For Quick Alerts
  ALLOW NOTIFICATIONS  
  For Daily Alerts

  ಸುಹಾಸಿನಿ ಕೈಚಳಕ ಕಂಡು ಬೆರಗಾದ ವೈಜಯಂತಿ: ಮುಂದೇನಾಗಬಹುದು..?

  By ಪ್ರಿಯಾ ದೊರೆ
  |

  'ಗಟ್ಟಿಮೇಳ' ಧಾರಾವಾಹಿಯಲ್ಲಿ ಈಗ ಅಮ್ಮನಿಗಾಗಿ ಹುಡುಕಾಟ ನಡೆದಿದೆ. ವಸಿಷ್ಠ ಕುಟುಂಬದ ಕುಡಿಗಳು ತಮ್ಮ ತಾಯಿಯನ್ನು ಹುಡುಕಲು ಹರಸಾಹಸ ಪಡುತ್ತಿದ್ದಾರೆ. ಆದರೆ ಆ ಪ್ರಯತ್ನಗಳನ್ನು ಸುಹಾಸಿನಿ ಕೆಡಿಸುತ್ತಿದ್ದಾಳೆ.

  ವೇದಾಂತ್, ವಿಕ್ರಾಂತ್, ಧ್ರುವ ಹಾಗೂ ಆದ್ಯ ವೈದೇಹಿ ಮಕ್ಕಳು. ಆದರೆ ವೈದೇಹಿ ಸಹೋದರಿ ಸುಹಾಸಿನಿ ಈ ಕುಟುಂಬಕ್ಕೆ ಶತ್ರುವಾಗಿದ್ದಾಳೆ. ವೈದೇಹಿಯನ್ನು ಕೊಂದು, ತಾನೇ ಆಕೆಯ ಮಕ್ಕಳ ತಾಯಿಯಂತೆ ನಡೆದುಕೊಂಡಿದ್ದಾಳೆ. ಈ ಬಗ್ಗೆ ವೇದಾಂತ್‌ಗೆ ಯಾವುದೂ ಗೊತ್ತಿಲ್ಲ. ಸುಹಾಸಿನಿ ಅಮ್ಮ ತುಂಬಾ ಒಳ್ಳೆಯವರು ಎಂದು ನಂಬಿದ್ದಾನೆ.

  ಮತ್ತೆ ಮನೆ ಬಳಿ ಬಂದ ಝೇಂಡೇ ಗ್ರಹಚಾರ ಬಿಡಿಸಿದ ಶಾರದಾ ದೇವಿ!ಮತ್ತೆ ಮನೆ ಬಳಿ ಬಂದ ಝೇಂಡೇ ಗ್ರಹಚಾರ ಬಿಡಿಸಿದ ಶಾರದಾ ದೇವಿ!

  ಆದರೆ ಸುಹಾಸಿನಿ ಬಗ್ಗೆ ವಿಕ್ರಾಂತ್ ಹಾಗೂ ಧ್ರುವಗೆಎಲ್ಲಾ ಸತ್ಯವೂ ಗೊತ್ತಾಗಿದೆ. ವೇದಾಂತ್‌ಗೆ ಎಷ್ಟು ಹೇಳಿದರೂ ಕೇಳುವುದಿಲ್ಲ. ಧ್ರುವನಿಗೆ ಈಗಾಗಲೇ ಅವರ ತಾಯಿ ವೈದೇಹಿ ಎಂಬುದು ಗೊತ್ತಾಗಿದೆ. ಆದರೆ ವಿಕ್ರಾಂತ್ ಹಾಗೂ ಆದ್ಯ ಸದ್ಯ ಅವರ ತಾಯಿಯನ್ನು ಹುಡುಕಾಡುತ್ತಿದ್ದಾರೆ.

   ವೇದಾಂತ್ ಪ್ಲ್ಯಾನ್ ಏನು?

  ವೇದಾಂತ್ ಪ್ಲ್ಯಾನ್ ಏನು?

  ಮೊದ ಮೊದಲು ವೈದೇಹಿ ವಿಚಾರಕ್ಕೆ ಕೋಪ ಮಾಡಿಕೊಳ್ಳುತ್ತಿದ್ದ ವೇದಾಂತ್ ಈಗ ಅವನೂ ಕೂಡ ತಮ್ಮ ತಾಯಿಯನ್ನು ಹುಡುಕಲು ಮುಂದಾಗಿದ್ದಾನೆ. ಈ ಮೂಲಕವಾದರೂ ತಮ್ಮ ಕುಟುಂಬದ ಹಿಂದೆ ಬಿದ್ದಿರುವ ಶತ್ರುಗಳನ್ನು ಹಿಡಿಯಬೇಕು ಎಂದು ತೀರ್ಮಾನಿಸಿದ್ದಾನೆ. ಆದರೆ ಅವರ ತಾಯಿಯನ್ನು ಹುಡುಕಲು ಯಾರಿಗೂ ಹೇಳದೇ ಮಂಗಳೂರಿಗೆ ಹೊರಟಿದ್ದ. ದಾರಿ ಮಧ್ಯೆಯೇ ಅವರ ತಾಯಿ ಇರುವ ವೀಡಿಯೋ ಸಿಕ್ಕಿದೆ ಎಂದು ತಿಳಿದು ಪ್ರಯಾಣವನ್ನು ನಿಲ್ಲಿಸಿದ್ದ. ವೈದೇಹಿ ಮನೆಯಲ್ಲಿ ಸತ್ಯನಾರಾಯಣ ಪೂಜೆ ನಡೆದಾಗ ವೀಡಿಯೋ ಮಾಡಲಾಗಿತ್ತು. ಇದರ ಪೆನ್ ಡ್ರೈವ್ ಈಗ ಸಿಕ್ಕಿದೆ. ಇದನ್ನು ನೋಡಲು ಮನೆ ಮಂದಿಯೆಲ್ಲಾ ಕಾತುರರಾಗಿದ್ದಾರೆ.

  ಗಟ್ಟಿಮೇಳ: ವೈದೇಹಿ ಅಸ್ತಿತ್ವವನ್ನೆ ಅಳಿಸಿದ ಸುಹಾಸಿನಿ!ಗಟ್ಟಿಮೇಳ: ವೈದೇಹಿ ಅಸ್ತಿತ್ವವನ್ನೆ ಅಳಿಸಿದ ಸುಹಾಸಿನಿ!

   ವೀಡಿಯೋದಲ್ಲಿರುವ ವೈದೇಹಿ ಯಾರು..?

  ವೀಡಿಯೋದಲ್ಲಿರುವ ವೈದೇಹಿ ಯಾರು..?

  ಇದೀಗ ವೈದೇಹಿ ಇರುವ ಪೆನ್ ಡ್ರೈವ್ ಸಿಕ್ಕಿದೆ. ಇದರಿಂದ ನಮ್ಮ ಅಮ್ಮ ನಮಗೆ ದೊರಕಿ ಬಿಟ್ಟಳು ಎಂಬ ಖುಷಿಯಲ್ಲಿ ವಸಿಷ್ಠ ಕುಟುಂಬ ಇದೆ. ಆದರೆ, ಇದರಲ್ಲೂ ತನ್ನ ಕೈಚಳಕ ತೋರಿಸಿದ್ದಾಳೆ. ವೀಡಿಯೋ ಪ್ಲೇ ಮಾಡಿ ನೋಡಿದ ಎಲ್ಲರೂ ಒಂದು ಕ್ಷಣ ವೈಜಯಂತಿ ಕಡೆಗೆ ನೋಡುತ್ತಾರೆ. ಆಗ ವೈಜಯಂತಿ ತಾನೇ ಅವರ ಅಮ್ಮ ಎಂದು ಗೊತ್ತಾಯಿತು ಎಂದುಕೊಳ್ಳುತ್ತಾಳೆ. ವಿಕ್ರಾಂತ್ ಸೀದಾ ವೈಜಯಂತಿ ಬಳಿ ಹೋಗಿ ನನ್ನ ಅಮ್ಮ ಸಿಕ್ಕಿದರೂ ಎಂಬ ಖುಷಿಯಲ್ಲಿ ತಬ್ಬಿಕೊಳ್ಳುತ್ತಾನೆ. ಆ ವೀಡಿಯೋದಲ್ಲಿ ಬೇರೆ ಯಾರನ್ನೋ ವೈದೇಹಿ ಎಂದು ತೋರಿಸಿರುತ್ತಾಳೆ ಸುಹಾಸಿನಿ. ವೈದೇಹಿ ನಾನೇ ನಿನ್ನ ಅಮ್ಮ ಎಂದು ಹೇಳುವಷ್ಟರಲ್ಲಿ ಟಿವಿಯಲ್ಲಿ ದೀಪ ಹಿಡಿದು ಯಾರೋ ಬೇರೆಯವರು ಬರುವುದನ್ನು ನೋಡಿದ ವೈದೇಹಿಗೆ ಶಾಕ್ ಆಗುತ್ತದೆ. ಸುಹಾಸಿನಿ ವೈದೇಹಿಯ ಅಸ್ತಿತ್ವವನ್ನು ಅಳಿಸಿ ಹಾಕುವ ಎಲ್ಲಾ ಪ್ರಯತ್ನ ಮಾಡಿದ್ದಾಳೆ.

   ಗೋಲ್ ಮಾಲ್ ಮಾಡಿರುವ ಸುಹಾಸಿನಿ

  ಗೋಲ್ ಮಾಲ್ ಮಾಡಿರುವ ಸುಹಾಸಿನಿ

  ಸುಹಾಸಿನಿ ವೈದೇಹಿಯ ಅಸ್ತಿತ್ವ ಇಲ್ಲದ ಹಾಗೆ ಮಾಡಿ ವೈದೇಹಿಗೆ ಶಾಕ್ ನೀಡುತ್ತಾಳೆ. ವೀಡಿಯೋವನ್ನೇ ಬದಲಾಯಿಸಿರುವ ಸುಹಾಸಿನಿಯನ್ನು ನೋಡಿ ವೈದೇಹಿ ಸಿಟ್ಟಾಗುತ್ತಾಳೆ. ಆದರೆ, ಸತ್ಯ ಹೇಳಲಾಗದೇ ತನ್ನ ಅಸಹಾಯಕತೆಯಿಂದ ಸುಮ್ಮನಿರುತ್ತಾಳೆ. ಮಕ್ಕಳು ಮಾತ್ರ ತಮ್ಮ ತಾಯಿಯನ್ನು ನೋಡಿದ ಖುಷಿಯಲ್ಲಿರುತ್ತಾರೆ. ಇನ್ನು ಧ್ರುವನಿಗೆ ಆ ವೀಡಿಯೋ ಸುಳ್ಳು ಎಂಬುದು ಗೊತ್ತಾಗುತ್ತದೆ. ಆದರೆ ಅವನಿಗೆ ಏನನ್ನೂ ಹೇಳುವುದಕ್ಕೆ ಆಗುವುದಿಲ್ಲ. ಅಷ್ಟರಲ್ಲಿ ಸುಹಾಸಿನಿ ಧ್ರುವ ಎಕ್ಸೈಟ್ ಅಗುತ್ತಿದ್ದಾನೆ ಎಂದು ರೂಮಿಗೆ ಕರೆದುಕೊಂಡು ಹೋಗಲು ಹೇಳುತ್ತಾಳೆ. ಇವರೇ ನನ್ನ ಅಕ್ಕ ವೈದೇಹಿ ಎಂದು ಸುಳ್ಳು ಹೇಳುತ್ತಾಳೆ.

  ಪುಟ್ಟಕ್ಕನ ಮನೆಯಲ್ಲಿ ಕಂಠಿ ಗಂಟಲು ಒಣಗಿದೆ: ಅತ್ತ ನಂಜಮ್ಮ ಕತ್ತಿ ಮಸೆಯುತ್ತಿದ್ದಾಳೆ!ಪುಟ್ಟಕ್ಕನ ಮನೆಯಲ್ಲಿ ಕಂಠಿ ಗಂಟಲು ಒಣಗಿದೆ: ಅತ್ತ ನಂಜಮ್ಮ ಕತ್ತಿ ಮಸೆಯುತ್ತಿದ್ದಾಳೆ!

   ಮತ್ತೆ ಕುಗ್ಗಿ ಹೋದ ವೈದೇಹಿ

  ಮತ್ತೆ ಕುಗ್ಗಿ ಹೋದ ವೈದೇಹಿ

  ತಮ್ಮ ಮಕ್ಕಳ ಬಳಿ ತಾನೇ ನಿಮ್ಮ ಹೆತ್ತ ತಾಯಿ ಎಂದು ಹೇಳಿಕೊಳ್ಳಲು ಆಗದ ಸ್ಥಿತಿ ವೈದೇಹಿಯದ್ದು. ಮಕ್ಕಳನ್ನು ನೋಡುವ ಆಸೆಯಿಂದ ಬದುಕಿರುವ ವೈದೇಹಿ, ತಾನು ಜೀವಂತವಾಗಿರುವುದೇ ತಪ್ಪು ಎಂಬಂತೆ ಮಾತನಾಡುತ್ತಾಳೆ. ಒಬ್ಬಳೇ ಮಾತನಾಡಿಕೊಳ್ಳುತ್ತಾ ತನ್ನ ಪತಿಯ ಜೊತೆಗೆ ಸಾಯಬೇಕಿತ್ತು ಎಂದು ಅಂದುಕೊಳ್ಳುತ್ತಾಳೆ. ಸುಹಾಸಿನಿ ನನ್ನನ್ನು ನನ್ನ ಮಕ್ಕಳ ಜೊತೆಗೆ ಇರಲು ಬಿಡುವುದಿಲ್ಲ ಎಂಬುದು ಈಗ ಅವಳಿಗೆ ಅರ್ಥವಾಗಿದೆ.

  English summary
  Gattimela Serial 19th September Episode Written Update. Gattimela serial vasishta family is searching for vaidehi. But suhasini plans and changes the video. So that vaidehi children have been fooled.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X