Gattimela: ಕೊನೆಗೂ ಅಗ್ನಿ ಮನೆ ಹುಡುಕಿದ ವೇದಾಂತ್; ಸೂರ್ಯನಾರಾಯಣ್‌ರನ್ನು ಕಂಡು ಸಂತಸ
ಸುಹಾಸಿನಿ ಅಮೂಲ್ಯಗೆ ಬೈಯ್ಯುತ್ತಿದ್ದಾಳೆ ನನ್ನ ಮಗನನ್ನ ನೀನು ನಿನ್ನ ಮುಷ್ಟಿಯಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ. ಅವನು ಏನೇ ಇದ್ದರೂ ನನ್ನ ಮಾತನ್ನೇ ಕೇಳೋದು ಎಂದು ಅಂದಿದ್ದಾಳೆ. ಅಷ್ಟರಲ್ಲಿ ಅಮೂಲ್ಯ ಆಯ್ತು ಎಂದು ಹೊರಗೆ ಹೋಗಿದ್ದಾಳೆ. ಅಮೂಲ್ಯ ಹೋದ ಬಳಿಕ ಸುಹಾಸಿನಿ ನಿನ್ನ ಸಂಸಾರವನ್ನು ಬೇರೆ ಮಾಡದೇ ನಾನು ಸುಮ್ಮನೆ ಇರುವುದಿಲ್ಲ ನೀವಿಬ್ಬರು ಇನ್ನಷ್ಟು ಅನ್ನ್ಯವಾಗಿ ಇರುವುದಂತೂ ಖಂಡಿತ ಸಾಧ್ಯವಿಲ್ಲ ಸೂರ್ಯನಾರಾಯಣ್ ಕಥೆ ಮುಗಿಸಿದ ಬಳಿಕ ನಿಮ್ಮಿಬ್ಬರನ್ನ ದೂರ ಮಾಡೇ ಮಾಡುತ್ತೇನೆ ಎಂದು ಅಂದುಕೊಂಡಿದ್ದಾಳೆ.
ಈ ಕಡೆ ಮಂಜುನಾಥ್ ಆಟೋ ಓಡಿಸುವುದಾಗಿ ಪರಿಮಳ ಹಾಗೂ ಆರತಿಯ ಮುಂದೆ ಹೇಳಿದ್ದಾನೆ. ಆರತಿ ಅಪ್ಪ ನೀವು ಈಗಲೂ ಸಹ ಕಷ್ಟ ಪಡಬೇಕಾ ನಾನು ನಿಮ್ಮಿಬ್ಬರಿಗೂ ಹೊರೆಯಾಗಿದ್ದೇನೆ ಎಂದು ಹೇಳಿದ್ದಾಳೆ. ಇದಕ್ಕೆ ಮಂಜುನಾಥ್ ನಮ್ಮ ಮೈಯಲ್ಲಿ ಶಕ್ತಿ ಇದ್ದಾಗ ಕೆಲಸವನ್ನ ಮಾಡಬೇಕು ನಂತರ ನೀನು ನನ್ನ ಸಾಕುತ್ತೀಯಾ ಅಲ್ವಾ ಮಗಳೇ ಎಂದು ಕೇಳಿದ್ದಾರೆ ಇದಕ್ಕೆ ಇಂತಹ ಮಾತನಾಡುತ್ತಿದ್ದೀರಾ ಅಪ್ಪ ಎಂದು ಆರತಿ ಹೇಳಿದ್ದಾಳೆ ಇನ್ನೂ ಮಂಜುನಾಥ್ ಇಬ್ಬರಿಗೂ ಸಹ ಹೇಳಿ ನಾನು ಶಾಲೆ ಮಕ್ಕಳನ್ನು ಬಿಡಬೇಕು ಬರುತ್ತೇನೆ ಎಂದು ಹೇಳಿ ಹೊರಗಡೆ ಬಂದಿದ್ದಾರೆ.

ಹೊರಗಡೆ ಬಂದವರೇ ಪರಿಮಳಾರನ್ನ ಕರೆದು ಆರತಿ ಹೇಗಿದ್ದಾಳೆ ಎಂದು ಕೇಳಿದ್ದಾರೆ. ಮಗು ನೋಡಿಕೊಂಡು ಹೇಗೋ ಖುಷಿಯಿಂದ ಇದ್ದಾಳೆ ಎಂದು ಪರಿಮಳ ಹೇಳಿದ್ದಾರೆ. ಆದರೆ ಆರತಿ ಒಳಗಡೆ ವಿಕ್ಕಿಯನ್ನು ನೆನಪಿಸಿಕೊಂಡು ಕಣ್ಣೀರು ಹಾಕುತ್ತಿದ್ದಾಳೆ. ಈ ಮಗು ನಿಮ್ಮ ರೀತಿಯೇ ಇದೆ ಈ ಮಗು ಬಗ್ಗೆ ನೀವು ಎಷ್ಟೆಲ್ಲಾ ಕನಸು ಕಂಡಿದ್ದೀರಿ ಎಂದು ಕಣ್ಣೀರು ಹಾಕುತ್ತಿದ್ದಾಳೆ. ಅಪ್ಪ ಅಮ್ಮನ ಮುಂದೆ ನಾನು ಕೊರಗಿದರೆ ನನ್ನನ್ನು ನೋಡಿ ಅವರು ಕೊರಗಿ ಹೋಗುತ್ತಾರೆ. ಅದಕ್ಕೋಸ್ಕರ ನಾನು ಮಗುವಿನ ಮುಖವನ್ನು ನೋಡಿಕೊಂಡು ಕಾಲ ತುಂಬಿಸುತ್ತಿದೆ ಎಂದು ಆರತಿ ವಿಕ್ಕಿ ನೆನೆಸಿಕೊಂಡು ಅಳುತ್ತಿದ್ದಾಳೆ.
ವೇದಾಂತ್ ತನ್ನ ತಂದೆ ಸೂರ್ಯನಾರಾಯಣ ಅವರನ್ನ ಹುಡುಕಿಕೊಂಡು ಬಂದಿದ್ದಾನೆ. ಇದೇ ವೇಳೆ ಅಗ್ನಿ ಮೊದಲು ಸೂರ್ಯನಾರಾಯಣ ಅವರನ್ನು ಇಟ್ಟಿದ್ದ ಬಿಲ್ಡಿಂಗ್ ಗೆ ಬಂದಿದ್ದಾನೆ. ಅಷ್ಟರಲ್ಲಿ ಅಗ್ನಿ ಬಿಲ್ಡಿಂಗ್ ಅನ್ನು ಖಾಲಿ ಮಾಡಿಕೊಂಡು ಬೇರೆ ಕಡೆಗೆ ಶಿಫ್ಟ್ ಆಗಿದ್ದಾನೆ. ಇವನು ಇಷ್ಟು ಬೇಗ ಮನೆಯನ್ನ ಖಾಲಿ ಮಾಡಿಕೊಂಡು ಹೋಗಿದ್ದಾನೆ ಎಂದುಕೊಳ್ಳುವಾಗಲೇ ಯಾರೋ ಬಂದು ವೇದಾಂತ್ ಕೈಗೆ ಒಂದು ಪೇಪರ್ ಕೊಟ್ಟಿದ್ದಾರೆ. ಆ ಪೇಪರ್ ವಿಳಾಸ ಹುಡುಕಿಕೊಂಡು ವೇದಾಂತ ಹೊರಟಿದ್ದಾನೆ.
ವೇದಾಂತ್ ಬಸ್ ನಿಲ್ದಾಣದ ಬಳಿ ಬಂದಾಗಲೂ ಸಹ ಬಸ್ ನಿಲ್ದಾಣದಲ್ಲಿ ಇದ್ದ ಹುಡುಗ ಮತ್ತೊಂದು ಪೇಪರ್ ಕೊಟ್ಟಿದ್ದಾರೆ. ಅಲ್ಲಿಂದ ಮುಂದೆ ತರಕಾರಿ ಅಂಗಡಿ ಬಳಿ ಬಂದಾಗ ಅಲ್ಲೇ ನಿಂತಿದ್ದ ಮತ್ತೊರ್ವ ಅಗ್ನಿ ಇರುವ ಸ್ಥಳವನ್ನು ತೋರಿಸಿದ್ದಾನೆ. ನಂತರ ಒಳಗಡೆ ಬಂದವನೇ ಜೋರಾಗಿ ಅಗ್ನಿ ಎಂದು ವೇದಾಂತ್ ಕೂಗಿದ್ದಾನೆ.
ವೇದಾಂತ್ ಕೂಗಿದ್ದ ವೇಳೆ ಅಗ್ನಿ ಹೊರಗಡೆ ಬಂದಿದ್ದು, ವೇದಾಂತ್ ಅಗ್ನಿ ಆ ಕೊರಳಪಟ್ಟಿಗೆ ಕೈಯಾಕಿ ನನ್ನ ತಂದೆ ಎಲ್ಲಿ ಎಂದು ಜೋರಾಗಿ ಕೇಳುತ್ತಿದ್ದಾನೆ. ಇದಕ್ಕೆ ಅಗ್ನಿ ಇಷ್ಟು ದಿನ ನಿನಗೆ ಭಯವಿರಲಿಲ್ಲ ನಿನಗೆ ಏನು ಮಾಡಿದರೂ ಸಹ ನೀನು ಹೆದರಲಿಲ್ಲ. ಅದೇ ನಿನ್ನ ಜೀವಕ್ಕೆ ಹತ್ತಿರವಾದವರಿಗೆ ಏನಾದರೂ ಆಗುತ್ತದೆ ಎಂಬ ಭಯ ನಿನ್ನಲ್ಲಿ ಬಂದಿದೆ ಇದೇ ನನಗೆ ಬೇಕಾಗಿದ್ದು ಎಂದಿದ್ದಾನೆ.
ಇಷ್ಟರಲ್ಲಿ ವೇದಾಂತ್ ಜೋರಾಗಿ ಮಾತನಾಡುವಾಗ ಅಗ್ನಿಯ ಸಹಚರರು ವೇದಾಂತ್ ಕತ್ತಿಗೆ ಲಾಂಗ್ ಇಟ್ಟಿದ್ದಾರೆ. ಈ ವೇಳೆ ಶಬ್ದವಾಗಿದ್ದನ್ನು ಕಂಡು ಸೂರ್ಯನಾರಾಯಣರು ಹೊರಗಡೆ ಬಂದಿದ್ದಾರೆ. ತನ್ನ ತಂದೆಯನ್ನು ನೋಡಿದ ವೇದಾಂತ್ ಗೆ ತುಂಬಾ ಖುಷಿಯಾಗಿದೆ. ಒಂದೈದು ನಿಮಿಷ ಸೂರ್ಯನಾರಾಯಣರನ್ನು ನೋಡಿಕೊಂಡು ವೇದಾಂತ್ ನಿಂತಿದ್ದಾನೆ. ಮಗನನ್ನ ಕಂಡ ಸೂರ್ಯನಾರಾಯಣ ಅವರಿಗೆ ತುಂಬಾ ಖುಷಿಯಾಗಿದೆ ಇವರಿಬ್ಬರ ದೃಶ್ಯವನ್ನು ಅಗ್ನಿ ನೋಡುತ್ತಿದ್ದಾನೆ.


Click it and Unblock the Notifications











