Gattimela: ಧ್ರುವ ಪ್ರೇಯಸಿಯನ್ನು ಹುಡುಕಾಡುತ್ತಿರುವ ವೇದಾಂತ್: ಸುಹಾಸಿನಿ ಪ್ಲ್ಯಾನ್ ಠುಸ್ ಮಾಡಿದ ಅಜ್ಜಿ

By ಪ್ರಿಯಾ ದೊರೆ

'ಗಟ್ಟಿಮೇಳ' ಧಾರಾವಾಹಿಯಲ್ಲಿ ಆರತಿ ಗರ್ಭಿಣಿ ಆಗಿದ್ದಾಳೆ. ಹೀಗಾಗಿ ಇವಳ ಬಗ್ಗೆ ಕಾಳಜಿ ವಹಿಸಲು ವಿಕ್ಕಿ ಹೆಚ್ಚಾಗಿ ಆಫಿಸಿಗೆ ಹೋಗುವುದೇ ಇಲ್ಲ.

ಆರತಿಗೆ ವಿಕ್ಕಿ ತಿಂಡಿ ತಿನ್ನಿಸಲು ಮುಂದಾಗುತ್ತಾನೆ. ಆದರೆ, ಆರತಿ ತಿನ್ನುವುದಿಲ್ಲ. ಹಠ ಮಾಡುತ್ತಾಳೆ. ವಿಕ್ಕಿ ಎಷ್ಟು ಹೇಳಿದರೂ ಆರತಿ ತಿಂಡಿ ತಿನ್ನುವುದಿಲ್ಲ.

ಇದೇ ವೇಳೆಗೆ ಅಮೂಲ್ಯ ಬರುತ್ತಾಳೆ. ಆರತಿಗೆ ಬಲವಂತ ಮಾಡಿ ಊಟ ಮಾಡಿಸುತ್ತಾಳೆ. ಇದನ್ನು ನೋಡಿದ ವಿಕ್ಕಿ ಖುಷಿ ಪಡುತ್ತಾನೆ. ಆರತಿ ಕೂಡ ಅಮೂಲ್ಯ ಅಕ್ಕನ ಹಾಗೆ ಹೆಸರಿಗಷ್ಟೇ ನಾನು ಅಕ್ಕ ಎಂದು ಹೇಳುತ್ತಾಳೆ.

ಧ್ರುವನ ಹುಡುಗಿಗಾಗಿ ವೈಟಿಂಗ್

ಧ್ರುವನ ಹುಡುಗಿಗಾಗಿ ವೈಟಿಂಗ್

ಧ್ರುವನನ್ನು ಪಾರ್ಕ್‌ಗೆ ಕರೆದುಕೊಂಡು ಹೋದಾಗಲೆಲ್ಲಾ ಆದ್ಯಾ, ಅಧಿತಿಯನ್ನು ಕರೆಸಿಕೊಳ್ಳುತ್ತಾಳೆ. ಯಾಕೆಂದರೆ ಇವರಿಬ್ಬರು ಪ್ರೀತಿಸುತ್ತಿರುವುದು ಗೊತ್ತಿರುತ್ತದೆ. ಈ ಸಲ ವೇದಾಂತ್, ಆದ್ಯಾ ಜೊತೆಗೆ ಬಂದಿದ್ದು, ಅಧಿತಿ ವೇದಾಂತ್ ಕಣ್ತಪ್ಪಿಸಿ ಧ್ರುವನ ಜೊತೆಗೆ ಮಾತನಾಡಿ ಮುತ್ತು ಕೊಟ್ಟಿರುತ್ತಾಳೆ. ಇದನ್ನು ನೋಡಿದ ವೇದಾಂತ್ ಈಗ ಧ್ರುವನನ್ನು ಪ್ರೀತಿಸುತ್ತಿರುವ ಹುಡುಗಿ ಯಾರೆಂದು ತಲೆ ಕೆಡಿಸಿಕೊಂಡಿದ್ದಾನೆ. ಇದಕ್ಕಾಗಿ ಪ್ಲ್ಯಾನ್ ಮಾಡಿ ಮತ್ತೆ ಧ್ರುವನನ್ನು ಪಾರ್ಕ್‌ಗೆ ಕರೆದುಕೊಂಡು ಬಂದಿದ್ದಾನೆ. ಧ್ರುವನ ಹುಡುಗಿ ಬರಲಿ ಎಂದು ಆದ್ಯಾ ಮತ್ತು ವೇದಾಂತ್ ಮರದ ಮರೆಯಲ್ಲಿ ಕಾಯುತ್ತಿದ್ದಾರೆ.

ಧ್ರುವನಿಗೆ ಮುತ್ತುಕೊಟ್ಟವಳು ಬಂದಾಯ್ತು

ಧ್ರುವನಿಗೆ ಮುತ್ತುಕೊಟ್ಟವಳು ಬಂದಾಯ್ತು

ವೇದಾಂತ್ ಹಾಗೂ ಆದ್ಯಾ ಕಾಯುತ್ತಿರುತ್ತಾರೆ. ಆದರೆ, ಧ್ರುವನ ಲವರ್ ಬರುವುದೇ ಇಲ್ಲ. ಧ್ರುವನನ್ನು ಇಬ್ಬರು ಕೂರಿಸಿ, ಒಂಟಿಯಾಗಿ ಬಿಟ್ಟಿರುತ್ತಾರೆ. ಅಧಿತಿ ಪಾರ್ಕ್‌ಗೆ ಬರುತ್ತಾಳೆ. ಆದರೆ ಅಧಿತಿ, ವೇದಾಂತ್‌ನನ್ನು ನೋಡಿ ವಾಪಸ್ ಹೊರಟು ಬಿಡುತ್ತಾಳಾ..? ಇಲ್ಲವೇ ಧ್ರುವನ ಬಳಿ ಬಂದು ಸಿಕ್ಕಿ ಹಾಕಿಕೊಳ್ಳುತ್ತಾಳಾ ಗೊತ್ತಿಲ್ಲ.

ಧ್ರುವನಿಗೆ ಸ್ಲೋ ಪಾಯ್ಸನ್

ಧ್ರುವನಿಗೆ ಸ್ಲೋ ಪಾಯ್ಸನ್

ಇತ್ತ ಸುಹಾಸಿನಿ, ಅಗ್ನಿ, ಚಂದ್ರ ಮೂವರು ಸೇರಿ ಚೇತರಿಸಿಕೊಳ್ಳುತ್ತಿರುವ ಧ್ರುವನನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದಾರೆ. ಧ್ರುವನಿಗೆ ಮಾತು ಬಂದರೆ, ಈ ಮೂವರ ಬಂಡವಾಳ ಬಯಲಾಗುತ್ತೆ ಎಂಬ ಭಯ ಕಾಡುತ್ತಿದೆ. ಹಾಗಾಗಿ ಮೂವರು ಧ್ರುವನನ್ನು ಕೊಲ್ಲಲು ಮುಂದಾಗಿದ್ದಾರೆ. ಸುಹಾಸಿನಿಗೆ ಚಂದ್ರಾ ಸ್ಲೋ ಪಾಯಿಸನ್‌ನ ಮಾತ್ರೆಗಳನ್ನು ಕೊಟ್ಟಿದ್ದಾಳೆ. ಇದನ್ನು ಧ್ರುವನಿಗೆ ಕೊಡಲು ಹೇಳಿದ್ದಾಳೆ. ಈ ಪ್ಲ್ಯಾನ್ ತಿಳಿದ ಅಜ್ಜಿ ಈಗ ಮೊಮ್ಮಗನನ್ನು ರಕ್ಷಿಸಲು ಮುಂದಾಗಿದ್ದಾಳೆ. ಸುಹಾಸಿನಿ ತಂದ ಮಾತ್ರೆಗಳ ಡಬ್ಬಿಗೆ ವಿಟಮಿನ್ ಮಾತ್ರೆಗಳನ್ನು ಹಾಕಿ ಸುಹಾಸಿನಿ ಪ್ಲ್ಯಾನ್ ಅನ್ನು ಉಲ್ಟಾ ಮಾಡಿದ್ದಾಳೆ. ಆದರೆ, ಅಜ್ಜಿ ಸುಹಾಸಿನಿ ರೂಮಿಗೆ ಬಂದಿದ್ದನ್ನು ನೋಡಿದ ವೈಜಯಂತಿ ಗಾಬರಿಯಾಗುತ್ತಾಳೆ. ಬೇಗ ಬೇಗ ಮಾತ್ರೆಗಳನ್ನು ಬದಲಾಯಿಸಿ, ಹೊರಡುತ್ತಾರೆ. ಆದರೆ, ಸುಹಾಸಿನಿ ಇವರನ್ನು ನೋಡಿ ಇಲ್ಲಿಗ್ಯಾಕೆ ಬಂದಿದ್ದು ಎಂದು ಕೇಳುತ್ತಾರೆ. ಅಜ್ಜಿ ನೆಪ ಹೇಳಿ ಹೋಗುತ್ತಾರೆ.

ಧ್ರುವ ಬೇಗ ಚೇತರಿಸಿಕೊಳ್ಳುತ್ತಾನಾ..?

ಧ್ರುವ ಬೇಗ ಚೇತರಿಸಿಕೊಳ್ಳುತ್ತಾನಾ..?

ಅಜ್ಜಿ ಮಾತ್ರೆಗಳನ್ನು ಬದಲಾಯಿಸಿ, ಸುಹಾಸಿನಿ ಪ್ಲ್ಯಾನ್‌ಗೆ ಉಲ್ಟಾ ಹೊಡೆದಿದ್ದಾಳೆ. ಆದರೆ, ಈ ವಿಚಾರ ಇನ್ನೂ ಯಾರಿಗೂ ಗೊತ್ತಾಗಿಲ್ಲ. ಅಜ್ಜಿಯ ಈ ಪ್ಲ್ಯಾನ್‌ನಿಂದ ಚಂದ್ರಾಳ ಐಡಿಯಾ ಶುರುನಲ್ಲೇ ಠುಸ್ ಆಗಿದೆ. ಧ್ರುವ ಅಜ್ಜಿ ಇಟ್ಟ ಮಾತ್ರೆಗಳಿಂದ ಬೇಗ ಚೇತರಿಸಿಕೊಳ್ಳುತ್ತಾನಾ..? ಸುಹಾಸಿನಿ, ಚಂದ್ರಾ ಬಂಡವಾಳವನ್ನು ಬಯಲಿಗೆಳೆಯುತ್ತಾನಾ..? ವೈಜಯಂತಿಯೇ ಅವರ ಅಮ್ಮ ಎಂಬ ಸತ್ಯವನ್ನು ತಿಳಿಸಿಕೊಡುತ್ತಾನಾ ಎಂಬ ಕುತೂಹಲ ಧಾರಾವಾಹಿಯಲ್ಲಿ ಮೂಡಿದೆ.

More from Filmibeat

English summary
Gattimela serial 1st March Episode Written Update. Suhasini and Chandra planned to kill suhasini. But ajji changed tablets. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X