ವೈದೇಹಿಯನ್ನು ಕರೆತರಲು ಬಂದ ವೇದಾಂತ್: ಸುಹಾಸಿನಿ ಸೂಪರ್ ಪ್ಲ್ಯಾನ್ ಸಕ್ಸಸ್

By ಪ್ರಿಯಾ ದೊರೆ

ಗಟ್ಟಿಮೇಳ ಧಾರಾವಾಹಿಯಲ್ಲಿ ಸುಹಾಸಿನಿ ತನ್ನ ಪ್ಲ್ಯಾನ್ ಪ್ರಕಾರವೇ ವೈದೇಹಿಯ ಗುರುತು ಇಲ್ಲದಂತೆ ಮಾಡಿದ್ದಾಳೆ. ವಿಡಿಯೋದಲ್ಲಿ ವೈದೇಹಿಯನ್ನೇ ಬದಲಾಯಿಸಿದ್ದಾಳೆ. ಆಕೆ ಒಂದು ಅನಾಥಾಶ್ರಮದಲ್ಲಿ ಇದ್ದಾಳೆ ಎಂಬ ಮಾಹಿತಿ ಮನೆಯವರಿಗೆ ಸಿಗುವಂತೆ ಮಾಡಿದ್ದಾಳೆ.

ವೇದಾಂತ್, ವಿಕ್ರಾಂತ್ ಕೂಡ ತನ್ನ ತಾಯಿ ವೈದೇಹಿಯನ್ನು ಮನೆಗೆ ಕರೆದುಕೊಂಡು ಬರಬೇಕು ಎಂದುಕೊಂಡಿದ್ದಾರೆ. ನಮ್ಮ ಬಳಿ ಇಷ್ಟೆಲ್ಲಾ ಆಸ್ತಿ, ಹಣವಿದ್ದರೂ ನಮ್ಮ ತಾಯಿ ಯಾಕೆ ಯಾವುದೋ ಅನಾಥಾಶ್ರಮದಲ್ಲಿ ಯಾರೂ ಇಲ್ಲದವರಂತೆ ಬದುಕಬೇಕು ಎಂದು ಬೇಸರ ಮಾಡಿಕೊಂಡಿದ್ದಾರೆ.

ವೈಜಯಂತಿ ಆಗಿ ವೇದಾಂತ್ ಮನೆಯಲ್ಲೇ ಇರುವ ಅವರ ನಿಜವಾದ ತಾಯಿ ವೈದೇಹಿ ಈಗ ದುಃಖತಪ್ತಳಾಗಿದ್ದಾಳೆ. ಸುಹಾಸಿನಿ ನೀಚಳು. ರಾಕ್ಷಸಿ ನನ್ನ ಅಸ್ತಿತ್ವವನ್ನೇ ಇಲ್ಲದಂತೆ ಮಾಡುತ್ತಿದ್ದಾಳೆ. ನನ್ನ ಜೊತೆಗೆ ನನ್ನ ಮಕ್ಕಳಿದ್ದರೂ ನಾನೇ ನಿಮ್ಮ ತಾಯಿ ಎಂದು ಹೇಳಿಕೊಳ್ಳದ ಸ್ಥಿತಿ ಎಂದು ದುಃಖಿತಳಾಗಿದ್ದಾಳೆ.

 ಅನಾಥಾಶ್ರಮಕ್ಕೆ ಬಂದ ವೇದಾಂತ್

ಅನಾಥಾಶ್ರಮಕ್ಕೆ ಬಂದ ವೇದಾಂತ್

ವೇದಾಂತ್, ತೇಜಸ್ ಹಾಗೂ ಅಮೂಲ್ಯ ಮೂವರೂ ಅನಾಥಾಶ್ರಮದ ಬಳಿ ಕಾರಿನಲ್ಲಿ ಬರುತ್ತಾರೆ. ವೇದಾಂತ್ ನನ್ನ ತಾಯಿ ಇಷ್ಟು ವರ್ಷ ಒಂಟಿಯಾಗಿ ಇಂತಹ ಅನಾಥಾಶ್ರಮದಲ್ಲಿ ಇರಬೇಕಾಗಿ ಬಂತಲ್ಲ ಎಂದು ನೊಂದುಕೊಳ್ಳುತ್ತಾನೆ. ಯಾಕೆ ನಮ್ಮ ಅಮ್ಮನಿಗೆ ಈ ಸ್ಥಿತಿ ಬಂತು. ನಾವು ನಾಲ್ಕು ಜನ ಮಕ್ಕಳಿದ್ದರೂ ಅಮ್ಮ ಅನಾಥಳಾಗಿ ಬದುಕಬೇಕಿತ್ತಾ ಎಂದು ಬೇಸರ ಮಾಡಿಕೊಳ್ಳುತ್ತಾನೆ. ಆಗ ಅಮೂಲ್ಯ ಸಮಾಧಾನ ಮಾಡುತ್ತಾಳೆ. ಸರಿ ಅಮ್ಮನನ್ನು ಕರೆದುಕೊಂಡು ಬರೋಣ ಬಾ ಎಂದಾಗ ಅಮೂಲ್ಯ ಬರೋದಿಲ್ಲ. ಅದಕ್ಕೆ ಕಾರಣವನ್ನೂ ಕೊಡುತ್ತಾಳೆ. ಎಷ್ಟೋ ವರ್ಷಗಳಾದ ಮೇಲೆ ನೀನು, ನಿಮ್ಮ ಅಮ್ಮನನ್ನು ನೋಡುತ್ತೀಯಾ. ಆಗ ನಿನ್ನ ಎಮೋಷನ್ಸ್ ಅನ್ನ ನಾನು ತಡೆಯೋದು ಸರಿಯಲ್ಲ. ಹಾಗಾಗಿ ನೀನು ಒಬ್ಬನೇ ಹೋಗು ಎನ್ನುತ್ತಾಳೆ.

 ವೈದೇಹಿಗೆ ತನ್ನ ಬಗ್ಗೆ ಹೇಳಿ ತಬ್ಬಿಕೊಂಡ ಮಗ

ವೈದೇಹಿಗೆ ತನ್ನ ಬಗ್ಗೆ ಹೇಳಿ ತಬ್ಬಿಕೊಂಡ ಮಗ

ವೇದಾಂತ್ ಮತ್ತು ತೇಜಸ್ ಇಬ್ಬರೂ ಅನಾಥಾಶ್ರಮದ ಒಳಗೆ ಹೋಗುತ್ತಾರೆ. ನಮ್ಮ ಅಮ್ಮ ಎಲ್ಲಿ ಎಂದು ಕೇಳುತ್ತಾರೆ. ಅವರ ಅಮ್ಮ ಟೆರೆಸ್ ಮೇಲೆ ಹೂಕುಂಡಗಳಿಗೆ ನೀರು ಹಾಕುತ್ತಿದ್ದಾರೆ ಎಂದು ಹೇಳುತ್ತಾರೆ. ಆಗ ವೇದಾಂತ್ ಮತ್ತು ತೇಜಸ್ ಟೆರೆಸ್‌ಗೆ ಹೋಗುತ್ತಾರೆ. ಅಲ್ಲಿ ವೈದೇಹಿ ನೀರು ಹಾಕುತ್ತಿರುವುದನ್ನು ನೋಡಿ ವೇದಾಂತ್ ಅಮ್ಮ ಎಂದು ಕರೆಯುತ್ತಾನೆ. ಆಗ ವೈದೇಹಿ ತಿರುಗಿ, ಯಾರು ನೀವೆಲ್ಲಾ ಎಂದು ಹೇಳಿದಾಗ ವೇದಾಂತ್ ತನ್ನ ಹಾಗೂ ವೈದೇಹಿ ಬಗ್ಗೆ ಹೇಳುತ್ತಾನೆ. ಇದನ್ನೆಲ್ಲಾ ಕೇಳಿ ತಾನೇ ವೈದೇಹಿ ಎಂಬಂತೆ ನಾಟಕವಾಡುತ್ತಾಳೆ. ಆಗ ವೇದಾಂತ್ ಅವರ ತಾಯಿಯನ್ನು ತಬ್ಬಿಕೊಳ್ಳುತ್ತಾನೆ.

 ಸುಹಾಸಿನಿ ಮೇಲೆ ವಿಕ್ರಾಂತ್ ಕಣ್ಣು

ಸುಹಾಸಿನಿ ಮೇಲೆ ವಿಕ್ರಾಂತ್ ಕಣ್ಣು

ಇತ್ತ ವಿಕ್ರಾಂತ್‌ಗೆ ಸುಹಾಸಿನಿ ಮೇಲಿನ ಅನುಮಾನ ಕೊಂಚವೂ ಕಡಿಮೆ ಆಗಿರುವುದಿಲ್ಲ. ಹಾಗಾಗಿ ಪದೇ ಪದೇ ಸುಹಾಸಿನಿ ಇರುವ ಕಡೆ ಹೋಗುತ್ತಿರುತ್ತಾನೆ. ಸುಹಾಸಿನಿಗೆ ವಿಕ್ಕಿ ಬೇಕಂತಲೇ ಬರುತ್ತಿದ್ದಾನೆ ಎಂದು ಗೊತ್ತಾಗುತ್ತದೆ. ವಿಕ್ಕಿಗೆ ಸುಹಾಸಿನಿ ಯಾರಿಗಾದರೂ ಫೋನ್ ಮಾಡುತ್ತಿದ್ದಾಳಾ..? ಅವಳ ಪ್ಲ್ಯಾನ್ ಏನು ಎಂಬುದು ಕುತೂಹಲವಾಗಿರುತ್ತದೆ. ಆದರೆ ಸುಹಾಸಿನಿಗೆ ವಿಕ್ಕಿ ಬಗ್ಗೆ ಗೊತ್ತಿದ್ದು ನಾಟಕವಾಡುತ್ತಿರುತ್ತಾಳೆ. ವೈದೇಹಿಗೋಸ್ಕರ ರೂಮ್ ಕ್ಲೀನ್ ಮಾಡುತ್ತಿದ್ದೇನೆ. ಸುಸ್ತಾಗಿರುತ್ತಾಳೆ ಸ್ವಲ್ಪ ಹೊತ್ತು ರೆಸ್ಟ್ ಮಾಡಲಿ ಎಂದು ಹೇಳುತ್ತಾಳೆ. ವಿಕ್ಕಿಗೆ ಸುಹಾಸಿನಿಯ ನಡವಳಿಕೆ ಮೇಲೆ ಕೊಂಚವೂ ನಂಬಿಕೆ ಬರುವುದಿಲ್ಲ.

 ವಸಿಷ್ಠ ಕುಟುಂಬಕ್ಕೆ ಬಂದ ವೈದೇಹಿ

ವಸಿಷ್ಠ ಕುಟುಂಬಕ್ಕೆ ಬಂದ ವೈದೇಹಿ

ಇನ್ನು ಇಂದಿನ ಸಂಚಿಕೆಯಲ್ಲಿ ವೈದೇಹಿ ಮನೆಗೆ ಬರುತ್ತಾಳೆ. ಎಲ್ಲಾ ಮಕ್ಕಳನ್ನು ಮಾತನಾಡಿಸುತ್ತಾಳೆ. ಇದೇ ವೇಳೆಗೆ ಸುಹಾಸಿನಿ ಕೂಡ ತನ್ನ ಅಕ್ಕನನ್ನು ಖುಷಿಯಿಂದ ಬರ ಮಾಡಿಕೊಳ್ಳುತ್ತಾಳೆ. ಹಳೆಯದನ್ನೆಲ್ಲಾ ನೆನಪು ಮಾಡಿಕೊಳ್ಳುತ್ತಾಳೆ. ಇದೆಲ್ಲಾ ಘಟನೆಯನ್ನು ಪಕ್ಕದಲ್ಲೇ ನಿಂತು ನೋಡುತ್ತಿರುವ ವೈಜಯಂತಿ ಮನಸ್ಸಿನಲ್ಲಿ ಕುಗ್ಗಿ ಹೋಗಿರುತ್ತಾಳೆ. ಸುಹಾಸಿನಿಯ ಪ್ಲ್ಯಾನ್ ಕಂಡು ಬೆರಗಾಗಿರುತ್ತಾಳೆ. ಸಿಟ್ಟಿನಲ್ಲಿ ನಿಜವಾದ ವೈದೇಹಿ ತಾನೇ ಎಂದು ಈಗಲಾದರೂ ಹೇಳುತ್ತಾಳಾ..? ಇಲ್ಲ ಸುಮ್ಮನಿದ್ದು ಬಿಡುತ್ತಾಳಾ ಕಾದು ನೋಡಬೇಕಿದೆ.

More from Filmibeat

English summary
Gattimela Serial 22th September Episode Written Update. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X