Gattimela: ವೇದಾಂತ್‌ಗೆ ಬಿದ್ದ ಕನಸು ನಿಜವಾಗುತ್ತಾ? ಅಗ್ನಿ ಸೂರ್ಯನಾರಾಯಣ್‌ನನ್ನು ಕೊಲೆ ಮಾಡ್ತಾನಾ?

By Shruthi Harish Gowda

ವೇದಾಂತ್ ಮನೆಯಲ್ಲಿ ಎಲ್ಲರಿಗೂ ಸಹ ಸಮಾಧಾನ ಮಾಡುತ್ತಾ ಇದ್ದಾನೆ. ನಮ್ಮ ಮನೆಯಲ್ಲಿ ಇಂದು ಸಂಭ್ರಮವನ್ನು ಪಡಬೇಕಾಗಿತ್ತು ಖುಷಿಯಿಂದ ಸೆಲೆಬ್ರೇಟ್ ಮಾಡಬೇಕಾಗಿತ್ತು. ಆದರೆ ಅದು ಆಗದೆ ಇದ್ದರೂ ಸಹ ವಸಿಷ್ಟ ಫ್ಯಾಮಿಲಿ ಗೆ ಓರ್ವ ಸದಸ್ಯನ ಸೇರ್ಪಡೆಯಾಗಿದೆ. ವಿಕ್ರಾಂತ್ ಅವನ ಮೂಲಕ ಮನೆಗೆ ಬಂದಿದ್ದಾನೆ ಎಂದು ಮನೆಯಲ್ಲಿರುವ ಎಲ್ಲರಿಗೂ ಸಹ ಸಮಾಧಾನವನ್ನು ವೇದಾಂತ್ ಮಾಡುತ್ತಾ ಇದ್ದಾನೆ.ವಿಕ್ರಾಂತ್ ಕಳೆದುಕೊಂಡು ಆದ್ಯಾಗೆ ತುಂಬಾನೇ ದುಃಖವಾಗುತ್ತಿದೆ.

ದೇವರು ಒಂದನ್ನು ಕೊಟ್ಟು ಮತ್ತೊಂದನ್ನು ಕಿತ್ತುಕೊಳ್ಳುತ್ತಾನೆ ವಿಕ್ರಾಂತ್‌ನನ್ನು ಕಿತ್ತುಕೊಂಡು ಮಗನನ್ನ ಕೊಟ್ಟಿದ್ದಾನೆ. ಭಗವದ್ಗೀತೆಯ ಸಾರದಲ್ಲಿಯೇ ಹೇಳಿದೆ ದೇಹ ಮಣ್ಣಿಗೆ ಹೋದರು ಸಹ ಆತ್ಮ ಜೊತೆಯಲ್ಲಿ ಇರುತ್ತದೆ. ವಿಕ್ರಾಂತ್ ದೇಹ ಮಣ್ಣಿಗೆ ಹೋಗಿದೆ ಆದರೆ ವಿಕ್ರಾಂತ್ ಆತ್ಮ ನಮ್ಮ ಜೊತೆಗೆ ಇದ್ದಾನೆ ಎಂದು ವೇದಾಂತ್ ಮನೆಯಲ್ಲಿ ಹೇಳುತ್ತಿದ್ದಾನೆ. ವಿಕ್ಕಿ ಮಗುವನ್ನು ನೋಡಿಕೊಂಡು ನಾವೆಲ್ಲರೂ ಸಹ ಸಮಾಧಾನವನ್ನು ಮಾಡಿಕೊಳ್ಳೋಣ ಎಂದಾಗ ಎಲ್ಲರೂ ಸಹ ಸಮಾಧಾನ ಮಾಡಿಕೊಂಡಿದ್ದಾರೆ.

 Gattimela serial 21st August episode written update

ವೈದೇಹಿ ವಿಕ್ರಾಂತ್‌ ಜೊತೆಗೆ ಮೊದಲು ಬಂದಿದ್ದು ಹಾಗೂ ವಿಕ್ರಾಂತ್ ಆಕೆಯನ್ನು ಆಫೀಸ್‌ಗೆ ಕರೆದುಕೊಂಡು ಹೋಗಿದ್ದು ಎಲ್ಲವನ್ನು ನೆನಪು ಮಾಡಿಕೊಳ್ಳುತ್ತಾ ಇದ್ದಾಳೆ. ಅವನು ನನ್ನ ಅಮ್ಮ ನಿಮ್ಮ ತರವೇ ಇರಬೇಕು ನಿಮ್ಮನ್ನ ನಾನು ತಬ್ಬಿಕೊಳ್ಳಬಹುದಾ ಎಂದು ಹೇಳಿದ್ದನ್ನ ನೆನಪಿಸಿಕೊಂಡು ವೈದೇಹಿ ಕಣ್ಣೀರನ್ನು ಹಾಕುತ್ತಿದ್ದಾಳೆ. ಎಲ್ಲರೂ ಕುಳಿತು ಒಟ್ಟಿಗೆ ಊಟ ಮಾಡಿದ್ದು ಇದೆಲ್ಲವನ್ನ ನೆನಪಿಸಿಕೊಂಡು ಕಣ್ಣೀರು ಹಾಕುತ್ತಿದ್ದಾಳೆ. ಒಬ್ಬಳೇ ಮೂಕ ರೋಧನೆಯನ್ನ ಅನುಭವಿಸುತ್ತಾ ಇದ್ದಾಳೆ. ವೈದೇಹಿಯನ್ನು ಸಮಾಧಾನ ಮಾಡುವವರು ಯಾರು ಇಲ್ಲ ಯಾಕೆಂದರೆ ವೈದೇಹಿ ನಮ್ಮೆಲ್ಲರ ತಾಯಿ ಎಂಬುವುದು ಯಾರಿಗೂ ಸಹ ಗೊತ್ತಿಲ್ಲ.

ನನ್ನ ಮಕ್ಕಳನ್ನು ತಾಯಿಯಾಗಿ ಒಮ್ಮೆಯೂ‌ ಸಹ ನಾನು ಮನಸಿನ ತುಂಬಾ ಮಾತಾಡಿಸಿಲ್ಲ ದೇವರೆ ಕಣ್ಣ‌ ಮುಂದೆಯೇ ನನ್ನ ಮಗನನ್ನು ಕಿತ್ತುಕೊಂಡೆಯಲ್ಲ ನೀನು ಎಂತಹ ಕ್ರೂರಿ ಎಂದು ವೈದೇಹಿ ಕಣ್ಣೀರು ಹಾಕುತ್ತಾ ಕುಳಿತಿದ್ದಾಳೆ .ಅಲ್ಲಿಗೆ ಬಂದ ಸುಹಾಸಿನಿ ವೈದೇಹಿಯನ್ನ ಕಂಡು ವ್ಯಂಗ್ಯವಾಡಿದ್ದಾಳೆ ನನ್ನ ದಾರಿಗೆ ಅಡ್ಡ ಬಂದರೆ ನಾನು ಯಾರನ್ನು ಸುಮ್ಮನೆ ಬಿಡುವುದಿಲ್ಲ. ನೀನು ಏನಾದರೂ ಮತ್ತೊಮ್ಮೆ ನನ್ನ ದಾರಿಗೆ ಅಡ್ಡ ಬಂದರೆ ನಿನ್ನ ಮಗ ಹೋಗಿರುವ ಜಾಗಕ್ಕೆ ಇರುವ ಮಕ್ಕಳನ್ನ ಕಳುಹಿಸಬೇಕಾಗುತ್ತದೆ ಎಂದೆಲ್ಲಾ ವೈದೇಹಿಯ ಬಳಿ ಸುಹಾಸಿನಿ ಹೇಳುತ್ತಿದ್ದಾಳೆ.

ವೈದೇಹಿಗೆ ಸುಹಾಸಿನಿಯೇ ವಿಕ್ಕಿಯನ್ನು ಕೊಲೆ ಮಾಡಿಸಿದ್ದು ಎಂದು ತಿಳಿದುಬಂದಿದೆ. ಅವನನ್ನ ಆಡಿ ಬೆಳೆಸಿದ್ದು ನೀನೆ ಆದರೂ ಸಹ ಅವನನ್ನ ಕೊಲ್ಲಿಸಲು ಹೇಗೆ ಮನಸು ಬಂತು. ನೀನು ಎನು ರಾಕ್ಷಿಸಿನಾ ಎಂದು ವೈದೇಹಿ ಸುಹಾಸಿನಿಯನ್ನು ಕೇಳಿದ್ದಾಳೆ. ಇದಕ್ಕೆ ಸುಹಾಸಿನಿ ನಾನು ರಾಕ್ಷಸಿನೆ ನನ್ನ ದಾರಿಗೆ ಯಾರೇ ಅಡ್ಡ ಬಂದರೂ ಸಹ ನಾನು ಅವರನ್ನು ಬಿಡುವುದಿಲ್ಲ ಎಂದು ಹೇಳಿದ್ದಾಳೆ. ಇನ್ಮುಂದೆ ನೀನು ನನ್ನ ದಾರಿಗೆ ಅಡ್ಡ ಬಂದರೆ ನಿನ್ನ ಉಳಿದ ಮಕ್ಕಳನ್ನು ಸಹ ಇದೇ ಗತಿಗೆ ತಂದು ನಿಲ್ಲಿಸುತ್ತೇನೆ. ನಾನು ಕೊಟ್ಟ ಭಿಕ್ಷೆಯಲ್ಲಿ ನೀನು ಬದುಕುತ್ತಿದ್ದೀಯಾ? ಸುಮ್ಮನೆ ತಪ್ಪಗಿದ್ದರೆ ಸರಿ ಎಂದು ಬೆದರಿಕೆಯನ್ನ ಸುಹಾಸಿನಿ ವೈದೇಹಿಗೆ ಹಾಕಿದ್ದಾಳೆ.

ತಂದೆ ಸೂರ್ಯನಾರಾಯಣ್ ವಶಿಷ್ಠ ಬಗ್ಗೆ ಕೆಟ್ಟ ಕನಸನ್ನ ಕಂಡಿದ್ದಾನೆ.‌ ಸೂರ್ಯನಾರಾಯಣ್ ರವರನ್ನ ಅಟ್ಟಿಸಿ ಕೊಂಡು ಬಂದಿದ್ದಾರೆ. ಇದೇ ವೇಳೆ ಅಗ್ನಿ ಸೂರ್ಯನಾರಾಯಣ್ ತಲೆಗೆ ಗುಂಡಿಟ್ಟು ಹೊಡೆಯುವ ರೀತಿ ವೇದಾಂತ್ ಕನಸನ್ನ ಕಂಡಿದ್ದಾನೆ. ನನ್ನ ತಂದೆಗೆ ಏನೋ ಆಪತ್ತು ಎದುರಾಗಿದೆ ಎಂದು ಅಂದುಕೊಂಡಿದ್ದಾನೆ. ಜೋರಾಗಿ ಅಪ್ಪ ಎಂದು ಕೂಗಿಕೊಂಡು ಎದ್ದಿದ್ದಾನೆ.‌ ಅಮೂಲ್ಯ ಸಹ ಎದ್ದಿದ್ದು ಯಾಕೆ ಕೆಟ್ಟು ಕನಸು ಬಿತ್ತಾ ಎಂದು ವೇದಾಂತ ನನ್ನ ಕೇಳಿದ್ದಾಳೆ ಹೌದು ನನ್ನ ತಂದೆ ಆಪತ್ತಿನಲ್ಲಿ ಇರುವಂತೆ ಕನಸು ಬಿತ್ತು ನಾನು ಈಗಲೇ ಹೊರಡಬೇಕು ಎಂದು ಅಂದಿದ್ದಾನೆ.

ನನ್ನ ತಂದೆ ಇರುವುದು ಅಗ್ನಿಯ ಜೊತೆ ಅವನು ರಣಹದ್ದಿನ ರೀತಿ ಕಾಯುತ್ತಾ ಇದ್ದಾನೆ. ನನ್ನ ತಂದೆಗೆ ಆಪತ್ತು ಎದುರಾಗುವ ಮುನ್ನ ನಾನು ಅವರನ್ನು ಹುಡುಕಬೇಕು ಎಂದಾಗ. ನಾಳೆ ಬೆಳಿಗ್ಗೆ ಆ ಕೆಲಸ ಮಾಡೋಣ ಎಂದು ಅಮೂಲ್ಯ ವೇದಾಂತ್ ಗೆ ತಿಳಿಸಿದ್ದಾಳೆ.

More from Filmibeat

English summary
Zee Kannada serial gattimela here details suryaprakash in big problem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X