Gattimela: ತಂದೆಯನ್ನು ಹುಡುಕಿ ಹೊರಟ ವೇದಾಂತ್ ಗನ್ ತೆಗೆದುಕೊಂಡಿದ್ಯಾಕೆ?
ವೇದಾಂತ್‌ಗೆ ಸೂರ್ಯನಾರಾಯಣ್ ರವರಿಗೆ ಏನೋ ತೊಂದರೆ ಆಗುತ್ತಿದೆ ಎಂಬುದು ಕನಸಿನ ಮೂಲಕ ತಿಳಿದು ಬಂದಿದೆ. ನನ್ನ ತಂದೆ ಇರುವುದು ಅಗ್ನಿ ಜೊತೆಯಲ್ಲಿ ಹೇಗಾದರೂ ಮಾಡಿ ಅವರನ್ನು ಹುಡುಕಿಕೊಂಡು ಈ ಮನೆಗೆ ಕರೆದುಕೊಂಡು ಬರಬೇಕು. ಆಪತ್ತಿನಿಂದ ಪಾರು ಮಾಡಬೇಕು. ಸೂರ್ಯನಾರಾಯಣ ನನ್ನ ತಂದೆ ಸಿಕ್ಕಿದರೆ ನನ್ನ ತಾಯಿಯು ಸಹ ನನಗೆ ಸಿಗುತ್ತಾರೆ. ಆಗ ನನ್ನ ಫ್ಯಾಮಿಲಿ ಕಂಪ್ಲೀಟ್ ಆಗುತ್ತದೆ ಎಂದು ಅಂದುಕೊಂಡಿದ್ದಾನೆ. ಬೆಳಿಗ್ಗೆ ಯಾವುದನ್ನೇ ವೇದಾಂತ ಕಾಯುತ್ತಾ ಇದ್ದಾನೆ.
ಪರಿಮಳ ಹಾಗೂ ಮಂಜುನಾಥ್ ಇಬ್ಬರು ಸಹ ಆರತಿ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆರತಿಯು ಸಹ ತನ್ನ ಮಗುವಿನ ಮುಖ ನೋಡಿಕೊಂಡು ತನ್ನ ಗಂಡನ ನೆನಪನ್ನು ನೆನಪಿಸಿಕೊಳ್ಳುತ್ತಿದ್ದಾಳೆ. ಈ ನಡುವೆ ಮಂಜುನಾಥ್ ಆಟೋ ಓಡಿಸಿ ಮನೆಗೆ ಒಂದಿಷ್ಟು ಸಾಮಾನುಗಳನ್ನು ತಂದಿದ್ದಾರೆ. ವೇದಾಂತ್ ಬೆಳಗ್ಗೆ ಎದ್ದು ರೆಡಿ ಆಗುತ್ತಿದ್ದಾನೆ. ಅಮೂಲ್ಯ ವೇದಾಂತ್ ರೆಡಿಯಾಗುವ ವೇಳೆ ನೋಡುತ್ತಾ ನಿಂತಿದ್ದಾಳೆ. ವೇದಾಂತ್ ನಿನ್ನ ಪ್ಲಾನ್ ಏನು ಎಂದು ಕೇಳುತ್ತಿದ್ದಾಳೆ.

ವೇದಾಂತ್‌ಗೆ ಈಗ ಆಫೀಸ್‌ನ ಯಾವುದೇ ಟೆನ್ಶನ್ ಇಲ್ಲ ಯಾಕೆಂದರೆ ಆಫೀಸ್ ಬಗ್ಗೆ ವೇದಾಂತ್ ಅಷ್ಟು ತಲೆ ಕೆಡಿಸಿಕೊಳ್ಳುತ್ತಿಲ್ಲ. ತನ್ನ ತಂದೆಯನ್ನ ಹುಡುಕುವುದೇ ನನ್ನ ಮೊದಲ ಕೆಲಸ ಎಂದುಕೊಂಡು ವೇದಾಂತ್ ಅಂದುಕೊಂಡಿದ್ದಾನೆ. ಹಲವಾರು ಫೈಲ್ ಗಳಿಗೆ ವೇದಾಂತ್ ಸಹಿ ಬೇಕಾಗಿದೆ. ಕಾಂತಾ ಮನೆಗೆ ಬಂದರೂ ಸಹ ವೇದಾಂತ್ ಯಾವುದೇ ಫೈಲ್ ಗಳಿಗೆ ಸಹಿ ಹಾಕುತ್ತಿಲ್ಲ. ಯಾಕೆಂದರೆ ಅವನಿಗೆ ಮೊದಲು ಅವನ ತಂದೆಯನ್ನ ಹುಡುಕಬೇಕಾಗಿದೆ.
ವೇದಾಂತ್ ತನ್ನ ತಂದೆ ಸೂರ್ಯನಾರಾಯಣ್ ರವರನ್ನ ಹುಡುಕುತ್ತಾ ಹೋಗುತ್ತಿದ್ದಾನೆ ಇದೆ ವೇಳೆ ಅಮೂಲ್ಯ ನೀನು ಹೊರಡುವ ಕೆಲಸಕ್ಕೆ ಶುಭವಾಗಲಿ ಎಂದು ಶುಭ ಹಾರೈಸಿದ್ದಾಳೆ. ಈ ವೇಳೆ ವೇದಾಂತ್ ಗನ್ ತೆಗೆದುಕೊಂಡು ಹೋಗುತ್ತಿದ್ದಾನೆ. ಇದಕ್ಕೆ ಅಮೂಲ್ಯ ನೀನು ಕೋಪದ ಕೈಗೆ ಬುದ್ಧಿ ಕೊಡಬೇಡ ಎಂದು ಹೇಳಿದರು ಸಹ ಗನ್ ತೆಗೆದುಕೊಂಡು ಹೋಗುತ್ತಿದ್ದೀಯಾ? ಯಾಕೆ ಎಂದು ಕೇಳಿದ್ದಾಳೆ. ನಾನೇನು ಕೋಪದ ಕೈಗೆ ಬುದ್ಧಿ ಕೊಡೋದಿಲ್ಲ ನನಗೆ ಅಗ್ನಿಯನ್ನ ಕಂಡರೆ ಕೆಂಡದಂತ ಕೋಪವಿದೆ ಅವನು ಎದುರು ಬಂದರೆ ಸುಟ್ಟು ಹಾಕಬೇಕು ಎನಿಸುತ್ತದೆ.
ಅದಕ್ಕೋಸ್ಕರ ಇದನ್ನ ಸೇಫ್ಟಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ನಾನೇನು ದುಡುಕುವುದಿಲ್ಲ ಅಗ್ನಿ ಕೈಯಿಂದ ನಾನು ನನ್ನ ತಂದೆಯನ್ನ ಸೇಫ್ ಆಗಿ ಬಿಡಿಸಿಕೊಂಡು ಬರಬೇಕು ಅದೇ ನನ್ನ ಮುಂದಿನ ಗುರಿಯಾಗಿದೆ ಎಂದು ಹೇಳುತ್ತಿದ್ದಾನೆ. ಖಂಡಿತವಾಗಿಯೂ ನಿಮ್ಮ ತಂದೆ ಸಿಕ್ಕೇ ಸಿಗುತ್ತಾರೆ ಭರವಸೆ ನನಗಿದೆ ಎಂದು ವೇದಾಂತ ಬಳಿ ಹೇಳಿದ್ದಾಳೆ. ಇದಕ್ಕೆ ವೇದಾಂತ ನನ್ನ ತಂದೆ ಒಬ್ಬರನ್ನ ಈ ಮನೆಗೆ ಕರೆದುಕೊಂಡು ಬಂದರೆ ನನ್ನ ಫ್ಯಾಮಿಲಿ ಕಂಪ್ಲೀಟ್ ಆಗುತ್ತದೆ ಎಂದು ಹೇಳಿದ್ದಾನೆ.
ವೇದಾಂತ್ ಇನ್ನೇನು ಮನೆಯಿಂದ ಹೊರಡಬೇಕು ಎನ್ನುವಷ್ಟರಲ್ಲಿ ವೇದಾಂತ್ ರೂಮ್‌ಗೆ ಸುಹಾಸಿನಿ ಬಂದಿದ್ದಾಳೆ. ಇದೇ ವೇಳೆ ವೇದಾಂತ ನನ್ನ ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ವೇದಾಂತ್ ನನ್ನ ತಂದೆ ಸೂರ್ಯನಾರಾಯಣ್ ಸಿಕ್ಕಿದ್ದಾರೆ. ಅವರು ಅಗ್ನಿಯ ಕೈಯಲ್ಲಿ ಸಿಲುಕಿಕೊಂಡಿದ್ದಾರೆ ಅವರನ್ನು ಹುಡುಕಿ ನಾನು ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾನೆ. ವೇದಾಂತ್ ಮಾತನ್ನ ಕೇಳಿದ ಸುಹಾಸಿನಿ ಎಲ್ಲವೂ ತಿಳಿದಿದ್ದರು ಸಹ ಏನು ತಿಳಿಯದವಳಂತೆ ನಾಟಕವನ್ನು ಆಡಿದ್ದಾಳೆ ಭಾವನನ್ನು ಹುಡುಕಿ ಕರೆದುಕೊಂಡು ಬಾ ಎಂದು ಹೇಳಿದ್ದಾಳೆ.
ಇನ್ನು ಅಮೂಲ್ಯ ವೇದಾಂತ್ ಹೋದ ಮೇಲೆ ಸುಹಾಸಿನಿಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಅತ್ತೆ ನೀವು ಏನು ಎಂಬುದು ನನಗೆ ತಿಳಿದಿದೆ ಆದರೆ ನನ್ನ ಗಂಡನನ್ನ ನಾನು ಸರಿದಾರಿಯಲ್ಲೇ ಕರೆದುಕೊಂಡು ಹೋಗುತ್ತಿದ್ದೇನೆ. ನೀವು ನಿಮ್ಮ ಪ್ರಯತ್ನವನ್ನ ಮಾಡಿ ನಾನು ನನ್ನ ಪ್ರಯತ್ನವನ್ನ ಮಾಡುತ್ತೇನೆ ನನ್ನ ಗಂಡನಿಗೆ ನೀವು ಕೆಟ್ಟದ್ದನ್ನು ಬಯಸಿದರೆ ನಾನು ಅವನ ಜೊತೆಗೆ ನಿಂತುಕೊಂಡು ಎಲ್ಲವನ್ನು ಸಹ ಒಳ್ಳೆಯದೇ ಆಗುವಂತೆ ಪರಿವರ್ತಿಸುತ್ತೇನೆ ಎಂದು ಅಮೂಲ್ಯ ಸುಹಾಸಿನಿಗೆ ಹೇಳಿದ್ದಾಳೆ.


Click it and Unblock the Notifications











