Gattimela: ಒಲ್ಲದ ಮನಸ್ಸಿನಿಂದಲೇ ವೈದೇಹಿಯನ್ನು ಹೊರಗೋಗಿ ಎಂದ ವೇದಾಂತ್:ಮುಂದೇನು?
ವೇದಾಂತ್‌ಗೆ ತಾಯಿಯ ಪ್ರೀತಿ ಕೊಟ್ಟಿರುವ ವೈದೇಹಿಯನ್ನು ಹೊರಗಡೆ ಕಳುಹಿಸಲು ಆಗುತ್ತಿಲ್ಲ. ಇದಕ್ಕಾಗಿ ಅವನು ತುಂಬಾ ಕಣ್ಣೀರನ್ನು ಹಾಕುತ್ತಿದ್ದಾನೆ. ವೈದೇಹಿ ವೇದಾಂತ್ ಇರುವ ಕಡೆ ಬಂದು ಪ್ರಶ್ನೆ ಮಾಡುತ್ತಿದ್ದಾಳೆ. ಯಾಕೆ ಸರಿಯಾಗಿ ಊಟ ಮಾಡಿಲ್ಲ ಹೀಗಾದರೆ ಬೆಳೆಯುವ ಮಕ್ಕಳ ಆರೋಗ್ಯ ಏನಾಗಬೇಡ ಎಂದು ಪ್ರಶ್ನೆ ಮಾಡಿದಾಗ ಅಮ್ಮ ನಾನೇನು ಬೆಳೆಯುವ ಮಗುವಲ್ಲ ಎಂದು ವೇದಾಂತ್ ಹೇಳಿದ್ದಾನೆ.
ಮನಸ್ಸಿನಲ್ಲಿ ಏನು ಚಿಂತೆ ಇಟ್ಟುಕೊಂಡು ಯೋಚನೆ ಮಾಡಿದರೆ ಏನು ಆಗುವುದಿಲ್ಲ. ಮೊದಲು ಸರಿಯಾಗಿ ಊಟ ತಿಂಡಿ ಮಾಡು ಎಂದು ವೇದಾಂತ್‌ಗೆ ವೈದೇಹಿ ಬುದ್ಧಿ ಹೇಳಿದ್ದಾಳೆ. ಇನ್ನು ವೇದಾಂತ್ ಅಮ್ಮ ನಾನು ನಿಮ್ಮ ಮಡಿಲಲ್ಲಿ ಮಲಗಿಕೊಳ್ಳುತ್ತೇನೆ ನನಗೆ ಲಾಲಿ ಹಾಡು ಆಡುತ್ತೀರಾ ಎಂದು ಕೇಳಿಕೊಂಡಿದ್ದಾನೆ. ಇದಕ್ಕೆ ಆಗಲಿ ಎಂದು ವೈದೇಹಿ ಒಪ್ಪಿದ್ದಾಳೆ. ಹಾಡುವ ಲಾಲಿ ಹಾಡನ್ನ ಕೇಳಿಕೊಂಡು ವೇದಾಂತ್ ನಿದ್ರೆ ಮಾಡಿದ್ದಾನೆ.

ಇನ್ನು ಬೆಳಗ್ಗೆ ಎದ್ದು ವೇದಾಂತ್ ವಿಷಯವನ್ನು ಹೇಗೆ ಹೇಳುವುದು ಎಂದು ಚಿಂತೆ ಮಾಡುತ್ತಿದ್ದಾನೆ. ವೈದೇಹಿ ಅಮ್ಮನ ಬಳಿ ಹೇಗಾದರೂ ಮಾಡಿ ಮನೆಯಿಂದ ಹೊರಗೆ ಹೋಗಿ ಎಂಬ ವಿಚಾರವನ್ನು ಹೇಳಬೇಕು. ಹೇಗೆ ಹೇಳುವುದು ಅವರು ನೊಂದುಕೊಳ್ಳುತ್ತಾರೆ ಎಂದು ತಿಳಿದುಕೊಂಡಿದ್ದಾನೆ.
ನನಗೆ ಬಂದಿರುವ ಕಷ್ಟ ಯಾರಿಗೂ ಬರಲೇಬಾರದು ದೇವರೇ.. ಸ್ವಂತ ತಾಯಿಗಿಂತ ಹೆಚ್ಚಾಗಿ ನೋಡಿಕೊಂಡ ಅಮ್ಮನನ್ನ ಮನೆಯಿಂದ ಹೊರಗೆ ಹೋಗು ಎಂದು ಹೇಳಲು ಹೇಗೆ ಸಾಧ್ಯ ಎಂದು ಕಣ್ಣೀರು ಹಾಕಿದ್ದಾನೆ. ಅಷ್ಟರಲ್ಲಿ ಅಗ್ನಿ ಫೋನ್ ಮಾಡಿ ನಾನು ಹೇಳಿದ್ದನ್ನು ಏನು ಮಾಡಿದೆ ಎಂದು ಕೇಳಿದ್ದಾನೆ. ಈ ವೇಳೆ ವೇದಾಂತ್ ಇನ್ನು ನನಗೆ ಟೈಮ್ ಬೇಕು ಎಂದು ಕೇಳಿದರೆ ಕೇಳಿಕೊಡಲು ಆಗುವುದಿಲ್ಲ. ಇನ್ನೊಂದು ಅರ್ಧ ಗಂಟೆಯಲ್ಲಿ ಮಾಡಿದರೆ ಮಾತ್ರ ಚೆನ್ನಾಗಿರುತ್ತದೆ ಎಂದು ಹೇಳಿದ್ದಾನೆ. ಇನ್ನು ವೇದಾಂತ್ ಯೋಚನೆ ಮಾಡುತ್ತಿದ್ದಾನೆ. ಮಗನಿಗಿಂತ ಹೆಚ್ಚಾಗಿ ಪ್ರೀತಿಸಿದ ಅಮ್ಮ ಬೇಕೋ ಅಥವಾ ನನ್ನ ಸ್ವಂತ ತಂದೆ ಬೇಕು ಎಂದು.

ಒಲ್ಲದ ಮನಸ್ಸಿನಿಂದ ವೈದೇಹಿಯನ್ನು ಹೊರಗೆ ಹೋಗಿ ಎಂದ ವೇದಾಂತ್: ಕಣ್ಣೀರು
ವೈದೇಹಿ ಅಡುಗೆ ಮಾಡುವ ಸ್ಥಳಕ್ಕೆ ಬಂದ ವೇದಾಂತ್ ಅಮ್ಮ ನೀವು ಇಲ್ಲಿ ಇರದೆ ಮನೆಯಿಂದ ಹೊರಗೆ ಹೋಗಿ ಎಂದು ಕೇಳಿದ್ದಾನೆ. ಇದಕ್ಕೆ ವೈದೇಹಿ ಯಾಕೆ ನಾನೇನು ತಪ್ಪು ಮಾಡಿದೆ ಎಂದು ಕೇಳಿದ್ದಾಳೆ. ನೀವೇನು ತಪ್ಪು ಮಾಡಲಿಲ್ಲ. ನಮ್ಮನ್ನ ನಿಮ್ಮ ಮಕ್ಕಳ ರೀತಿ ನೋಡಿಕೊಂಡಿದ್ದೀರಾ ಅದರ ಋಣ ನಮ್ಮ ಮೇಲಿದೆ. ಯಾವುದಾದರೂ ಒಂದನ್ನು ಪಡೆಯಬೇಕು ಎಂದರೆ ಮತ್ತೊಂದನ್ನು ಕಳೆದುಕೊಳ್ಳಲು ಸಿದ್ದರಿರಬೇಕು. ಅದಕ್ಕಾಗಿ ಈಗ ನಾನು ನಿಮ್ಮನ್ನ ಮನೆಯಿಂದ ಹೊರಗೆ ಹೋಗಿ ಎನ್ನುತ್ತಿದ್ದೇನೆ ಎಂದು ವೇದಾಂತ್ ಅಂದಿದ್ದಾನೆ.
ವೈದೇಹಿಗೆ ಮಾತೇ ಬರುತ್ತಿಲ್ಲ .ಯಾಕೆಂದರೆ ಈ ಮನೆಯನ್ನು ಬಿಟ್ಟು ಹೋಗುತ್ತೇನೆ ಎಂಬ ಚಿಂತೆಯನ್ನು ಸಹ ವೈದೇಹಿ ಮಾಡಿರಲಿಲ್ಲ. ಈಗ ಸುಹಾಸಿನಿಯಿಂದಾಗಿ ವೇದಾಂತ್ ಈ ರೀತಿಯ ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಯಾಕೆಂದರೆ ವೈದೇಹಿ ಇದ್ದರೆ ನನಗೆ ತೊಂದರೆ ಎಂದು ಅಗ್ನಿಯ ಕೈಯಲ್ಲಿ ವೇದಾಂತ್ ಮೇಲೆ ಒತ್ತಡವನ್ನ ತಂದು ಸುಹಾಸಿನಿ ಈ ರೀತಿ ಕೆಲಸವನ್ನ ಮಾಡಿದ್ದಾಳೆ. ವೇದಾಂತ್ ಕಣ್ಣೀರು ಹಾಕುತ್ತಾ ಅಮ್ಮ ದಯವಿಟ್ಟು ನೀವು ಹೊರಟುಬಿಡಿ ಎಂದಿದ್ದಾನೆ ಈ ಮಾತನ್ನ ಕೇಳುತ್ತಿರುವ ಸುಹಾಸನಿಗೆ ತುಂಬಾನೇ ಖುಷಿಯಾಗುತ್ತಿದೆ.
ವೈದೇಹಿ ಮುಂದೆ ಸುಹಾಸಿನಿ ನಾಟಕ!
ಸುಹಾಸಿನಿ ವೇದಾಂತ್ ಹಾಗೂ ವೈದೇಹಿ ಇರುವ ಜಾಗಕ್ಕೆ ಬಂದು ಏನು ಹೇಳುತ್ತಿದ್ದೀಯ ವೇದಾಂತ್ ಅವರು ಯಾಕೆ ಈ ಮನೆಯನ್ನ ಬಿಟ್ಟು ಹೋಗಬೇಕು. ನಿಮ್ಮೆಲ್ಲರನ್ನು ಸ್ವಂತ ಮಕ್ಕಳ ಹಾಗೆ ನೋಡಿಕೊಂಡಿದ್ದಾ.ರೆ ತಾಯಿಯ ಪ್ರೀತಿಯನ್ನ ಕೊಟ್ಟಿದ್ದಾರೆ. ಅದರ ಋಣ ನಮ್ಮ ಮೇಲಿದೆ ಎಂದು ನಾಟಕವನ್ನು ಆಡಿದ್ದಾಳೆ. ಈ ಮಾತನ್ನ ಕೇಳಿದ ವೇದಾಂತ ಕಣ್ಣೀರು ಹಾಕಿದ್ದಾನೆ. ಅಮ್ಮ ಅದಕ್ಕೆ ಕಾರಣವಿದೆ. ಆದರೆ ಆ ಕಾರಣ ಏನೆಂದು ಹೇಳಲು ನನ್ನ ಕೈಲಿ ಆಗುತ್ತಿಲ್ಲ ಸಂದರ್ಭ ಹಾಗೂ ಪರಿಸ್ಥಿತಿ ನನ್ನನ್ನ ಈ ಕೆಲಸ ಮಾಡಿಸಿದೆ ಎಂದಿದ್ದಾನೆ.
ವೈದೇಹಿ ನಾನು ನನ್ನ ಬಟ್ಟೆಗಳನ್ನು ತೆಗೆದುಕೊಂಡು ಹೊರಡುತ್ತೇನೆ ಎಂದಾಗ ವೇದಾಂತ್ ವೈದೇಹಿ ಕೈಗೆ ಸ್ವಲ್ಪ ಹಣವನ್ನು ಕೊಡಲು ಹೋಗಿದ್ದಾನೆ ಇದನ್ನ ವೈದೇಹಿ ನಿರಾಕರಿಸಿದ್ದಾಳೆ. ಸುಹಾಸಿನಿಗೆ ತುಂಬಾನೇ ಖುಷಿಯಾಗುತ್ತಿದೆ .ನನ್ನನ್ನೇ ಬ್ಲಾಕ್ ಮೇಲ್ ಮಾಡಲು ಬಂದಳು ಈಗ ಈ ಮನೆಯಲ್ಲಿ ಬಿಟ್ಟು ಹೋಗುವಂತಾಗಿದೆ. ಇನ್ಮುಂದೆ ಈ ವಸಿಷ್ಠ ಫ್ಯಾಮಿಲಿಗೆ ನಾನೇ ರಾಣಿ ಎಂದು ನಗುತ್ತಿದ್ದಾಳೆ.


Click it and Unblock the Notifications











