಂದು ಹೇಳಿದ್ದಾಳೆ. ಮನೆಯಲ್ಲಿ ಅಜ್ಜಿ ನನಗೆ ಮರಿ ಮೊಮ್ಮಗ ಬಂದಿದ್ದಾನೆ ನನ್ನ ಮೊಮ್ಮಗನ ರೂಪದಲ್ಲಿ ನನ್ನ ಮನೆಗೆ ಬಂದಿದ್ದಾನೆ ಎಂದು ಸಂತೋಷ ಪಟ್ಟಿದ್ದಾರೆ.

ವೈದೇಹಿ ದೇವರಿಗೆ ಪ್ರಶ್ನೆಯನ್ನ ಮಾಡುತ್ತಿದ್ದಾಳೆ, ದೇವರೇ ಯಾಕೆ ನೀನು ಈ ರೀತಿ ಒಂದು ಕಡೆ ಸಂತೋಷವನ್ನು ಕೊಟ್ಟು ಇನ್ನೊಂದು ಕಡೆ ದುಃಖವನ್ನು ಕೊಟ್ಟಿದ್ದೀಯಲ್ಲಾ. ನನ್ನ ಮಗನನ್ನ ಕಿತ್ತುಕೊಂಡೆ ಅದಕ್ಕೆ ನಾನು ದುಃಖ ಪಡಬೇಕು ಅಥವಾ ಮೊಮ್ಮಗವನ್ನ ನೀಡಿದೆ ಎಂದು ಸಂತೋಷ ಪಡಬೇಕು ಎಂದು ದೇವರಿಗೆ ಪ್ರಶ್ನೆಯನ್ನು ಮಾಡಿದ್ದಾರೆ. ಆರತಿ ತುಂಬಾ ನೊಂದಿದ್ದಾಳೆ.

Gattimela serial 18 August episode written update

ಈಗ ಗಂಡನನ್ನ ಕಳೆದುಕೊಂಡು ದುಃಖದಲ್ಲಿದ್ದಾಳೆ. ನನ್ನ ಸೊಸೆಗೆ ಮಗುವಿನ ರೂಪದಲ್ಲಿ ನೆಮ್ಮದಿಯನ್ನ ನೀಡು ಎಂದು ವೈದೇಹಿ ದೇವರ ಬಳಿ ಕೇಳಿಕೊಳ್ಳುತ್ತಿದ್ದಾಳೆ. ಪರಿಮಳ ಬಂದು ಆರತಿಯನ್ನ ಎದ್ದೇಳಿಸುವ ಪ್ರಯತ್ನ ಮಾಡುತ್ತಾರೆ. ಆರತಿ ನಿಧಾನವಾಗಿ ಕಣ್ಣನ್ನ ಬಿಟ್ಟು ಹೊಟ್ಟೆಯನ್ನ ಮುಟ್ಟಿ ನೋಡಿಕೊಂಡಿದ್ದಾಳೆ. ಅಷ್ಟರಲ್ಲಿ ಅವಳಿಗೆ ಹೆರಿಗೆಯಾಗಿದೆ ಎಂಬುದು ಗೊತ್ತಾಗಿದ್ದು ಅಮ್ಮ ನನ್ನ ಮಗು ಎಲ್ಲಿ ಎಂದು ಕೇಳಿದ್ದಾಳೆ. ಆರತಿ ಎದ್ದಿರುವುದು ವೇದಾಂತ್ ಮಗುವನ್ನ ರೂಮಿಗೆ ಎತ್ತುಕೊಂಡು ಬಂದು ಆರತಿಯ ಕೈಗೆ ನೀಡಿದ್ದಾನೆ.

ವೇದಾಂತ್ ಮಗುವನ್ನ ನೋಡುತ್ತಾ ತುಂಬಾ ಎಮೋಷನಲ್ ಆಗಿದ್ದಾನೆ. ಅಲ್ಲೇ ಟೇಬಲ್ ಮೇಲಿದ್ದ ವಿಕ್ಕಿ ಫೋಟೋವನ್ನು ತೆಗೆದುಕೊಂಡು ವಿಕ್ರಾಂತಿ ಎಲ್ಲಿಯೂ ಹೋಗಿಲ್ಲ ನನ್ನ ಜೊತೆಯಲ್ಲೇ ನೀನು ಇದ್ದೀಯ ಎಂದು ಹೇಳಿದ್ದಾನೆ. ನೀನು ಮಗುವಿನ ರೂಪದಲ್ಲಿ ನನ್ನ ಜೊತೆಯಲ್ಲೇ ಇದ್ದೀಯ. ನೀನು ಹುಟ್ಟಿದಾಗ ಆಸ್ಪತ್ರೆ ತುಂಬಾ ನನಗೆ ತಮ್ಮ ಹುಟ್ಟಿದ ಎಂದು ಹೇಳಿಕೊಂಡು ಸಂಭ್ರಮವನ್ನು ಪಟ್ಟಿದೆ. ಈಗ ನೀನು ಇದ್ದಿದ್ದರೆ ನನ್ನ ತಮ್ಮ ತಂದೆಯಾದ ಎಂದು ಹೇಳಿಕೊಂಡು ಸಂಭ್ರಮ ಪಡುತ್ತಿದ್ದೆ ಎಂದು ಕಣ್ಣೀರನ್ನು ಹಾಕಿದ್ದಾನೆ.

ನಿನ್ನ ತಂದೆ ನಿನ್ನನ್ನು ಯಾವ ರೀತಿಯಲ್ಲ ಬೆಳೆಸಬೇಕು ಎಂದುಕೊಂಡಿದ್ದನೋ ಅದೇ ರೀತಿ ನಾನು ನಿನ್ನನ್ನ ಬೆಳೆಸುತ್ತೇನೆ.ನೀನು ಇನ್ಮುಂದೆ ನನ್ನನ್ನ ದೊಡ್ಡಪ್ಪ ಎಂದು ಕರೆಯುವ ಅವಶ್ಯಕತೆ ಇಲ್ಲ ಅಗ್ರಜ ಎಂದು ನೀನು ನನ್ನನ್ನ ಕರೆಯಬೇಕು. ನಿನ್ನ ಜೊತೆಗೆ ನಾನು ಆಟವನ್ನ ಆಡುತ್ತೇನೆ. ನಿನ್ನ ತಂದೆ ಮಾಡಬೇಕಾದ ಎಲ್ಲಾ ಕೆಲಸಗಳನ್ನ ನಾನೇ ನಿನಗೆ ಮಾಡುತ್ತೇನೆ ಎಂದು ಮಗುವಿಗೆ ವೇದಾಂತ್ ಹೇಳಿದ್ದಾನೆ. ವೇದಾ ಎಮೋಷನಲ್ ಮಾತನಾಡುವಾಗ ಕಣ್ಣೀರನ್ನು ಹಾಕಿದ್ದು ಮನೆಯವರೆಲ್ಲರೂ ಸಹ ಇದೇ ವೇಳೆ ಕಣ್ಣೀರು ಸುರಿಸಿದ್ದಾರೆ.

ವೇದಾಂತ್ ಮಗುವನ್ನ ಎತ್ತುಕೊಂಡು ಹೊರಗಡೆ ಹೋದಾಗ ಆರತಿಗೆ ಅಮೂಲ್ಯ ಸಮಾಧಾನ ಮಾಡಿದ್ದಾಳೆ. ಅಕ್ಕ ಮಗುವಿನ ರೂಪದಲ್ಲಿ ವಿಕ್ರಾಂತ್ ಭಾವ ನಮ್ಮ ಮನೆಗೆ ಬಂದಿದ್ದಾರೆ. ನೀನು ಅವನನ್ನ ನೋಡಿ ಸಮಾಧಾನ ಮಾಡಿಕೋ. ನೋಡು ಒಂದು ನೋವಿನ ಸುದ್ದಿ ಆದರೆ ಮತ್ತೊಂದು ಸಂತೋಷಪಡುವ ಸುದ್ದಿಯಾಗಿದೆ. ಭಾವ ಇಲ್ಲ ಎಂದು ತಿಳಿಯುವಷ್ಟರಲ್ಲಿ ಈಗ ಮಗು ಜನಿಸಿದೆ ಎಂದು ಆರತಿಗೆ ಸಮಾಧಾನ ಮಾಡುತ್ತಿದ್ದಾಳೆ. ದೇವರು ಒಂದು ಸಂತೋಷವನ್ನು ಕೊಟ್ಟು ಮತ್ತೊಂದನ್ನು ಕಿತ್ತುಕೊಂಡಿದ್ದಾನೆ ಎಂದಿದ್ದಾಳೆ.

ಅಮೂಲ್ಯ ಹಾಗೂ ವೇದಾಂತ್ ಮನೆಗೆ ಬಂದ ಕೂಡಲೇ ಆದ್ಯ ವೇದಂತ ತಬ್ಬಿಕೊಂಡು ಜೋರಾಗಿ ಅಳುತ್ತಿದ್ದಾಳೆ ವೇತನ ಆಧ್ಯಾಳನ ಸಮಾಧಾನ ಮಾಡುತ್ತಿದ್ದಾನೆ. ಅಣ್ಣ ನಂಗೆ ಎಲ್ಲೋ ಒಂದು ಕಡೆ ವಿಕ್ಕಿ ನಮ್ಮ ಜೊತೆಗೆ ಇದ್ದಾನೆ ಎನಿಸುತ್ತಿದೆ. ಪ್ಲೀಸ್ ಅಣ್ಣ ಒಂದೇ ಒಂದು ಸಲ ಹೇಳು, ವಿಕ್ಕಿ ಅಣ್ಣ ಇಲ್ಲೇ ಇದ್ದಾನೆ ಎಂದು ಜೋರಾಗಿ ಅಳುತ್ತಾ ಕೇಳಿದ್ದಾಳೆ. ಇದಕ್ಕೆ ವೇದಾಂತ್ ಹೌದು ವಿಕ್ಕಿ ನಮ್ಮ ಜೊತೆಗೆ ಇದ್ದಾನೆ ನನ್ನ ಒಳಗಡೆ ಅಗ್ರಜ ಎಂದು ಕೂಗುತ್ತಿದ್ದಾನೆ. ಅವನ ಮಗನ ರೂಪದಲ್ಲಿ ನಮ್ಮ ಮನೆಗೆ ಬಂದಿದ್ದಾನೆ ಎಂದು ಆದ್ಯಾಳನ ಸಮಾಧಾನ ಮಾಡಿದ್ದಾನೆ.

More from Filmibeat

English summary
Zee Kannada serial gattimela here details about vasista family happy with Vikki son born
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X